ಬ್ರೇಕಿಂಗ್ ನ್ಯೂಸ್
05-06-22 04:05 pm Mangalore Correspondent ಕರಾವಳಿ
ಮಂಗಳೂರು, ಜೂನ್ 5: ಕರಾವಳಿ ಭಾಗದಲ್ಲಿ ಮತ್ತೆ ನಿಷೇಧಿತ ಸ್ಯಾಟಲೈಟ್ ಫೋನ್ ಗಳು ರಿಂಗಣಿಸಿವೆ. ಒಂಬತ್ತು ತಿಂಗಳಿಂದ ಸೈಲಂಟ್ ಆಗಿದ್ದ ಸ್ಯಾಟಲೈಟ್ ಫೋನ್ ಗಳು ಕರಾವಳಿ ಮತ್ತು ಮಲೆನಾಡಿನ ಗುಡ್ಡಗಳಲ್ಲಿ ಮತ್ತೆ ಸಂಪರ್ಕ ಪಡೆದುಕೊಂಡಿರುವುದನ್ನು ಕೇಂದ್ರ ಗುಪ್ತಚರ ಪಡೆಗಳು ಪತ್ತೆ ಮಾಡಿದ್ದು ಉಗ್ರರ ಹೆಜ್ಜೆಗುರುತಿನ ಅನುಮಾನದ ನೆಲೆಯಲ್ಲಿ ತನಿಖೆ ಆರಂಭಿಸಿವೆ.
ಕಳೆದ ಹತ್ತು ದಿನಗಳಲ್ಲಿ ಮಂಗಳೂರು ಸೇರಿದಂತೆ ನಾಲ್ಕು ಕಡೆ ಸ್ಯಾಟಲೈಟ್ ಫೋನ್ ಸಂಪರ್ಕ ಆಗಿರುವುದನ್ನು ಗುಪ್ತಚರ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಮಂಗಳೂರು ಹೊರವಲಯದ ಕೊಣಾಜೆ ಠಾಣೆ ವ್ಯಾಪ್ತಿಯ ನಾಟೆಕಲ್, ಸುರತ್ಕಲ್ ಬಳಿಯ ಕುಳಾಯಿ ಎಂಬಲ್ಲಿ ಸ್ಯಾಟಲೈಟ್ ಫೋನ್ ಸಂಪರ್ಕ ಆಗಿರುವುದು ಪತ್ತೆಯಾಗಿದೆ. ಅಲ್ಲದೆ, ಚಿಕ್ಕಮಗಳೂರು ಜಿಲ್ಲೆಯ ಕಡೂರು-ಬಿರೂರು ಅರಣ್ಯ ಪ್ರದೇಶದಲ್ಲಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಹಾಗೂ ಶಿರಸಿಯಲ್ಲಿ ಸ್ಯಾಟಲೈಟ್ ಫೋನ್ ಸಂಪರ್ಕ ಆಗಿರುವುದನ್ನು ತಾಂತ್ರಿಕ ಪರಿಣತ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
ನಿಷೇಧಿತ ತುರಾಯ ಸ್ಯಾಟಲೈಟ್ ಫೋನ್ ಬಳಕೆಗೆ ನಿಷೇಧ ಇದ್ದರೂ ಕರಾವಳಿ ಭಾಗದಲ್ಲಿ ಆಗಿಂದಾಗ್ಗೆ ಈ ಫೋನ್ ಸಂಪರ್ಕ ಆಗುತ್ತಿರುವುದರ ಹಿಂದೆ ಉಗ್ರರ ಜಾಡು ಇರಬಹುದೆಂಬ ಶಂಕೆ ವ್ಯಕ್ತವಾಗಿತ್ತು. ಅದರಲ್ಲೂ ಕರಾವಳಿ ಹಾಗೂ ಮಲೆನಾಡಿನ ದಟ್ಟಾರಣ್ಯಗಳಲ್ಲಿಯೇ ಈ ರೀತಿಯ ಫೋನ್ ನೆಟ್ವರ್ಕ್ ಪತ್ತೆಯಾಗಿದ್ದು ಅಧಿಕಾರಿಗಳನ್ನೂ ತಲೆಕೆಡಿಸುವಂತೆ ಮಾಡಿತ್ತು. ಈ ಬಾರಿ ಮಂಗಳೂರು ಸಿಟಿ ಪೊಲೀಸ್ ವ್ಯಾಪ್ತಿಯ ಕೋಣಾಜೆ ಮತ್ತು ಕುಳಾಯಿ ಭಾಗದಲ್ಲಿ ಫೋನ್ ನೆಟ್ವರ್ಕ್ ಪತ್ತೆಯಾಗಿದೆ. ಇಲ್ಲಿಂದ ಸ್ಯಾಟಲೈಟ್ ಮೂಲಕ ಅಂತಾರಾಷ್ಟ್ರೀಯ ಕರೆಗಳು ಕನೆಕ್ಟ್ ಆಗಿರುವ ಶಂಕೆಯಿದ್ದು ಉಗ್ರರ ಸ್ಲೀಪರ್ ಸೆಲ್ ನಲ್ಲಿರುವ ಮಂದಿಯೇ ವಿದೇಶದಲ್ಲಿರುವ ವ್ಯಕ್ತಿಗಳೊಂದಿಗೆ ಸಂಪರ್ಕಿಸುತ್ತಿದ್ದಾರೆ ಎನ್ನುವ ಅನುಮಾನಗಳಿವೆ. ಮೇ 23ರಿಂದ 29ರ ವರೆಗಿನ ಅವಧಿಯಲ್ಲಿ ನಾಲ್ಕು ಕಡೆ ಫೋನ್ ಸಂಪರ್ಕ ಆಗಿದ್ದು, ಇದನ್ನು ಬಳಸಿದವರು ಯಾರು ಎನ್ನುವ ಬಗ್ಗೆ ಕೇಂದ್ರೀಯ ಗುಪ್ತಚರ ಏಜನ್ಸಿಗಳು ರಾಜ್ಯ ಇಂಟೆಲಿಜೆನ್ಸಿ ತಂಡದೊಂದಿಗೆ ತಡಕಾಡುತ್ತಿವೆ.
ಎರಡು ವರ್ಷದಲ್ಲಿ 256 ಸ್ಯಾಟಲೈಟ್ ಕರೆ !
ಕಳೆದ 2021ರಲ್ಲಿ ಇದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ, ಮಂಗಳೂರಿನ ಪಚ್ಚನಾಡಿ ಸೇರಿದಂತೆ ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳಲ್ಲೂ ಸ್ಯಾಟಲೈಟ್ ಫೋನ್ ರಿಂಗ್ ಆಗಿತ್ತು. ಆನಂತರ ಈ ವಿಚಾರ ವಿಧಾನಸಭೆಯಲ್ಲೂ ಪ್ರತಿಧ್ವನಿಸಿತ್ತು. ಶಾಸಕ ಯು.ಟಿ.ಖಾದರ್ ಈ ಬಗ್ಗೆ ವಿಧಾನಸಭೆಯಲ್ಲಿ ಕೇಳಿದ್ದ ಪ್ರಶ್ನೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ, ಸ್ಯಾಟಲೈಟ್ ಫೋನ್ ಬಳಕೆಯಾಗುತ್ತಿರುವ ಬಗ್ಗೆ ದಾಖಲೆ ಸಹಿತ ಉತ್ತರವನ್ನು ನೀಡಿದ್ದರು. 2020ರ ಒಂದು ವರ್ಷದಲ್ಲಿ ಕರಾವಳಿ ಮತ್ತು ಮಲೆನಾಡಿನಲ್ಲಿ 256 ಬಾರಿ ಸ್ಯಾಟಲೈಟ್ ಫೋನ್ ರಿಂಗ್ ಆಗಿತ್ತು. 2021ರ ಸೆಪ್ಟಂಬರ್ ವರೆಗಿನ ಅವಧಿಯಲ್ಲಿ 220 ಬಾರಿ ಸ್ಯಾಟಲೈಟ್ ಫೋನ್ ವರ್ಕ್ ಆಗಿತ್ತು ಎಂದು ಮಾಹಿತಿ ನೀಡಿದ್ದರು. ಅಲ್ಲದೆ, ಈ ಬಗ್ಗೆ ರಾ ಸೇರಿದಂತೆ ರಾಜ್ಯ ಮತ್ತು ಕೇಂದ್ರದ ಗುಪ್ತಚರ ಏಜನ್ಸಿಗಳು ತನಿಖೆ ನಡೆಸುತ್ತಿವೆ ಎಂದಿದ್ದರು.
ವಿಶೇಷ ಅಂದ್ರೆ, ಈ ಬಾರಿಯ ಸ್ಯಾಟಲೈಟ್ ಕರೆಗಳಲ್ಲಿ ಮಂಗಳೂರು ನಗರ ವ್ಯಾಪ್ತಿಯ ಮೂರ್ನಾಲ್ಕು ಕಡೆ ಕರೆ ಟ್ರೇಸ್ ಆಗಿರುವುದು. ಈ ಹಿಂದೆ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದ ಸ್ಯಾಟಲೈಟ್ ಫೋನ್ ಬಳಕೆ ಈ ಬಾರಿ ಮಂಗಳೂರು ನಗರದಲ್ಲೂ ಕಾಣಿಸಿಕೊಂಡಿದೆ. ಆಮೂಲಕ ಉಗ್ರರ ಜಾಡು ಮಂಗಳೂರಿಗೂ ಕಾಲಿಟ್ಟಿದೆಯಾ ಅನ್ನುವ ಶಂಕೆ ಮೂಡುವಂತಾಗಿದೆ.
Satellite phones active again in the outskirts of Mangalore in the last 10 days. In the last 10 days, satellite phones have been used from four locations to make contacts. It has come to the knowledge of the intelligence agencies that the satellite phones are active in Natekal on the outskirts of Mangaluru, Kulai, forest area between Kadur and Birur in Chikkamagalur, Yellapur and Sirsi in Uttara Kannada district.
13-05-25 01:14 pm
HK News Desk
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm