ಮಕ್ಕಳಿಗೆ ಪಿಸ್ತಾ ನೀಡಿದರೆ ಬುದ್ಧಿ ಶಕ್ತಿ ಹೆಚ್ಚುವುದರ ಜೊತೆಗೆ ಈ ಪ್ರಯೋಜನಗಳಿವೆ

27-02-21 12:11 pm       source: BOLDSKY   ಡಾಕ್ಟರ್ಸ್ ನೋಟ್

ಪಿಸ್ತಾ... ಈ ನಟ್ಸ್‌ ಮಕ್ಕಳಿಂದ ಹಿಡಿದು ದೊಡ್ಡವರೆಗೆ ಇಷ್ಟುಪಟ್ಟು ಸವಿಯುತ್ತಾರೆ.

ಪಿಸ್ತಾ... ಈ ನಟ್ಸ್‌ ಮಕ್ಕಳಿಂದ ಹಿಡಿದು ದೊಡ್ಡವರೆಗೆ ಇಷ್ಟುಪಟ್ಟು ಸವಿಯುತ್ತಾರೆ. 2 ವರ್ಷ ಮೇಲ್ಪಟ್ಟ ಮಕ್ಕಳಿಗೆ ಪಿಸ್ತಾದ ಸಿಪ್ಪೆ ಸುಲಿದು ಕೊಟ್ಟರೆ ಇಷ್ಟುಪಟ್ಟು ತಿನ್ನುತ್ತಾರೆ. ಇದನ್ನು ಬೇಡ ಎಂದು ಹೇಳುವ ಮಕ್ಕಳು ಬಲು ಅಪರೂಪ. ಆದ್ದರಿಂದ ಈ ಪೋಷಕಾಂಶದ ಆಹಾರವನ್ನು ನಿಮ್ಮ ಮಕ್ಕಳ ಆಹಾರ ಕ್ರಮದಲ್ಲಿ ಆರಾಮವಾಗಿ ಸೇರಿಸಬಹುದಾಗಿದೆ.

ನಾವಿಲ್ಲಿ ನೀವು ಪಿಸ್ತಾವನ್ನು ಮಕ್ಕಳಿಗೆ ಎಷ್ಟು ಪ್ರಮಾಣದಲ್ಲಿ ಹಾಗೂ ಹೇಗೆ ನೀಡಬಹುದು, ಇದರಿಂದ ಅವರ ಬೆಳವಣಿಗೆಗೆ ಹೇಗೆ ಸಹಕಾರಿ ಎಂಬುವುದರ ಕುರಿತು ಮಾಹಿತಿ ನೀಡಿದ್ದೇವೆ, ಬನ್ನಿ ಅದರತ್ತ ಕಣ್ಣಾಡಿಸೋಣ:

ಅತ್ಯುತ್ತಮ ಪ್ರೊಟೀನ್‌ ಮೂಲ

ನೀವು 100ಗ್ರಾಂ ಪಿಸ್ತಾ ತಿಂದರೆ 20ಗ್ರಾಂ ಪ್ರೊಟೀನ್ ಸಿಗುತ್ತದೆ. ಮೊಟ್ಟೆ ಹಾಗೂ ಚಿಕನ್‌ಗೆ ಹೋಲಿಸಿದರೆ ಪಿಸ್ತಾದಲ್ಲಿ ನಿಮಗೆ ಸಿಗುವ ಪ್ರೊಟೀನ್ ಅಧಿಕವಾಗಿದೆ. ಒಂದು ಮೊಟ್ಟೆಯಲ್ಲಿ 12 ಗ್ರಾಂ , 100 ಗ್ರಾಂ ಚಿಕನ್‌ನಲ್ಲಿ 17ಗ್ರಾಂನಷ್ಟೇ ಪ್ರೊಟೀನ್‌ ಇರುತ್ತದೆ.

ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ

ನಿಮಗೆ 100 ಗ್ರಾಂ ಪಿಸ್ತಾದಲ್ಲಿ 500 ಕ್ಯಾಲೋರಿ ಶಕ್ತಿ ಸಿಗುತ್ತದೆ. ಮಕ್ಕಳಿಗೆ ಬೆಳಗ್ಗೆ ಬ್ರೇಕ್‌ ಫಾಸ್ಟ್ ಜೊತೆ ಹಾಕಿ ಅಥವಾ ಹಾಗೇ ಸ್ವಲ್ಪ ಪಿಸ್ತಾ ನೀಡಿದರೆ ಅವರಿಗೆ ಚಟುವಟಿಕೆಯಿಂದ ಇರಲು ಶಕ್ತಿಯನ್ನು ಒದಗಿಸುತ್ತದೆ.

ಸಕ್ಕರೆಯಂಶ ಕಡಿಮೆ ಇರುವುದರಿಂದ ಮಕ್ಕಳಿಗೆ

ಅತ್ಯುತ್ತಮವಾದ ಆಹಾರ

100 ಗ್ರಾಂ ಪಿಸ್ತಾದಲ್ಲು 7ಗ್ರಾಂ ಸಕ್ಕರೆ, 27 ಗ್ರಾಂ ಕಾರ್ಬ್ಸ್ ಇರುತ್ತದೆ. ಆದ್ದರಿಂದ ಮಕ್ಕಳಿಗೆ ನೀಡಬಹುದಾದ ಅತ್ಯುತ್ತಮವಾದ ಸ್ನ್ಯಾಕ್ಸ್ ಇದಾಗಿದೆ.

ಎಲೆಕ್ಟ್ರೋಲೈಟ್ಸ್ ಒದಗಿಸುತ್ತದೆ

ಪಿಸ್ತಾದಲ್ಲಿ ಪೊಟಾಷ್ಯಿಯಂ ಅಂಶವಿದ್ದು, ಇದು ಸೋಡಿಯಂಗಿಂತ ಅತ್ಯುತ್ತಮವಾದ ಎಲೆಕ್ಟ್ರೋಲೈಟ್ಸ್ ಆಗಿದೆ. ದೇಹದಲ್ಲಿ ಪೊಟಾಷ್ಯಿಯಂ ಪ್ರಮಾಣ ಕಡಿಮೆ ಇದ್ದರೆ ಸೋಡಿಯಂ ಅಧಿಕವಾಗಿದ್ದು ಅಧಿಕ ರಕ್ತದೊತ್ತಡ ಉಂಟಾಗುತ್ತದೆ.

ಮಕ್ಕಳ ಬೆಳವಣಿಗೆಗೆ ಅವಶ್ಯಕವಾದ ವಿಟಮಿನ್ಸ್ ಒದಗಿಸುತ್ತದೆ

ಇದರಲ್ಲಿ ವಿಟಮಿನ್ ಸಿ, ಥೈಯಾಮಿನ್, ರಿಬೋಫ್ಲೇವಿನ್, ನಿಯಾಸಿನ್, ಪೆಂಟೋಎಥ್ನಿಕ್ ಆಮ್ಲ, ವಿಟಮಿನ್ ಬಿ6, ಫೋಲೆಟ್, ವಿಟಮಿನ್ ಎ ಮತ್ತು ವಿಟಮಿನ್ ಇ ಇರುವುದರಿಂದ ಮಕ್ಕಳ ಬೆಳವಣಿಗೆಯಲ್ಲಿ ತುಂಬಾನೇ ಸಹಕಾರಿಯಾಗಿದೆ.

ನಾರಿನಂಶ ಇದೆ'

100ಗ್ರಾಂ ಪಿಸ್ತಾದಲ್ಲಿ 10ಗ್ರಾಂ ನಾರಿನಂಶ ಇರುತ್ತದೆ. ಆದ್ದರಿಂದ ಪಿಸ್ತಾ ನೀಡಿದರೆ ಮಕ್ಕಳ ಮಲ ಬದ್ಧತೆ ಸಮಸ್ಯೆ ತಡೆಗಟ್ಟುವಲ್ಲಿ ಸಹಕಾರಿ.

ಮಕ್ಕಳ ಬುದ್ಧಿ ಶಕ್ತಿ ಹೆಚ್ಚಿಸುತ್ತದೆ

ಪಿಸ್ತಾದಲ್ಲಿ ವಿಟಮಿನ್ ಬಿ-6 ಇರುವುದರಿಂದ ಮಕ್ಕಳ ನರಗಳ ಸರಿಯಾದ ಬೆಳವಣಿಗೆಗೆ ಸಹಾಯ ಮಾಡುತ್ತದೆ ಇದರಿಂದ ಅವರ ಮೆದುಳು ಚುರುಕಾಗುವುದು.

ಆ್ಯಂಟಿಆಕ್ಸಿಡೆಂಟ್‌ ಗುಣವಿದ್ದು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ

ಇದರಲ್ಲಿ ವಿಟಮಿನ್ ಸಿ, ವಿಟಮಿನ್ ಬಿ-6 ಹಾಗೂ ಆ್ಯಂಟಿಆಕ್ಸಿಡೆಂಟ್‌ ಅಂಶವಿರುವುದರಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ.

ದಿನದಲ್ಲಿ ಎಷ್ಟು ಪಿಸ್ತಾ ನೀಡಬಹುದು?

* ಚಿಕ್ಕ ಮಗುವಾದರೆ ಈಗಷ್ಟೇ ಘನ ಆಹಾರ ಸೇವಿಸುತ್ತಿದ್ದರೆ ಅದಕ್ಕೆ ನಟ್ಸ್ ರೋಸ್ಟ್‌ ಮಾಡಿ ನುಣ್ಣನೆ ಪುಡಿ ವಾರದಲ್ಲಿ ಎರು ಬಾರಿ ನೀಡುವ ಆಹಾರದಲ್ಲಿ ಮಿಕ್ಸ್ ಮಾಡಿ ಕೊಡಬಹುದು.

* ಮಕ್ಕಳಾದರೆ ಅವರ ಒಂದು ಕೈ ಮುಷ್ಠಿಯಷ್ಟು ನಟ್ಸ್ ಸವಿಯಲು ನೀಡಬಹುದು.

This News Article is a Copy of BOLDSKY