ಬ್ರೇಕಿಂಗ್ ನ್ಯೂಸ್
04-10-21 03:47 pm Source: News 18 Kannada ಡಾಕ್ಟರ್ಸ್ ನೋಟ್
ಹೆಚ್ಚಿನ ಜನರು ಬೇಳೆಕಾಳುಗಳನ್ನು ಬೇಯಿಸುವ ಮೊದಲು ತೊಳೆಯುತ್ತಾರೆ. ಆದರೆ ಕೆಲವೇ ಕೆಲವು ಬೆರಳೆಣಿಕೆ ಮಂದಿಯಷ್ಟೇ ಜನರು ಬೇಯಿಸುವ ಮೊದಲು ಅವುಗಳನ್ನು ನೆನೆಸುತ್ತಾರೆ. ದ್ವಿದಳ ಧಾನ್ಯಗಳಾದ ರಾಜ್ಮಾ ಮತ್ತು ಚೋಲೆಗಳನ್ನು ರಾತ್ರಿಯಿಡೀ ನೆನೆಸಬೇಕು. ಇತರ ಬೇಳೆಗಳನ್ನು ಬೇಗನೆ ಬೇಯುವುದರಿಂದ ಹೆಚ್ಚಿನ ಜನರು ನೆನೆಸುವುದನ್ನು ಬಿಟ್ಟುಬಿಡುತ್ತಾರೆ. ಆದರೆ ನೆನೆಸುವುದರಿಂದ ಸಾಕಷ್ಟು ಅನುಕೂಲಗಳಿವೆ ಮತ್ತು ಅಡುಗೆ ಮಾಡುವ ಮೊದಲು ಬೇಳೆಕಾಳುಗಳನ್ನು ಯಾಕೆ ನೆನೆಸಬೇಕು ಎಂದು ನಿಮಗೆ ತಿಳಿದಿದೆಯೇ..?
ತನ್ನ ಇತ್ತೀಚಿನ ಇನ್‍ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ಆಯುರ್ವೇದ ತಜ್ಞ ಡಾ. ದೀಕ್ಷಾ ಭಾವ್ಸರ್ ಅವರು ಎಂದಿಗೂ ಧಾನ್ಯ ಬೇಳೆಕಾಳುಗಳನ್ನು ನೆನೆಸುವುದನ್ನು ಮರೆಯುವುದಿಲ್ಲ. ಜೊತೆಗೆ ದ್ವಿದಳ ಧಾನ್ಯಗಳನ್ನು ನೆನೆಸುವುದರಿಂದ ಆಗುವ ಅನುಕೂಲ ಏನು ಎಂಬುದನ್ನು ವಿವರಿಸುತ್ತಾರೆ. ಏಕೆಂದರೆ ಅದು ಆರೋಗ್ಯಕ್ಕೆ ಉತ್ತಮ ಎನ್ನುತ್ತಾರೆ.

