ಬ್ರೇಕಿಂಗ್ ನ್ಯೂಸ್
21-08-21 11:27 am Shreeraksha, Boldsky ಡಾಕ್ಟರ್ಸ್ ನೋಟ್
ಮೊಡವೆಯುಕ್ತ ತ್ವಚೆ ಹೊಂದಿರುವ ಜನರಿಗೆ ಮೇಕಪ್ ಮಾಡಿಕೊಳ್ಳುವುದು ಒಂದು ತಲೆನೋವೇ ಸರಿ. ಏಕೆಂದರೆ ಮೇಕಪ್ ನಿಂದ ತಮ್ಮ ತ್ವಚೆಯ ಮೇಲೆ ಬೀರುವ ಪರಿಣಾಮದ ಕುರಿತು ಭಯ ಹೊಂದಿರುತ್ತಾರೆ. ಕಠಿಣವಾದ ರಾಸಾಯನಿಕಯುಕ್ತ ಮೇಕ್ಅಪ್ ಅನ್ನು ಹಚ್ಚಿಕೊಳ್ಳುವುದರಿಂದ ಅವರ ತ್ವಚೆ ಮತ್ತಷ್ಟು ಹಾನಿಗೊಳಗಾಗಬಹುದು. ಆದ್ದರಿಂದ ಇಂತಹ ಸೂಕ್ಷ್ಮ ತ್ವಚೆಯುಳ್ಳವರು ಮೇಕಪ್ ಮಾಡಿಕೊಳ್ಳುವಾಗ ಎಚ್ಚರಿಕೆ ವಹಿಸಬೇಕು. ಆದ್ದರಿಂದ ಇಲ್ಲಿ ನಾವು ಮುಖದಲ್ಲಿ ಮೊಡವೆ ಹೊಂದಿರುವವರು ಮೇಕಪ್ ಮಾಡಿಕೊಳ್ಳುವಾಗ ಪಾಲಿಸಬೇಕಾದ ಸರಳ ಸಲಹೆಗಳ ಬಗ್ಗೆ ವಿವರಿಸಿದ್ದೇವೆ.
ಮೇಕಪ್ ಉತ್ಪನ್ನಗಳನ್ನು ಬುದ್ಧಿವಂತಿಕೆಯಿಂದ ಆರಿಸಿ:
ಎಲ್ಲಕ್ಕಿಂತ ಮೊದಲು, ನೀವು ಮೊಡವೆ ಪೀಡಿತ ತ್ವಚೆಯನ್ನು ಹೊಂದಿದ್ದರೆ, ನಿಮ್ಮ ತ್ವಚೆಯನ್ನು ಹಾನಿಮಾಡದ ಮೇಕಪ್ ಉತ್ಪನ್ನಗಳನ್ನು ಆರಿಸಿಕೊಳ್ಳಬೇಕು. ಆದ್ದರಿಂದ, ಪ್ಯಾರಾಫಿನ್, ಥಾಲೇಟ್ಸ್, ಐಸೊಪ್ರೊಪಿಲ್ ಮೈರಿಸ್ಟೇಟ್, ಅಥವಾ ಪೆಟ್ರೋಲಾಟಮ್ ನಂತಹ ಪದಾರ್ಥಗಳಿರುವ ಮೇಖಪ್ ಉತ್ಪನ್ನಗಳಿಂದ ದೂರವಿಡಿ. ಇವುಗಳು ತ್ವಚೆಯ ರಂಧ್ರಗಳನ್ನು ಮುಚ್ಚಿ, ಮೊಡವೆ ಹೆಚ್ಚಾಗಲು ಕಾರಣವಾಗಬಹುದು. ಬದಲಾಗಿ, ಹೈಲುರಾನಿಕ್ ಆಮ್ಲ ಮತ್ತು ಹೈಪೋಲಾರ್ಜನಿಕ್ ಹೊಂದಿರುವ ಉತ್ಪನ್ನಗಳನ್ನು ಖರೀದಿಸಿ. ಅಲ್ಲದೆ, ಆರೋಗ್ಯಪೂರ್ಣ, ತ್ವಚೆ ಪಡೆಯಲು ಸಾಕಷ್ಟು ನೀರು ಕುಡಿಯಿರಿ.
ಪ್ರೈಮರ್ ನ್ನು ಮರೆಯಬೇಡಿ:
ಮೊಡವೆಯುಕ್ತ ತ್ವಚೆ ಹೊಂದಿರುವವರು ಮೇಕಪ್ ಮಾಡುವ ಮೊದಲು ಪ್ರೈಮರ್ ಹಚ್ಚುವುದು ಮುಖ್ಯ, ಇದು ಮೇಕಪ್ ಹೆಚ್ಚು ಕಾಲ ಉಳಿಯಲು ಸಹಾಯ ಮಾಡುವುದಲ್ಲದೆ ನಿಮ್ಮ ರಂಧ್ರಗಳನ್ನು ಸುಗಮಗೊಳಿಸುತ್ತದೆ. ಉತ್ತಮ ಬ್ರಾಂಡ್ ನ ಪ್ರೈಮರ್ ಅನ್ನು ಆಯ್ಕೆ ಮಾಡಿಕೊಳ್ಳಿ. ಈ ಪ್ರೈಮರ್ ನಿಮ್ಮ ಕಲೆಗಳನ್ನು ಮರೆಮಾಚಿ, ಟೋನ್ ನೀಡುತ್ತದೆ. ಜೊತೆಗೆ ನಿಮ್ಮ ಮುಖಕ್ಕೆ ಮ್ಯಾಟ್ ಫಿನಿಶ್ ಲುಕ್ ನೀಡುವುದಲ್ಲದೇ, ಇದು ವಾಟರ್ ಪ್ರೂಫ್ ಆಗಿದೆ.
ತೈಲ ಆಧಾರಿತ, ಹೆವಿ ಫೌಂಡೇಷನ್ ಬೇಡ:
ಮೊಡವೆ ಇರುವವರು ಮೇಕಪ್ ಮಾಡುವಾಗ ಸರಿಯಾದ ಫೌಂಡೇಷನ್ ಆರಿಸುವುದು ಬಹಳ ಮುಖ್ಯ. ನಿಮ್ಮ ತ್ವಚೆಯ ಮೇಲೆ ಹಗುರವಾಗಿರುವ ಮತ್ತು ಸುಲಭವಾಗಿ ಮಿಶ್ರಣವಾಗುವಂತಹ ಮ್ಯಾಟ್, ಎಣ್ಣೆ ರಹಿತ ಫೌಂಡೇಷನ್ ಬಳಸಿ. ಇದು ನಿಮಗೆ ಉತ್ತಮವಾಗಿದ್ದು, ನೈಸರ್ಗಿಕವಾಗಿ ಕಾಣುವ ಮ್ಯಾಟ್ ಫಿನಿಶ್ ನೀಡುತ್ತದೆ. ಜೊತೆಗೆ ಸೂರ್ಯನ ಹಾನಿಯಿಂದಲೂ ರಕ್ಷಿಸುತ್ತದೆ.
