ಬ್ರೇಕಿಂಗ್ ನ್ಯೂಸ್
22-08-22 01:58 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 22 : ಹಿಜಾಬ್ ಬಗ್ಗೆ ಹೈಕೋರ್ಟ್ ತೀರ್ಪು, ಜಟಾಪಟಿಯ ನಡುವಲ್ಲೇ ಶೈಕ್ಷಣಿಕ ವರ್ಷ ಮುಗಿದು ಹೋಗಿದೆ. ಈಗ ಹೊಸತಾಗಿ ಅಡ್ಮಿಷನ್ ಶುರುವಾಗಿ ತರಗತಿ ಆರಂಭಗೊಂಡಿದೆ. ಆದರೆ, ಈ ನಡುವೆ ಹಿಜಾಬ್ ಕಾರಣಕ್ಕೆ ಕೆಲವು ಮುಸ್ಲಿಂ ವಿದ್ಯಾರ್ಥಿನಿಯರು ಸರಕಾರಿ ಕಾಲೇಜು ತೊರೆಯುತ್ತಿರುವ ಅಂಶ ಬೆಳಕಿಗೆ ಬಂದಿದೆ.
ಸರಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ಇಲ್ಲ ಎಂಬ ಕಾರಣಕ್ಕೆ ಈ ಬಾರಿ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ 145 ಮುಸ್ಲಿಂ ವಿದ್ಯಾರ್ಥಿನಿಯರು ಟಿಸಿ ಪಡೆದು ಬೇರೆ ಖಾಸಗಿ ಕಾಲೇಜುಗಳಿಗೆ ತೆರಳಿದ್ದಾರೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ವ್ಯಾಪ್ತಿಯ ಕಾಲೇಜುಗಳಲ್ಲಿ 900ಕ್ಕೂ ಮುಸ್ಲಿಂ ವಿದ್ಯಾರ್ಥಿನಿಯರಿದ್ದು ಈ ಪೈಕಿ 145 ಮಂದಿ ಕಾಲೇಜು ತೊರೆದಿದ್ದಾರೆ.

ಸುಮಾರು 16 ಶೇಕಡಾ ಮುಸ್ಲಿಂ ವಿದ್ಯಾರ್ಥಿನಿಯರು ಟಿಸಿ ಹಿಂಪಡೆದಿದ್ದಾರೆ ಎನ್ನಲಾಗುತ್ತಿದೆ. ಕಾಲೇಜು ನಿಯಮಕ್ಕೆ ಬದ್ಧರಾಗಿ ನಡೆದುಕೊಳ್ಳಲು ಸಾಧ್ಯವಾಗದವರು ಟಿಸಿ ಪಡೆದು ಹೋಗಬಹುದು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪಿ.ಎಸ್ ಯಡಪಡಿತ್ತಾಯ ಹೇಳಿದ್ದರು. ಮಂಗಳೂರಿನ ಹಂಪನಕಟ್ಟೆ ಕಾಲೇಜಿನಲ್ಲಿ ಹಿಜಾಬ್ ವಿವಾದ ಆಗಿದ್ದಾಗ ವಿದ್ಯಾರ್ಥಿನಿಯರು ಜಿಲ್ಲಾಡಳಿತದ ಕದ ತಟ್ಟಿದ್ದರು. ಮಂಗಳೂರು ವಿವಿಯ ಉಪ ಕುಲಪತಿಗೂ ದೂರು ನೀಡಿದ್ದರು. ಆದರೆ ಸಿಂಡಿಕೇಟ್ ನಿರ್ಣಯ ಆಗಿದೆ, ನಾವೇನು ಮಾಡುವಂತಿಲ್ಲ ಎಂದು ವಿಸಿಯವರು ನಿರಾಕರಣೆ ಮಾಡಿದ್ದರು.
ಇದೇ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಯ ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಟಿಸಿ ಪಡೆದು ಬೇರೆ ಕಾಲೇಜಿಗೆ ಹೋಗಿದ್ದಾರೆ. ಸರ್ಕಾರಿ ಕಾಲೇಜಿನಿಂದ 34 ಶೇ., ಅನುದಾನಿತ ಕಾಲೇಜಿನಿಂದ 13 ಶೇ. ವಿದ್ಯಾರ್ಥಿನಿಯರು ಟಿಸಿ ಪಡೆದಿದ್ದಾರೆಂದು ಈ ಕುರಿತ ಆರ್ಟಿಐ ಪ್ರಶ್ನೆಗೆ ರಾಜ್ಯ ಶಿಕ್ಷಣ ಇಲಾಖೆ ಉತ್ತರ ನೀಡಿದೆ.
ಶಿಕ್ಷಣ ಸಚಿವ ಬಿಸಿ ನಾಗೇಶ್ ಕಾರಣ..

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಿಜಾಬ್ ಪರ ಹೋರಾಟಗಾರ್ತಿ ಗೌಸಿಯಾ, ವಿದ್ಯಾರ್ಥಿನಿಯರು ಟಿಸಿ ಪಡೆಯಲು ಮುಖ್ಯ ಕಾರಣ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಎಂದು ದೂರಿದ್ದಾರೆ. ಹಿಜಾಬ್ ಧರಿಸಲು ಅವಕಾಶ ಇಲ್ಲದ ಕಾರಣ ವಿದ್ಯಾರ್ಥಿನಿಯರು ಟಿಸಿ ಪಡೆದು ಖಾಸಗಿ ಕಾಲೇಜು ಸೇರುತ್ತಿದ್ದಾತೆ. ಈ ರೀತಿಯ ಬೆಳವಣಿಗೆ ಸಚಿವ ಬಿ.ಸಿ. ನಾಗೇಶ್ ಕಾರಣ. ಸಂವಿಧಾನದ ಹಕ್ಕಿನಂತೆ ಶಿಕ್ಷಣ ಪಡೆಯಲು ರಾಜ್ಯ ಸರಕಾರ ಬಿಡಲಿಲ್ಲ. ತುಂಡು ಬಟ್ಟೆಯನ್ನೇ ದೊಡ್ಡ ವಿವಾದವನ್ನಾಗಿ ಮಾಡಿದ್ದಾರೆ. ಇದರಿಂದ ಹಲವು ಸರ್ಕಾರಿ ಕಾಲೇಜುಗಳಿಗೆ ನಷ್ಟವಾಗಲಿದೆ. ರಾಜ್ಯಾದ್ಯಂತ 30 ಶೇ. ಅಧಿಕ ವಿದ್ಯಾರ್ಥಿನಿಯರು ಕಾಲೇಜು ತೊರೆದಿದ್ದಾರೆ. ಅದೆಷ್ಟೋ ವಿದ್ಯಾರ್ಥಿನಿಯರು ತಮ್ಮ ಶಿಕ್ಷಣವನ್ನೇ ಮೊಟಕುಗೊಳಿಸಿದ್ದಾರೆ. ಇದಕ್ಕೆಲ್ಲ ಬಿಜೆಪಿ ಸರಕಾರ ಕಾರಣ ಎಂದು ದೂರಿದ್ದಾರೆ. ಗೌಸಿಯಾ ಹಂಪನಕಟ್ಟೆ ವಿವಿ ಕಾಲೇಜಿನಿಂದ ಟಿಸಿ ಪಡೆದು ಖಾಸಗಿ ಕಾಲೇಜು ಸೇರಿದ್ದಾರೆ.
Hijab fight, Muslims girl leaving government college in Mangalore increases.
11-07-26 01:48 pm
HK News Staffer
ಮೈಸೂರು ದಸರಾದಲ್ಲಿ ಕಂಬಳ ನಡೆಸಿಯೇ ಸಿದ್ಧ; ಎಲ್ಲ ಸಿದ...
11-07-26 11:42 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:12 pm
ರಾಮಮಂದಿರದ ಶ್ರೇಯಸ್ಸು ಪಡೆದವರೇ, ದೇಣಿಗೆ ಕಳ್ಳತನದ ಹ...
10-07-26 07:42 pm
ಸಚಿವ ಸಂಪುಟ ವಿಸ್ತರಣೆಯಾದರೆ ಸರ್ಕಾರ ಸ್ವಲ್ಪಮಟ್ಟಿಗೆ...
09-07-26 02:56 pm
11-07-26 04:31 pm
HK News Staffer
ರಾಮ ಮಂದಿರದ ದೇಣಿಗೆ ಕಳ್ಳತನ; ಕದ್ದ ಹಣವನ್ನು ಷೇರು ಮ...
11-07-26 11:48 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:46 pm
ಮತ್ತೆ ಗಲ್ಫ್ ಉದ್ವಿಗ್ನ ; ಇರಾನ್ ಮೇಲೆ ಮುಗಿಬಿದ್ದ ಅ...
09-07-26 03:40 pm
18 ವರ್ಷಗಳ ಬಳಿಕ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರ...
07-07-26 03:22 pm
11-07-26 06:32 pm
HK News Staffer
ಬಾಂಗ್ಲಾನ್ನರ ಬಂಧನ ; ಇವರನ್ನು ಮತಪಟ್ಟಿಗೆ ಸೇರಿಸಲು...
11-07-26 04:26 pm
ಮಂಗಳೂರಿನಲ್ಲಿ ಜಾಂಡೀಸ್ ಆತಂಕ ; ಎರಡು ವಾರಗಳಲ್ಲಿ 19...
10-07-26 05:25 pm
ಬಾಲಕನಿಗೆ ಛಡಿಯೇಟು ; ಕಾಟಿಪಳ್ಳ ಮದ್ರಸಾ ಶಿಕ್ಷಕ ಉಸ್...
09-07-26 11:09 pm
ಮೋದಿಯನ್ನ ಪ್ರಶ್ನಿಸುವ ಕೈ ಮುಖಂಡ ಅಭಿಷೇಕ್ ಮೂಡಾ ಭ್ರ...
09-07-26 10:47 pm
11-07-26 08:40 pm
HK News Staffer
ಸಣ್ಣ ಗಾಯಕ್ಕೆ ಚಿಕಿತ್ಸೆ, ಆದರೆ ಮರಳಲಿಲ್ಲ ಪ್ರಜ್ಞೆ...
11-07-26 08:37 pm
ಮಂಗಳೂರು- ವಿಟ್ಲ ಖಾಸಗಿ ಬಸ್ಸಿನಲ್ಲಿ ವಿದ್ಯಾರ್ಥಿನಿಯ...
11-07-26 04:28 pm
ಮಾಜಿ ಸಾರಿಗೆ ಅಧಿಕಾರಿ ಮನೆಯಲ್ಲಿ ಕುಬೇರನ ಖಜಾನೆ ! ಗ...
10-07-26 10:14 pm
ಷೇರು ಮಾರ್ಕೆಟ್ ಹೆಸ್ರಲ್ಲಿ 10 ಲಕ್ಷ ರೂ. ವಂಚನೆ ; ಮ...
10-07-26 08:22 pm