ಡಾ. ದೀಕ್ಷಾ ಪ್ರಕಾರ, ಕೆಲವು ಬೇಳೆಕಾಳುಗಳು, ಧಾನ್ಯಗಳು ಫೈಟಿಕ್ ಆ್ಯಸಿಡ್ ಅನ್ನು ಒಳಗೊಂಡಿರುತ್ತವೆ, ಇದು ಖನಿಜಗಳು ಮತ್ತು ಪೋಷಕಾಂಶಗಳನ್ನು ಹೀರಿಕೊಳ್ಳುವ ದೇಹದ ಸಾಮರ್ಥ್ಯ ತಡೆಯುತ್ತದೆ. ಫೈಟಿಕ್ ಆ್ಯಸಿಡ್ ಮತ್ತು ಇತರ ವಿರೋಧಿ ಪೋಷಕಾಂಶಗಳನ್ನು ವಿಭಜಿಸುವ ಮತ್ತು ಜೀರ್ಣವೂ ಸುಲಭವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಬೇಳೆಕಾಳು, ಧಾನ್ಯಗಳನ್ನು ನೆನೆಸುವುದರಿಂದ ದೇಹದ ಖನಿಜಾಂಶ ಹೀರಿಕೊಳ್ಳುವಿಕೆಯ ಪ್ರಮಾಣ ಹೆಚ್ಚಾಗುತ್ತದೆ. ಸ್ವಲ್ಪ ಹೊತ್ತು ನೆನೆಸಿದಾಗ, ಫೈಟೇಸ್ ಎಂಬ ಕಿಣ್ವವು ಪ್ರಚೋದಿಸಲ್ಪಡುತ್ತದೆ. ಫೈಟೇಸ್ ಫೈಟಿಕ್ ಆಮ್ಲದ ವಿಭಜನೆಗೆ ಸಹಾಯ ಮಾಡುತ್ತದೆ ಹಾಗೂ ಕ್ಯಾಲ್ಸಿಯಂ, ಕಬ್ಬಿಣ ಮತ್ತು ಸತು ಅದರಲ್ಲಿಯೇ ಉಳಿದುಕೊಳ್ಳಲು ಸಹಕರಿಸುತ್ತದೆ. ಇದು ಹೀರಿಕೊಳ್ಳುವ ಪ್ರಕ್ರಿಯೆಯನ್ನು ಹೆಚ್ಚು ಸರಳಗೊಳಿಸುತ್ತದೆ.

ನೆನೆಸುವುದು ಅಮೈಲೇಸ್ ಅನ್ನು ಉತ್ತೇಜಿಸುತ್ತದೆ, ಇದು ಬೇಳೆಕಾಳುಗಳಲ್ಲಿನ ಸಂಕೀರ್ಣವಾದ ಪಿಷ್ಟವನ್ನು ವಿಭಜಿಸುತ್ತದೆ, ಅವುಗಳನ್ನು ಜೀರ್ಣಿಸಿಕೊಳ್ಳುವುದಕ್ಕೆ ಸುಲಭವಾಗಿಸುತ್ತದೆ.
ಡಾ. ದೀಕ್ಷಾ ಪ್ರಕಾರ, ನೆನೆಸುವ ಪ್ರಕ್ರಿಯೆಯು ಕಾಳುಗಳಿಂದ ಗ್ಯಾಸ್ ಉತ್ಪಾದಿಸುವ ರಾಸಾಯನಿಕಗಳನ್ನು ಸಹ ತೆಗೆದುಹಾಕುತ್ತದೆ. ಹೆಚ್ಚಿನ ದ್ವಿದಳ ಧಾನ್ಯಗಳಲ್ಲಿ ಸಂಕೀರ್ಣ ಒಲಿಗೊಸ್ಯಾಕರೈಡ್‍ಗಳು ಸೇರಿವೆ, ಇದು ಒಂದು ರೀತಿಯ ಸಂಕೀರ್ಣ ಸಕ್ಕರೆಯಾಗಿದ್ದು, ಹೊಟ್ಟೆ ಉಬ್ಬುವುದು ಮತ್ತು ಗ್ಯಾಸ್‍ಗೆ ಕಾರಣವಾಗುತ್ತದೆ. ನೆನೆಸಿದ ನಂತರ ಈ ಸಂಕೀರ್ಣ ಸಕ್ಕರೆಯ ಮಟ್ಟವು ಗಣನೀಯವಾಗಿ ಕಡಿಮೆಯಾಗುತ್ತದೆ, ಈ ರೀತಿ ಮಾಡುವುದರಿಂದ ಗ್ಯಾಸ್ ಸಮಸ್ಯೆಗಳಿಂದ ದುರವಿರಬಹುದು. ಅಲ್ಲದೇ ಅಡುಗೆ ಸಮಯ ಕಡಿಮೆಯಾಗುತ್ತದೆ ಎಂದು ಅವರು ಹೇಳಿದರು.