ಸ್ವಚ್ಛವಾದ ಮೇಕಪ್ ಬ್ರಷ್ ಮತ್ತು ಸ್ಪಂಜುಗಳನ್ನು ಬಳಸಿ:
ನೀವು ಎಂದಿಗೂ ನಿಮ್ಮ ಮೇಕಪ್ ಬ್ರಷ್ಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ, ಕೊಳಕು ಸ್ಪಂಜು ಅಥವಾ ಬ್ರಷ್ಗಳನ್ನು ಬಳಸಬೇಡಿ. ತೊಳೆಯದ ಮೇಕಪ್ ಬ್ರಷ್ ಗಳು ಮತ್ತು ಸ್ಪಂಜುಗಳು ಬ್ಯಾಕ್ಟೀರಿಯಾಗಳಿಗೆ ಸಂತಾನೋತ್ಪತ್ತಿಯ ತಾಣವಾಗಿ ಕಾರ್ಯನಿರ್ವಹಿಸುತ್ತವೆ. ಇದರಿಂದ ತ್ವಚೆಗೆ ಹಾನಿಯಾಗುತ್ತದೆ. ಆದ್ದರಿಂದ ಪ್ರತಿ ಬಳಕೆಯ ನಂತರವೂ ಮೇಕಪ್ ಬ್ರಷ್ಗಳನ್ನು ಸ್ವಚ್ಛಗೊಳಿಸಿ ಮತ್ತು ಅವುಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
ಕಲರ್ ಕರೆಕ್ಟರ್ ಬಳಸಿ:
ಮೊಡವೆಗಳು ನಿಮ್ಮ ಮುಖದ ಮೇಲೆ ಕೆಂಪು, ಕಪ್ಪು ಕಲೆಗಳನ್ನು ಉಂಟುಮಾಡಬಹುದು, ಅದಕ್ಕಾಗಿ ನೀವು ಕಲರ್ ಕರೆಕ್ಟರ್ ನ್ನು ಬಳಸಬೇಕು. ಫೌಂಡೇಶನ್ ಮತ್ತು ಕನ್ಸೀಲರ್ ಗಳ ಮೇಲೆ ಡಬ್ಬಿಂಗ್ ಮಾಡುವ ಮೊದಲು, ಗಾಯ ಅಥವಾ ಕೆಂಪು ಬಣ್ಣವನ್ನು ಮರೆಮಾಡಲು ಹಸಿರು ಕಲರ್ ಕರೆಕ್ಟರ್ ನ್ನು ಬಳಸಿ. ಇದರಿಂದ ನಿಮ್ಮ ಕಲೆಯೂ ಕಾಣುವುದಿಲ್ಲ, ಮೇಕಪ್ ಅತಿಯಾಗಿಯೂ ಕಾಣಿಸುವುದಿಲ್ಲ, ಜೊತೆಗೆ ಹೆಚ್ಚು ಫೌಂಡೇಷನ್ ಅಗತ್ಯವೂ ಬರುವುದಿಲ್ಲ.
ಮಲಗುವ ಮುನ್ನ ಮೇಕಪ್ ತೆಗೆಯಿರಿ:
ಕೊನೆಯದಾಗಿ, ನೀವು ಮಲಗುವ ಮುನ್ನ ನಿಮ್ಮ ತ್ವಚೆ ಮೇಕಪ್, ಕೊಳಕು ಮತ್ತು ಎಣ್ಣೆ ರಹಿತವಾಗಿದೆಯೆ ಎಂದು ಖಚಿತಪಡಿಸಿಕೊಳ್ಳಿ. ಕ್ಲೆನ್ಸಿಂಗ್ ವಾಟರ್ನೊಂದಿಗೆ ಮೇಕಪ್ ತೆಗೆದು ಮಲಗಿ. ಇಲ್ಲದಿದ್ದರೆ, ಆ ಕೊಳೆ, ಮೇಕಪ್ ನಿಂದ ನಿಮ್ಮ ತ್ವಚೆ ಮತ್ತಷ್ಟು ಮೊಡವೆಗಳನ್ನು ಉಂಟುಮಾಡುತ್ತದೆ. ಆದ್ದರಿಂದ ಕ್ಲೆನ್ಸರ್ ಬಳಸಿ, ಮೇಕಪ್ ತೆಗೆದುಹಾಕಿ, ಉತ್ತಮವಾದ ಮಾಯಿಶ್ಚರೈಸರ್ ಹಚ್ಚಿಕೊಂಡು ಮಲಗಿ.
(Kannada Copy of Boldsky Kannada)
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm