ಬ್ರೇಕಿಂಗ್ ನ್ಯೂಸ್
11-04-22 07:49 pm Source: ManoharV Shetty, Vijayakarnataka ಡಾಕ್ಟರ್ಸ್ ನೋಟ್
ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಎನ್ನುವ ಮಾತಿದೆ. ಅದರಂತೆ ನಾವು ಬಹುತೇಕ ಎಲ್ಲಾ ಸಮಯದಲ್ಲೂ ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಅದರಲ್ಲೂ ಈಗಿನ ಬಿರು ಬೇಸಿಗೆಯಲ್ಲಿ ನಮ್ಮ ಆರೋಗ್ಯ ಹಾಳಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಇದಕ್ಕೆ ಕಾರಣ ಎಂದರೆ ಅದು ನಮ್ಮ ದೇಹದಿಂದ ವಿಪರೀತ ನೀರಿನ ಅಂಶದ ನಷ್ಟ ಉಂಟಾಗುವುದು. ಇದನ್ನು ನಾವು ಸಮತೋಲನವಾಗಿ ಕಾಯ್ದುಕೊಳ್ಳುವ ಅನಿವಾರ್ಯತೆ ನಮಗಿದೆ. ಈಗಂತೂ ಎಲ್ಲಾ ಕಡೆ ಕಲ್ಲಂಗಡಿ ಹಣ್ಣುಗಳ ಕಾರುಬಾರು ಶುರುವಾಗಿದೆ. ಕಲ್ಲಂಗಡಿ ಹಣ್ಣು ನಿಮಗೆಲ್ಲ ಗೊತ್ತಿರುವ ಹಾಗೆ ನೀರಿನ ಅಂಶದ ಪ್ರಮಾಣವನ್ನು ಸಾಕಷ್ಟು ಒಳಗೊಂಡಿದೆ. ಇದರ ಸೇವನೆಯಿಂದ ಈ ಕೆಳಗಿನ ಆರೋಗ್ಯದ ಪ್ರಯೋಜನಗಳು ಸಿಗುತ್ತವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ...
ನೀರಿನ ಅಂಶದ ಕೊರತೆಯೇ ಕಾಣುವುದಿಲ್ಲ
ಹೌದು, ಕಲ್ಲಂಗಡಿ ಹಣ್ಣಿನಲ್ಲಿ ನೀರಿನ ಅಂಶ ಅಪಾರ ಪ್ರಮಾಣದಲ್ಲಿದೆ. ಬೇಸಿಗೆ ಕಾಲದಲ್ಲಿ ವಿಶೇಷವಾಗಿ ಇದರ ಸೀಸನ್ ಇರುವುದರಿಂದ ಎಲ್ಲಾ ಕಡೆ ಹೇರಳವಾಗಿ ಸಿಗುತ್ತದೆ. ಜನರು ಇಂತಹ ಒಂದು ಅವಕಾಶವನ್ನು ಉಪಯೋಗಿಸಿಕೊಂಡು ಈ ಒಂದು ಆರೋಗ್ಯಕರವಾದ ಹಣ್ಣನ್ನು ಸೇವನೆ ಮಾಡುವ ಅಭ್ಯಾಸವಿಟ್ಟುಕೊಳ್ಳಬೇಕು.
ಇದರಲ್ಲಿ ಕ್ಯಾಲೋರಿಗಳು ಕಡಿಮೆ ಆದರೆ ದೇಹಕ್ಕೆ ಮಾತ್ರ ಶಕ್ತಿ ಮತ್ತು ಮನಸ್ಸಿಗೆ ತಾಜಾತನವನ್ನು ನೀಡುವಲ್ಲಿ ಇದು ಸದಾ ಮುಂದಿದೆ. 92% ನೀರಿನ ಅಂಶ ತುಂಬಿರುವ ಕಲ್ಲಂಗಡಿ ಹಣ್ಣಿನಲ್ಲಿ ವಿಟಮಿನ್ ಅಂಶಗಳು ಮತ್ತು ಖನಿಜಾಂಶಗಳು ಸಹ ದೇಹಕ್ಕೆ ಅಗತ್ಯವಾಗಿ ಬೇಕಾದ ರೀತಿಯಲ್ಲಿ ಸಿಗುತ್ತವೆ. ಹೊಟ್ಟೆ ಹಸಿವು ನಿವಾರಣೆಯನ್ನು ಮಾಡಿಕೊಳ್ಳುವ ಮೂಲಕ ಬೇಸಿಗೆ ಬಿಸಿಲಿನಲ್ಲಿ ಕಲ್ಲಂಗಡಿ ಹಣ್ಣಿನ ರುಚಿ ಸವಿಯಬಹುದು.
ಪೌಷ್ಟಿಕ ಸತ್ವಗಳ ಮಹಾಪೂರವೇ ಇದರಲ್ಲಿದೆ
ಮೊದಲೇ ಹೇಳಿದಂತೆ ಕಲ್ಲಂಗಡಿ ಹಣ್ಣಿನಲ್ಲಿ ಕ್ಯಾಲೊರಿಗಳು ಕಡಿಮೆ ಇದ್ದರೂ ಕೂಡ ವಿಟಮಿನ್ ಅಂಶಗಳು ಮತ್ತು ಖನಿಜಾಂಶಗಳಿಗೆ ಇದರಲ್ಲಿ ಯಾವುದೇ ಕೊರತೆ ಇಲ್ಲ.
ಪ್ರಮುಖವಾಗಿ ವಿಟಮಿನ್ ಎ, ವಿಟಮಿನ್ ಸಿ, ಪೊಟ್ಯಾಷಿಯಂ, ಮೆಗ್ನೀಷಿಯಂ ಜೊತೆಗೆ ವಿಟಮಿನ್ b1,b5 ಮತ್ತು b6 ಅಂಶಗಳು ಇದರಲ್ಲಿ ಸಾಕಷ್ಟು ಕಂಡುಬರುತ್ತವೆ. ಇವೆಲ್ಲವೂ ಸಹ ದೇಹಕ್ಕೆ ಅಗತ್ಯವಾಗಿ ಬೇಕಾದ ಅಂಶಗಳಾಗಿರುತ್ತವೆ.
ಕ್ಯಾನ್ಸರ್ ವಿರುದ್ಧ ಇದು ರಾಮಬಾಣ
ಕಲ್ಲಂಗಡಿ ಹಣ್ಣಿನಲ್ಲಿ ನೈಸರ್ಗಿಕವಾದ ಲೈಕೋಪಿನ್ ಅಂಶ ಹೆಚ್ಚಾಗಿ ಕಂಡುಬರುತ್ತದೆ. ಇದು ಪ್ರಮುಖವಾಗಿ ದೇಹದಲ್ಲಿ ಕ್ಯಾನ್ಸರ್ ಜೀವಕೋಶಗಳ ಬೆಳವಣಿಗೆಯನ್ನು ತಡೆ ಹಾಕುತ್ತದೆ ಎಂದು ಹೇಳುತ್ತಾರೆ.
ಇನ್ನು ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ತಗ್ಗಿಸಿ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತದೆ. ಬೇಸಿಗೆಕಾಲ ಹಾಗೂ ಮಧ್ಯಾಹ್ನದ ಸಮಯದಲ್ಲಿ ಇದು ಸೇವನೆಗೆ ಒಳ್ಳೆಯದು. ರಾತ್ರಿಯ ಸಮಯದಲ್ಲಿ ಕಲ್ಲಂಗಡಿ ಹಣ್ಣು ತಿನ್ನುವುದು ಬೇಡ.
ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದಂತೆ!
ಕಣ್ಣುಗಳಿಗೆ ತುಂಬಾ ಸಹಕಾರಿ
ವಯಸ್ಸಾದ ಮೇಲೆ ಸಹಜವಾಗಿ ಕಣ್ಣುಗಳ ಸಮಸ್ಯೆ ಬರುತ್ತದೆ. ಆದರೆ ನಾವು ಇಲ್ಲಿ ಒಂದು ಅಂಶವನ್ನು ಗಮನಿಸಬೇಕಾಗುತ್ತದೆ.
ನಮ್ಮ ಕಣ್ಣಿನಲ್ಲಿ ಕೂಡ ನೀರಿನ ಅಂಶದ ಪ್ರಮಾಣ ಇರುತ್ತದೆ. ವಯಸ್ಸಾದಂತೆ ಕಣ್ಣಿನಲ್ಲಿನ ನೀರಿನ ಅಂಶ ಕಡಿಮೆಯಾಗುತ್ತಾ ಹೋಗುತ್ತದೆ. ಆಗ ಕಣ್ಣುಗಳಿಗೆ ಸಂಬಂಧಪಟ್ಟಂತೆ ಬೇರೆಬೇರೆ ಆರೋಗ್ಯ ಸಮಸ್ಯೆಗಳು ಕಾಣಿಸಲು ಪ್ರಾರಂಭವಾಗುತ್ತವೆ.
ಆದರೆ ಕಲ್ಲಂಗಡಿ ಹಣ್ಣುಇದಕ್ಕೆಲ್ಲ ಪರಿಹಾರ ಒದಗಿಸುತ್ತದೆ ಎಂದು ನಿರ್ಭಯವಾಗಿ ಹೇಳಬಹುದು. ಕಣ್ಣುಗಳಿಗೆ ತಂಪಾದ ಪ್ರಭಾವವನ್ನು ಉಂಟು ಮಾಡುವ ಜೊತೆಗೆ ಕಣ್ಣಿನ ಪೊರೆ ಸಮಸ್ಯೆಯನ್ನು ಸಹ ಇದು ನಿವಾರಣೆ ಮಾಡಬಲ್ಲದು.
ಉರಿಯೂತವನ್ನು ನಿಯಂತ್ರಣ ಮಾಡಿಕೊಳ್ಳಬಹುದು
Heres Are The Reason Why You Should Eat More Watermelon This Summer.
14-08-25 03:51 pm
Bangalore Correspondent
DK Shivakumar, Dharmasthala, Virendra Heggade...
14-08-25 03:49 pm
IPS Alok Kumar, News: ಪೊಲೀಸ್ ಶಾಲೆಗಳಲ್ಲೇ ಲಂಚ,...
14-08-25 01:48 pm
Dharmasthala Case, Dinesh Gundu Rao: ಮತ್ತೆ ಗು...
13-08-25 07:03 pm
ವಜಾ ಹಿಂದೆ ದೊಡ್ಡ ಷಡ್ಯಂತ್ರ ಆಗಿದೆ, ರಾಹುಲ್ ಗಾಂಧಿ...
12-08-25 10:39 pm
14-08-25 11:26 am
HK News Desk
ತಾಯಿ ಜೊತೆ ಅಂಡಮಾನ್ ಹೋಗ್ತೀನಿ ಎಂದಿದ್ದ ಮಗಳು ; ಬೇಡ...
13-08-25 11:56 am
ಪುಣ್ಯಕ್ಷೇತ್ರ ಯಾತ್ರೆ ಹೊರಟವರ ಮೇಲೆರಗಿದ ಜವರಾಯ ; ರ...
13-08-25 10:41 am
'ದೇಶ ಸುರಕ್ಷಿತ ಕೈಯಲ್ಲಿದೆ' ; ನರೇಂದ್ರ ಮೋದಿ ಸರ್ಕ...
12-08-25 02:49 pm
ಕಾಶ್ಮೀರಿ ಪಂಡಿತರ ಗುರಿಯಾಗಿಸಿ ಮಾರಣಹೋಮ ; 35 ವರ್ಷಗ...
12-08-25 11:42 am
14-08-25 01:12 pm
Mangaluru Staff
Bantwal Deputy Tahsildar, Lokayukta: 20 ಸಾವಿರ...
13-08-25 10:22 pm
Dharmasthala News Today, Point No 13: ಕಡೆಗೂ ಪ...
13-08-25 10:01 pm
The Ocean Pearl Brings “Flavors of India” to...
13-08-25 08:23 pm
ಹಠಾತ್ ಕುಸಿದು ಬಿದ್ದು ಕಾಲೇಜು ಬಸ್ ನಿರ್ವಾಹಕ ಸಾವು...
13-08-25 01:49 pm
14-08-25 11:51 am
HK Staff
Fake Stock Market Scam, Fraud: 10 ಲಕ್ಷ ಹೂಡಿಕೆ...
13-08-25 05:40 pm
Fraud, Laxmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ...
13-08-25 04:14 pm
ಅನೈತಿಕ ಸಂಬಂಧ ಶಂಕೆ ; ಅತ್ತೆ ಮೇಲಿನ ದ್ವೇಷದಿಂದ ಕೊಲ...
12-08-25 12:36 pm
Mangalore Digital Arrest, Fraud: ಚೀನಾಕ್ಕೆ ಡ್ರ...
11-08-25 12:37 pm