ಆಕ್ಯುಪಂಕ್ಚರ್ ಮೂಲಕ ಮಧುಮೇಹ ನಿವಾರಣೆ

19-08-20 05:59 pm       Headline Karnataka News Network   ಡಾಕ್ಟರ್ಸ್ ನೋಟ್

ಮಧುಮೇಹ, ಥೈರಾಯ್್ಡಂಥ ಸಮಸ್ಯೆಗಳನ್ನು ಆಕ್ಯುಪಂಕ್ಚರ್ ಚಿಕಿತ್ಸೆ ಮೂಲಕ ನಿವಾರಿಸಬಹುದು ಎಂದು ನಗರದ ನೇಚರ್ ಕ್ಲಿನಿಕ್​ನ ಡಾ. ಶ್ರಾವ್ಯಾ ಅರುಣ್ ಹೇಳಿದ್ದಾರೆ.

ಮಧುಮೇಹ, ಥೈರಾಯ್್ಡಂಥ ಸಮಸ್ಯೆಗಳನ್ನು ಆಕ್ಯುಪಂಕ್ಚರ್ ಚಿಕಿತ್ಸೆ ಮೂಲಕ ನಿವಾರಿಸಬಹುದು ಎಂದು ನಗರದ ನೇಚರ್ ಕ್ಲಿನಿಕ್​ನ ಡಾ. ಶ್ರಾವ್ಯಾ ಅರುಣ್ ಹೇಳಿದ್ದಾರೆ.

ಮಧುಮೇಹ ಒಮ್ಮೆ ಬಂದರೆ ಅದನ್ನು ಗುಣಪಡಿಸಲು ಸಾಧ್ಯವಿಲ್ಲ ಎಂದು ಮಾತುಗಳಿವೆ. ಆದರೆ, ಅದು ಸತ್ಯಕ್ಕೆ ದೂರವಾದ ವಿಚಾರ. ಅಂದಾಜು 8 ಸಾವಿರ ವರ್ಷ ಹಳೆಯ ಹಾಗೂ ನೋವಿಲ್ಲದ ಪರಿಣಾಮಕಾರಿ ಚಿಕಿತ್ಸಾ ಪದ್ಧತಿಯಾಗಿರುವ ಆಕ್ಯುಪಂಕ್ಚರ್ ಮೂಲಕ ಮಧುಮೇಹವನ್ನು ಗುಣಪಡಿಸಬಹುದಾಗಿದೆ ಎನ್ನುತ್ತಾರೆ ಆಕ್ಯುಪಂಕ್ಚರ್ ತಜ್ಞೆ ಶ್ರಾವ್ಯಾ ಅರುಣ್.

ನಮ್ಮ ದೇಹದಲ್ಲಿರುವ ಮೇದೋಜೀರಕ (ಪ್ಯಾಂಕ್ರಿಯಾಸ್) ಎಂಬ ಗ್ರಂಥಿಯು ಸರಿಯಾದ ಪ್ರಮಾಣದಲ್ಲಿ ಇನ್ಸುಲಿನ್ ಉತ್ಪಾದಿಸದಿದ್ದಾಗ ಅದನ್ನು ಮಧುಮೇಹ ಎಂದು ಕರೆಯಲಾಗುತ್ತದೆ. ಯಾವ ಕಾರಣಕ್ಕೆ ಇನ್ಸುಲಿನ್ ಉತ್ಪತ್ತಿಯಾಗುತ್ತಿಲ್ಲ ಎಂಬುದನ್ನು ಪತ್ತೆಹಚ್ಚಿ ಅದಕ್ಕೆ ಆಕ್ಯುಪಂಕ್ಚರ್ ಮೂಲಕ ಚಿಕಿತ್ಸೆ ನೀಡಿದರೆ ಸಮಸ್ಯೆ ಬಗೆಹರಿಸಬಹುದು ಎಂದಿದ್ದಾರೆ.

ಆಕ್ಯುಪಂಕ್ಚರ್ ಚಿಕಿತ್ಸಾ ವಿಧಾನ ಮೇದೋ ಜೀರಕವನ್ನು ಉದ್ದೀಪನಗೊಳಿಸಿ, ಹಾಮೋನ್ ಸಮತೋಲನಗೊಳಿಸಿ ಈ ಗ್ರಂಥಿಯಲ್ಲಿ ಮತ್ತೆ ಇನ್ಸುಲಿನ್ ಉತ್ಪಾದನೆಯಾಗುವಂತೆ ಮಾಡುತ್ತದೆ. ಇದರಿಂದ ಮಧುಮೇಹ ಸಾಮಾನ್ಯ ಸ್ಥಿತಿಗೆ ತಲುಪುತ್ತದೆ ಎಂದು ಹೇಳಿದ ಡಾ. ಶ್ರಾವ್ಯಾ, ಒಮ್ಮೆ ಸಾಮಾನ್ಯ ಸ್ಥಿತಿಗೆ ತಲುಪಿದ ಬಳಿಕ ಮಧುಮೇಹ ಮರುಕಳಿಸುವುದಿಲ್ಲ ಎಂದು ಶ್ರಾವ್ಯಾ ಅರುಣ್ ತಿಳಿಸಿದ್ದಾರೆ.

ಹಲವು ಕಾಯಿಲೆಗಳಿಗೆ ಸಿಗಲಿದೆ ಪರಿಹಾರ

ಮಧುಮೇಹ ಮಾತ್ರವಲ್ಲದೆ, ಥೈರಾಯ್್ಡ ಸಂದಿವಾತ, ರಕ್ತದೊತ್ತಡ, ತಲೆಶೂಲೆ, ಕತ್ತು- ಬೆನ್ನು ಹಾಗೂ ಮಂಡಿನೋವು, ಗ್ಯಾಸ್ಟ್ರಿಕ್, ಸಯಾಟಿಕಾ, ತಲೆಭಾರ, ವಾಂತಿ, ನಿದ್ರಾಹೀನತೆ, ಅಲರ್ಜಿ, ಅಸ್ತಮಾ, ಚರ್ಮಕ್ಕೆ ಸಂಬಂಧಿಸಿದ ಅಲರ್ಜಿಗಳು, ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು, ಮುಟ್ಟಿನ ಸಮಸ್ಯೆಗಳನ್ನೂ ಕೂಡ ಆಕ್ಯುಪಂಕ್ಚರ್ ಮೂಲಕ ನಿವಾರಿಸಬಹುದು ಎನ್ನುತ್ತಾರೆ ಶ್ರಾವ್ಯಾ.