ಪುತ್ತೂರಿನಲ್ಲಿ ಮೂರು ದಿನ ಆರೆಸ್ಸೆಸ್ ದಕ್ಷಿಣ ಪ್ರಾಂತ ಬೈಠಕ್ ; ಪ್ರಮುಖರು ಭಾಗಿ, ಚುನಾವಣೆ ತಯಾರಿ ಬಗ್ಗೆ ಚರ್ಚೆ

26-08-22 01:35 pm       Mangalore Correspondent   ಕರಾವಳಿ

ಒಂದೆಡೆ ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿರುವುದು ಮತ್ತು ಇನ್ನೊಂದೆಡೆ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ ಎದ್ದಿರುವುದು, ಇದರ ನಡುವಲ್ಲೇ ಕರ್ನಾಟಕ ದಕ್ಷಿಣ ಪ್ರಾಂತ ಮಟ್ಟದ ಬೈಠಕ್ ಪುತ್ತೂರಿನಲ್ಲಿ ನಡೆಯಲಿದೆ.

ಮಂಗಳೂರು, ಆಗಸ್ಟ್ 26: ಒಂದೆಡೆ ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿರುವುದು ಮತ್ತು ಇನ್ನೊಂದೆಡೆ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ ಎದ್ದಿರುವುದು, ಇದರ ನಡುವಲ್ಲೇ ಕರ್ನಾಟಕ ದಕ್ಷಿಣ ಪ್ರಾಂತ ಮಟ್ಟದ ಬೈಠಕ್ ಪುತ್ತೂರಿನಲ್ಲಿ ನಡೆಯಲಿದೆ. ಆರೆಸ್ಸೆಸ್ ಪಾಲಿಗೆ ಪುತ್ತೂರು ಶಕ್ತಿಕೇಂದ್ರ ಎಂದೇ ಹೆಸರು ಮಾಡಿರುವ ಪ್ರದೇಶ. ಇದೀಗ ಅರ್ಧ ಕರ್ನಾಟಕದ ಜವಾಬ್ದಾರಿ ಹೊಂದಿರುವ ದಕ್ಷಿಣ ಪ್ರಾಂತ ಮಟ್ಟದ ಆರೆಸ್ಸೆಸ್ ನಾಯಕರು ಬೈಠಕ್ ನಡೆಸಲಿದ್ದು, ಈಗಿನ ಬಿಜೆಪಿ ಮತ್ತು ಚುನಾವಣೆ ತಯಾರಿ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಆರೆಸ್ಸೆಸ್ ದಕ್ಷಿಣ ಪ್ರಾಂತ ಸಹ ಕಾರ್ಯವಾಹ ಪ್ರಕಾಶ್ ಪಿ.ಎಸ್. ಬೈಠಕ್ ಜವಾಬ್ದಾರಿ ಹೊತ್ತಿದ್ದಾರೆ. ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಆಗಸ್ಟ್ 26ರಿಂದ 28ರ ವರೆಗೆ ಬೈಠಕ್ ನಡೆಯಲಿದ್ದು, ಇದಕ್ಕಾಗಿ ಶುಕ್ರವಾರ ಮತ್ತು ಶನಿವಾರ ಕಾಲೇಜಿನ ವಿದ್ಯಾರ್ಥಿಗಳಿಗೆ ರಜೆ ಕೊಡಲಾಗಿದೆ. ಸಮಾವೇಶದಲ್ಲಿ ಆರೆಸ್ಸೆಸ್ ಅಖಿಲ ಭಾರತ ಜವಾಬ್ದಾರಿ ಹೊಂದಿರುವ ಮುಕುಂದ್ ಭಾಗವಹಿಸಲಿದ್ದಾರೆ. ಶಿವಮೊಗ್ಗ, ಬೆಂಗಳೂರು, ಕರಾವಳಿ ಜಿಲ್ಲೆಗಳು, ಮೈಸೂರು, ಕೊಡಗು ಸೇರಿ ಒಟ್ಟು 14 ಜಿಲ್ಲೆಗಳ ವ್ಯಾಪ್ತಿಯ 150ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

How to Win Vidhan Sabha Election Preparation | LEADTECH

ವಿಧಾನಸಭೆ ಚುನಾವಣೆ ಬಗ್ಗೆ ಚರ್ಚೆ  

ಪ್ರಮುಖವಾಗಿ ಮುಂದಿನ ವಿಧಾನಸಭೆ ಚುನಾವಣೆಗೆ ತಯಾರಿ ನಡೆಸುವ ಬಗ್ಗೆ ಚರ್ಚೆಯಾಗಲಿದೆ. ಎಲ್ಲ ಜಿಲ್ಲೆಗಳ ಬಿಜೆಪಿ ಶಾಸಕರು ಮತ್ತು ಸದ್ಯದ ಪರಿಸ್ಥಿತಿ ಬಗ್ಗೆ ನಾಯಕರು ಮಾಹಿತಿ ಪಡೆಯಲಿದ್ದಾರೆ. ಅಲ್ಲದೆ, ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಶಾಸಕ ಕ್ಷೇತ್ರದ ಬಗ್ಗೆಯೂ ಸರ್ವೇ ನಡೆಸುವುದಕ್ಕೆ ಮುಂದಾಗಿದ್ದಾರೆ. ಸರ್ವೇ ಯಾವ ರೀತಿ ಮಾಡಬೇಕು ಎನ್ನುವ ಬಗ್ಗೆ ಬೈಠಕ್ ನಲ್ಲಿ ರೂಪುರೇಷೆ ನಡೆಯಲಿದೆ. ಈ ಹಿಂದೆ ಕರಾವಳಿ ಜಿಲ್ಲೆಗಳ ವಿಧಾನಸಭಾ ಕ್ಷೇತ್ರಗಳಿಗೆ ಆರೆಸ್ಸೆಸ್ ನಾಯಕರೇ ಅಭ್ಯರ್ಥಿಯನ್ನು ನಿರ್ಣಯ ಮಾಡುತ್ತಿದ್ದರು. ಆ ರೀತಿಯ ನಡೆಗೆ ಕಾರ್ಯಕರ್ತರಿಂದ ವಿರೋಧ ಕೇಳಿಬಂದಿರುವುದರಿಂದ ರಾಜ್ಯದ ಎಲ್ಲ ಮತ ಕ್ಷೇತ್ರಗಳಲ್ಲೂ ಸಮೀಕ್ಷೆ ನಡೆಸಲು ಆರೆಸ್ಸೆಸ್ ಮುಂದಾಗಿದೆ ಎನ್ನುವ ಮಾಹಿತಿಗಳಿವೆ. ಈಗಾಗಲೇ ಬಿಜೆಪಿ ವತಿಯಿಂದ ನಡೆದಿರುವ ಸಮೀಕ್ಷೆಗಳಲ್ಲಿ ಹಿನ್ನಡೆ ಇರುವ ಕ್ಷೇತ್ರಗಳ ಬಗ್ಗೆ, ಅಲ್ಲಿನ ವಸ್ತುಸ್ಥಿತಿ ಬಗ್ಗೆ ವಿಚಾರ ವಿಮರ್ಶೆ ನಡೆಯಲಿದೆ.

Rashtriya Swayamsevak Sangh' as a Terrorist Outfit: Evidences from its  Archives : Voice of Margin

2025ಕ್ಕೆ ಆರೆಸ್ಸೆಸ್ ಶತಮಾನೋತ್ಸವ

2025ರ ವೇಳೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಸ್ಥಾಪನೆಗೊಂಡು ನೂರು ವರ್ಷ ಪೂರ್ತಿಯಾಗಲಿದೆ. ನೂರು ವರ್ಷದ ಕಾರ್ಯಕ್ರಮ ನಡೆಸುವುದಕ್ಕೆ ಪೂರ್ವ ತಯಾರಿ ಬಗ್ಗೆ ಸೂಚನೆಗಳನ್ನು ನಾಯಕರು ಕೊಡಲಿದ್ದಾರೆ. ಆರೆಸ್ಸೆಸ್ ಸದ್ಯಕ್ಕೆ ದೇಶಾದ್ಯಂತ 60 ಸಾವಿರ ಗ್ರಾಮಗಳನ್ನು ತಲುಪಿದೆ ಎನ್ನಲಾಗುತ್ತಿದ್ದು, ಮುಂದಿನ ಮೂರು ವರ್ಷದಲ್ಲಿ ಒಟ್ಟು ಇರುವ ಆರು ಲಕ್ಷ ಗ್ರಾಮಗಳಿಗೂ ತಲುಪುವ ಗುರಿ ಇರಿಸಿಕೊಂಡಿದೆ. ಇದಕ್ಕಾಗಿ ಪ್ರತಿ ಗ್ರಾಮದಲ್ಲಿ ಐವರನ್ನು ಸಂಪರ್ಕಿಸಿ, ಅವರ ಮೂಲಕ ಇತರ ಐವರನ್ನು ಸಂಘದ ಚಟುವಟಿಕೆಗೆ ತರುವ ಗುರಿ ಇರಿಸಿಕೊಳ್ಳಲಾಗಿದೆ.

Godhra-like situation will arise if majority loses cool': Karnataka  minister CT Ravi warns Yediyurappa - IBTimes India

BJP will win both constituencies in Karnataka bypolls: Nalin Kumar Kateel |  Deccan Herald

ಕೊನೆಯ ದಿನ ಭಾನುವಾರದ ಬೈಠಕ್ ನಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಭಾಗವಹಿಸಲಿದ್ದಾರೆ. ಮೂರು ದಿನದ ಕಾರ್ಯಕ್ರಮದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್ ಕುಂತೂರು ಉಪಸ್ಥಿತಿ ಇರಲಿದ್ದು, ಪಕ್ಷದ ವತಿಯಿಂದ ಮಾಹಿತಿ ಸಂಗ್ರಹ ಮಾಡಲಿದ್ದಾರೆ. ಚುನಾವಣೆ ಸಮೀಪಿಸುತ್ತಿರುವುದು, ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಗೆ ಕೂಗು ಎದ್ದಿರುವುದು, ಕಾರ್ಯಕರ್ತರ ಆಕ್ರೋಶ, ಇವೆಲ್ಲದರ ಮಧ್ಯೆ ಆರೆಸ್ಸೆಸ್ ನಾಯಕರು ಚಿಂತನ- ಮಂಥನ ಹಮ್ಮಿಕೊಂಡಿದ್ದಾರೆ.

Rss mass meeting at puttur before elections 2023 appear, strengthening of members.