ಹೆಲ್ತ್‌ ಟಿಪ್ಸ್: ಬಿಪಿ ಹೆಚ್ಚಾಗಿದ್ದರೆ ಬೀಟ್ರೂಟ್ ತಿನ್ನಿ ಸಾಕು!

24-12-22 07:57 pm       Source: Vijayakarnataka   ಡಾಕ್ಟರ್ಸ್ ನೋಟ್

ರಕ್ತದ ಒತ್ತಡ ಹೆಚ್ಚಾಗಿರುವವರಿಗೆ ಹಾರ್ಟ್ ಅಟ್ಯಾಕ್ ಗ್ಯಾರಂಟಿ ಎಂದು ವೈದ್ಯರು ಒಂದು ಕಡೆ ಹೇಳುತ್ತಾರೆ. ಆದರೆ ಬೀಟ್ರೋಟ್ ತಿನ್ನುವುದರಿಂದ ಬಿಪಿ ಮತ್ತು ಹಾರ್ಟ್ ಪ್ರಾಬ್ಲಮ್ ಎರಡು ದೂರವಾಗುತ್ತದೆ.

ನಾವು ತಿನ್ನುವ ಹಲವಾರು ಆರೋಗ್ಯಕರ ತರಕಾರಿಗಳಲ್ಲಿ ಬೀಟ್ರೂಟ್ ಸಹ ಒಂದು. ಇದರ ಪ್ರಯೋಜನಗಳು ಸಹ ಅಷ್ಟೇ ಅದ್ಭುತವಾಗಿವೆ. ಸಾಮಾನ್ಯವಾಗಿ ನಮಗೆ ಮನೆಗಳಲ್ಲಿ ಚಿಕ್ಕ ವಯಸ್ಸಿನವ ರಾಗಿದ್ದಾಗ ಏನು ಹೇಳುತ್ತಿದ್ದರು ಎಂದರೆ ಬೀಟ್ರೋಟ್ ತಿಂದರೆ ದೇಹಕ್ಕೆ ಹೆಚ್ಚು ರಕ್ತ ಸೇರುತ್ತದೆ ಹಾಗಾಗಿ ಯಾವುದನ್ನು ಮಿಸ್ ಮಾಡಿದರೂ ಬೀಟ್ರೂಟ್ ಮಾತ್ರ ಮಿಸ್ ಮಾಡಬಾರದು ಎಂದು ಹೇಳುತ್ತಿದ್ದರು.

ನಮ್ಮ ಹಿರಿಯರು ಓದಿರದೇ ಇದ್ದರೂ ಕೂಡ ಈ ತರಹದ ಜ್ಞಾನ ಅವರಲ್ಲಿ ಸಾಕಷ್ಟಿತ್ತು. ವೈಜ್ಞಾನಿಕ ಅಧ್ಯಯನಗಳು ಕೂಡ ಬೀಟ್ರೋಟ್ ತಿನ್ನುವುದರಿಂದ ದೇಹದಲ್ಲಿ ಕೆಂಪು ರಕ್ತ ಕಣಗಳು ಜಾಸ್ತಿಯಾಗುತ್ತವೆ ಎಂದು ಹೇಳುತ್ತವೆ. ಈಗ ಪ್ರಶ್ನೆಯೆಂದರೆ ಬೀಟ್ರೂಟ್ ತಿನ್ನುವುದರಿಂದ ಹೆಚ್ಚಾದ ಬಿಪಿ ಕಡಿಮೆಯಾಗುತ್ತಾ ಅಥವಾ ನಿಯಂತ್ರಣಕ್ಕೆ ಬರುತ್ತಾ ಎಂಬುದು. ಇದಕ್ಕೆ ಉತ್ತರವನ್ನು ಅಧ್ಯಯನದ ಆಧಾರದ ಮೇಲೆ ವೈದ್ಯರೇ ಕೊಟ್ಟಿದ್ದಾರೆ ನೋಡಿ!

ಬಿಟ್ರೋಟ್ ಹೇಗೆ ಸಹಾಯ ಮಾಡುತ್ತದೆ?

Hypertension: How To Use Beetroot For Managing High Blood Pressure

ಬ್ರಿಟಿಷ್ ಹಾರ್ಟ್ ಫೌಂಡೇಶನ್ ಸಂಸ್ಥೆ ಹೇಳುವ ಪ್ರಕಾರ ಯಾವ ತರಕಾರಿಗಳಲ್ಲಿ ನೈಟ್ರೇಟ್ ಪ್ರಮಾಣ ಹೆಚ್ಚಾಗಿರುತ್ತದೆ, ಅವುಗಳನ್ನು ತಿನ್ನುವುದರಿಂದ ಆಟೋಮೆಟಿಕ್ ಆಗಿ ಬಿಪಿ ಕಡಿಮೆಯಾಗುತ್ತದೆ. ಈಗಾಗಲೇ ಇದು ಸಂಶೋಧನೆಯಲ್ಲಿ ಸಾಬೀತಾಗಿದೆ.

ಬೀಟ್ರೂಟ್ ಪ್ರಯೋಜನಗಳು

9 Impressive Health Benefits of Beets

  • ಬೀಟ್ರೂಟ್ ಕೂಡ ತನ್ನಲ್ಲಿ ಅಪಾರ ಪ್ರಮಾಣದ ನೈಟ್ರೇಟ್ ಒಳಗೊಂಡಿರುವುದರಿಂದ ಇದು ದೇಹ ಸೇರಿದ ಮೇಲೆ ನೈಟ್ರಿಕ್ ಆಕ್ಸೈಡ್ ಆಗಿ ಬದಲಾಗುತ್ತದೆ. ಇದರಿಂದ ರಕ್ತ ನಾಳಗಳಲ್ಲಿ ರಕ್ತ ಸಂಚಾರ ಚೆನ್ನಾಗಿ ನಡೆಯಲು ಅನುಕೂಲವಾಗುವಂತೆ ಅವುಗಳ ಗಾತ್ರ ಹೆಚ್ಚಾಗುತ್ತದೆ.
  • ಅಧ್ಯಯನದಲ್ಲಿ ಹೇಳಿರುವಂತೆ ಯಾರು ಪ್ರತಿ ದಿನ ಅರ್ಧ ಕೆಜಿ ಬೀಟ್ರೂಟ್ ಸೇವನೆ ಮಾಡುತ್ತಾರೆ ಅವರಿಗೆ ಕೇವಲ ಆರು ಗಂಟೆಯಲ್ಲಿ ಬಿಪಿ ಕಡಿಮೆಯಾಗುವ ಸಾಧ್ಯತೆ ಇರುತ್ತದೆ.

ಬಿಪಿ ಕಡಿಮೆ ಆಗಬೇಕಾದರೆ ಬೀಟ್ರೂಟ್ ಹೇಗೆ ತಿನ್ನಬೇಕು?

5 reasons to add beetroot in your daily diet for healthy jump-start of  winter season

ಹೇಗೂ ನೀವು ತರಕಾರಿ ಸಲಾಡ್ ತಯಾರಿ ಮಾಡಿ ತಿನ್ನುತ್ತೀರಿ. ಅದೇ ರೀತಿ ಬೀಟ್ರೂಟ್ ಸಲಾಡ್ ಮಾಡಿ. ಇದರಲ್ಲಿ ಪೌಷ್ಟಿಕಾಂಶಗಳ ನಷ್ಟ ಉಂಟಾಗುವುದಿಲ್ಲ. ಇದೊಂದು ಆರೋಗ್ಯಕರವಾದ ಆಹಾರ ಪದಾರ್ಥ ಎನಿಸಿಕೊಳ್ಳುತ್ತದೆ.

ಮೊದಲನೆಯ ವಿಧಾನ

How to Cook Beets So They're Actually Delicious | EatingWell

ಮೊದಲಿಗೆ ಒಂದು ಬೀಟ್ರೂಟ್ ಚೆನ್ನಾಗಿ ತೊಳೆದು ನೀರಿನಲ್ಲಿ ಹಾಕಿ ಬೇಯಿಸಿಕೊಳ್ಳಿ. ಕುಕ್ಕರ್ ಅಥವಾ ಮಾಮೂಲಿ ಪಾತ್ರೆಯಲ್ಲಿ ಬೇಸಿಕೊಳ್ಳಬಹುದು. ಬೀಟ್ರೂಟ್ ಬೆಂದ ನೀರನ್ನು ಹೊರಗಡೆ ಚೆಲ್ಲಿಬಿಡಿ. ಈಗ ಬೀಟ್ರೂಟ್ ಅನ್ನು ಸಣ್ಣದಾಗಿ ಹೆಚ್ಚಿಕೊಂಡು ಸಲಾಡ್ ತರಹ ತಿನ್ನಿ. ಬೇರೆ ತರಕಾರಿಗಳ ಜೊತೆಗೆ ಕೂಡ ಇದನ್ನು ಮಿಕ್ಸ್ ಮಾಡಿ ತಿನ್ನಬಹುದು.

ಎರಡನೆಯ ವಿಧಾನ

Drink Beet Juice for These 3 Incredible Health Benefits | The Beet

  • ನಿಮಗೆ ಬೀಟ್ರೋಟ್ ಬೇಯಿಸಿಕೊಳ್ಳುವುದು ಸ್ವಲ್ಪ ಕಷ್ಟ ಆಗುತ್ತದೆ ಎಂದಾದರೆ, ಬೀಟ್ರೂಟ್ ಜ್ಯೂಸ್ ತಯಾರು ಮಾಡಿ ಸೇವಿಸಬಹುದು. ಬೀಟ್ರೂಟ್ ಅನ್ನು ಸಣ್ಣದಾಗಿ ಪೀಸ್ ಮಾಡಿಕೊಂಡು ಅಥವಾ ತುರಿದುಕೊಂಡು ಬ್ಲೆಂಡರ್ ನಲ್ಲಿ ಹಾಕಿ ಅದರಿಂದ ಜ್ಯೂಸ್ ತೆಗೆದುಕೊಳ್ಳಿ.
  • ಸ್ವಲ್ಪವೇ ಸ್ವಲ್ಪ ಉಪ್ಪು ಹಾಕಿ, ಅದು ಕೂಡ ನಿಮಗೆ ಬೇಕೆಂದರೆ ಮಾತ್ರ. ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಇದರಿಂದಲೂ ಸಹ ನಿಮ್ಮ ರಕ್ತದ ಒತ್ತಡ ನಿಯಂತ್ರಣಕ್ಕೆ ಬರುತ್ತದೆ.

Add Beetroot In Your Diet To Reduce Your High Bp.