ಬ್ರೇಕಿಂಗ್ ನ್ಯೂಸ್
31-05-22 10:21 pm Mangalore Correspondent ಕರಾವಳಿ
ಮಂಗಳೂರು, ಮೇ 31: ಕದ್ರಿ ಮಂಜುನಾಥ ದೇವಸ್ಥಾನದ ಕಾಣಿಕೆ ಹುಂಡಿ ಎಣಿಕೆಯ ವೇಳೆ ಹಣ ಕಳವು ಮಾಡಲಾಗಿದೆ ಎಂಬ ಆರೋಪದ ಬಗ್ಗೆ ಜಿಲ್ಲಾಧಿಕಾರಿ ನೇಮಿಸಿದ್ದ ತನಿಖಾ ತಂಡ ಕ್ಲೀನ್ ಚಿಟ್ ಕೊಟ್ಟಿದ್ದು, ಈ ಬಗ್ಗೆ ಮಾಹಿತಿ ನೀಡಲು ಕರೆದಿದ್ದ ಸಭೆಯಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ಎ.ಜೆ. ಶೆಟ್ಟಿ ಅವರನ್ನು ತರಾಟೆಗೆತ್ತಿಕೊಂಡ ಪ್ರಸಂಗ ನಡೆದಿದೆ.
ಕಾಣಿಕೆ ಹುಂಡಿ ಕಳವು ದೂರಿನಲ್ಲಿ ಸೂಕ್ತ ಸಾಕ್ಷ್ಯಗಳಿಲ್ಲ. ಸಿಸಿಟಿವಿ ದಾಖಲೆಯಲ್ಲಿ ಹಣ ಎಗರಿಸಿದ್ದಾರೆ ಎಂಬುದನ್ನು ಸಾಬೀತು ಪಡಿಸುವ ಸ್ಪಷ್ಟವಾದ ಪುರಾವೆಗಳಿಲ್ಲ. ಅಲ್ಲದೆ, ಈ ಬಗ್ಗೆ ದೂರು ನೀಡಿದ್ದ ತೇಜಪಾಲ್ ಸುವರ್ಣ ಎಂಬವರು ಅಧಿಕಾರಿಗಳ ತಂಡ ದೇವಸ್ಥಾನಕ್ಕೆ ಭೇಟಿ ನೀಡಿದ್ದಾಗ ಬಂದಿರಲಿಲ್ಲ. ಬೇರೆ ಕರ್ತವ್ಯ ನಿಮಿತ್ತ ಹೊರಗಡೆ ತೆರಳುವುದಾಗಿ ಹೇಳಿದ್ದಲ್ಲದೆ, ಆನಂತರವೂ ತನ್ನಲ್ಲಿರುವ ಸಾಕ್ಷ್ಯಗಳನ್ನು ಅಧಿಕಾರಿಗಳ ತಂಡಕ್ಕೆ ಸಲ್ಲಿಸಿಲ್ಲ ಎಂದು ಅಧಿಕಾರಿಗಳು ನೀಡಿದ್ದ ವಿವರಣೆಯನ್ನು ದೇವಸ್ಥಾನದ ಕಮಿಟಿ ಅಧ್ಯಕ್ಷ ಎಜೆ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಅಲ್ಲದೆ, ದೇವಸ್ಥಾನದ ಟ್ರಸ್ಟಿ ಪುರುಷೋತ್ತಮ ಜೋಗಿ ನೀಡಿದ್ದ ಸಿಸಿಟಿವಿ ದಾಖಲೆಗಳು ಈಗಿನ ಸದ್ರಿ ಪ್ರಕರಣಕ್ಕೆ ಅನ್ವಯ ಆಗದೇ ಇರುವುದರಿಂದ ತನಿಖೆಗೆ ಪರಿಗಣಿಸಿಲ್ಲ. ಅದು ಹಳೆಯ ಸಿಸಿಟಿವಿ ದಾಖಲೆಯಾಗಿತ್ತು ಎಂದು ಅಧಿಕಾರಿಗಳು ವರದಿ ನೀಡಿದ್ದಾರೆ. ಹೀಗಾಗಿ ದೇವಸ್ಥಾನದ ಬಗ್ಗೆ ಪಾವಿತ್ರ್ಯ, ಘನತೆಗೆ ಕುಂದು ಬರುವ ರೀತಿ ಅಪಪ್ರಚಾರ ನಡೆಸುವುದು ಸರಿಯಲ್ಲ. ಕಾಣಿಕೆ ಹುಂಡಿ ಕಳವು ಪ್ರಕರಣ ಮುಗಿದ ಅಧ್ಯಾಯ ಎಂದು ಎಜೆ ಶೆಟ್ಟಿ ತಿಳಿಸಿದ್ದಾರೆ. ಆದರೆ, ಸುದ್ದಿಗೋಷ್ಠಿ ಕರೆದು ಎಜೆ ಶೆಟ್ಟಿ ಮಾಹಿತಿ ನೀಡುತ್ತಿದ್ದಂತೆ, ಸಭೆಯಲ್ಲಿ ಪಾಲ್ಗೊಂಡಿದ್ದ ಸಾರ್ವಜನಿಕರ ಪೈಕಿ ಸಾಮಾಜಿಕ ಕಾರ್ಯಕರ್ತರಾದ ಪ್ರಸನ್ನ ರವಿ ಮತ್ತು ದೀಪು ಶೆಟ್ಟಿಗಾರ್, ಎಜೆ ಶೆಟ್ಟಿ ಇತರ ಪದಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನೀವು ಸರ್ವಾನುಮತದಿಂದ ಈ ಮಾಹಿತಿ ನೀಡುವುದಾದರೆ, ವೇದಿಕೆಯಲ್ಲಿ ಎಲ್ಲ ಟ್ರಸ್ಟಿಗಳು ಇರಬೇಕಿತ್ತು. 9 ಮಂದಿಯಲ್ಲಿ ಕೇವಲ ನಾಲ್ಕು ಮಂದಿ ಇದ್ದೀರಿ. ಒಬ್ಬರು ಅರ್ಚಕರು. ಅಷ್ಟಕ್ಕೂ ಈ ಬಗ್ಗೆ ಆರೋಪ ಬಂದಾಗಲೇ ಸಾರ್ವಜನಿಕ ಸಭೆ ಕರೆದು ಸ್ಪಷ್ಟನೆ ನೀಡಬಹುದಿತ್ತು. ಟ್ರಸ್ಟಿಗಳೇ ಈ ಬಗ್ಗೆ ದೂರು ನೀಡಿರುವಾಗ, ನೀವು ಅವರನ್ನು ಬದಿಗಿರಿಸಿ ಈಗ ಕ್ಲೀನ್ ಚಿಟ್ ಬಗ್ಗೆ ಮಾಹಿತಿ ಕೊಡುತ್ತಿರುವುದು ಎಷ್ಟು ಸರಿ ಎಂದು ದೀಪು ಶೆಟ್ಟಿಗಾರ್ ಪ್ರಶ್ನೆ ಮಾಡಿದರು.
ಇದಕ್ಕೆ ಧ್ವನಿಗೂಡಿಸಿದ ಪ್ರಸನ್ನ ರವಿ, ದೇವಸ್ಥಾನದಲ್ಲಿ ಸಭೆ ಕರೆಯುವಾಗ ಪತ್ರಿಕಾ ಪ್ರಕಟಣೆ ಯಾಕೆ ಕೊಟ್ಟಿಲ್ಲ. ನೀವು ರಹಸ್ಯವಾಗಿ ಸಭೆ ನಡೆಸುತ್ತಿದ್ದೀರಿ. ಒಂದು ವಿಭಾಗದವರನ್ನೇ ಸೇರಿಸಿಕೊಂಡು ಇಲ್ಲಿ ಸಭೆ ನಡೆಸುತ್ತಿರುವುದು ಯಾಕೆ. ನೀವು ಇಲ್ಲಿನ ಮಂಜುನಾಥನಿಗೆ ಅಧ್ಯಕ್ಷರಲ್ಲ. ದೇವಸ್ಥಾನ ಕಮಿಟಿಗೆ ಮಾತ್ರ ಅಧ್ಯಕ್ಷರಿದ್ದೀರಿ. ಗಂಭೀರ ಆರೋಪ ಬಂದಾಗ, ಅಷ್ಟೇ ಗಂಭೀರವಾಗಿ ತನಿಖೆ ನಡೆಸಬೇಕಿತ್ತು. ಟ್ರಸ್ಟಿಗಳು ತಪ್ಪು ಮಾಡಿದರೆ ತಪ್ಪಲ್ಲ. ಸಾರ್ವಜನಿಕರು ತಪ್ಪು ಮಾಡಿದರೆ ಮಾತ್ರ ತಪ್ಪು ಅನ್ನುವಂತೆ ವರ್ತಿಸುತ್ತಿದ್ದೀರಿ. ಆರೋಪ ಬಂದವರನ್ನೇ ಸಮರ್ಥಿಸುತ್ತಿದ್ದೀರಿ ಎಂದು ಆಕ್ಷೇಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಜೆ ಶೆಟ್ಟಿ, ನಾವು ಎಲ್ಲ ತನಿಖೆಗೂ ಸಿದ್ಧರಿದ್ದೇವೆ. ಈಗ ಜಿಲ್ಲಾಧಿಕಾರಿ ನೇಮಿಸಿದ ತಂಡ ತನಿಖೆ ನಡೆಸಿ, ವರದಿ ಕೊಟ್ಟಿದೆ. ಈ ತನಿಖೆಯ ಬಗ್ಗೆ ಸಹಮತ ಇಲ್ಲದಿದ್ದರೆ ಮುಜರಾಯಿ ಇಲಾಖೆಗೆ ದೂರು ಹೇಳಿ ಮರು ತನಿಖೆ ನಡೆಸಿ ಎಂದು ಹೇಳಿದರು. ಈ ಮಾತಿನಿಂದ ಸಿಟ್ಟಿಗೆದ್ದ ದೀಪು ಶೆಟ್ಟಿಗಾರ್ ಮತ್ತು ಪ್ರಸನ್ನ ರವಿ ಸಭೆಯಿಂದ ಅರ್ಧದಿಂದಲೇ ಹೊರನಡೆದಿದ್ದಾರೆ.
ಸಭೆಯಲ್ಲಿ ದೇವಸ್ಥಾನ ಕಮಿಟಿ ಅಧ್ಯಕ್ಷರನ್ನು ತರಾಟೆಗೆತ್ತಿಕೊಂಡ ವಿಡಿಯೋಗಳು ಜಾಲತಾಣದಲ್ಲಿ ವೈರಲ್ ಆಗಿದ್ದು, ಆನಂತರ ಮಾತನಾಡಿದ ಕದ್ರಿ ನವನೀತ ಶೆಟ್ಟಿ, ಆರೋಪ ಕೇಳಿಬಂದ ಮಹಿಳೆಯನ್ನು ಸಮರ್ಥಿಸಿ ಮಾತನಾಡಿದ್ದಾರೆ. ಮಹಿಳೆಯೇ ತನ್ನ ಮೇಲೆ ಆರೋಪ ಬಂದ ಆರಂಭದಲ್ಲೇ ತನಿಖೆ ನಡೆಸುವಂತೆ ಕೇಳಿಕೊಂಡಿದ್ದರು. ರಾಜಕಾರಣಿಗಳ ಬಳಿ ಹೋಗಿದ್ದಾರೆ. ಕಾನತ್ತೂರಿಗೆ ಹೋಗಿ ದೂರು ಕೊಟ್ಟಿದ್ದಾರೆ. ಇಲ್ಲಿಯೇ ಮಂಜುನಾಥನ ಮುಂದೆ ಪ್ರಮಾಣ ಮಾಡಿ, ಹೇಳುವಂತೆ ದೂರುದಾರರಿಗೆ ಹೇಳಿದ್ದಾರೆ. ಆದರೆ ದೂರು ಹೇಳಿದವರು ಇದ್ಯಾವುದಕ್ಕೂ ಬಂದಿಲ್ಲ. ಮನೆಯ ಒಳಗಿನ ವಿಚಾರವನ್ನು ಟ್ರಸ್ಟಿಗಳು ಮಾಧ್ಯಮಕ್ಕೆ ಒಯ್ದಿದ್ದೇ ತಪ್ಪು ಎಂದು ವಾದಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಕಾಣಿಕೆ ಹುಂಡಿ ಕಳವಿನ ಬಗ್ಗೆ ದೂರು ಕೊಟ್ಟಿದ್ದ ಬಿಜೆಪಿ ಸದಸ್ಯರು ಪಾಲ್ಗೊಂಡಿರಲಿಲ್ಲ. ಸುದ್ದಿಗೋಷ್ಟಿಯ ಸಂದರ್ಭದಲ್ಲೇ ಸಾರ್ವಜನಿಕ ಸಭೆಯನ್ನೂ ಕರೆಯಲಾಗಿತ್ತು. ಹೀಗಾಗಿ ಮಾಧ್ಯಮದ ಮುಂದೆಯೇ ತರಾಟೆ, ಆಕ್ಷೇಪ, ಸ್ಪಷ್ಟನೆಗಳು ಕೇಳಿಬಂದವು. ಬಿಜೆಪಿ, ಕಾಂಗ್ರೆಸ್ ರಾಜಕೀಯ ಬದಿಗಿಟ್ಟು ಪ್ರಕರಣವನ್ನು ಮುಗಿಸಿಬಿಟ್ಟಿದೆ ಅನ್ನುವ ಮಾತು ಕೇಳಿಬಂದಿದೆ.
Kadri temple trustee accused of stealing money, committee president AJ Shetty was harshly questioned during the temple meeting held. videos went viral over a trustee of Kadri Lord Manjunatheshwara temple here, allegedly stealing the money collected in donation box of the temple, the person involved in the center of the controversy, Niveditha N Shetty, issued a clarification.
30-09-25 07:31 pm
Bangalore Correspondent
Hassan Blast: ಹಾಸನದಲ್ಲಿ ಅನುಮಾನಾಸ್ಪದ ಸ್ಫೋಟ ; ನ...
30-09-25 04:00 pm
Mahesh Shetty: ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರು ಆ...
30-09-25 03:58 pm
ಬಿಎಂಟಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದ ಪ್ರಬ...
30-09-25 01:08 pm
ಹೈದ್ರಾಬಾದ್ ನಲ್ಲಿ ಕಾಂತಾರ ಪ್ರಚಾರ ; ರಿಷಬ್ ಕನ್ನಡದ...
29-09-25 07:59 pm
01-10-25 05:32 pm
HK News Desk
ಮುಂಬೈ ಉಗ್ರ ದಾಳಿ ; 17 ವರ್ಷಗಳ ಬಳಿಕ ಪಿ. ಚಿದಂಬರಂ...
01-10-25 04:10 pm
ಫಸ್ಟ್ ನೈಟ್ ಅರ್ಜೆಂಟ್ ಮಾಡಂಗಿಲ್ಲ..! ಮದುಮಗಳ ರಾಗಕ್...
30-09-25 04:08 pm
ಪಾಕಿಸ್ತಾನದ ಕ್ವೆಟ್ಟಾದಲ್ಲಿ ಭಾರೀ ಸ್ಫೋಟ ; ಕಾರಿನಲ್...
30-09-25 04:03 pm
ಪರಿಶಿಷ್ಟರ ಮತಾಂತರ ಜಾಲ ; 'ಪವಾಡ ಚಿಕಿತ್ಸೆ' ಆಮಿಷ ಒ...
29-09-25 10:52 pm
01-10-25 04:45 pm
Mangalore Correspondent
ಮುಳಿಹಿತ್ಲು ಫ್ರೆಂಡ್ಸ್ ಸರ್ಕಲ್ ತಂಡದ ಮುಡಿಗೇರಿದ ಕು...
01-10-25 03:35 pm
ಮಂಗಳೂರು ಪೂರ್ತಿ ಝಗಮಗ ; ಕೋಟಿ ಕೋಟಿ ಮಿನಿಚರ್ ಅಳವಡಿ...
30-09-25 10:57 pm
Ullal Municipal Commissioner: ಉಳ್ಳಾಲ ನಗರಸಭೆಯಲ...
30-09-25 06:48 pm
ಧರ್ಮಸ್ಥಳ ಪ್ರಕರಣ, ಕೋರ್ಟಿಗೆ ಚಿನ್ನಯ್ಯ ಹೊಸ ಹೇಳಿಕೆ...
29-09-25 11:02 pm
01-10-25 02:39 pm
Mangalore Correspondent
Ullal Gold Robbery, Mangalore, CCB police: ಜು...
29-09-25 01:24 pm
ಸಹಾಯ ಕೇಳಿ ಬಂದ ಯುವತಿಯನ್ನು ಮದುವೆಯಾಗುತ್ತೇನೆಂದು ನ...
28-09-25 11:08 pm
ವಾಟ್ಸಪ್ ಮೆಸೇಜ್ ನಂಬಿ ಷೇರು ಮಾರುಕಟ್ಟೆ ಹೂಡಿಕೆ ; ನ...
28-09-25 05:04 pm
ಉಡುಪಿ ಬಸ್ ಚಾಲಕ ಸೈಫುದ್ದೀನ್ ಸ್ನೇಹಿತರಿಂದಲೇ ಕೊಲೆ...
28-09-25 04:57 pm