ಬ್ರೇಕಿಂಗ್ ನ್ಯೂಸ್
13-08-22 01:11 pm Mangalore Correspondent ಕರಾವಳಿ
ಉಳ್ಳಾಲ, ಆ.13 : ಸಿಟಿ ಬಸ್ಸೊಂದು ಓವರ್ ಸ್ಪೀಡ್ ಚಲಿಸಿದ ಆರೋಪದಲ್ಲಿ ಟ್ರಾಫಿಕ್ ಎಎಸ್ಐ ರಾಬರ್ಟ್ ಲಸ್ರಾದೊ ದಂಡ ಹೇರಿದ್ದು ಅದನ್ನು ಪ್ರಶ್ನಿಸಿದ ಬಸ್ ಚಾಲಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ವಶಕ್ಕೆ ತೆಗೆದ ಘಟನೆ ನಡೆದಿದೆ. ಪೊಲೀಸರ ನಡೆಯಿಂದ ರೊಚ್ಚಿಗೆದ್ದ ಬಸ್ಸು ಚಾಲಕರು, ನಿರ್ವಾಹಕರು ತಲಪಾಡಿ ರೂಟ್ ನಲ್ಲಿ ಚಲಿಸುವ ಎಲ್ಲಾ ಬಸ್ಸುಗಳನ್ನ ನಿಲ್ಲಿಸಿ ಮುಷ್ಕರ ನಡೆಸಿದ್ದಾರೆ.
ಮಂಗಳೂರಿನಿಂದ ಮೇಲಿನ ತಲಪಾಡಿಗೆ ತೆರಳಿ ಹಿಂತಿರುಗುತ್ತಿದ್ದ 42 ರೂಟ್ ಸಂಖ್ಯೆಯ ಉಷಾ ಟ್ರಾವೆಲ್ಸ್ ಬಸ್ಸನ್ನು ತಲಪಾಡಿಯಲ್ಲಿ ಗಸ್ತಿನಲ್ಲಿದ್ದ ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಎಎಸ್ಐ ರಾಬರ್ಟ್ ಲಸ್ರಾದೊ ತಡೆದು ಓವರ್ ಸ್ಪೀಡ್ ಕಾರಣಕ್ಕೆ 1000 ರೂಪಾಯಿ ದಂಡ ವಿಧಿಸಿದ್ದಾರೆ. ಬಸ್ ನಿರ್ವಾಹಕ ದಯಾನಂದ್ ಅವರು ನಾವು ವೇಗವಾಗಿ ಬಂದಿಲ್ಲ. ಕಲೆಕ್ಷನ್ ಕೂಡ ಈಗ ಕಮ್ಮಿ. ಅಷ್ಟು ದಂಡ ಕಟ್ಟಲು ಸಾಧ್ಯವಿಲ್ಲ ಎಂದು ಗೋಗರೆದಿದ್ದಾರೆ. ಈ ವೇಳೆ ಲಸ್ರಾದೊ ಅವರು ದಯಾನಂದ್ ಅವರಲ್ಲಿ ಬಸ್ಸಿನ ದಾಖಲೆ ಪತ್ರ ಕೇಳಿದ್ದಾರೆ. ದಾಖಲೆಗಳು ಆಫೀಸಲ್ಲಿ ಇದೆ ಎಂದು ಉತ್ತರಿಸಿದಾಗ, ನೀವು ಮತ್ತೆ ಗೀಸಲು ಇರುವುದಾ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆಂದು ನಿರ್ವಾಹಕ ದಯಾನಂದ್ ಆರೋಪಿಸಿದ್ದಾರೆ.
ದಂಡ ಕಟ್ಟಲು ಬಸ್ ನಿರ್ವಾಹಕರು ಒಪ್ಪದಿದ್ದಾಗ ಚಾಲಕ ಅಭಿರಾಜ್ ಅವರನ್ನ ಲಸ್ರಾದೊ ದೂರಿನ ಮೇರೆಗೆ ಉಳ್ಳಾಲ ಪೊಲೀಸರು ವಶಕ್ಕೆ ಪಡೆದು ವಾಹನದಲ್ಲಿ ಎಳೆದೊಯ್ದಿದ್ದು ಬಸ್ಸು ನೌಕರರ ಆಕ್ರೋಶಕ್ಕೆ ಕಾರಣವಾಗಿದೆ.ಮೇಲಿನ ತಲಪಾಡಿಯಲ್ಲಿ ಪೊಲೀಸರ ತಪಾಸಣೆಯ ಚೆಕ್ ಪೋಸ್ಟ್ ಇದೆ. ಹಾಗಿದ್ದರೂ ಬಸ್ಸನ್ನು ಹೇಗೆ ವೇಗವಾಗಿ ಚಲಾಯಿಸಲು ಸಾಧ್ಯ. ಬೇಕಾದರೆ ಸಿಸಿಟಿವಿ ದಾಖಲೆ ಪರಿಶೀಲಿಸಲಿ. ಸಿಟಿ ಬಸ್ ಸಿಬ್ಬಂದಿಗಳ ಮೇಲೆ ದಿನ ನಿತ್ಯವೂ ಟ್ರಾಫಿಕ್ ಪೊಲೀಸರು ಕೇಸು ಜಡಿದು ಅನ್ಯಾಯವೆಸಗುತ್ತಿದ್ದಾರೆಂದು ಬಸ್ಸು ನಿರ್ವಾಹಕ ಕಿಶೋರ್ ಆರೋಪಿಸಿದ್ದಾರೆ. ಬಸ್ಸು ಚಾಲಕ ಅಭಿರಾಜನ್ನ ಬಿಡುಗಡೆಗೊಳಿಸದೆ ಇದ್ದರೆ ಮುಷ್ಕರ ಮುಂದುವರೆಸೋದಾಗಿ ಬಸ್ ನೌಕರರು ಹೇಳಿದ್ದಾರೆ. ದಿಢೀರ್ ಸಿಟಿ ಬಸ್ ಮುಷ್ಕರದಿಂದ ಪ್ರಯಾಣಿಕರು ಕಂಗಾಲಾಗಿದ್ದು ಸರಕಾರಿ ಬಸ್ಸುಗಳನ್ನ ಕಾಯುವಂತಾಗಿದೆ.
ಕೊರಗಜ್ಜನ ಸ್ಟಿಕ್ಕರ್ ತೆಗೆಸಿದ್ದ ಲಸ್ರಾದೊ !
\
ಟ್ರಾಫಿಕ್ ಎಎಸ್ಐ ಲಸ್ರಾದೊ ಅವರು ಈ ಹಿಂದೆಯೂ ತೊಕ್ಕೊಟ್ಟು ಫ್ಲೈ ಓವರ್ ಕೆಳಗಡೆ ಕಾರೊಂದನ್ನ ನಿಲ್ಲಿಸಿ ಅದರಲ್ಲಿದ್ದ ಕೊರಗಜ್ಜ ದೈವದ ಸ್ಟಿಕ್ಕರನ್ನು ತೆಗೆಸಲು ಚಾಲಕನಲ್ಲಿ ಹೇಳಿ ಹಿಂದೂ ಸಂಘಟನೆಗಳ ಆಕ್ರೋಶ, ಪ್ರತಿಭಟನೆಗೆ ಗುರಿಯಾಗಿದ್ದರು.
Mangalore City Bus over speed, driver taken to custody, talapady route bus on strike. Words of war between Traffic ASI Lasrado and Bus drivers and conductors at Talapady.
15-05-25 11:59 am
HK News Desk
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
14-05-25 11:08 pm
HK News Desk
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
15-05-25 03:33 pm
Mangalore Correspondent
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
Lokayuta, Arrest, Bantwal, Mangalore: ಗಂಡನ ಪಿ...
14-05-25 06:33 pm
Harish Injadi, President of Kukke Subrahmanya...
14-05-25 01:42 pm
15-05-25 12:14 pm
HK Staff
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm