ಬ್ರೇಕಿಂಗ್ ನ್ಯೂಸ್
05-08-22 01:11 pm Mangalore Correspondent ಕರಾವಳಿ
ಸುಳ್ಯ, ಆಗಸ್ಟ್ 5 : ಸುಳ್ಯ ತಾಲೂಕಿನಲ್ಲಿ ನಿರಂತರ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವು ತಗ್ಗು ಪ್ರದೇಶಗಳು ಜಲಾವೃತವಾಗಿದ್ದು,. ಅಪಾಯದಲ್ಲಿರುವ ಮನೆಗಳ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ತಾಲೂಕಿನಲ್ಲಿ ನಾಲ್ಕು ಗ್ರಾಮಗಳ ಜನರು ತೀವ್ರ ಆತಂಕಕ್ಕೀಡಾಗಿದ್ದಾರೆ. ಹರಿಹರ, ಕೊಲ್ಲಮೊಗ್ರು, ಬಾಳುಗೋಡು ಹಾಗೂ ಕಲ್ಮಕಾರು ಗ್ರಾಮದಲ್ಲಿ ಜಲಸ್ಫೋಟ ಉಂಟಾಗಿದ್ದು, ಮನೆ, ಕೃಷಿ ಜಮೀನುಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ.


ಸುಳ್ಯ ಹಾಗೂ ಕಡಬ ತಾಲೂಕಿನ ಕಾಳಜಿ ಕೇಂದ್ರಗಳಲ್ಲಿ ಒಟ್ಟು 58 ಮಂದಿ ಆಶ್ರಯ ಪಡೆದಿದ್ದಾರೆ. ಕಲ್ಮಕಾರು ಸಕಾ೯ರಿ ಪ್ರಾಥಮಿಕ ಶಾಲೆಯಲ್ಲಿ 21 ಮಂದಿ, ಸಂಪಾಜೆಯ ಸಜ್ಜನ ಪ್ರತಿಷ್ಠಾನದಲ್ಲಿ 12 ಮಂದಿ, ಸುಬ್ರಹ್ಮಣ್ಯದ ಅನಘಾ ವಸತಿಗೃಹದಲ್ಲಿ 13 ಮಂದಿ, ಯೇನೆಕಲ್ಲು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ 6 ಮಂದಿ ಇದ್ದಾರೆ ಎಂದು ತಾಲ್ಲೂಕು ಆಡಳಿತ ಮಾಹಿತಿ ನೀಡಿದೆ.


ನಿರಂತರ ಮಳೆಯಿಂದಾಗಿ ಮಡಪ್ಪಾಡಿಯಲ್ಲಿ ಅಪಾರ ಹಾನಿ ಸಂಭವಿಸಿದೆ. ಮಡಪ್ಪಾಡಿಯ ಗೋಳಿಯಡಿ ಎಂಬಲ್ಲಿ ಗುಡ್ಡ ಕುಸಿದು ರಸ್ತೆಗೆ ಮಣ್ಣು ಬಿದ್ದು ಬ್ಲಾಕ್ ಆಗಿದ್ದು ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಮಡಪ್ಪಾಡಿಯಿಂದ ಶೀರಡ್ಕ, ದೇರಮಜಲು ಸಂಪರ್ಕಿಸುವ ರಸ್ತೆಯಲ್ಲಿ ಅಂಬೆಕಲ್ಲು ಎಂಬಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಆತಂಕದ ಪರಿಸ್ಥಿತಿ ಎದುರಾಗಿದೆ. ಹಾಡಿಕಲ್ಲು ಎಂಬಲ್ಲಿ ಸೇತುವೆ ಪಕ್ಕದ ಮಣ್ಣು ಕೊಚ್ಚಿ ಹೋಗಿದ್ದು, ಅಲ್ಲಿಯೇ ಮನೆಯೊಂದು ಕುಸಿವ ಭೀತಿಯಲ್ಲಿದೆ. ಪೂಂಬಾಡಿಯನ್ನು ಸಂಪರ್ಕಿಸುವ ಶೆಟ್ಟಿಮಜಲು ಸೇತುವೆ ಮುಳುಗಡೆಯಾಗಿ ತೋಟಗಳಿಗೆ ನೀರು ನುಗ್ಗಿದೆ. ಜಾಲುಮನೆ ಎಂಬಲ್ಲಿಯೂ ಸೇತುವೆಯ ಮಣ್ಣು ಕೊಚ್ಚಿ ಹೋಗಿದೆ.
Heavy rains in Sullia, 58 people transferred to a safer place. Wednesday extended holiday to some education institutes in Sullia taluk on Thursday, in view of continuing torrential rain in the taluk.
03-07-26 01:21 pm
HK News Staffer
ರಾಮನಗರದಲ್ಲಿ 10 ಸಾವಿರಕ್ಕೂ ಹೆಚ್ಚು ಬಾಂಗ್ಲಾ ಪ್ರಜೆ...
02-07-26 09:19 pm
ಆರ್ಎಸ್ಎಸ್ಗೆ ಬರುವ ಪ್ರತಿ ರೂಪಾಯಿಗೂ ಲೆಕ್ಕವಿದೆ,...
02-07-26 09:18 pm
ಬಿಜೆಪಿಯವರು ದೇವಸ್ಥಾನಗಳ ಮುಂದೆ ಹುಂಡಿ ಹಣ ಕಳ್ಳರಿದ್...
01-07-26 09:49 pm
ದನ ಕೊಂದವರು ಜೈಲಿಗೆ, ಮನುಷ್ಯರನ್ನು ಕೊಂದವರು ಪ್ರಧಾನ...
29-06-26 10:33 pm
03-07-26 09:40 pm
HK News Staffer
ಲಾಡ್ಲೆ ಮಶಾಕ್ ದರ್ಗಾ ಗಲಭೆ ಪ್ರಕರಣ ಸೇರಿ 52 ಕ್ರಿಮಿ...
02-07-26 03:37 pm
ಹಿಂದು ವಿವಾಹಕ್ಕೆ ನೋಂದಣಿಯಷ್ಟೇ ಸಾಲದು, ಸಪ್ತಪದಿ ಇನ...
02-07-26 01:56 pm
ಅಯೋಧ್ಯೆ ರಾಮ ಮಂದಿರ ದೇಣಿಗೆ ಹಗರಣ; ಟ್ರಸ್ಟಿ ಅನಿಲ್...
02-07-26 01:42 pm
1990ರ ಕಾಶ್ಮೀರಿ ಪಂಡಿತರ ನರಮೇಧ ; ನರ್ಸ್ ಸರಳಾ ಭಟ್...
30-06-26 08:06 pm
03-07-26 10:17 pm
HK News Staffer
ಕೆರೆಬೈಲ್ ಎಸ್ಟೇಟ್ ಆವರಣ ಗೋಡೆ ಕುಸಿದು ಅವಾಂತರ ; ಸ...
02-07-26 10:53 pm
ಆರೆಂಜ್ ಅಲರ್ಟ್ ಸೂಚನೆ ; ದಕ್ಷಿಣ ಕನ್ನಡ ಜಿಲ್ಲೆಯಲ್ಲ...
02-07-26 10:11 pm
ಮಂಜನಾಡಿ ಮನೆ ಕುಸಿತ ದುರಂತ ; ಎರಡೂ ಕಾಲುಗಳನ್ನು ಕಳಕ...
01-07-26 10:37 pm
ಭಾರಿ ಮಳೆ ; ಜುಲೈ 2 ದಕ್ಷಿಣ ಕನ್ನಡ ಶಾಲೆ - ಕಾಲೇಜಿಗ...
01-07-26 09:58 pm
03-07-26 07:45 pm
HK News Staffer
ಮುಸ್ಲಿಂ ಧರ್ಮಗುರುಗಳಿಗೆ ನಿಂದನೆ ; ಪುನೀತ್ ಕೆರೆಹಳ್...
03-07-26 06:59 pm
ಇನ್ಸ್ಟಾ ಗ್ರಾಮ್ ಸ್ಟಾರ್ ಧನ್ಯಾ ಕುಂಬಳೆ ಹೆದ್ದಾರಿ...
03-07-26 04:22 pm
ಬೆಂಗಳೂರಿನಲ್ಲಿ ಡೇಂಜರ್ ಡೇ ಕೇರ್ ; ಪುಟ್ಟ ಮಕ್ಕಳನ್ನ...
03-07-26 02:41 pm
ಮಂಗಳೂರು ಜೈಲಿಗೆ ಹೊರಗಿನಿಂದ ಗಾಂಜಾ ಪೊಟ್ಟಣ ಎಸೆದ ವ್...
03-07-26 12:25 pm