ಬ್ರೇಕಿಂಗ್ ನ್ಯೂಸ್
26-05-22 05:45 pm Mangalore Correspondent ಕರಾವಳಿ
ಮಂಗಳೂರು, ಮೇ 26: ಮಳಲಿಯ ಜುಮ್ಮಾ ಮಸೀದಿಯಲ್ಲಿ ದೇವಸ್ಥಾನದ ಚಿತ್ರಣ ಕಂಡುಬಂದ ಬಳಿಕ ಹಿಂದು ಸಂಘಟನೆಗಳು ತಕರಾರು ಎಬ್ಬಿಸಿ, ಈಗ ತಾಂಬೂಲ ಪ್ರಶ್ನೆ ಇಟ್ಟು ಅಲ್ಲಿ ದೈವ ಸಾನ್ನಿಧ್ಯ ಇದ್ದಿರುವ ಜಾಗ ಅನ್ನುವುದನ್ನು ಕಂಡುಕೊಂಡಿವೆ. ಈಗಂತೂ ಮಸೀದಿಯ ಜಾಗವನ್ನು ಹಿಂದುಗಳಿಗೆ ಬಿಟ್ಟು ಕೊಡಿ ಎನ್ನುವ ಅಹವಾಲನ್ನೂ ಮುಂದಿಟ್ಟಿವೆ. ಆದರೆ, ಇದೇ ಮಸೀದಿ ಪರಿಸರದಿಂದ ನೂರು ಮೀಟರ್ ದೂರದಲ್ಲಿರುವ ಕಾರಣಿಕ ಕೋರ್ದಬ್ಬು ದೈವಸ್ಥಾನದ ದರ್ಶನ ಸೇವೆಯ ಸಂದರ್ಭ ಎಂಟು ತಿಂಗಳ ಹಿಂದೆಯೇ ದೈವವೇ ಈ ಬಗ್ಗೆ ನುಡಿ ಕೊಟ್ಟಿತ್ತು ಅನ್ನುವ ಮಾತನ್ನು ಅಲ್ಲಿನ ಸ್ಥಳೀಯರು ಹೇಳತೊಡಗಿದ್ದಾರೆ.
ಕೋರ್ದಬ್ಬು ದೈವಸ್ಥಾನದ ಜೀರ್ಣೋದ್ಧಾರ ಕಾರ್ಯ ಕೈಗೆತ್ತಿಕೊಳ್ಳುವ ಸಲುವಾಗಿ 2021ರ ಅಕ್ಟೋಬರ್ ನಲ್ಲಿ ದರ್ಶನ ಸೇವೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ದೈವಸ್ಥಾನದ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ದೈವಸ್ಥಾನದ ಸ್ವರೂಪ ಹೇಗಿರಬೇಕು, ಯಾವ ರೀತಿ ಕೆಲಸ ಕೈಗೆತ್ತಿಕೊಳ್ಳಬೇಕು ಎಂಬ ಬಗ್ಗೆ ದರ್ಶನದಲ್ಲಿ ದೈವ ವಾಕ್ಯ ಕೇಳಲಾಗಿತ್ತು. ಇದೇ ಸಂದರ್ಭದಲ್ಲಿ ದರ್ಶನ ಸೇವೆಯ ಪಾತ್ರಿ, ನನ್ನ ಸ್ಥಾನದ ಜೀರ್ಣೋದ್ಧಾರ ಕಾರ್ಯ ಪೂರ್ತಿಗೊಳ್ಳುವ ಮೊದಲು ಇದೇ ಪರಿಸರದಲ್ಲಿ ಇರುವ ದೇವರ ಸಾನ್ನಿಧ್ಯ ಒಂದನ್ನೂ ತೋರಿಸಿಕೊಡುತ್ತೇನೆ ಎಂದು ಹೇಳಿತ್ತು.


ಆದರೆ ದರ್ಶನ ಪಾತ್ರಿಯ ಈ ಮಾತಿನ ಬಗ್ಗೆ ಅಲ್ಲಿನ ಸ್ಥಳೀಯರಾಗಲೀ, ಕೋರ್ದಬ್ಬು ದೈವಸ್ಥಾನದ ಆಡಳಿತ ನೋಡಿಕೊಳ್ಳುವ ಉಳಿಪಾಡಿ ಗುತ್ತಿನ ಮನೆತನದವರಾಗಲೀ ವಿಶೇಷವಾಗಿ ಪರಿಗಣಿಸಿರಲಿಲ್ಲ. ಆದರೆ, ಎಪ್ರಿಲ್ ತಿಂಗಳ 20ರಂದು ಮಸೀದಿಯಲ್ಲಿ ದೇವಸ್ಥಾನದ ಚಿತ್ರಣ ಕಂಡುಬಂದು ವಿವಾದ ಕೇಳಿಬಂದಾಗ, ಕೋರ್ದಬ್ಬು ದೈವ ದರ್ಶನದಲ್ಲಿ ಹೇಳಿತ್ತು ಅನ್ನುವ ಮಾತನ್ನು ಉಲ್ಲೇಖಿಸುತ್ತಿದ್ದಾರೆ. ದರ್ಶನ ಸೇವೆ ನಡೆಯುವ ಸಂದರ್ಭದಲ್ಲಿ ದೈವಸ್ಥಾನದ ಆಡಳಿತಕ್ಕೆ ಸಂಬಂಧಪಟ್ಟವರು ಮತ್ತು ಸ್ಥಳೀಯ ದೈವ ಚಾಕರಿ ಮಾಡುವ ಮಂದಿ ಮಾತ್ರ ಇದ್ದರು. ಹೀಗಾಗಿ ಇತರೇ ಸ್ಥಳೀಯರು ಅಲ್ಲಿ ಪಾಲ್ಗೊಂಡಿರಲಿಲ್ಲ. ಸೀಮಿತ ಜನರು ಮಾತ್ರ ಇದ್ದಾಗ ಹೇಳಿದ್ದ ದೈವದ ನುಡಿ ಹೆಚ್ಚಿನವರಿಗೆ ತಿಳಿದಿಲ್ಲ. ಆದರೆ, ದೈವ ವಾಕ್ಯ ಈಗ ನಿಜವಾಗುತ್ತಿದೆ ಅನ್ನುವ ಮಾತು ಕೇಳಿಬರುತ್ತಿದೆ.

ಈ ಬಗ್ಗೆ ದರ್ಶನ ಸೇವೆ ಸಂದರ್ಭದಲ್ಲಿ ಉಪಸ್ಥಿತಿ ಇದ್ದ ಸ್ಥಳೀಯ ನಿವಾಸಿ ಶ್ರೀನಿಧಿ ಎಂಬವರು ಮಾಹಿತಿ ನೀಡಿದ್ದು, ಕೋರ್ದಬ್ಬು ದೈವದ ದರ್ಶನ ಸೇವೆಯಲ್ಲಿ ಕಳೆದ ಅಕ್ಟೋಬರ್ ತಿಂಗಳಲ್ಲೇ ದೇವ ಸಾನ್ನಿಧ್ಯ ತೋರಿಸಿಕೊಡುತ್ತೇನೆ ಎಂದಿತ್ತು. ಇತ್ತೀಚೆಗೆ ಜೀರ್ಣೋದ್ಧಾರ ಕಾರ್ಯ ಮುಗಿದಿದ್ದು ಇದೇ ಮೇ 12, 13ರಂದು ಪುನರ್ ಪ್ರತಿಷ್ಠಾ ಕಾರ್ಯ ನಡೆದಿತ್ತು. ಈ ನಡುವೆ ದರ್ಶನ ಸೇವೆ ಐದಾರು ಬಾರಿ ನಡೆದಿದ್ದರೂ, ಮೊದಲ ಬಾರಿಯ ದರ್ಶನದಲ್ಲಿ ಮಾತ್ರ ದೇವ ಸಾನ್ನಿಧ್ಯ ಇರುವ ಬಗ್ಗೆ ನುಡಿಕೊಟ್ಟಿತ್ತು ಎಂಬುದನ್ನು ನೆನಪಿಸುತ್ತಾರೆ. ಹೀಗಾಗಿ ಇತ್ತೀಚೆಗೆ ಜುಮ್ಮಾ ಮಸೀದಿ ನವೀಕರಣ ಕೈಗೆತ್ತಿಕೊಂಡಾಗ, ಒಳಭಾಗದ ಚಿತ್ರಣ ಸಾರ್ವಜನಿಕರ ಗಮನ ಸೆಳೆದು ಇಷ್ಟೆಲ್ಲ ಬೆಳವಣಿಗೆ ಆಗಿರುವುದು ಕಾಕತಾಳೀಯ ಎನ್ನುವಂತಹ ಮಾತು ಅಲ್ಲಿನ ಸ್ಥಳೀಯರಿಂದ ಕೇಳಿಬರುತ್ತಿದೆ.
Malali mosque row, 8 months ago Daiva at Kordabbu temple had predicted of revealing Daiva Sanidhi at Malali Mangalore.
27-10-25 10:52 pm
Bangalore Correspondent
ಕಾಂಗ್ರೆಸಿನಲ್ಲಿ ಮತ್ತೊಬ್ಬ ಏಕನಾಥ್ ಶಿಂಧೆ, ಪವಾರ್ ಹ...
27-10-25 10:42 pm
ಡಿಕೆಶಿ ದಿಢೀರ್ ದೆಹಲಿಗೆ ದೌಡು ; ವಿಶೇಷ ಏನೂ ಇಲ್ಲ,...
26-10-25 07:33 pm
ಪ್ರೀತಿ ನೆಪದಲ್ಲಿ ಹಿಂದು ಯುವತಿಗೆ ಮೋಸ ; ಮದುವೆಯಾಗಲ...
25-10-25 09:33 pm
ಸಾರ್ವಜನಿಕರೊಂದಿಗೆ ಮಾತನಾಡುವಾಗ ಒರಟು ಭಾಷೆ ಬೇಡ, ಯಾ...
25-10-25 09:04 pm
26-10-25 11:01 pm
HK News Desk
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
Vemuri Kaveri Travels Bus Accident, Fire, Ill...
25-10-25 02:28 pm
Kurnool Bus Fire, Accident, Latest News: ಹೈದರ...
24-10-25 05:43 pm
27-10-25 11:01 pm
Mangalore Correspondent
ತಾಯಿ- ಮಗಳು ತೆರಳುತ್ತಿದ್ದ ಸ್ಕೂಟರಿಗೆ ಕಾರು ಡಿಕ್ಕಿ...
27-10-25 10:25 pm
ಆಟವಾಡುತ್ತಲೇ ತೆರೆದ ಬಾವಿಗೆ ಬಿದ್ದ ಎರಡು ವರ್ಷದ ಹೆಣ...
27-10-25 10:03 pm
RSS Leader Kalladka Prabhakar Bhat: ಕಲ್ಲಡ್ಕ ಪ...
27-10-25 07:24 pm
ಹೈಕಮಾಂಡ್ ತೀರ್ಮಾನ ಮಾಡಿದ್ರೆ ಐದು ವರ್ಷ ಸಿಎಂ ಆಗಿರು...
27-10-25 05:56 pm
27-10-25 05:29 pm
HK News Desk
ದುಬೈನಲ್ಲಿ ಕುಳಿತು ಬೆಂಗಳೂರಿನ ಫೈನಾನ್ಸ್ ಕಂಪನಿಗೆ ಕ...
27-10-25 04:04 pm
ಶಬರಿಮಲೆಯಲ್ಲಿ ಕದ್ದ ಚಿನ್ನ ಬಳ್ಳಾರಿ ಜುವೆಲ್ಲರಿಗೆ ಮ...
25-10-25 10:00 pm
SP Arun, Puttur: ಗೋಸಾಗಾಟ ತಡೆದ ಪ್ರಕರಣ ; ಯಾವುದೇ...
25-10-25 02:14 pm
Surathkal Murder Attempt, Arrest, Crime; ಸುರತ...
24-10-25 08:20 pm