ಹಾಗಲಕಾಯಿ ಜ್ಯೂಸ್ ಕುಡಿದು ಡಯಾಬಿಟಿಸ್ ಇರುವವರು ತೂಕ ಕಮ್ಮಿ ಮಾಡಿಕೊಳ್ಳಬಹುದು!

21-12-22 07:00 pm       Source: Vijayakarnataka   ಡಾಕ್ಟರ್ಸ್ ನೋಟ್

ಹಾಗಲಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರಲ್ಲೂ ಮಧುಮೇಹ ಇರುವವರಿಗೆ ಇದೊಂದು ಹೇಳಿ ಮಾಡಿಸಿದ ತರಕಾರಿ. ಕಹಿಯಾದ ಹಾಗಲಕಾಯಿ ಜ್ಯೂಸ್ ಸಕ್ಕರೆ ಕಾಯಿಲೆಗೆ.

ಹಾಗಲಕಾಯಿ ಹಲವಾರು ವರ್ಷಗಳಿಂದ ತನ್ನ ಔಷಧೀಯ ಗುಣಗಳಿಗೆ ಪ್ರಸಿದ್ಧವಾಗಿದೆ. ಹಾಗಾಗಿ ಇದನ್ನು ಆಯುರ್ವೇದ ಪ್ರಕಾರದಲ್ಲಿ ಒಂದು ನೈಸರ್ಗಿಕವಾದ ಔಷಧಿಯಾಗಿ ಬಳಸಿಕೊಂಡು ಬರಲಾಗಿದೆ. ಸಕ್ಕರೆ ಕಾಯಿಲೆಗೆ ಇದನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಮಧುಮೇಹ ಇರುವವರು ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಹಾಗಲಕಾಯಿ ಜ್ಯೂಸ್ ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕು.

ಇದರಿಂದ ದೇಹದಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣ ಏರಿಕೆ ಆಗದಂತೆ ಇದು ತಡೆಯುತ್ತದೆ. ಇದರ ಜೊತೆಗೆ ಹೃದಯದ ತೊಂದರೆ, ಹೆಚ್ಚಿನ ಪ್ರಮಾಣದ ಕೊಲೆಸ್ಟ್ರಾಲ್, ದೇಹದ ತೂಕ ಹೆಚ್ಚಾಗುವುದು, ರಕ್ತದ ಒತ್ತಡ ಇವೆಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.

​ಹಾಗಲಕಾಯಿ ಜ್ಯೂಸ್

Bitter Gourd Juice For Diabetes And Weight Loss - Boldsky.com

ಹಾಗಲಕಾಯಿ ಜ್ಯೂಸ್ ತನ್ನಲ್ಲಿ ಮೆಗ್ನೀಷಿಯಂ, ಪೊಟಾಸಿಯಂ, ಕಬ್ಬಿಣ ಮತ್ತು ವಿಟಮಿನ್ ಸಿ ಪ್ರಮಾಣವನ್ನು ಹೆಚ್ಚಾಗಿ ಒಳಗೊಂಡಿದೆ.

ಇದು ಅಪಾರ ಪ್ರಮಾಣದ ನಾರಿನ ಅಂಶವನ್ನು ಹೊಂದಿದ್ದು, ದುಪ್ಪಟ್ಟು ಪ್ರಮಾಣದಲ್ಲಿ ಕ್ಯಾಲ್ಸಿಯಂ ಮತ್ತು ಬೀಟಾ ಕ್ಯಾರೋಟಿನ್ ಅಂಶವನ್ನು ಒಳಗೊಂಡಿದೆ. ಮಧುಮೇಹ ವಿರೋಧಿ ಗುಣಲಕ್ಷಣಗಳು ಹಾಗಲಕಾಯಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತವೆ.

ಹಾಗಲಕಾಯಿ ಜ್ಯೂಸ್ ತಯಾರಿಸುವುದು ಹೇಗೆ?

Bitter Gourd (Bitter Melon) Recipes - Blog - HealthifyMe

  • ಇದಕ್ಕಾಗಿ ನಿಮಗೆ ಒಂದರಿಂದ ಎರಡು ತಾಜಾ ಹಾಗಲಕಾಯಿ ಬೇಕಾಗುತ್ತದೆ.
  • ಜೊತೆಗೆ ಅರ್ಧ ನಿಂಬೆಹಣ್ಣು
  • ಅರ್ಧ ಟೀ ಚಮಚ ಅರಿಶಿನ ಪುಡಿ
  • ರುಚಿಗೆ ಚಿಟಿಕೆ ಉಪ್ಪು.

​ಈಗ ತಯಾರಿಸುವ ವಿಧಾನವನ್ನು ನೋಡೋಣ

5 Ways in Which Bitter Gourd aka Karela Can Help You Lose Weight

ಮೊದಲಿಗೆ ಹಾಗಲಕಾಯಿಯನ್ನು ಚೆನ್ನಾಗಿ ತೊಳೆದು ಮೇಲಿನ ಸಿಪ್ಪೆಯನ್ನು ತೆಗೆದುಹಾಕಿ. ಈಗ ಹಾಗಲಕಾಯಿಯನ್ನು ಹೋಳುಗಳನ್ನಾಗಿ ಹೆಚ್ಚಿ ಅವುಗಳಲ್ಲಿರುವ ಬೀಜಗಳನ್ನು ತೆಗೆದು ಹಾಕಿ.

ಈಗ ಒಂದು ಪಾತ್ರೆಯಲ್ಲಿ ನೀರು ತೆಗೆದುಕೊಂಡು ಅದಕ್ಕೆ ಅರ್ಧ ಟೀ ಚಮಚ ಉಪ್ಪು ಹಾಕಿ. ಇದಕ್ಕೆ ಹಾಗಲಕಾಯಿ ಚೂರುಗಳನ್ನು ಸೇರಿಸಿ 10 ನಿಮಿಷಗಳ ಕಾಲ ನೆನೆ ಹಾಕಿ.

ಇದಾದ ನಂತರದಲ್ಲಿ ನಿಮ್ಮ ಹಾಗಲಕಾಯಿ ಚೂರುಗಳನ್ನು ಮಿಕ್ಸರ್ ನಲ್ಲಿ ಹಾಕಿ ಚೆನ್ನಾಗಿ ರುಬ್ಬಿ ರಸ ತೆಗೆದುಕೊಳ್ಳಿ.

​ಕೊನೆಯ ಮಾತು...

Managing Diabetes | NIDDK

ಈಗ ಒಂದು ಗ್ಲಾಸ್ ನಲ್ಲಿ ಹಾಗಲಕಾಯಿ ರಸವನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಉಪ್ಪು ಮತ್ತು ನಿಂಬೆ ಹಣ್ಣಿನ ರಸ ಸೇರಿಸಿ ಜೊತೆಗೆ ಅರಿಶಿನ ಹಾಕಿ ಚೆನ್ನಾಗಿ ತಿರುವಿ.

ಹಾಗಲಕಾಯಿ ಕಹಿಯನ್ನು ಹೋಗಲಾಡಿಸಲು ಬೇಕಾದರೆ ನೀವು ಸ್ವಲ್ಪ ಕಪ್ಪು ಕಾಳುಮೆಣಸು ಮತ್ತು ಶುಂಠಿಯನ್ನು ಸೇರಿಸಿ.

Bitter Gourd Is Better For Diabetics And Help To Loss Weight Naturally.