ಬ್ರೇಕಿಂಗ್ ನ್ಯೂಸ್
09-03-22 08:59 pm Source: ManoharV Shetty, Vijayakarnataka ಡಾಕ್ಟರ್ಸ್ ನೋಟ್
ನಮಗೆಲ್ಲಾ ಗೊತ್ತಿರುವ ಹಾಗೆ, ಮನುಷ್ಯನ ದೇಹದಲ್ಲಿ ಕಂಡು ಬರುವ ಬಹು ಮುಖ್ಯ ಅಂಗಾಂಗಗಳಲ್ಲಿ ಮೂತ್ರಪಿಂಡಗಳು ಅಥವಾ ಕಿಡ್ನಿಗಳು ಕೂಡ ಒಂದು. ಸಾಮಾನ್ಯವಾಗಿ ದೇಹದೊಳಗೆ ಕಾರ್ಯ ನಿರ್ವಹಿಸುವ ಎಲ್ಲಾ ಅಂಗಾಂಗಕ್ಕೂ ಒಂದೊಂದು ಬಗೆಯ ಕಾರ್ಯ ನಿರ್ವಹಣೆಯ ಜವಾಬ್ದಾರಿ ಇರುತ್ತದೆ.
ಅಂತೆಯೇ ನಮ್ಮ ದೇಹದೊಳಗೆ ಕಾರ್ಯ ನಿರ್ವಹಿಸುವ ಮೂತ್ರಪಿಂಡಗಳಿಗೆ ಅಥವಾ ಕಿಡ್ನಿಗಳಿಗೆ ನಮ್ಮ ದೇಹದಲ್ಲಿ ಕಂಡು ಬರುವ ವಿಷಕಾರಿ ಅಂಶಗಳನ್ನು ಮೂತ್ರ ವಿಸರ್ಜನೆಯ ಮೂಲಕ ಹೊರ ಹಾಕುವ ಕೆಲಸ ಇರುತ್ತದೆ.
ಹೀಗಾಗಿ ಇಂತಹ ಪ್ರಮುಖ ಕಾರ್ಯ ನಿರ್ವಹಿಸುವ ಮೂತ್ರ ಪಿಂಡಗಳ ಅತ್ಯುತ್ತಮವಾದ ಕಾರ್ಯನಿರ್ವಹಣೆಗೆ, ನಾವು ದಿನನಿತ್ಯ ಸೇವಿಸುವ ಹಾರ ಪದ್ಧತಿಗಳು ಬಹಳ ಮುಖ್ಯವಾಗುತ್ತದೆ. ಬನ್ನಿ ಇಂದಿನ ಲೇಖನದಲ್ಲಿ ಮೂತ್ರಪಿಂಡಗಳ ಆರೋಗ್ಯವನ್ನು ಕಾಪಾಡುವ ನೈಸರ್ಗಿಕ ಆಹಾರಗಳ ಬಗ್ಗೆ ನೋಡೋಣ...
ಮಿತವಾಗಿ ಹೂಕೋಸು ಸೇವಿಸಿ
ನೋಡಲು ದಷ್ಟ-ಪುಷ್ಟಗೆ ಹಾಗೂ ಗಜ ಗಾತ್ರದಲ್ಲಿ ಇರುವ ಈ ತರಕಾರಿಯನ್ನು ಹೆಚ್ಚಿನವರು ಇಷ್ಟಪಡುತ್ತಾರೆ. ಸಾಮಾನ್ಯವಾಗಿ ಹೂಕೋಸು ಎಂದರೆ ಅಷ್ಟಾಗಿ ನೆನಪಿಸಿಕೊಳ್ಳದ ಜನರು ಗೋಬಿ ಮಂಚೂರಿ ಎಂದ ತಕ್ಷಣ ಹೂಕೋಸು ಮತ್ತು ಎಲೆಕೋಸನ್ನು ಜ್ಞಾಪಿಸಿಕೊಳ್ಳುತ್ತಾರೆ!!
ಇನ್ನು ಈ ಹೂಕೋಸಿನಲ್ಲಿವಿಟಮಿನ್ ಸಿ, ವಿಟಮಿನ್ ಕೆ ಅಂಶದ ಜೊತೆಗೆ ನಾರನಾಂಶ ಹಾಗೂ ಪೋಲಿಕ್ ಆಮ್ಲ, ಪೊಟ್ಯಾಶಿಯಂ ಇತ್ಯಾದಿಗಳು ಬಹಳ ಹೇರಳವಾಗಿ ಸಿಗುವುದರಿಂದ ಕಿಡ್ನಿಯ ಆರೋಗ್ಯವನ್ನು ಕಾಪಾಡುವುದರಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಅದರಲ್ಲೂ ಪ್ರಮುಖವಾಗಿ ಈ ತರಕಾರಿಯಲ್ಲಿ ಕಂಡುಬರುವ ಥಿಯೋಸೈನೇಟ್ಸ್ ಮತ್ತು ಗ್ಲುಕೋಸಿ ನೋಲೇಟ್ ಅಂಶಗಳು, ದೇಹದಲ್ಲಿರುವ ವಿಷಕಾರಿ ತ್ಯಾಜ್ಯಗಳನ್ನು ಮೂತ್ರದ ಮೂಲಕ ಹೊರ ಹಾಕಿ ನಮ್ಮ ದೇಹವನ್ನು ಆಂತರಿಕವಾಗಿ ಸ್ವಚ್ಛ ಮಾಡುವ ಕೆಲಸ ಮಾಡುತ್ತದೆ. ಇದರಿಂದ ಕಿಡ್ನಿ ಕೂಡ ಆರೋಗ್ಯಕರವಾಗಿ ಕಾರ್ಯ ನಿರ್ವಹಿಸಲು ಸಹಕಾರಿಯಾಗುತ್ತದೆ.
ಕ್ಯಾರೆಟ್
ಮಾರುಕಟ್ಟೆಯಲ್ಲಿ ಹಸಿರು ಹಾಗೂ ಹಸಿರೆಲೆ ತರಕಾರಿಗಳು ಒಂದು ಕಡೆಯಾದರೆ, ದಷ್ಟಪುಷ್ಟವಾಗಿ ಕಾಣುವ ತರಕಾರಿಗಳು ಇನ್ನೊಂದು ಕಡೆ. ಇನ್ನು ಇವುಗಳ ಮಧ್ಯೆ ಕೇಸರಿ ಬಣ್ಣದಲ್ಲಿ ಎಲ್ಲರನ್ನೂ ತನ್ನತ್ತ ಆಕರ್ಷಿಸುವ ಜೊತೆಗೆ ತುಂಬಾನೇ ಆರೋಗ್ಯ ಪ್ರಯೋಜನಗಳನ್ನು ಒಳಗೊಂಡಿರುವ ಎಲ್ಲರ ಫೇವರೇಟ್ ತರಕಾರಿ ಎಂದರೆ ಅದು ಕ್ಯಾರೆಟ್!
ಇನ್ನು ಈ ತರಕಾರಿಯಲ್ಲಿ ಬೀಟಾ-ಕ್ಯಾರೋಟಿನ್ ಅಂಶದ ಪ್ರಮಾಣ ಹೆಚ್ಚಾಗಿರುವ ಕಾರಣ ಕಿಡ್ನಿಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅಲ್ಲದೇ ರಕ್ತದಲ್ಲಿ ಕಂಡುಬರುವ ಅತಿಯಾದ ಸೋಡಿಯಂ ಅಂಶವನ್ನು ನಿಯಂತ್ರಿಸಿ, ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಮೂತ್ರದ ಮೂಲಕ ಹೊರಹಾಕುವ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಕಾರ್ಯವನ್ನು ಮಾಡುತ್ತದೆ.
ಅಲ್ಲದೇ ಕಿಡ್ನಿಗಳ ಮೇಲೆ ಉಂಟಾಗುವ ಒತ್ತಡವನ್ನು ಇದು ತಪ್ಪಿಸುತ್ತದೆ. ಹಾಗಾಗಿ ಪ್ರತಿದಿನ ಒಂದೊಂದು ಲೋಟ ಕ್ಯಾರೆಟ್ ಜ್ಯೂಸ್ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ
ವಿಟಮಿನ್ ಡಿ ಅಂಶ ಹೆಚ್ಚಿರುವ ಆಹಾರಗಳನ್ನು ಸೇವಿಸಿ
ಎಳನೀರು
ದಿನಕ್ಕೊಂದು ಎಳನೀರು ಕುಡಿಯುವುದರಿಂದ, ದೇಹದಲ್ಲಿ ಅತಿಯಾಗಿ ಸಂಗ್ರಹವಾಗಿದ್ದ ಅಧಿಕ ಪ್ರಮಾಣದ ಪೊಟ್ಯಾಶಿಯಂ, ಸಿಟ್ರೇಟ್ ಹಾಗೂ ಕ್ಲೋರೀನ್‌ಗಳನ್ನು, ಮೂತ್ರದ ವಿಸರ್ಜನೆಯ ಮೂಲಕ ಹೊರಹಾಕಲು ನೆರವಾಗುತ್ತದೆ. ಅಧ್ಯಾಯನದ ವರದಿಯ ಪ್ರಕಾರ ಸಾಮಾನ್ಯವಾಗಿ ಈ ಕಣಗಳೇ ಸಾಂದ್ರೀಕೃತಗೊಂಡು ಮೂತ್ರಪಿಂಡದ ಕಲ್ಲುಗಳಾಗಿ ರೂಪುಗೊಳ್ಳುತ್ತವೆಯಂತೆ!
ಒಂದು ವೇಳೆ ಕಿಡ್ನಿ ಸ್ಟೋನ್ ಆಗಿ, ಪದೇ ಪದೇ ನೋವು ನೀಡುತ್ತಿದ್ದರೆ ಎಳನೀರಿನ ಸೇವನೆಯನ್ನು ಹೆಚ್ಚಿಸುವ ಮೂಲಕ ಮೂತ್ರನಾಳ ಮತ್ತು ಮೂತ್ರಕೋಶದಲ್ಲಿ ಹರಳುಗಟ್ಟಿರುವ ಕಲ್ಲುಗಳನ್ಜು ಕರಗಿಸಿ ಚಿಕ್ಕದಾಗಿಸಿ ನೈಸರ್ಗಿಕ ರೂಪದಲ್ಲಿಯೇ ಹೊರಹಾಕಲು ಸಾಧ್ಯವಾಗುತ್ತದೆ. ಅಲ್ಲದೇ ಎಳನೀರು ಉತ್ಕರ್ಷಣಶೀಲ ಒತ್ತಡವನ್ನು ನಿವಾರಿಸಿ ಮೂತ್ರಪಿಂಡ ಮತ್ತು ಮೂತ್ರವಿಸರ್ಜನಾ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ.
ದಿನಕ್ಕೊಂದು ಸೇಬು ಹಣ್ಣು ತಿನ್ನಿ!
ದಿನಕ್ಕೊಂದು ಸೇಬು ತಿಂದರೆ ವೈದ್ಯರಿಂದ ದೂರ ಇರಬಹುದು ಎನ್ನುವುದು ಹಳೆಯ ನಾಣ್ಣುಡಿ! ನಮಗೆಲ್ಲಾ ಗೊತ್ತೇ ಇದೆ ಅಲ್ವಾ? ಇದಕ್ಕೆ ಮುಖ್ಯ ಕಾರಣಗಳು, ಇದರಲ್ಲಿರುವ ಈ ಹಣ್ಣಿನಲ್ಲಿ ಇರುವಂತಹ ಹಲವಾರು ರೀತಿಯ ಪೋಷಕಾಂಶಗಳು ನಮ್ಮ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಮತ್ತು ಇದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಇನ್ನು ಈ ಹಣ್ಣಿನಲ್ಲಿ ನಾರಿನಾಂಶ ಮತ್ತು ಪೆಕ್ಟಿನ್ ಎನ್ನುವ ಅಂಶ ಅಧಿಕ ಪ್ರಮಾಣದಲ್ಲಿ ಸಿಗುತ್ತದೆ. ಜೊತೆಗೆ ಇದರಲ್ಲಿ ಹಲವಾರು ಬಗೆಯ ವಿಟಮಿನ್‌ಗಳು ಹಾಗೂ ಪೌಷ್ಟಿಕಾಂಶಗಳು ಹೇರಳವಾಗಿ ಸಿಗುವುದರಿಂದ, ಇವು ನಮ್ಮ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ದೇಹದ ಕಿಡ್ನಿಯನ್ನು ಕೂಡ ಸುರಕ್ಷಿತವಾಗಿ ಇಟ್ಟುಕೊಳ್ಳುತ್ತದೆ. ಹೀಗಾಗಿ ದಿನಕ್ಕೊಂದು ಸೇಬು ಹಣ್ಣನ್ನು ತಿನ್ನುವ ಅಭ್ಯಾಸ ಮಾಡಿಕೊಳ್ಳಿ.
World Kidney Day 2022, These Five Natural Foods That Keep Your Kidneys Healthy.
15-07-25 01:32 pm
Bangalore Correspondent
ನಟಿ ಸರೋಜಾ ದೇವಿ- ಎಸ್ಸೆಂ ಕೃಷ್ಣ ಪ್ರೇಮ ಪ್ರಸಂಗ ; ಮ...
15-07-25 12:27 pm
ಕೇವಲ 2 ಸಾವಿರ ಲಂಚ ಕೇಳಿ ಸಿಕ್ಕಿಬಿದ್ದ ಪಂಚಾಯತ್ ಪಿಡ...
15-07-25 10:35 am
ಧರ್ಮಸ್ಥಳದಲ್ಲಿ 20 ವರ್ಷಗಳಲ್ಲಾದ ಯುವತಿಯರ ನಾಪತ್ತೆ-...
14-07-25 10:44 pm
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
15-07-25 02:28 pm
HK News Desk
Mangalore Accident, Alto Car: ದೆಹಲಿಯಿಂದ ಬಂದ ಗ...
15-07-25 10:32 am
ಕಲ್ಲು ಮರಳಿನ ಸಮಸ್ಯೆಯಿಂದ ಜನರ ತಲೆಗೆ ಚಪ್ಪಡಿ ಕಲ್ಲು...
14-07-25 09:55 pm
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
15-07-25 06:52 pm
Bangalore Correspondent
Mangalore, Moodbidri college, Rape, Blackmail...
15-07-25 06:07 pm
ಹಿಂದು ಯುವತಿಯರನ್ನು ಮತಾಂತರ ಮಾಡುತ್ತಿದ್ದಾನೆಂದು ಸು...
15-07-25 05:21 pm
Mangalore Police, Arrest, NITTE College Stude...
15-07-25 01:13 pm
Mangalore Crime, Police: ದುಬೈನಲ್ಲಿ ವಹಿವಾಟು ;...
15-07-25 11:38 am