ಬ್ರೇಕಿಂಗ್ ನ್ಯೂಸ್
26-07-22 09:50 pm Mangalore Correspondent ಕರಾವಳಿ
ಮಂಗಳೂರು, ಜುಲೈ 26: ನೇತ್ರಾವತಿ ಸೇತುವೆಯಲ್ಲಿ ಕಾಂಕ್ರೀಟ್ ಒಡೆದು ಎದ್ದು ನಿಂತಿದ್ದ ಕಬ್ಬಿಣದ ಕಂಬಿಗೆ ಸಿಲುಕಿ ಎಂಎಸ್ಸಿ ಕಲಿಯುತ್ತಿದ್ದ ವಿದ್ಯಾರ್ಥಿನಿ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನ ಪಲ್ಟಿಯಾಗಿತ್ತು. ಇದರಿಂದಾಗಿ ಆಕೆಯ ಕೈಮೂಳೆ ಮುರಿದು ಆಸ್ಪತ್ರೆಗೆ ಸೇರಿದ್ದಳು. ಈ ಬಗ್ಗೆ ಹೆಡ್ಲೈನ್ ಕರ್ನಾಟಕ, ಹೆದ್ದಾರಿ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ನರಸತ್ತ ಅಧಿಕಾರಿ ವರ್ಗ ಎಂದು ಕಟು ಶಬ್ದಗಳಲ್ಲಿ ವರದಿ ಮಾಡಿತ್ತು. ವಿಡಿಯೋ ಸುದ್ದಿ ಜಾಲತಾಣದಲ್ಲಿ ವೈರಲ್ ಆಗಿದ್ದಲ್ಲದೆ, ಅಧಿಕಾರಿ ವರ್ಗಕ್ಕೂ ಚಾಟಿ ಬೀಸಿತ್ತು.
ಮತ್ತೊಂದೆಡೆ ಹೆಡ್ ಲೈನ್ ಸುದ್ದಿ ನೋಡಿ, ಹೆದ್ದಾರಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೂಡ ಬಿಸಿ ಮುಟ್ಟಿಸಿದ್ದರು. ನಿರ್ಲಕ್ಷ್ಯವನ್ನೇ ಹೊದ್ದು ಮಲಗಿದ್ದ ಅಧಿಕಾರಿಗಳು ಬಿಸಿ ತಾಗುತ್ತಿದ್ದಂತೆ ಒಂದೇ ದಿನದಲ್ಲಿ ಹೆದ್ದಾರಿ ಗುಂಡಿಗಳಿಗೆ ತೇಪೆ ಹಾಕಿದ್ದಾರೆ. ಮಂಗಳೂರಿನ ಕೆಪಿಟಿ ಸರ್ಕಲ್ ನಲ್ಲಿ ದೊಡ್ಡ ಗುಂಡಿಗಳು ಬಿದ್ದಿದ್ದವು. ಅದನ್ನೂ ಸೇರಿದಂತೆ, ನಂತೂರು, ಪಂಪ್ವೆಲ್, ಎಕ್ಕೂರು, ನೇತ್ರಾವತಿ ಸೇತುವೆಯ ಭಾಗದಲ್ಲಿ ಗುಂಡಿ ಬಿದ್ದ ಜಾಗಕ್ಕೆ ತುರ್ತಾಗಿ ಡಾಮರು ಎರೆದು ತೇಪೆ ಹಚ್ಚಿದ್ದಾರೆ. ಮಂಗಳವಾರ ಹಗಲಿನಲ್ಲಿ ಬಿಸಿಲು ಇದ್ದುದರಿಂದ ಒಂದೇ ದಿನದಲ್ಲಿ ಕಾಮಗಾರಿ ನಡೆಸಿದ್ದಾರೆ.


ನೇತ್ರಾವತಿ ಸೇತುವೆಯ ಮಧ್ಯೆ 2-3 ತಿಂಗಳಿಂದಲೂ ಕಾಂಕ್ರೀಟ್ ಎದ್ದು ಗುಂಡಿಗಳು ಉಂಟಾಗಿದ್ದವು. ಆದರೆ, ಕಾಲ ಕಾಲಕ್ಕೆ ಟೋಲ್ ರಸ್ತೆಯನ್ನು ಗಮನಿಸಬೇಕಿದ್ದ ಅಧಿಕಾರಿಗಳು ಹೇಗೂ ನಡೀತದೆ ಎನ್ನುವ ಧೋರಣೆ ತಳೆದಿದ್ದರು. ಯಥಾ ರಾಜಾ ತಥಾ ಪ್ರಜಾ ಅನ್ನುವ ರೀತಿ ಸಂಸದರಿಗೆ ತಕ್ಕಂತೆ ಅಧಿಕಾರಿಗಳೂ ನಿರ್ಲಕ್ಷ್ಯಕ್ಕೆ ಜೋತು ಬಿದ್ದಿದ್ದರು. ಜಾಲತಾಣದಲ್ಲಿ ಅಧಿಕಾರಿ ವರ್ಗದ ವೈಟ್ ವಾಶ್ ಆಗುತ್ತಿದ್ದರೂ, ಕೇರ್ ಮಾಡಿರಲಿಲ್ಲ. ವಿದ್ಯಾರ್ಥಿನಿ ಕೈಕಾಲು ಮುರಿದುಕೊಂಡರೂ ಎಚ್ಚತ್ತಿರಲಿಲ್ಲ. ಟೋಲ್ ಕೊಟ್ಟು ಹೋಗುವ ರಸ್ತೆ ಅನ್ನುವ ಕನಿಷ್ಠ ಕಾಳಜಿಯೂ ಅಧಿಕಾರಿ ವರ್ಗಕ್ಕೆ ಇರಲಿಲ್ಲ. ಅದಕ್ಕಾಗಿಯೇ ನರಸತ್ತವರು ಅನ್ನುವ ಟ್ಯಾಗ್ ಲೈನ್ ಕೊಟ್ಟು ಹೆಡ್ ಲೈನ್ ಕರ್ನಾಟಕ ಹೆದ್ದಾರಿ ಅಧಿಕಾರಿಗಳಿಗೆ ಚಾಟಿ ಬೀಸಿತ್ತು.


ಮಾಡಿದ್ದು ಅರೆಬರೆ ಕಾಮಗಾರಿಯೇ ಆಗಿದ್ದರೂ, ಇದು ಹೆಡ್ ಲೈನ್ ಕರ್ನಾಟಕದ ಬಿಗ್ ಇಂಪ್ಯಾಕ್ಟ್ ಎಂದು ಹೇಳಿಕೊಳ್ಳುವುದಕ್ಕೆ ಏನೂ ಅಂಜಿಕೆಯಿಲ್ಲ. ಇದರ ಜೊತೆಗೆ, ಹೆದ್ದಾರಿ ಗುಂಡಿಗೆ ಬಿದ್ದು ಆಸ್ಪತ್ರೆ ಅಡ್ಮಿಟ್ ಆಗಿರುವ ವಿದ್ಯಾರ್ಥಿನಿಯ ಆಸ್ಪತ್ರೆ ಖರ್ಚನ್ನೂ ಹೆದ್ದಾರಿ ಅಧಿಕಾರಿಗಳ ತಲೆಗೇ ಕಟ್ಟಿದರೆ ಜಿಲ್ಲಾಧಿಕಾರಿಗಳಿಗೆ ಸಾರ್ವಜನಿಕರು ಭೇಷ್ ಅನ್ನುತ್ತಿದ್ದರು.
Mangalore Deadly potholes on Netravathi Bridge road where concentrate rods have come up causing death danger to Transporters, officials patch road roughly after Headline Karnataka reported the issue where a Student of MSc in Environmental Science at Mangalore University, suffered a fractured hand after she fell trying to avoid a pothole on the Netravati bridge on national highway 66.
31-03-26 10:13 am
HK News Staffer
ತಮಿಳುನಾಡಿನಲ್ಲಿ ಬಿಜೆಪಿ ಸೀಟು ಹಂಚಿಕೆಯಲ್ಲಿ ಲೋಪ ;...
29-03-26 10:19 am
RCB ಗೆಲುವಿಗೆ ರಕ್ತದಾನ ಅಭಿಯಾನ ; ಚಿನ್ನಸ್ವಾಮಿ ಉದ್...
28-03-26 08:39 pm
ಆಸ್ತಿ ಕಲಹ ; ಮೂವರು ಪುಟ್ಟ ಮಕ್ಕಳೊಂದಿಗೆ ಬಾವಿಗೆ ಹಾ...
28-03-26 02:54 pm
ಭಾರತದಲ್ಲಿ ಮತ್ತೆ ಲಾಕ್ಡೌನ್ ; ಜಾಲತಾಣದಲ್ಲಿ ಟ್ರೆಂ...
27-03-26 04:49 pm
30-03-26 10:31 pm
HK News Desk
ಹರ್ಮುಜ್ ಜಲಸಂಧಿಯಲ್ಲಿ ಇರಾನ್ ಟೋಲ್ ಬೂತ್ ; ಶುಲ್ಕ ಕ...
28-03-26 04:06 pm
ನೇಪಾಳದಲ್ಲಿ ಝೆನ್ ಝೀ ಕ್ರಾಂತಿ ನಿಗ್ರಹಿಸಲು ಮುಂದಾಗಿ...
28-03-26 02:58 pm
ಟ್ರಂಪ್ ದಿಢೀರ್ ರಾಜಕೀಯ ಹೆಜ್ಜೆ ; ಯುದ್ಧ ಗಡುವು ಹತ್...
27-03-26 04:07 pm
ಗಲ್ಫ್ ಯುದ್ಧದ ಪರಿಣಾಮ ಊಹಿಸುವುದು ಕಷ್ಟ, ಕೋವಿಡ್ನಂ...
27-03-26 12:11 pm
30-03-26 11:13 pm
Mangalore Correspondent
Mangalore Attavar Suicide: ಅತ್ತಾವರದ ಅಪಾರ್ಟ್ಮೆ...
30-03-26 06:09 pm
ಮಂಗಳೂರಿನಲ್ಲಿ ಆಟೋ ಎಲ್ಪಿಜಿ ಗ್ಯಾಸ್ ಅಭಾವ ; ಸ್ಟೇಶನ...
30-03-26 02:06 pm
ಕುಕ್ಕರ್ನಲ್ಲಿ ಐಇಡಿ ಇಟ್ಟು ಸ್ಫೋಟಿಸಿದ್ದೇನೆ, ನಾನು...
29-03-26 11:11 am
ಬೇಸಗೆ ಬಿರು ಬಿಸಿಲ ನಡುವೆ ಕರಾವಳಿಯಲ್ಲಿ ಹಲವೆಡೆ ಮಳೆ...
28-03-26 09:08 pm
30-03-26 07:35 pm
HK News Desk
ತಿಂಗಳ ಹಿಂದಷ್ಟೇ ರಿಜಿಸ್ಟರ್ ಮದುವೆಯಾಗಿದ್ದ ಬೆಳ್ತಂಗ...
29-03-26 10:36 pm
ಟ್ಯಾಬ್ಲೆಟ್ ಆರಿಫ್ ಹತ್ಯೆ ; ಟೋಪಿ ನೌಫಾಲ್ ಸಾವನ್ನ ಸ...
29-03-26 10:22 pm
ಅರ್ಕುಳ ಬಳಿ ಹೆದ್ದಾರಿಯಲ್ಲಿ ಹಾಲಿನ ಟ್ಯಾಂಕರ್ ಗೆ ಹಿ...
29-03-26 07:49 pm
ಕಾರ್ಕಳದಲ್ಲಿ ಪೊಲೀಸರ ಮೇಲೆ ಕಾರು ಹರಿಸಲು ಯತ್ನ ; ಆರ...
29-03-26 06:03 pm