ಸಾವರ್ಕರ್ 25 ವರ್ಷಗಳ ಎರಡು ಜೀವಾವಧಿ ; ಅಂಡಮಾನ್ ಜೈಲಿನಲ್ಲಿದ್ದವರೆಲ್ಲ ಕಿರುಕುಳಕ್ಕೆ ಬೇಸತ್ತು ಕ್ಷಮಾಪಣೆ ಪತ್ರ ಬರೆಯುತ್ತಿದ್ದರು, ಅದೊಂದು ರೀತಿ ತಪ್ಪೊಪ್ಪಿಗೆ ಹೇಳಿಕೆ ರೀತಿ !

23-08-22 11:23 pm       Giridhar Shetty, Mangalore Correspondent   ಕರಾವಳಿ

ಬ್ರಿಟಿಷರಿಗೆ ಸಾವರ್ಕರ್ ಮೇಲಿರುವಷ್ಟು ಕೋಪ ಬೇರೆ ಯಾವ ವ್ಯಕ್ತಿ ಮೇಲೂ ಇರಲಿಲ್ಲ. ಲಂಡನ್ನಲ್ಲಿದ್ದುಕೊಂಡೇ ಕ್ರಾಂತಿಕಾರಿ ಚಟುವಟಿಕೆ ನಡೆಸಿದ್ದು, ಅಲ್ಲಿನ ಭಾರತೀಯ ಯುವಕರನ್ನು ಇಂಗ್ಲೆಂಡ್ ವಿರುದ್ಧ ಎತ್ತಿಕಟ್ಟಿದ್ದು ಬ್ರಿಟಿಷರಿಗೆ ಸಹಿಸಲಾಗಲಿಲ್ಲ.

ಮಂಗಳೂರು, ಆಗಸ್ಟ್ 24: ಬ್ರಿಟಿಷರಿಗೆ ಸಾವರ್ಕರ್ ಮೇಲಿರುವಷ್ಟು ಕೋಪ ಬೇರೆ ಯಾವ ವ್ಯಕ್ತಿ ಮೇಲೂ ಇರಲಿಲ್ಲ. ಲಂಡನ್ನಲ್ಲಿದ್ದುಕೊಂಡೇ ಕ್ರಾಂತಿಕಾರಿ ಚಟುವಟಿಕೆ ನಡೆಸಿದ್ದು, ಅಲ್ಲಿನ ಭಾರತೀಯ ಯುವಕರನ್ನು ಇಂಗ್ಲೆಂಡ್ ವಿರುದ್ಧ ಎತ್ತಿಕಟ್ಟಿದ್ದು ಬ್ರಿಟಿಷರಿಗೆ ಸಹಿಸಲಾಗಲಿಲ್ಲ. ಸಾವರ್ಕರ್ ಪ್ರೇರಣೆಯಿಂದ ಮದನ್ ಲಾಲ್ ಧಿಂಗ್ರಾ ಎಂಬ ಯುವಕ ಬ್ರಿಟಿಷ್ ಅಧಿಕಾರಿಯನ್ನು ಲಂಡನ್ನಲ್ಲೇ ಗುಂಡು ಹೊಡೆದು ಸಾಯಿಸಿದ್ದ. ಇದರಿಂದ ತೀವ್ರ ಮರ್ಮಾಘಾತ ಆಗಿತ್ತು. ಸಾವರ್ಕರ್ ಅವರೇ ಇದಕ್ಕೆಲ್ಲ ಕಾರಣ ಎಂದು ಬ್ರಿಟಿಷರು ಅಲ್ಲಿಂದ ಬಂಧಿಸಿ ಭಾರತಕ್ಕೆ ತಂದು 50 ವರ್ಷಗಳ ಕಾಲಪಾನಿ ಶಿಕ್ಷೆ ಕೊಟ್ಟರು. ಇಷ್ಟು ಸುದೀರ್ಘ ಅವಧಿಗೆ ಶಿಕ್ಷೆಯಾದ ರಾಜಕೀಯ ಕೈದಿ ಜಗತ್ತಿನಲ್ಲಿ ಬೇರಾವುದೇ ವ್ಯಕ್ತಿ ಇಲ್ಲ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಮಂಗಳೂರಿನ ಡೊಂಗರಕೇರಿಯ ಭುವನೇಂದ್ರ ಸಭಾಭವನದಲ್ಲಿ ನಡೆದ ವೀರ ಸಾವರ್ಕರ್ ಸ್ಮರಣೆ ಕುರಿತ ಕಾರ್ಯಕ್ರಮದಲ್ಲಿ ಸೂಲಿಬೆಲೆ ಮಾತನಾಡಿದರು. ಲಂಡನ್ನಲ್ಲಿರುವ ಭಾರತೀಯ ಯುವಕರಿಗೆ ಸ್ವಾತಂತ್ರ್ಯದ ಕಿಚ್ಚು ಹತ್ತಿಸಲೆಂದೇ 1905ರಲ್ಲಿ ಸಾವರ್ಕರ್ ಇಂಗ್ಲೆಂಡಿಗೆ ತೆರಳಿದ್ದರು. ಆಗ ಸಾವರ್ಕರ್ 20ರ ತರುಣ. ಆಗಲೇ ಮದುವೆಯಾಗಿ ಪುಟ್ಟ ಮಗು ಇತ್ತು. ಶಿಕ್ಷಣ ಪಡೆಯಲು ದುಡ್ಡಿರಲಿಲ್ಲ. ತನ್ನ ಪುತ್ರಿಯನ್ನು ಮದುವೆಯಾದರೆ ಶಿಕ್ಷಣ ಕೊಡಿಸ್ತೀನಿ ಎಂದು ಒಬ್ಬರು ಆಮಿಷ ಒಡ್ಡಿದ್ದಕ್ಕೆ ಸಾವರ್ಕರ್ 18 ವರ್ಷ ಇದ್ದಾಗಲೇ ಮದುವೆಯಾಗಿದ್ದರು. ಲಂಡನ್ ಹೋದ ಬೆನ್ನಲ್ಲೇ ಅಲ್ಲಿನ ಭಾರತ ಭವನ ಲೈಬ್ರರಿಯಲ್ಲಿ ಇಟಲಿಯ ಕ್ರಾಂತಿಕಾರಿ ಮ್ಯಾಜಿನಿಯ ಆರು ಆವೃತ್ತಿಗಳಲ್ಲಿದ್ದ ಪುಸ್ತಕಗಳನ್ನು ಓದಿದರು. ಕೆಲವೇ ಸಮಯದಲ್ಲಿ ಅದನ್ನು ಮರಾಠಿಗೆ ಭಾಷಾಂತರಿಸಿ, ಮುಂಬೈಗೆ ಕಳಿಸಿಕೊಟ್ಟರು. ಅದನ್ನು ತಿಲಕರು ಬ್ರಿಟಿಷರಿಗೆ ತಿಳಿಯದಂತೆ ಮುದ್ರಣ ಮಾಡಿದ್ದರು. ಅದರಲ್ಲಿ ಯಾವುದೇ ರಾಜದ್ರೋಹದ ವಿಚಾರ ಇರಲಿಲ್ಲ. ಆದರೆ, ಆ ಪುಸ್ತಕ ಓದಿದವರೆಲ್ಲ ರಾಜದ್ರೋಹಕ್ಕೆ ತಯಾರಾಗುತ್ತಿದ್ದರು. ಆ ರೀತಿ ದೇಶದ ಸ್ವಾತಂತ್ರ್ಯಕ್ಕಾಗಿ ತುಡಿಯಲು ಯುವಕರನ್ನು ಪ್ರೇರೇಪಿಸುತ್ತಿತ್ತು. ಆ ಪುಸ್ತಕವನ್ನು ಬ್ರಿಟಿಷರು ಕೊನೆಗೆ ಬ್ಯಾನ್ ಮಾಡಿದ್ದರು. 1946ರಲ್ಲಿ ಬಳಿಕ ಅದೇ ಪುಸ್ತಕವನ್ನು ಸಾವರ್ಕರ್ ಮರು ಮುದ್ರಣ ಮಾಡಿದ್ದರು.

Savarkar was an atheist, his Hindutva was inclusive: Vikram Sampath-  Edexlive

ಅಚ್ಚಾಗುವ ಮೊದಲೇ ಪುಸ್ತಕ ಬ್ಯಾನ್ ಆಗಿತ್ತು

1857ರ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಸಾವರ್ಕರ್ 1908ರಲ್ಲಿ ಬರೆದ ಪುಸ್ತಕ ಅಚ್ಚಾಗಿ ಹೊರಬರುವ ಮೊದಲೇ ಬ್ಯಾನ್ ಆಗಿತ್ತು. ಪ್ರಕಟಗೊಳ್ಳುವ ಮೊದಲೇ ಪುಸ್ತಕವನ್ನು ಬ್ಯಾನ್ ಮಾಡಿದ ಉದಾಹರಣೆ ಇದ್ದರೆ ಜಗತ್ತಿನಲ್ಲಿ ಅದೊಂದೇ ಇರಬೇಕು. ಭಾರತದಲ್ಲಿ ಸಾವರ್ಕರ್ ಪುಸ್ತಕ ಮುದ್ರಣಕ್ಕೆ ನಿಷೇಧ ವಿಧಿಸಿದ್ದರಿಂದ ಲಂಡನ್ನಲ್ಲಿಯೇ ಮುದ್ರಿಸಿ ಹೊರತರಲಾಗಿತ್ತು. ಆನಂತರ ನಾಲ್ಕು ಬಾರಿ ಮರು ಮುದ್ರಣ ಆಗಿತ್ತು. ಬ್ರಿಟಿಷರು ಸಿಪಾಯಿ ದಂಗೆ ಎಂದಷ್ಟೇ ಹೇಳಿದ್ದ ಸಂಗ್ರಾಮವನ್ನು ಪ್ರಥಮ ಸ್ವಾತಂತ್ರ್ಯ ಸಂಗ್ರಾಮವೆಂದು ಮೊದಲಿಗೆ ಕರೆದಿದ್ದು ಸಾವರ್ಕರ್. ಪುಸ್ತಕ ಪ್ರಕಟವಾದ ನಲ್ವತ್ತು ವರ್ಷಗಳ ಬಳಿಕ ಅಂದರೆ, 1942 ರಲ್ಲಿ ಸುಭಾಶ್ಚಂದ್ರ ಬೋಸರು ನಾಲ್ಕನೇ ಬಾರಿಗೆ ಅದೇ ಪುಸ್ತಕವನ್ನು ಮರು ಮುದ್ರಣ ಮಾಡಿ ಹಂಚಿದ್ದರು. ತಮಿಳು ಭಾಷೆಯಲ್ಲೂ ಅದೇ ಪುಸ್ತಕ ಮುದ್ರಿಸಿ ದೇಶಾದ್ಯಂತ ಕ್ರಾಂತಿಯ ಕಿಡಿ ಎಬ್ಬಿಸಿದ್ದು ಸುಭಾಸರು.

Madan Lal Dhingra Death Anniversary: Lesser-known facts about freedom  fighter who was executed on British

21 ವರ್ಷದ ಮದನಲಾಲ್ ಧಿಂಗ್ರಾನಿಗೆ ಲಂಜನ್ನಲ್ಲಿ ನೇಣು ಶಿಕ್ಷೆ ನೀಡಲಾಗಿತ್ತು. ಕೊನೆಯ ಆಸೆಯೇನು ಎಂದು ಕೇಳಿದ್ದಕ್ಕೆ, ಧಿಂಗ್ರಾ ಪತ್ರವನ್ನು ಬರೆದು ಕೊಟ್ಟಿದ್ದ ಬ್ರಿಟಿಷರಿಗೆ. ನನ್ನ ದೇಶಕ್ಕಾಗಿ ಜೀವ ಕೊಡಲು ನಾನು ರೆಡಿಯಾಗಿದ್ದನ್ನು ನೋಡಿ ನನ್ನ ದೇಶದಲ್ಲಿ ಸಾವಿರಾರು ಜನ ಪ್ರೇರಣೆಗೊಳ್ಳುತ್ತಾರೆ ಎಂದು ಲೆಟರ್ ಕೊಟ್ಟಿದ್ದ. ಇಂಗ್ಲೆಂಡಿನಲ್ಲಿ ಧಿಂಗ್ರಾ ನೀಡಿದ್ದ ಕೊನೆಯ ಹೇಳಿಕೆಯನ್ನು ಸಾವರ್ಕರ್ ಪತ್ರಿಕೆಯಲ್ಲಿ ಅಚ್ಚು ಹಾಕಿಸಿದ್ರು. ಈ ಹೇಳಿಕೆಯೇ ಜನರನ್ನು ಉದ್ರೇಕಿಸುತ್ತೆ ಅನ್ನುವ ಉದ್ದೇಶ ಸಾವರ್ಕರ್ ಅವರದ್ದಿತ್ತು. ಇದರಿಂದ ಕೆರಳಿದ ಬ್ರಿಟಿಷರು ಸಾವರ್ಕರನ್ನು ಬ್ಯಾರಿಸ್ಟರ್ ಪದವಿ ಕಲಿಕೆಯಿಂದಲೇ ಹೊರತಳ್ಳಿದ್ದರು. ಲಂಡನ್ನಿನ ಯಾವ ಹೊಟೇಲಿನಲ್ಲೂ ಇರಕೂಡದೆಂದು ಸಾವರ್ಕರ್ ಗೆ ನಿಷೇಧ ಹಾಕಿದ್ದರು. ಅದೇ ಸಂದರ್ಭದಲ್ಲಿ ತನ್ನ ನಾಲ್ಕು ವರ್ಷದ ಮಗು ಭಾರತದಲ್ಲಿ ತೀರಿಕೊಂಡ ಸುದ್ದಿ ಬಂದಿತ್ತು.

Savarkar is imprisoned at the Cellular Jail, Andaman Islands - YouTube

25 ವರ್ಷಗಳ ಎರಡು ಜೀವಾವಧಿ ಶಿಕ್ಷೆ

ಆನಂತರ, ಸಾವರ್ಕರ್ 16 ದಿನ ಫ್ರಾನ್ಸಲ್ಲಿದ್ದರು. ಹಿಂತಿರುಗಿ ಭಾರತಕ್ಕೆ ಹೋಗಲು ತಯಾರಿ ನಡೆಸುತ್ತಿದ್ದಾಗಲೇ ಬ್ರಿಟಿಷರು ಬಂಧಿಸಿದರು. ತೀರಾ ಅಪಾಯಕಾರಿ ವ್ಯಕ್ತಿ ಎಂದು ಬಂಧಿಸಿ ಭಾರತಕ್ಕೆ ಕರೆತಂದರು. ಅದರ ನಡುವೆಯೂ, ಫ್ರಾನ್ಸಿನ ದಂಡೆಯಲ್ಲಿ ಹಡಗು ತೆರಳುತ್ತಿದ್ದಾಗ ಹಡಗಿನ ಟಾಯ್ಲೆಟ್ ಕಿಂಡಿಯಿಂದಲೇ ಸಮುದ್ರಕ್ಕೆ ಹಾರಿ ಪರಾರಿಯಾಗಲು ಯತ್ನಿಸಿದ್ದರು. ಸಮುದ್ರಕ್ಕೆ ಹಾರಿ, ಈಜುತ್ತಾ ಹೋಗಿ ಫ್ರಾನ್ಸ್ ದಂಡೆಯನ್ನು ತಲುಪಿದರೂ, ಬ್ರಿಟಿಷ್ ಪೊಲೀಸರು ಹಿಂಬಾಲಿಸಿಕೊಂಡು ಬಂದು ಬಂಧಿಸಿದ್ದರು. ಭಾರತದಲ್ಲಿ ಅವರಿಗೆ 1906 ರಲ್ಲಿ ಮಾಡಿದ ಭಾಷಣ ಮತ್ತು ಬರಹಗಳ ಕಾರಣಕ್ಕೆ 1910 ರಲ್ಲಿ ಶಿಕ್ಷೆ ಕೊಡಲಾಯ್ತು. ನ್ಯಾಯಾಲಯದಲ್ಲಿ 25 ವರ್ಷಗಳ ಎರಡು ಜೀವಾವಧಿ ಶಿಕ್ಷೆ ಕೊಡಲಾಯ್ತು. ತಮ್ಮ ಹರಿತ ಬರಹಗಳಿಗಾಗಿ ಅಷ್ಟು ದೀರ್ಘ ಶಿಕ್ಷೆ ಪಡೆದಿದ್ದು ಸಾವರ್ಕರ್ ಮಾತ್ರ.

Savarkar's mercy petition - Frontline

ಎಲ್ಲರೂ ಕ್ಷಮಾಪಣೆ ಪತ್ರ ಬರೆಯುತ್ತಲೇ ಇದ್ದರು !

ಕಾಲಪಾನಿ ಶಿಕ್ಷೆಗೆ ಹೋದಾಗ, ಎದೆಯಲ್ಲಿ 1910 - 1960 ಎಂದು ಬೋರ್ಡ್ ಹಾಕಲಾಗಿತ್ತು. 50 ವರ್ಷಗಳ ಶಿಕ್ಷೆ 1960ರಲ್ಲಿ ಕೊನೆಯೆಂದು ಸೂಚಿಸಲಾಗಿತ್ತು. ನಡುವೆ ಡಿ ಎಂದು ತೋರಿಸಲಾಗಿತ್ತು. ಡಿ ಎಂದರೆ ಡೇಂಜರಸ್ ವ್ಯಕ್ತಿಯೆಂದು ಅರ್ಥವಾಗಿತ್ತು. ಅಂಡಮಾನ್ ಜೈಲಿನಲ್ಲಿ 658 ಸೆಲ್ ಗಳಿದ್ದವು.‌ ಏಳನೇ ಸೆಲ್ ನಂಬರಲ್ಲಿ ಸಾವರ್ಕರ್ ಅವರನ್ನು ಇಡಲಾಗಿತ್ತು. ಒಂದರಿಂದ ಇನ್ನೊಂದು ಕಾಣುತ್ತಿರಲಿಲ್ಲ. ಕತ್ತಲ ಕೋಣೆಗಳು. ದಿನದಲ್ಲಿ 30 ಪೌಂಡ್ ಎಣ್ಣೆಯನ್ನು ಗಾಣದಲ್ಲಿ ತೆಗೆಯಬೇಕಿತ್ತು.‌ ಈಗ ಕ್ಷಮಾಪಣೆ ಪತ್ರ ಕೊಟ್ಟರೆಂದು ಕಿರುಚುತ್ತಾರಲ್ಲ.. ಸಾವರ್ಕರ್ ಜೈಲಿಗೆ ಹೋದ, 2-3 ತಿಂಗಳಲ್ಲೇ ಕ್ಷಮಾಪಣೆ ಪತ್ರ ಬರೆದಿದ್ದರು. ಅವರೊಬ್ಬರೇ ಅಲ್ಲ. ಅಲ್ಲಿದ್ದ ಸಾವಿರಾರು ಕೈದಿಗಳೂ ಕ್ಷಮಾಪಣೆ ಪತ್ರವನ್ನು ನೂರಾರು ಬಾರಿ ಬರೆಯುತ್ತಲೇ ಇದ್ದರು. ಬ್ರಿಟಿಷ್ ಅಧಿಕಾರಿಗಳು ಜೈಲಿಗೆ ಬಂದಾಗಲೆಲ್ಲ, ಕ್ಷಮಾಪಣೆ ಪತ್ರ ಬರೆಯುತ್ತಿದ್ದರು. ಜೈಲಿನಲ್ಲಿದ್ದ ಅರವಿಂದ ಘೋಷ್ ಕೂಡ ಬರೆದಿದ್ದರು.

 

ಅದೊಂದು ರೀತಿ ಕೋರ್ಟಿನಲ್ಲಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ ರೀತಿ. 1911 ರಲ್ಲಿ ಸಾವರ್ಕರ್ ಬರೆದಿದ್ದ ಮರ್ಸಿ ಪಿಟಿಷನ್ ಲಂಡನ್ನಿಗೆ ಹೋದಾಗ, ರಿಜೆಕ್ಟೆಡ್ ಅಂತ ಉತ್ತರ ಬಂದಿತ್ತು. ಅಷ್ಟೂ ಮಂದಿ ಕೈದಿಗಳ ಪೈಕಿ ಉತ್ತರ ಬಂದಿದ್ದು ಸಾವರ್ಕರ್ ಒಬ್ಬರಿಗೆ ಮಾತ್ರ ಆಗಿತ್ತು. ಜೈಲಿನಿಂದ ಬಿಡುಗಡೆ ಕೊಡುತ್ತಾರೆ ಅಂದ್ರೆ, ಕ್ಷಮಾಪಣೆ ಪತ್ರ ಏನೂ ಆಗಿರಲಿಲ್ಲ. ಮಾನಸಿಕವಾಗಿ ಜರ್ಜರಿತಗೊಂಡು ಹುಚ್ಚನಾಗಬೇಕೆಂದು ಕೈದಿಗಳನ್ನು ಕತ್ತಲ ಕೋಣೆಯಲ್ಲಿ ಇಡುತ್ತಿದ್ದರು. ಈ ನಡುವೆ, ಸಾವರ್ಕರ್ ಅವರಿಗೆ ಎರಡು ಬಾರಿ ಸಾಯಬೇಕೆನಿಸಿತ್ತು. 1915 ರಲ್ಲಿ ಗಾಣ ತೆಗೀತಿದ್ದಾಗ, ತುಂಡು ಬಟ್ಟೆ ಗಾಣಕ್ಕೆ ಸಿಲುಕ್ಕೊಂಡು ಇದಕ್ಕಿಂತ ಸಾಯುವುದೇ ಲೇಸು ಎನಿಸಿತ್ತು. ಆಮಶಂಕೆ ಸೇರಿ ಬೇರೆ ಬೇರೆ ರೋಗ ಉಂಟಾಗಿ ಮತ್ತೊಮ್ಮೆ ಸಾಯುವ ಮನಸ್ಸಾಗಿತ್ತು. ಸತ್ತರೆ ಯಾರನ್ನಾದರೂ ಕೊಂದೇ ಸಾಯಬೇಕು, ಸುಮ್ಮನೆ ಸಾಯಬಾರದು ಎಂದು ಮನಸ್ಸು ಗಟ್ಟಿ ಮಾಡಿಕೊಂಡಿದ್ದರು.

Remembering Indu Bhushan Roy on... - Hindu Swayamsevak Sangh | Facebook

ಜೈಲಿನ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ

ಮಲಮೂತ್ರ ವಿಸರ್ಜನೆ ಮಾಡೋಕು ಒಂದೇ ಬಾರಿಗೆ ಅವಕಾಶ ಇತ್ತು. ಪ್ರತಿ ರಾಜಕೀಯ ಕೈದಿಗು ಅದೇ ಸ್ಥಿತಿ.‌ ಹಿಂದುಭೂಷಣ್ ರಾಯ್ ಎಂಬೊಬ್ಬ ಜೈಲಿನ ಕಿರುಕುಳದಿಂದಾಗಿ ಇವರೆದುರಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದ. ನಾನಿ ಗೋಪಾಲ ಎಂಬ ಯುವಕ ಜೈಲಿನಲ್ಲಿ ಒಳ್ಳೆ ಬಟ್ಟೆ ಕೊಡಲಿಲ್ಲ ಅಂತ ನಗ್ನವಾಗಿಯೇ ಓಡಾಡುತ್ತಿದ್ದ. ಇನ್ನೊಬ್ಬ ಜೈಲಿನಲ್ಲೇ ಹುಚ್ಚನಾಗಿ ಬಿಟ್ಟಿದ್ದ.‌ ಇದೆಲ್ಲವನ್ನೂ ಸಾವರ್ಕರ್ ತಮ್ಮ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದಾರೆ. ಕೊನೆಗೆ ಅಲ್ಲಿನ ಸ್ಥಿತಿಯ ಬಗ್ಗೆ ದೂರು ಬರೆದು, ಜೈಲು ಸುಧಾರಣೆ ಆಗೋದಕ್ಕೂ ಸಾವರ್ಕರ್ ಅವರೇ ಕಾರಣರಾಗಿದ್ದರು. 1921 ರಲ್ಲಿ ಕಾಲಪಾನಿ ಶಿಕ್ಷೆಗೊಳಗಾಗಿದ್ದ ಸಾವರ್ಕರ್ ಅಣ್ಣ, ತಮ್ಮನನ್ನು ಅಂಡಮಾನಿಂದ ತಂದು ಸಾಬರ್ಮತಿ ಜೈಲಿಗೆ ಹಾಕಿದ್ರು. ಜನ ವಿರೋಧ ಬಂದಿದ್ದರಿಂದ ಅಂಡಮಾನ್ ಜೈಲನ್ನು ಶಾಶ್ವತವಾಗಿ ಮುಚ್ಚುವ ನಿರ್ಧಾರ ಕೈಗೊಂಡಿದ್ದರು. ಆ ಜೈಲು ಈಗಲೂ ಇದೆ, ನೋಡಿಕೊಂಡು ಬರಬಹುದು.

In Search of the Real Savarkar - Open The Magazine

ರಾಜಕೀಯ ಚಟುವಟಿಕೆಗೆ ನಿಷೇಧ ಹಾಕಿದ್ದರು

ಆದರೆ ಸಾವರ್ಕರ್ ಬಿಡುಗಡೆಗೆ ಷರತ್ತು ವಿಧಿಸಲಾಗಿತ್ತು. ಇನ್ನು ಮುಂದೆ ರಾಜಕೀಯ ಕೈದಿ ಆಗಬಾರದು. ರಾಜಕೀಯ ಚಟುವಟಿಕೆಯಲ್ಲಿ ಪಾಲ್ಗೊಳ್ಳಬಾರದು. ಆ ರೀತಿಯ ಅಪರಾಧವನ್ನೇ ಎಸಗಬಾರದು. ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆ ಬಿಟ್ಟು ಹೊರಗೆ ಹೋಗಬಾರದು ಎಂದು ಷರತ್ತು. 1924ರಲ್ಲಿ ರತ್ಮಗಿರಿ ಜೈಲಲ್ಲಿಯೇ ತಂದು ಹಾಕಿದ್ದರು. 1937 ರ ವರೆಗೂ ರತ್ನಗಿರಿಯಲ್ಲೇ ಇದ್ದರು. ಆನಂತರವೇ ರತ್ನಗಿರಿಯಿಂದ ಬಿಡುಗಡೆ ಆಗಿದ್ದು. ಸುದೀರ್ಘ 27 ವರ್ಷಗಳ ಸೆರೆವಾಸ. ಹೊರಗೆ ಬಂದು ಹಿಂದುಗಳ ಅಸ್ಪೃಶ್ಯತೆ ಹೋಗಲಾಡಿಸಲು ಪತಿತ ಪಾವನ ಮಂದಿರ ಕಟ್ಟಿದ್ದರು. ಮೇಲ್ವರ್ಗದ ವಿರೋಧದ ನಡುವೆಯೂ ಮಂದಿರಕ್ಕೆ ಕೆಳಸ್ತರದ ಮಹಾರ್ ಜಾತಿಯವನನ್ನು ಪೂಜೆ ಮಾಡಲು ನೇಮಿಸಿದ್ದರು. ಗಾಂಧೀಜಿಯನ್ನು ಕೊಂದಿದ್ದ ಗೋಡ್ಸೆ ಹಿಂದು ಮಹಾಸಭಾದವನು ಅನ್ನುವ ನೆಪದಲ್ಲಿ ಸಾವರ್ಕರನ್ನು ಒಂದು ವರ್ಷ ಕಾಲ ಜೈಲಲ್ಲಿ ಇಟ್ಟಿದ್ದರು. ಗೋಡ್ಸೆ ತಾನೇ ಕೊಲೆ ಮಾಡಿದ್ದಾಗಿ ಹೇಳಿದರೂ, ಕಾಂಗ್ರೆಸಿಗರು ಸಾವರ್ಕರನ್ನು ಹಿಂಸಿಸಿದ್ದರು. ಸಾವರ್ಕರ್ ಪ್ರಬಲ ಹಿಂದುತ್ವದ ಪ್ರತಿಪಾದಕರಾಗಿದ್ದರು. ಆದರೆ, ಅವರ ಹಿಂದುತ್ವದ ಪರಿಕಲ್ಪನೆಯೂ ಪ್ರಖರವಾಗಿತ್ತು. ಸಿಂಧು ನದಿಯಿಂದ ದಕ್ಷಿಣಕ್ಕೆ ಯಾರೆಲ್ಲ ನೆಲೆಸಿದ್ದಾರೋ ಅವರೆಲ್ಲ ಹಿಂದುಗಳೇ. ಅದು ಮುಸ್ಲಿಂ, ಕ್ರಿಶ್ಚಿಯನ್, ಜೈನ್ ಹೀಗೆ ಎಲ್ಲರೂ ಸೇರಿ ಭಾರತೀಯರೆಲ್ಲ ಹಿಂದುಗಳು ಅನ್ನುವ ಪರಿಕಲ್ಪನೆ ಕಟ್ಟಿಕೊಟ್ಟಿದ್ದು ಸಾವರ್ಕರ್.

Time to Reset India's National Security Vision on Savarkar-Bose Doctrine

ಸುಭಾಸರಿಗೆ ಸೇನೆ ಕಟ್ಟಲು ಹೇಳಿದ್ದು ಸಾವರ್ಕರ್

‌1940 ರಲ್ಲಿ ಹಿಂದುಗಳು ಸೇನೆಯಲ್ಲಿ ಅತ್ಯಲ್ಪ ಇದ್ದುದನ್ನು ಕಂಡು, ಸೇನೆ ಸೇರಲು ಕರೆ ಕೊಟ್ಟಿದ್ದರು. ನೀವು ಸೇನೆಗೆ ಸೇರದಿದ್ದರೆ ಮುಂದೆ ಅಪಾಯ ಎದುರಾಗಬಹುದು. ಆಗ ಎರಡು ಪರ್ಸೆಂಟ್ ಅಷ್ಟೇ ಹಿಂದುಗಳು ಸೇನೆಯಲ್ಲಿದ್ದರು.‌ ಭಾರತ ವಿಭಜನೆಯಾದಾಗ ಸಾವರ್ಕರ್ ಹೇಳಿದ್ದು, ಸೇನೆಯಲ್ಲಿ ಹಿಂದುಗಳ ಸಂಖ್ಯೆ ಹೆಚ್ಚಿದ್ದುದು ಸಹಕಾರಿಯಾಗಿತ್ತು. 1942ರಲ್ಲಿ ಸುಭಾಸರಿಗೆ ಸೇನೆ ಕಟ್ಟಲು ಹೇಳಿದ್ದೂ ಸಾವರ್ಕರ್. ರಾಸ್ ಬಿಹಾರಿ ಬೋಸ್ ಜೊತೆ ಸೇರಿ ಅಲ್ ಹಿಂದ್ ಫೌಜ್ ಕಟ್ಟಲು ಪ್ರೇರಣೆಯಾಗಿದ್ದು ಸಾವರ್ಕರ್. ದ್ವಿತೀಯ ಮಹಾಯುದ್ಧ ಆಗುತ್ತಿದ್ದಾಗ, ಸುಭಾಸರು ವಿದೇಶಕ್ಕೆ ಹೋಗಿ ಸೇನೆ ಕಟ್ಟಿ ಭಾರತದ ವಿರುದ್ಧ ದಾಳಿ ನಡೆಸುವಂತೆ ಹೇಳಿದ್ದೂ ಸಾವರ್ಕರ್. ನೇರವಾಗಿ ಚಳವಳಿ, ಸತ್ಯಾಗ್ರಹ ನಡೆಸದೇ ಆ ಕಾರ್ಯಕ್ಕೆ ಜನರನ್ನು ಪ್ರೇರೇಪಿಸುತ್ತಿದ್ದುದು ಹೋರಾಟ ಅಲ್ಲವೇ.. ಆದರೆ ಕಾಂಗ್ರೆಸ್ ಸರಕಾರ ಮಾಡುತ್ತಿದ್ದ ಸತತ ಅವಮಾನದಿಂದಾಗಿ ಸಾವರ್ಕರ್ ಕೊನೆ ಕೊನೆಗೆ ಕುಗ್ಗಿ ಹೋಗಿದ್ದರು. ಮುಂಬೈ ಸಮುದ್ರ ತೀರದಲ್ಲಿ ಆತ್ಮಹತ್ಯೆ ಮಾಡುವುದಕ್ಕೂ ಮುಂದಾಗಿದ್ದರು. ಬೆಂಬಲಿಗರು ಬಿಟ್ಟಿರಲಿಲ್ಲ. ಕೊನೆಗೆ ನಿರಂತರ 21 ದಿನಗಳ ಕಾಲ ಅನ್ನ, ನೀರು ಬಿಟ್ಟು ಆತ್ಮಾರ್ಪಣೆ ಮಾಡಿದ್ದರು. ಅಂಥ ಮಹಾನ್ ವ್ಯಕ್ತಿತ್ವದ ಬಗ್ಗೆ ಸ್ವಾತಂತ್ರ್ಯಕ್ಕಾಗಿ ಏನು ಕೊಡುಗೆ ಕೊಟ್ಟಿದ್ದಾರೆ ಎಂದು ಕಾಂಗ್ರೆಸಿಗರು ಕೇಳುತ್ತಿದ್ದಾರಲ್ಲಾ ಇವರಿಗೇ ಏನನ್ನಬೇಕು. ದೇಶದ್ರೋಹಿ ಅಂತಾರಲ್ಲ. ಇವರಿಗೆ ಎಷ್ಟು ದಾರ್ಷ್ಟ್ಯ ಇರಬೇಕು. ಸಾವರ್ಕರ್ ಈ ದೇಶದಲ್ಲಿ ಹುಟ್ಟಬಾರದಿತ್ತು. ಬೇರೆ ದೇಶದಲ್ಲಾಗಿರುತ್ತಿದ್ದರೆ, ಅವರನ್ನು ಆರಾಧಿಸುತ್ತಿದ್ದರು. ನಾವೆಲ್ಲ ಕೃತಘ್ನರು ಅಷ್ಟೇ ಎಂದು ಹೇಳಿದರು ಸೂಲಿಬೆಲೆ. 

The Indian War of Independence 1857 eBook : Veer Savarkar: Amazon.in: Books

1857ರ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಸಾವರ್ಕರ್ 1908ರಲ್ಲಿ ಬರೆದ ಪುಸ್ತಕ ಅಚ್ಚಾಗಿ ಹೊರಬರುವ ಮೊದಲೇ ಬ್ಯಾನ್ ಆಗಿತ್ತು. ಪ್ರಕಟಗೊಳ್ಳುವ ಮೊದಲೇ ಪುಸ್ತಕವನ್ನು ಬ್ಯಾನ್ ಮಾಡಿದ ಉದಾಹರಣೆ ಇದ್ದರೆ ಜಗತ್ತಿನಲ್ಲಿ ಅದೊಂದೇ ಇರಬೇಕು. ಭಾರತದಲ್ಲಿ ಮುದ್ರಣಕ್ಕೆ ನಿಷೇಧ ವಿಧಿಸಿದ್ದರಿಂದ ಲಂಡನ್ನಲ್ಲಿಯೇ ಮುದ್ರಿಸಿ ಹೊರತರಲಾಗಿತ್ತು. ಆನಂತರ ನಾಲ್ಕು ಬಾರಿ ಮರು ಮುದ್ರಣ ಆಗಿತ್ತು. ಬ್ರಿಟಿಷರು ಸಿಪಾಯಿ ದಂಗೆ ಎಂದಷ್ಟೇ ಹೇಳಿದ್ದ ಸಂಗ್ರಾಮವನ್ನು ಮೊದಲ ಸ್ವಾತಂತ್ರ್ಯ ಸಂಗ್ರಾಮವೆಂದು ಕರೆದಿದ್ದು ಸಾವರ್ಕರ್. ಪುಸ್ತಕ ಪ್ರಕಟವಾದ ನಲ್ವತ್ತು ವರ್ಷಗಳ ಬಳಿಕ ಅಂದರೆ, 1942 ರಲ್ಲಿ ಸುಭಾಶ್ಚಂದ್ರ ಬೋಸರು ನಾಲ್ಕನೇ ಬಾರಿಗೆ ಅದೇ ಪುಸ್ತಕವನ್ನು ಮರು ಮುದ್ರಣ ಮಾಡಿ ಹಂಚಿದ್ದರು. ತಮಿಳು ಭಾಷೆಯಲ್ಲೂ ಅದೇ ಪುಸ್ತಕ ಮುದ್ರಿಸಿ ದೇಶಾದ್ಯಂತ ಕ್ರಾಂತಿಯ ಕಿಡಿ ಎಬ್ಬಿಸಿದ್ದು ಸುಭಾಸರು.

While a student of law in London (1906–10), Savarkar helped to instruct a group of Indian revolutionaries in methods of sabotage and assassination that associates of his had apparently learned from expatriate Russian revolutionaries in Paris. During this period he wrote The Indian War of Independence, 1857 (1909), in which he took the view that the Indian Mutiny of 1857 was the first expression of Indian mass rebellion against British colonial rule.