ಬ್ರೇಕಿಂಗ್ ನ್ಯೂಸ್
02-10-20 12:56 pm Mangalore Correspondent ಕರಾವಳಿ
ಉಳ್ಳಾಲ, ಅಕ್ಟೋಬರ್ 2: ಕೊರೊನ ಮತ್ತು ಡ್ರಗ್ಸ್ ಒಂದೇ ನಾಣ್ಯದ ಎರಡು ಮುಖಗಳಂತೆ. ಆದರೆ, ನಮ್ಮ ಮಕ್ಕಳ ಮುಂದೆ ಕೊರೊನಾ, ಡ್ರಗ್ಸ್ ಗಿಂತಲೂ ಮೊಬೈಲ್ ಫೋನ್ ತುಂಬಾ ಮಾರಕವಾಗಿ ಪರಿಣಮಿಸಿದೆ ಎಂದು ಕಾಪಿಕಾಡು ಉಮಾಮಹೇಶ್ವರೀ ಕಬಡ್ಡಿ ಅಕಾಡೆಮಿ ಅಧ್ಯಕ್ಷ ಮಾಜಿ ರಾಷ್ಟ್ರೀಯ ಕಬಡ್ಡಿ ಪಟು ಗೋಪಿನಾಥ್ ಕಾಪಿಕಾಡು ಹೇಳಿದರು.
ಇಲ್ಲಿನ ತೊಕ್ಕೊಟ್ಟು ಕಾಪಿಕಾಡು ಬಳಿಯ ಶ್ರೀ ಉಮಾಮಹೇಶ್ವರಿ ಕಬಡ್ಡಿ ಅಕಾಡೆಮಿ ಆಶ್ರಯದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಕೊರೊನಾ ಮತ್ತು ಡ್ರಗ್ಸ್ ಮುಕ್ತ ಭಾರತಕ್ಕಾಗಿ ಉಮಾಮಹೇಶ್ವರಿ ಕ್ಷೇತ್ರದಿಂದ ಉಳ್ಳಾಲ ಅಬ್ಬಕ್ಕ ವೃತ್ತದವರೆಗೆ ನಡೆದ ಕಾಲ್ನಡಿಗೆ ಜಾಗೃತಿ ಜಾಥಾವನ್ನುದ್ದೇಶಿಸಿ ಅವರು ಮಾತನಾಡಿದರು. ಜಗತ್ತನ್ನು ಇವತ್ತು ಕೊರೊನ ಆವರಿಸಿ ಜನರನ್ನು ಭಯಭೀತಿಗೊಳಿಸಿದೆ. ಡ್ರಗ್ಸ್ ಭೂತವು ನಮ್ಮ ಯುವ ಸಮುದಾಯವನ್ನು ಹಾಳುಗೆಡವುತ್ತಿದೆ. ನಮ್ಮ ಎಳೆಯ ಮಕ್ಕಳ ಕೈಯಲ್ಲಿ ಇವತ್ತು ಆನ್ ಲೈನ್ ನೆಪದಲ್ಲಿ ಮೊಬೈಲ್ ಪೋನನ್ನು ಕೊಡುತ್ತಿದ್ದು, ಮಕ್ಕಳಿಗೆ ಇದು ಕೊರೊನ, ಡ್ರಗ್ಸ್ ಗಿಂತಲೂ ಮಾರಕವಾಗಿದೆ. ಮಕ್ಕಳನ್ನು ಇಡೀ ದಿವಸ ಮೊಬೈಲಲ್ಲಿ ಇರಲು ಬಿಡದೆ, ವ್ಯಾಯಾಮ, ಯೋಗಗಳಲ್ಲಿ ತೊಡಗಿಸಿದಲ್ಲಿ ಸಧೃಡ ಭಾರತ ನಿರ್ಮಾಣವಾಗಲು ಸಾಧ್ಯ ಎಂದರು.

ಮಾಜಿ ಸಚಿವ ಯು.ಟಿ ಖಾದರ್ ಮಾತನಾಡಿ ಮಕ್ಕಳು ಶೈಕ್ಷಣಿಕ ಜೀವನದೊಟ್ಟಿಗೆ ಕ್ರೀಡೆ, ಯೋಗ, ವ್ಯಾಯಾಮಗಳಲ್ಲಿ ತೊಡಗಿಸಿದಲ್ಲಿ ಶರೀರದಲ್ಲಿ ರೋಗನಿರೋಧಕ ಶಕ್ತಿ ಇಮ್ಮಡಿಗೊಳ್ಳುವುದರ ಜೊತೆಗೆ ಡ್ರಗ್ಸ್ ನಂತಹ ದುಷ್ಚಟಗಳಿಂದಲೂ ದೂರ ಉಳಿಯಬಹುದೆಂದು ಹೇಳಿದರು. ಉಳ್ಳಾಲ ನಗರಸಭೆ ಕೌನ್ಸಿಲರ್ ಕು.ಭವಾನಿ ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಿದರು. ಉಮಾಮಹೇಶ್ವರಿ ಕಬಡ್ಡಿ ಅಸೋಸಿಯೇಶನ್ ಚೇರ್ಮನ್ ಎ.ಜೆ ಶೇಖರ್, ಗೌರವ ಸಲಹೆಗಾರರಾದ ಈಶ್ವರ ಉಳ್ಳಾಲ್, ಪ್ರ. ಕಾರ್ಯದರ್ಶಿ ಸುನೀಲ್ ರೈ , ಪದಾಧಿಕಾರಿಗಳಾದ ದಿನೇಶ್ ರೈ ಕಳ್ಳಿಗೆ, ಪ್ರಕಾಶ್, ಹರೀಶ್ ಗಾಂಧಿನಗರ, ದಿನಕರ್ ಬಗಂಬಿಲ, ರಘುರಾಮ್ ಶೆಟ್ಟಿ, ಗಣೇಶ್ ಕಾಪಿಕಾಡು, ಅರುಣ್ ಗಾಂಧಿನಗರ ಮೊದಲಾದವರು ಉಪಸ್ಥಿತರಿದ್ದರು.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
25-08-26 02:55 pm
HK News Staffer
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
ಅಡಿಕೆ ಎಲೆ ಚುಕ್ಕಿ ರೋಗ ನಿಯಂತ್ರಣಕ್ಕೆ ಸಿಪಿಸಿಆರ್ ಐ...
24-08-26 04:11 pm
ಎಂಆರ್ ಪಿಎಲ್ ನಲ್ಲಿ 26 ಇಂಜಿನಿಯರಿಂಗ್ ಹುದ್ದೆಗಳ ಭರ...
24-08-26 01:13 pm
25-08-26 07:27 pm
HK News Staffer
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm
ಮಲ್ಪೆ ಬಂದರಿನಲ್ಲಿ ಮೀನುಗಾರರಿಬ್ಬರ ಗಲಾಟೆ ಕೊಲೆಯಲ್ಲ...
25-08-26 12:45 pm
ಡೇವಿಡ್ ಡಿಸೋಜ ಹತ್ಯೆ ಪ್ರಕರಣದಲ್ಲಿ ಮಹತ್ತರ ತಿರುವು...
25-08-26 11:38 am
ಪಡಿತರ ಅಕ್ಕಿ ಸಾಗಾಟದ ಲಾರಿಗೆ ಸ್ಕೂಟರ್ ಢಿಕ್ಕಿ! ಸಚಿ...
24-08-26 09:06 pm