ಬ್ರೇಕಿಂಗ್ ನ್ಯೂಸ್
01-06-22 09:38 pm Mangalore Correspondent ಕರಾವಳಿ
ಮಂಗಳೂರು, ಜೂನ್ 1: ಮಳಲಿ ಜುಮ್ಮಾ ಮಸೀದಿಯ ಪ್ರಕರಣ ಮಂಗಳೂರಿನಲ್ಲಿ ದಿನದಿಂದ ದಿನಕ್ಕೆ ಜಟಿಲವಾಗುತ್ತಿರುವ ಲಕ್ಷಣ ಕಂಡುಬಂದಿದೆ. ಗ್ಯಾನವಾಪಿ ಮಸೀದಿಯ ರೀತಿಯಲ್ಲೇ ಸರ್ವೇ ನಡೆಸಬೇಕು, ತನಿಖಾ ಆಯೋಗ ನೇಮಕ ಮಾಡಬೇಕು ಎಂಬ ಬೇಡಿಕೆಯನ್ನು ವಿಶ್ವ ಹಿಂದು ಪರಿಷತ್ ಪರ ವಕೀಲರು ಮುಂದಿಟ್ಟಿದ್ದರೆ, ಮಸೀದಿ ಕಮಿಟಿ ಪರ ವಕೀಲರು ತಗಾದೆ ತೆಗೆದಿದ್ದಾರೆ. ಇದರ ನಡುವೆಯೇ ಎರಡೂ ಕಡೆಗಳಿಂದ ಪ್ರತ್ಯೇಕ ನಾಲ್ಕು ಅರ್ಜಿಗಳು ಕೋರ್ಟಿಗೆ ಸಲ್ಲಿಕೆಯಾಗಿದ್ದು, ಪ್ರಕರಣವನ್ನು ಜಟಿಲವಾಗಿಸುವ ಪ್ರಯತ್ನ ನಡೆದಿದೆ.
ಮೊದಲಿಗೆ ಮಸೀದಿ ಕಾಮಗಾರಿಗೆ ಹಾಕಿದ್ದ ತಡೆಯನ್ನು ಮಸೀದಿ ಕಮಿಟಿ ಪರ ವಕೀಲರು ವಕ್ಫ್ ಕಾಯ್ದೆಯಡಿ ತೆರವು ಮಾಡಬೇಕೆಂದು ಅರ್ಜಿ ಸಲ್ಲಿಸಿದ್ದರು. ಆನಂತರ ಆರಾಧನಾ ಸ್ಥಳಗಳ ಕುರಿತ 1991ರ ಕಾಯ್ದೆ ಆಧರಿಸಿ ಮಸೀದಿ ಕಮಿಟಿಯಿಂದ ಮತ್ತೊಂದು ಅರ್ಜಿ ಸಲ್ಲಿಕೆಯಾಗಿತ್ತು. ಇದೇ ವೇಳೆ, ಗ್ಯಾನವಾಪಿ ರೀತಿಯಲ್ಲೇ ಕಮಿಷನ್ ಆಫ್ ಎಂಕ್ವೈರಿ ನೇಮಕ ಕೋರಿ ವಿಎಚ್ ಪಿ ಕಡೆಯಿಂದ ಅರ್ಜಿ ಸಲ್ಲಿಸಲಾಗಿತ್ತು. ಇದರ ಬಗ್ಗೆ ಮಂಗಳವಾರ ಭಾರೀ ಜಟಾಪಟಿಯೂ ನಡೆದಿತ್ತು. ಗ್ಯಾನವಾಪಿ ಮಸೀದಿ ಕುರಿತ ಅರ್ಜಿಯೇ ಬೇರೆ ಇತ್ತು. ಅಲ್ಲಿ ಸಾರ್ವಜನಿಕ ಹಿತಾಸಕ್ತಿ ಇತ್ತು ಅನ್ನುವುದನ್ನು ವಿರೋಧಿ ವಕೀಲರು ಎತ್ತಿ ತೋರಿಸಿದ್ದರು. ಇದರ ಬೆನ್ನಲ್ಲೇ ವಿಎಚ್ ಪಿ ಕಡೆಯ ವಕೀಲರಿಂದ ಮತ್ತೊಂದು ಅರ್ಜಿ ಸಲ್ಲಿಕೆಯಾಗಿತ್ತು.
ಆರ್ಡರ್ ಆನ್ ರೂಲ್ ಲೇಟರ್ ಅಡಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗಳಿಗೆ ಅವಕಾಶ ನೀಡುವಂತೆ ಅರ್ಜಿ ಹೋಗಿದೆ. ಇದಲ್ಲದೆ, ಮತ್ತೊಂದು ಮೆಮೋ ಅರ್ಜಿಯೊಂದನ್ನು ಹಾಕಲಾಗಿದ್ದು, ಅದರಲ್ಲಿ ಸರಕಾರವನ್ನೇ ಪಾರ್ಟಿ ಮಾಡಲಾಗಿದೆ. ಜಿಲ್ಲಾಡಳಿತ ಮತ್ತು ಜಿಲ್ಲಾಧಿಕಾರಿಯನ್ನು ಪಾರ್ಟಿ ಮಾಡಿ, ಮಸೀದಿಯ ದಾಖಲೆಗಳನ್ನು ಸಲ್ಲಿಸುವಂತೆ ಕೋರುವ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಹೀಗಾಗಿ ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ ನ್ಯಾಯಾಧೀಶರು ಗೊಂದಲಕ್ಕೀಡಾಗಿದ್ದಾರೆ. ಎರಡೂ ಕಡೆಯಿಂದ ಬೆನ್ನು ಬೆನ್ನಿಗೆ ಎಂಟು ಅರ್ಜಿಗಳು ಸಲ್ಲಿಕೆಯಾಗಿದೆ. ಮೊದಲು ಯಾವ ಅರ್ಜಿಯನ್ನು ಪರಿಗಣಿಸಬೇಕೆಂಬ ವಿಚಾರದಲ್ಲಿ ನ್ಯಾಯಾಧೀಶರು ಗೊಂದಲಕ್ಕೆ ಸಿಲುಕಿದ್ದಾರೆ ಎನ್ನಲಾಗುತ್ತಿದ್ದು, ಹಿಂದು ಪರ ವಕೀಲರು ಸರ್ವೇ ಮತ್ತು ತನಿಖಾ ಆಯೋಗ ರಚಿಸುವಂತೆ ಕೇಳಿದರೆ, ಮಸೀದಿ ಕಮಿಟಿ ವಕೀಲರು ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನೇ ತೆರವು ಮಾಡುವಂತೆ ಪಟ್ಟು ಹಿಡಿದಿದ್ದಾರೆ.