ವಿವಿಧ ದ್ವಿದಳ ಧಾನ್ಯಗಳನ್ನು ಎಷ್ಟು ಸಮಯ ನೆನೆಸಬೇಕು?
ಯಾವುದೇ ಧಾನ್ಯಗಳನ್ನು ರಾತ್ರಿಯಿಡೀ ನೆನೆಸುವುದು ಉತ್ತಮ ಅಭ್ಯಾಸವಾಗಿದೆ.
ಇದು ಟ್ಯಾನಿನ್ ಅಥವಾ ಫೈಟಿಕ್ ಆ್ಯಸಿಡ್ ಅನ್ನು ಒಳಗೊಂಡಿರುವುದರಿಂದ ನಾವು ಇದನ್ನು ಬಳಸಬಾರದು. ಆದ್ದರಿಂದ ಇದನ್ನು ಗಿಡಗಳಿಗೆ ಬಳಸಬಹುದು. ಆ ರೀತಿಯಲ್ಲಿ, ಮನೆ ಗಿಡಗಳು ಕೆಲವು ಪೋಷಕಾಂಶಗಳನ್ನು ಸಹ ಪಡೆಯುತ್ತವೆ.
09-09-26 10:52 am
HK News Staffer
ಕಳಸದಲ್ಲಿ ರಸ್ತೆ ಅವ್ಯವಸ್ಥೆಯ ಎಫೆಕ್ಟ್: ‘ಹುಡುಗ-ಹು...
08-09-26 02:24 pm
ಐಪಿಎಸ್ ಅಧಿಕಾರಿಗಳ ಭರ್ಜರಿ ವರ್ಗಾವಣೆ: ಮಂಗಳೂರು ಡಿಸ...
07-09-26 01:33 pm
ಜೆನ್ ಜೀಗಳಿಗೆ ಕಾಂಗ್ರೆಸ್ ಸಿದ್ಧಾಂತ, ಜಾತ್ಯತೀತ ಭಾವ...
05-09-26 04:53 pm
400 ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ ; ಪ್ರತಿ ಹ...
02-09-26 05:06 pm
05-09-26 11:55 am
HK News Staffer
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
08-09-26 05:20 pm
HK News Staffer
ದಕ್ಷಿಣ ಕನ್ನಡದಲ್ಲಿ ದಿಢೀರ್ ಲೋಕಾಯುಕ್ತ ದಾಳಿ: ಬಂಟ್...
08-09-26 03:50 pm
Mangalore Jail Raid: ಮಂಗಳೂರು ಜೈಲಿಗೆ ತಡರಾತ್ರಿ...
08-09-26 09:50 am
ಪುತ್ತೂರು ಮಹಾಲಿಂಗೇಶ್ವರನ ಹೆಸರಲ್ಲಿ ಅವ್ಯವಹಾರ ; ಸಣ...
08-09-26 08:27 am
ಪದ್ಮಶ್ರೀ ಹರೇಕಳ ಹಾಜಬ್ಬರಿಗೆ ಎಸ್ಐ ಆರ್ ನೋಟಿಸ್ ! ಬ...
07-09-26 09:57 pm
09-09-26 12:16 pm
HK News Staffer
ಸೌದಿ ಅರೇಬಿಯಾದಲ್ಲಿ ಕುತ್ತಾರಿನ ಯುವಕ ದಿಢೀರ್ ಸಾವು...
08-09-26 09:19 pm
ಮಂಗಳೂರು ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ; ಪೊಲೀಸ...
08-09-26 08:45 pm
ಪುತ್ತೂರು ಜನಸೇವಾ ಕೇಂದ್ರ ಗಲಾಟೆ ಪ್ರಕರಣ: ಪೊಲೀಸರ ಕ...
08-09-26 02:26 pm
ಅಪಘಾತದಲ್ಲಿ ಗಾಯಗೊಂಡ ಚಿರತೆಯನ್ನು ರಕ್ಷಣೆ ಮಾಡಲು ಹೋ...
08-09-26 01:11 pm