ಬ್ರೇಕಿಂಗ್ ನ್ಯೂಸ್
25-05-22 07:26 pm Bengalore Correspondent ಕರ್ನಾಟಕ
ಬೆಂಗಳೂರು, ಮೇ 25: ಮಂಗಳೂರಿನಲ್ಲಿ ಮಸೀದಿ ಒಳಗೇನಿದೆ, ದೇವಸ್ಥಾನ ಇದೆಯಾ ಅನ್ನೋದ್ರ ಬಗ್ಗೆ ಹಿಂದು ಸಂಘಟನೆಗಳು ಜ್ಯೋತಿಷ್ಯ ಚಿಂತನೆ ಮಾಡುತ್ತಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತೀವ್ರವಾಗಿ ಹರಿಹಾಯ್ದಿದ್ದಾರೆ. ಅಲ್ಲಿ ಯಾರು ಭವಿಷ್ಯ ಹೇಳುತ್ತಿದ್ದಾರೋ, ಅವರನ್ನು ಕೂಡಲೇ ಬಂಧಿಸಬೇಕು. ಸರಕಾರ ಮಧ್ಯಪ್ರವೇಶ ಮಾಡಬೇಕು. ಅಲ್ಲಿನ ಪೊಲೀಸ್ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಅದನ್ನು ನಿಲ್ಲಿಸಬೇಕು ಎಂದು ಆಗ್ರಹ ಮಾಡಿದ್ದಾರೆ.
ತಾಂಬೂಲ, ಜ್ಯೋತಿಷ್ಯ ಇದೆಲ್ಲ ಭಾವನಾತ್ಮಕ ವಿಚಾರಗಳು. ಅದೇನಿದ್ದರೂ ಮನೆಯಲ್ಲಿಟ್ಟುಕೊಳ್ಳಲಿ. ಇವರು ಸಮಾಜವನ್ನು ಒಡೆಯುತ್ತಿದ್ದಾರೆ. ಮಂಗಳೂರು ಕಡೆಯಿಂದ ಐದಾರು ಮಂದಿ ಫೋನ್ ಮಾಡಿದ್ರು. ನಾವು ಅಲ್ಲಿಗೆ ನುಗ್ಗಿ ಬಂದ್ ಮಾಡಿಸುತ್ತೇವೆಂದು ಹೇಳಿದ್ರು. ಏಯ್, ಅದೇನು ಮಾಡೋದು ಬೇಡ. ಅದಕ್ಕೂ ನಮ್ಮ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಗದರಿಸಿದ್ದೇನೆ. ಮರ್ಯಾದೆಯಿಂದ ಸುಮ್ಮನಿರಿ ಎಂದು ಹೇಳಿದ್ದೇನೆ. ಆದರೆ ಈ ರೀತಿಯ ಕೆಲಸದಿಂದ ಶಾಂತಿ ಕದಡುತ್ತದೆ. ಒಂದು ವರ್ಗವನ್ನು ವಿರೋಧ ಮಾಡಿದಂತಾಗುತ್ತದೆ ಎಂದು ಹೇಳಿದರು.
ಆದರೆ ರಾಜ್ಯ ಸರಕಾರ ಇದರಲ್ಲಿ ಮಧ್ಯ ಪ್ರವೇಶ ಮಾಡಬೇಕು. ಭವಿಷ್ಯ ಹೇಳೋರು, ಶಕುವ ಕೇಳೋರಿಗೆ ನಾವು ಅಡ್ಡಿ ಮಾಡಲ್ಲ. ಆದರೆ ಈ ವಿಚಾರದಲ್ಲಿ ಭವಿಷ್ಯದ ಹೇಳಿಕೆ ಹೊರಗೆ ಬರಕೂಡದು. ಸರಕಾರವೇ ಭವಿಷ್ಯ ಹೇಳೋರನ್ನು ಬಂಧಿಸಬೇಕು ಎಂದು ಡಿಕೆಶಿ ಹೇಳಿದರು.
ಟಿಪ್ಪು ಕನಸು ಬಿದ್ದರೆ ಒಪ್ತಾರೆಯೇ ?
ಮತ್ತೊಂದು ಕಡೆ ಜೆಡಿಎಸ್ ವರಿಷ್ಠ ಎಚ್.ಡಿ. ಕುಮಾರಸ್ವಾಮಿ ಕೂಡ ತಾಂಬೂಲ ಪ್ರಶ್ನೆ ವಿಚಾರದಲ್ಲಿ ಹರಿಹಾಯ್ದಿದ್ದು, ಅಲ್ಲಿ ಪ್ರಶ್ನಾಚಿಂತನೆ ಮಾಡಲು ಇವರಿಗೇನು ಕನಸು ಬಿದ್ದಿತ್ತಾ.. ನಾನು ಕೇಳ್ತೀನಿ, ಹಿಂದೆ ಟಿಪ್ಪು ಕಾಲದಲ್ಲಿ ಹಲವಾರು ದೇವಸ್ಥಾನ, ಮಠಗಳಿಗೆ ಭೂಮಿ ನೀಡಿರುವ ದಾಖಲೆ ಇದೆ. ಯಾರಿಗಾದ್ರೂ ತಮ್ಮ ಭೂಮಿ ನೀಡಿದ್ದಾಗಿ ಟಿಪ್ಪು ಕನಸಿನಲ್ಲಿ ಬಂದು ಹೇಳಿದ್ರೆ, ಅದನ್ನು ಒಪ್ಪಲು ತಯಾರಿದ್ದಾರೆಯೇ.. ಅದಕ್ಕೆ ಉತ್ತರ ಕೊಡಬೇಕು ಎಂದು ಟಾಂಗ್ ನೀಡಿದ್ದಾರೆ.
Malali Masjid row KPCC President DK Shivakumar urges arrest of those who performed Tambula Prashne. After a temple-like structure was discovered during the demolition of a mosque in the Malali area of Mangaluru in Karnataka, Vishva Hindu Parishad (VHP) and Bajrang Dal performed the ‘Tambula Prashne’ ritual at Sri Ramanjaneya Bhajana Mandira in Malali on Wednesday.
05-02-25 06:39 pm
HK News Desk
Santosh Lad, PM Modi: ಪ್ರಧಾನಿ ಮೋದಿ ಒಬ್ಬ ಮನುಷ್...
05-02-25 04:44 pm
ಮೈಕ್ರೋ ಫೈನಾನ್ಸ್ ಕಿರುಕುಳ ; ರಾಜ್ಯದಲ್ಲಿ ಒಂದೇ ದಿನ...
05-02-25 12:29 pm
Haveri Nurse, Feviquick; ಬಾಲಕನ ಕೆನ್ನೆಯ ಗಾಯಕ್ಕ...
04-02-25 11:32 pm
Bangalore RTO, Luxury car tax: ತೆರಿಗೆ ಪಾವತಿಸದ...
04-02-25 11:04 pm
06-02-25 02:21 pm
HK News Desk
Kerala Suicide, Ragging: ಕೇರಳದಲ್ಲಿ 15ರ ಬಾಲಕ ಮ...
04-02-25 10:49 pm
Rashtrapati Bhavan, Poonam Gupta; ಜಗತ್ತಿನ ಎರಡ...
04-02-25 05:34 pm
Rail projects, Budget, Karnataka: ರೈಲ್ವೇಗೆ 2....
03-02-25 11:01 pm
Conspiracy, Kumbh stampede: ಮಹಾ ಕುಂಭಮೇಳದಲ್ಲಿ...
03-02-25 02:57 pm
05-02-25 10:51 pm
Mangalore Correspondent
SKG Bank robbery, Kinnigoli, Kotekar Robbery,...
05-02-25 10:43 pm
Musical program Swara Sanidhya, Mangalore; ಫೆ...
05-02-25 07:32 pm
Puttur News, Demolish, Ashok Rai: ಬಿಜೆಪಿ ಮುಖಂ...
05-02-25 06:46 pm
Mangalore gun misfire, congress, chittaranjan...
04-02-25 07:47 pm
06-02-25 12:00 pm
HK News Desk
Bangalore crime, Illicit affair: ಶೀಲ ಶಂಕಿಸಿ ನ...
05-02-25 04:29 pm
Ullal Police Station, Mangalore, Crime: ಪಿಎಸ್...
03-02-25 05:46 pm
Bangalore honeytrap case, Crime: ಮದುವೆಗೆ ವಧು...
02-02-25 09:00 pm
Mangalore Crime, Bantwal Toll, Kodikere Gang:...
01-02-25 10:11 pm