ಬ್ರೇಕಿಂಗ್ ನ್ಯೂಸ್
05-08-22 10:40 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 5: ಹಳೆ ಪೇಪರ್, ಹಳೆ ಕಬ್ಬಿಣ ಅಂತ ಸಿನಿಮಾ ಪದ್ಯ ಕೇಳಿರಬಹುದು. ಹೌದು.. ಈಗ ಹಳೆ ಪೇಪರ್ ಅನ್ನೋದು ಬರೀಯ ಗುಜರಿ ಸರಕಲ್ಲ. ಅತ್ಯಂತ ಬೇಡಿಕೆಯ ವಸ್ತುವಾಗಿದೆ. ತುಂಡು ಪೇಪರನ್ನೂ ಒಟ್ಟು ಮಾಡಿ, ಗುಜರಿಗೆ ಕೊಟ್ಟರೆ ಕೈತುಂಬ ಗಳಿಸುವ ದಿನ ಬಂದಿದೆ. ವರ್ಷದ ಹಿಂದೆ ಕೇವಲ ಕೇಜಿಗೆ 12ರಿಂದ 14 ರೂಪಾಯಿ ಇದ್ದ ಹಳೆ ಪೇಪರ್ ರೇಟು ಒಂದೇ ವರ್ಷದಲ್ಲಿ ದುಪ್ಪಟ್ಟು ಆಗಿದೆ. ಹೀಗಾಗಿ ಮನೆಯಲ್ಲಿ ಅಲ್ಲಲ್ಲಿ ಬೀಸಾಕುತ್ತಿದ್ದ ಹಳೆ ಪತ್ರಿಕೆಯನ್ನೆಲ್ಲ ಜನರು ಜೋಪಾನ ಇಟ್ಟುಕೊಳ್ಳಲು ತೊಡಗಿದ್ದಾರೆ.
ವರ್ಷದ ಹಿಂದೆ ನ್ಯೂಸ್ ಪ್ರಿಂಟ್ ದರವು ಕೇಜಿಗೆ 35 ರೂಪಾಯಿ ಇತ್ತು. ಈಗ ಅದರ ರೇಟು ಕೇಜಿಗೆ 80ರಿಂದ 90 ರೂಪಾಯಿ ಆಗಿದೆ. ನ್ಯೂಸ್ ಪ್ರಿಂಟ್ ದರ ಹೆಚ್ಚಿರುವುದರಿಂದ ಸಹಜವಾಗೇ ಹಳೆ ಪತ್ರಿಕೆಗಳ ದರವೂ ಹೆಚ್ಚಿದೆ. ಇಲ್ಲಿ ರೇಟ್ ಏರುವುದಕ್ಕೂ ಯುಕ್ರೇನ್- ರಷ್ಯಾ ಯುದ್ಧಕ್ಕೂ ತಾಳೆಯಿದೆ. ಅಲ್ಲಿನ ಯುದ್ಧದ ಕಾರಣ ಚೀನಾದಿಂದ ಬರುತ್ತಿದ್ದ ನ್ಯೂಸ್ ಪ್ರಿಂಟ್ ಕಡಿತಗೊಂಡಿದೆ. ಹೀಗಾಗಿ ಪೇಪರ್ ಮಿಲ್ ಗಳು ನ್ಯೂಸ್ ಪ್ರಿಂಟ್ ದರವನ್ನೂ ಒಮ್ಮೆಲೇ ಏರಿಸಿದೆ. ಇದರಿಂದಾಗಿ ಹಳೆ ಪತ್ರಿಕೆಯ ದರವೂ ಏರತೊಡಗಿದೆ.
ಗುಜರಿ ವ್ಯಾಪಾರಿಗಳು ಮನೆಗಳಿಂದ ಕೇಜಿಗೆ 25-26 ರೂಪಾಯಿ ಕೊಟ್ಟು ಖರೀದಿಸುವ ಹಳೆ ಪತ್ರಿಕೆಯನ್ನು ಎರಡು ರೂ. ಹೆಚ್ಚಿಗೆ ದರ ಪಡೆದು ನೇರವಾಗಿ ಪೇಪರ್ ಮಿಲ್ ಗಳಿಗೆ ಸಪ್ಲೈ ಮಾಡುತ್ತಾರೆ. ಮಿಲ್ ಗಳಲ್ಲಿ ಅದನ್ನು ರಿ ಸೈಕಲ್ ಮಾಡಿ, ಮತ್ತೆ ನ್ಯೂಸ್ ಪ್ರಿಂಟ್ ಆಗಿಸಿ ಕೇಜಿಗೆ 60 ರೂ.ಗೆ ಮಾರುತ್ತಾರೆ. ಹಳೆ ಪತ್ರಿಕೆ, ಹಳೆ ನೋಟ್ ಬುಕ್ಸ್ ಇವೆಲ್ಲದಕ್ಕೂ ಈಗ ಭಾರೀ ಡಿಮ್ಯಾಂಡ್ ಆಗಿದೆ. ಹಿಂದೆಲ್ಲಾ ಇಂಗ್ಲಿಷ್ ಹಳೆ ಪತ್ರಿಕೆಗಳಿಗೆ ಹೆಚ್ಚು ರೇಟ್ ಇತ್ತು. ಈಗ ಕನ್ನಡ- ಇಂಗ್ಲಿಷ್ ಎಲ್ಲ ಪತ್ರಿಕೆ, ಪುಸ್ತಕಕ್ಕೂ ಒಂದೇ ರೇಟಲ್ಲಿ ಗುಜರಿ ವ್ಯಾಪಾರಿಗಳು ಖರೀದಿಸುತ್ತಾರೆ. ಒಟ್ನಲ್ಲಿ ಯುಕ್ರೇನಲ್ಲಿ ಯುದ್ಧ ಆಗಿರುವುದು ಗುಜರಿ ಪತ್ರಿಕೆಗಳಿಗೆ ಡಿಮ್ಯಾಂಡ್ ಆಗುವಂತಾಗಿದೆ.
The demand for old newspapers and scrap paper has risen in the market. While old newspapers are being bought at up to Rs 26 a kilo, the price is likely to go up further. Last year, old newspapers were bought at Rs 12 to 15 a kilo which has now doubled. While households are carefully staking up old newspapers at home, scrap vendors have become equally careful in keeping the scrap paper intact.
13-03-26 12:09 pm
HK News Staffer
ಮಂತ್ರಾಲಯದಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸಿ...
13-03-26 09:44 am
ಮಗಳಿಗೆ ಮದುವೆಯಾಗದ ಚಿಂತೆಯಲ್ಲಿ ಆಟೋ ಚಾಲಕ ಆತ್ಮಹತ್ಯ...
12-03-26 02:48 pm
13 ವರ್ಷಗಳಿಂದ ಜೀವನ್ಮರಣ ಹೋರಾಟ ; ಕೋಮಾದಲ್ಲಿದ್ದ ಯು...
11-03-26 07:16 pm
ಪರಿಷತ್ ಚುನಾವಣೆಗೆ ಸಿಗದ ಟಿಕೆಟ್ ; ಬಿಜೆಪಿ ರಾಜ್ಯ ಶ...
11-03-26 06:14 pm
13-03-26 04:18 pm
HK News Staffer
ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್...
13-03-26 11:24 am
ಅಮೆರಿಕದ ಪಶ್ಚಿಮ ಕರಾವಳಿಗೆ ಇರಾನ್ ದಾಳಿ ಸಾಧ್ಯತೆ ;...
12-03-26 09:03 pm
ನಷ್ಟ ಪರಿಹಾರ ಕೇಳಿದ ಇರಾನ್ ; ಯುದ್ಧ ನಿಲ್ಲಿಸಲು ಮೂರ...
12-03-26 09:01 pm
ಗಲ್ಫ್ ಯುದ್ಧ ; ವಿಷಯುಕ್ತ ಬಿಳಿ ರಂಜಕ ಬಾಂಬ್ ಬಳಕೆ,...
10-03-26 09:46 pm
13-03-26 01:51 pm
HK News Staffer
ಶಿವಮೊಗ್ಗದಲ್ಲಿ ಅಪಘಾತ ; ಕಾರ್ಕಳ ಮೂಲದ ಮೆಡಿಕಲ್ ವಿದ...
13-03-26 11:46 am
ಸುಳ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯ...
12-03-26 10:47 pm
ಸೈಬರ್ ಜಾಲದ ಮ್ಯೂಲ್ ಅಕೌಂಟ್ ವಂಚನೆ ; ಚೀನಾ ಲಿಂಕ್ ಹ...
12-03-26 02:44 pm
Cyber Fraud Awareness, Mangalore: ಸೈಬರ್ ವಂಚನೆ...
12-03-26 08:33 am
12-03-26 11:20 pm
mangalore
ಸುರತ್ಕಲ್ ಗ್ಯಾರೇಜ್ ನಿಂದ ವಾಹನಗಳ ಬಿಡಿಭಾಗ ಕಳವು ;...
12-03-26 10:53 pm
ಬೆಂಗಳೂರು ; ಕಾಲೇಜು ಮುಗಿಸಿ ವಾಪಸ್ಸಾಗುತ್ತಿದ್ದಾಗ ಅ...
12-03-26 12:12 pm
ನಾಪತ್ತೆಯಾಗಿದ್ದ ಕೊಣಾಜೆಯ ಯುವಕ ಸೋಮೇಶ್ವರದ ಕೆರೆಯಲ್...
11-03-26 10:58 am
ಕೇರಳ ಚುನಾವಣೆ ಹಿನ್ನೆಲೆ ; ರೈಲಿನಲ್ಲಿ ತಪಾಸಣೆ ಬಿಗಿ...
10-03-26 08:32 pm