ಬ್ರೇಕಿಂಗ್ ನ್ಯೂಸ್
20-06-22 03:07 pm Mangalore Correspondent ಕರಾವಳಿ
ಪುತ್ತೂರು, ಜೂನ್ 20: ರಾಮ ದೇವರ ನಿಂದೆಗೈದ ಆರೋಪ ಹೊತ್ತಿರುವ ಕಾಂಗ್ರೆಸ್ ಐಟಿ ಸೆಲ್ ಕಾರ್ಯದರ್ಶಿ ಶೈಲಜಾ ಅಮರನಾಥ ಗೌಡ ಅವರು ತನ್ನ ಮನೆ ಮೇಲೆ ದಾಳಿಗೈದ ಆರೋಪಿಗಳ ವಿರುದ್ಧ ಮತ್ತು ತನ್ನ ಬಗ್ಗೆ ಪ್ರಚೋದನಕಾರಿ ಸುದ್ದಿ ಮಾಡಿದ್ದ ವಿಕ್ರಮ ಯೂಟ್ಯೂಬ್ ಚಾನೆಲ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ತನ್ನ ಹೆಸರು ಮತ್ತು ಮೊಬೈಲ್ ನಂಬರನ್ನು ಉಲ್ಲೇಖಿಸಿ, ಎಡಿಟೆಡ್ ಆಡಿಯೋವನ್ನು ತೋರಿಸಿ ವಿಕ್ರಮ ಯೂಟ್ಯೂಬ್ ಚಾನೆಲಿನವರು ಸುದ್ದಿ ಮಾಡಿದ್ದಾರೆ. ಅದರಿಂದಾಗಿ ತನಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆ. ಪುತ್ತೂರಿನ ಬಪ್ಪಳಿಗೆಯ ನನ್ನ ಮನೆಗೆ ಬೈಕಿನಲ್ಲಿ ಬಂದಿದ್ದ ಮೂವರು ಯುವಕರು ದಾಳಿ ಮಾಡಿದ್ದಾರೆ. ನನ್ನ ಬಗ್ಗೆ ತೇಜೋವಧೆ ಮಾಡಿದ ಯೂಟ್ಯೂಬ್ ಚಾನೆಲ್ ಮತ್ತು ದಾಳಿ ಮಾಡಿದ ಯುವಕರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಕೋರಿ ದೂರು ನೀಡಿದ್ದಾರೆ.
ಅಲ್ಲದೆ, ನನ್ನ ಬಗ್ಗೆ ಪ್ರಚೋದನಕಾರಿ ಸುದ್ದಿ ಮಾಡಿರುವ ವಿಕ್ರಮ ಚಾನೆಲಿನ ನಿರೂಪಕಿ ಎಂ.ಎಸ್.ಮುಮ್ತಾಸ್ ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿದ್ದಾರೆ. ಮನಗೆ ದಾಳಿ ನಡೆಸಿದ ಮೂರು ಮಂದಿ ಅಪರಿಚಿತ ಯುವಕರು ಮತ್ತು ಯೂಟ್ಯೂಬ್ ಚಾನೆಲ್ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಪ್ರತ್ಯೇಕ ಎಫ್ಐಆರ್ ದಾಖಲಾಗಿದೆ. ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಕಾರ್ಯದರ್ಶಿಯೂ ಆಗಿರುವ ಪುತ್ತೂರಿನಲ್ಲಿ ವಕೀಲೆಯಾಗಿರುವ ಶೈಲಜಾ ಅಮರನಾಥ್, ಇತ್ತೀಚೆಗೆ ಕ್ಲಬ್ ಹೌಸ್ ಚರ್ಚೆಯಲ್ಲಿ ಪಾಲ್ಗೊಂಡು ರಾಮ, ಸೀತೆ, ಹನುಮಂತನ ಬಗ್ಗೆ ಅವಹೇಳನಕಾರಿ ಮಾತನಾಡಿದ್ದರು.
Accusation of insulting Hindu Gods, Shailaja Amaranath files complaint against Vikrama Channel at Puttur police station. The accusation on Shailaja Amarnath, secretary of IT cell of Congress, of insulting Hindu Gods and subsequent attack on her house by Hindu right wing activists has taken a new turn. Shailaja filed a complaint in city police station saying that she is receiving life threat calls as the audio and video about Lord Ram was edited by a YouTube channel Vikram with her photo and cell number. The complaint is filed against the YouTube channel and its anchor M S Mumtas.
13-02-26 10:41 am
HK News Desk
ಖರೀದಿಸಿದ ಕೆಲವೇ ದಿನಗಳಲ್ಲಿ ಕೈಕೊಟ್ಟ ₹52 ಲಕ್ಷದ ಹಿ...
11-02-26 11:02 pm
Breast Cancer Awareness Drive Goes Nationwide...
11-02-26 01:34 pm
ಸ್ತನ ಕ್ಯಾನ್ಸರ್ ಬಗ್ಗೆ ದೇಶವ್ಯಾಪಿ ಜಾಗೃತಿ ; ಕಲಬರಗ...
11-02-26 01:09 pm
ಛೆ… ಇವಳೆಂಥ ಮಗಳು! ಅಮ್ಮನ ಖಾಸಗಿ ಅಂಗ, ದೊಡ್ಡಮ್ಮನ ಬ...
09-02-26 07:20 pm
12-02-26 10:51 pm
HK News Desk
ನಕಲಿ ಷೇರು ಹೂಡಿಕೆ ಆ್ಯಪ್ ಹೆಸರಲ್ಲಿ ದುಪ್ಪಟ್ಟು ಲಾಭ...
12-02-26 09:31 pm
ಅಮೆರಿಕದಲ್ಲಿ ಪೊಲೀಸ್ ಅಧಿಕಾರಿ ಕಾರು ಗುದ್ದಿ ಭಾರತೀಯ...
12-02-26 09:19 pm
260 ಜನರನ್ನು ಬಲಿ ಪಡೆದ ಅಹಮದಾಬಾದ್ ವಿಮಾನ ಪತನ ; ಇಂ...
12-02-26 01:40 pm
ಡಿಕೆ - ಸಿದ್ದು ಪವರ್ ಫೈಟ್ ; ‘ರಾಜಕಾರಣ ಮಾಡೋಕೆ ಬಂದ...
12-02-26 01:09 pm
13-02-26 01:06 am
HK News Desk
ಮೋದಿ ಹೆಸರಲ್ಲಿ ಹತ್ತು ನಮೋ ಕುಟೀರ ನಿರ್ಮಾಣ ಯೋಜನೆ ;...
12-02-26 10:36 pm
ಲವ್ ಜಿಹಾದ್ ಆರೋಪ ; ಸುರತ್ಕಲ್ ಲೇಡಿಸ್ ಪಿಜಿಯಲ್ಲಿ ಹ...
12-02-26 05:55 pm
ಕೈಗಾರಿಕೆಗಳ ಮಾಲಿನ್ಯ ತಡೆಯಲು ಅಧಿಕಾರಿಗಳು ವಿಫಲ ; ವ...
12-02-26 04:05 pm
ಚಲಿಸುತ್ತಿದ್ದ ಓಮ್ನಿ ಕಾರಿನಲ್ಲಿ ದಿಢೀರ್ ಬೆಂಕಿ ; ರ...
12-02-26 03:38 pm
13-02-26 11:52 am
HK News Desk
ರೌಡಿ ಶೀಟರ್ ಬಿಕ್ಲು ಶಿವ ಕೊಲೆ ; ಕೊನೆಗೂ ಭೈರತಿ ಬ...
13-02-26 12:54 am
ವಿಷದ ಲಡ್ಡು ತಿನ್ನಿಸಿ 6 ಜನರ ಹತ್ಯೆ ; ದೆಹಲಿಯಲ್ಲಿ...
12-02-26 02:34 pm
ಫ್ಲ್ಯಾಟ್, ಚಿನ್ನದ ನೆಪದಲ್ಲಿ ಮುಂಬೈನ ಮಹಿಳಾ ಉದ್ಯಮಿ...
11-02-26 10:54 pm
ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ಬೆಲೆಯ ಜಮೀನು ಗುಳು...
11-02-26 09:10 pm