ಯಾವ ಅರ್ಜಿಯನ್ನು ಮೊದಲು ಪರಿಗಣಿಸುವುದು ಅನ್ನುವ ವಿಚಾರದಲ್ಲಿ ಜೂನ್ 6ರಂದು ನಿರ್ಧಾರ ತಿಳಿಸುವುದಾಗಿ ನ್ಯಾಯಾಧೀಶರು ತಿಳಿಸಿದ್ದಾರೆ. ಇದರ ಮಧ್ಯೆ, ವಿಎಚ್ ಪಿ ಪರ ವಕೀಲ ಚಿದಾನಂದ ಕೆದಿಲಾಯ ಬುಧವಾರ ಮಧ್ಯಾಹ್ನ ತಮ್ಮ ವಾದ ಮಂಡಿಸಿದ್ದು, ಗ್ಯಾನವಾಪಿ ಪ್ರಕರಣ ಇಲ್ಲಿ ಯಾಕೆ ಅನ್ವಯವಾಗುತ್ತದೆ ಅನ್ನುವುದನ್ನು ವಿವರಿಸಿದ್ದಾರೆ. ಗ್ಯಾನವಾಪಿ ಪ್ರಕರಣದಲ್ಲಿಯೂ ಕಮಿಷನ್ ಆಫ್ ಎಂಕ್ವೈರಿ ಅರ್ಜಿ ಕೊನೆಗೆ ಸುಪ್ರೀಂ ಕೋರ್ಟಿಗೆ ಸಲ್ಲಿಕೆಯಾಗಿತ್ತು. ಅಲ್ಲಿಯೂ ಇದೇ ರೀತಿಯ ಸಂದರ್ಭ ಬಂದಾಗ, ನೀವ್ಯಾಕೆ ಜಾಗದ ಸರ್ವೆಗೆ ಅವಕಾಶ ಕೊಡಬಾರದು ಎಂದು ಅಲಹಾಬಾದ್ ಕೋರ್ಟಿಗೆ ಸುಪ್ರೀಂ ಕೇಳಿತ್ತು. ವಿವಾದಿತ ಪ್ರದೇಶದ ಸರ್ವೇ ನಡೆಸಲು ಅವಕಾಶ ಕೇಳಿದ್ದಾರೆ. ಅವಕಾಶ ಕೊಡುವಂತೆ ಹೇಳಿದ್ದರಿಂದ ಅಲಹಾಬಾದ್ ಹೈಕೋರ್ಟ್, ತನಿಖಾ ಆಯೋಗ ರಚನೆ ಮಾಡಿತ್ತು ಅನ್ನುವುದನ್ನು ಬೊಟ್ಟು ಮಾಡಿದ್ದಾರೆ.
ಇದಲ್ಲದೆ, ಮಳಲಿ ಮಸೀದಿಯಲ್ಲೂ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ. ಅಲ್ಲಿ ಯಾವುದೇ ರೀತಿಯ ಆರಾಧನೆ ಇಲ್ಲ. ಮಸೀದಿ ಎನ್ನಲು ನಮಾಜ್ ನಡೆಯುತ್ತಿಲ್ಲ. ವಿವಾದ ಉಂಟಾದ ಬಳಿಕ ಭದ್ರತೆ ಏರ್ಪಡಿಸಿದ್ದು ಯಥಾಸ್ಥಿತಿ ಇರಿಸಲಾಗಿದೆ. ದೇವಸ್ಥಾನದ ಚಿತ್ರಣ ಇದೆಯೆಂದು ವಾದ ಇರುವುದರಿಂದ ಅಲ್ಲಿ ಏನಿದೆ ಅನ್ನುವುದನ್ನು ಕಂಡುಕೊಳ್ಳಲು ವಿಡಿಯೋ ಸಹಿತ ಸರ್ವೇಗೆ ಅವಕಾಶ ಕೊಡಬೇಕು. ಅದಕ್ಕೆ ನಿರಾಕರಣೆ ಮಾಡುವಂತಿಲ್ಲ ಎಂದು ವಕೀಲ ಚಿದಾನಂದ ಕೆದಿಲಾಯ ವಾದಿಸಿದರು. ಅಲ್ಲದೆ, ಮುಸ್ಲಿಮರಿಗೆ ನಮಾಜ್ ಮಾಡಲು ನಿಶ್ಚಿತ ಜಾಗ ಆಗಬೇಕೆಂದಿಲ್ಲ. ಹಾಗಾಗಿ ಅಲ್ಲೀಗ ನಮಾಜ್ ನಡೆಯುತ್ತಿಲ್ಲ. ಅದು ಖಾಲಿ ಕಟ್ಟಡ ಅಷ್ಟೇ. ಮಸೀದಿ ಎಂದು ವಾದಿಸುವಂತೆ ಇಲ್ಲ ಎಂದೂ ಹೇಳಿದ್ದಾರೆ.
ಆದರೆ ಹಿಂದು ಪರ ವಕೀಲರ ಈ ರೀತಿಯ ವಾದಕ್ಕೆ ಮಸೀದಿ ಪರ ಹಿರಿಯ ವಕೀಲ ಎಂ.ಪಿ.ಶೆಣೈ ಆಕ್ಷೇಪಿಸಿದ್ದಾರೆ. ಅಲ್ಲಿನದ್ದು ಮಸೀದಿ ಎನ್ನುವುದಕ್ಕೆ ಸಾಕಷ್ಟು ದಾಖಲೆ ಇದೆ. ಹಲವಾರು ವರ್ಷಗಳಿಂದ ಮುಸ್ಲಿಮರು ಪ್ರಾರ್ಥನೆ ಮಾಡುತ್ತಿದ್ದಾರೆ. ಅಲ್ಲದೆ, ಈ ಜಾಗದಲ್ಲಿ ದಫನ ಭೂಮಿ ಇದ್ದು ಎಲ್ಲದಕ್ಕೂ ದಾಖಲೆ ಇದೆ. ಸ್ಥಳೀಯ ಪಂಚಾಯತ್ ಅನುಮತಿ ಪಡೆದು ನವೀಕರಣ ಕಾರ್ಯ ಮಾಡಲಾಗುತ್ತಿದೆ. ಕೇವಲ ವಾಸ್ತುಶಿಲ್ಪ ಹಿಂದು ದೇವಸ್ಥಾನದಂತಿದೆ ಅಂದ ಮಾತ್ರಕ್ಕೆ ಅದು ದೇವಸ್ಥಾನ ಆಗಲ್ಲ. ಇದಲ್ಲದೆ, ಇದು ವಕ್ಫ್ ಆಸ್ತಿಯಾಗಿದ್ದು, ಈ ಬಗ್ಗೆ ದಾಖಲೆ ಇದೆ. ವಕ್ಫ್ ಆಸ್ತಿ ಆಗಿರೋದರಿಂದ ಈ ಬಗ್ಗೆ ವಿಚಾರಣೆ ನಡೆಸಲು ಈ ಕೋರ್ಟಿಗೆ ಅಧಿಕಾರವೂ ಇಲ್ಲ ಎಂದು ಹೇಳಿದರು.
ಇದಕ್ಕೆ ತಗಾದೆ ತೆಗೆದ ವಿಎಚ್ ಪಿ ಪರ ವಕೀಲರು, ನಾವು ವಕ್ಫ್ ಆಸ್ತಿಯ ಬಗ್ಗೆ ಕೇಳುವುದಿಲ್ಲ. ಅಲ್ಲಿ ದೇವಸ್ಥಾನ ಇತ್ತೇ ಅನ್ನುವುದಷ್ಟೇ ಪ್ರಶ್ನೆ. ಅದರ ಬಗ್ಗೆ ಕೇಳುತ್ತಿದ್ದೇವೆ. ಸರ್ವೇ ನಡೆಸಿದರೆ ವಾಸ್ತವಾಂಶ ತಿಳಿಯಬಹುದು ಎಂದು ಮರುತ್ತರ ನೀಡಿದ್ದಾರೆ. ಒಟ್ಟಿನಲ್ಲಿ ಮಳಲಿ ಮಸೀದಿ ಪ್ರಕರಣ ಕೋರ್ಟ್ ಕಟಕಟೆಯಲ್ಲಿ ಜಟಿಲ ಸನ್ನಿವೇಶಗಳಿಗೆ ಸಾಕ್ಷಿಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಈ ಕೋರ್ಟಿನಲ್ಲಿ ಬಗೆಹರಿಯುವ ಸಾಧ್ಯತೆ ಕಡಿಮೆ ಎಂದೇ ಹೇಳಲಾಗುತ್ತಿದೆ.
Malali masjid temple case, survey should be conducted argues Hindu lawyer, Muslim side objects. A civil court on Wednesday resumed hearing on a petition seeking a survey of the Juma Masjid in Malali, Mangaluru. The controversy began after a 'temple-like structure' was found during renovation work of the mosque. The Vishva Hindu Parishad (VHP) claimed that a temple existed beneath the mosque, and that survey should be conducted to find out the truth
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm