ಬ್ರೇಕಿಂಗ್ ನ್ಯೂಸ್
26-08-22 09:04 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 26: ಆರು ವರ್ಷಗಳಿಂದ ಅಕ್ರಮವಾಗಿ ಕಾರ್ಯಾಚರಿಸುತ್ತಿರುವ ಸುರತ್ಕಲ್ ಟೋಲ್ ಗೇಟನ್ನು ಕೂಡಲೇ ಬಂದ್ ಮಾಡಬೇಕು. ಇತ್ತೀಚೆಗೆ ಹೆದ್ದಾರಿ ಅಧಿಕಾರಿಯೊಬ್ಬರು ಒಂದು ತಿಂಗಳಲ್ಲಿ ಟೋಲ್ ಗೇಟ್ ಬಂದ್ ಮಾಡುತ್ತೇವೆಂದು ಹೇಳಿಕೆ ನೀಡಿದ್ದರು. ಆದರೆ ಈ ಬಗ್ಗೆ ಸಂಸದರು, ಶಾಸಕರು ಮೌನವಾಗಿದ್ದು ನೋಡಿದರೆ ಇದು ಮತ್ತೊಂದು ಸುಳ್ಳೆಂದು ತಿಳಿಯುತ್ತದೆ. ಪ್ರಧಾನಿ ಮೋದಿ ಆಗಮಿಸುತ್ತಿರುವ ಸಂದರ್ಭದಲ್ಲಿ ಜನರ ವಿರೋಧ ಬಾರದಿರಲಿ ಎಂದು ಹೀಗೆ ಹೇಳಿದ್ದಿರಬಹುದು. ಯಾವಾಗ ಬಂದ್ ಮಾಡುತ್ತೀರಿ ಎಂದು ದಿನಾಂಕ ಘೋಷಣೆ ಮಾಡಬೇಕು ಎಂದು ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುರತ್ಕಲ್ ಟೋಲ್ ಗೇಟ್ ತೆರವಿನ ಬಗ್ಗೆ ಹೆದ್ದಾರಿ ಪ್ರಾಧಿಕಾರ ಅಥವಾ ಜಿಲ್ಲಾಡಳಿತ ಸ್ಪಷ್ಟ ದಿನಾಂಕ ಘೋಷಿಸಬೇಕು. ಟೋಲ್ ತೆರವುಗೊಳಿಸುವ ಪ್ರಕ್ರಿಯೆಯನ್ನೂ ಸಾರ್ವಜನಿಕರಿಗೆ ತಿಳಿಸಬೇಕು. ಸೆಪ್ಟಂಬರ್ 13ರಂದು ಸಮಾನ ಮನಸ್ಕ ಸಂಘಟನೆಗಳ ವತಿಯಿಂದ ಟೋಲ್ ಗೇಟ್ ಮುಂದೆ ಸಾಮೂಹಿಕ ಧರಣಿ ನಡೆಯಲಿದೆ. ಶಾಸಕರು, ಸಂಸದರ ವೈಫಲ್ಯವನ್ನು ಖಂಡಿಸಿ ಮತ್ತು ಟೋಲ್ ಗೇಟನ್ನು ಕೂಡಲೇ ಬಂದ್ ಮಾಡುವಂತೆ ಒತ್ತಾಯಿಸಿ ಧರಣಿ ನಡೆಯಲಿದೆ. ಅಂದು ನಿಶ್ಚಿತ ದಿನಾಂಕ ಘೋಷಣೆಯಾಗದೇ ಇದ್ದರೆ, ನಾವೇ ಬೃಹತ್ ಪ್ರತಿಭಟನೆ ಮೂಲಕ ಟೋಲ್ ಗೇಟ್ ಗೆ ಮುತ್ತಿಗೆ ಹಾಕುವ ದಿನಾಂಕ ಪ್ರಕಟಿಸುತ್ತೇವೆ. ಆ ದಿನ ಟೋಲ್ ಗೇಟ್ ತೆರವು ಆಗುವಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಆರು ವರ್ಷಗಳ ಹಿಂದೆ ತಾತ್ಕಾಲಿಕ ಆರು ತಿಂಗಳ ಅವಧಿ ನೆಪದಲ್ಲಿ ಆರಂಭಗೊಂಡಿದ್ದ ಟೋಲ್ ಗೇಟ್ ಬ್ರಹ್ಮರಕೂಟ್ಲು ಹಾಗೂ ಸುರತ್ಕಲ್ ನಲ್ಲಿ ನಡೆದುಕೊಂಡು ಬಂದಿದ್ದು, ಸುಮಾರು 450 ಕೋಟಿಗೂ ಹೆಚ್ಚು ಹಣವನ್ನು ವಸೂಲಿ ಮಾಡಿದ್ದಾರೆ. ರಸ್ತೆಗೆ ಖರ್ಚಾದ 200 ಕೋಟಿಗಿಂತಲೂ ಹೆಚ್ಚು ವಸೂಲಿಯಾಗಿದ್ದರೂ, ಇದೀಗ ಹೆಜಮಾಡಿ ಮತ್ತು ತಲಪಾಡಿ ಟೋಲ್ ನಲ್ಲಿ ವಿಲೀನ ಮಾಡುವ ಪ್ರಸ್ತಾಪ ಇಟ್ಟಿದ್ದಾರೆ. ಇನ್ನು ವಿಲೀನದ ಅಗತ್ಯವಿಲ್ಲ. ಟೋಲ್ ಗೇಟನ್ನೇ ಬಂದ್ ಮಾಡಬೇಕಿದೆ. ನಿರ್ವಹಣೆಗೆ ಮಾತ್ರ ಅವುಗಳಿಂದ ಹಣ ಪಡೆದರೆ ಸಾಕು. ಒಂದು ವೇಳೆ ವಿಲೀನ ನೆಪದಲ್ಲಿ ಹೆಚ್ಚುವರಿ ಹಣ ಪಡೆದಲ್ಲಿ ನಾವು ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದರು.
ಟೋಲ್ ಗೇಟ್ ಅನ್ನುವುದೇ ಮಾಫಿಯಾ
ಇದೇ ವೇಳೆ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಎಂಜಿ ಹೆಗ್ಡೆ, ಟೋಲ್ ಗೇಟ್ ಅನ್ನುವುದೇ ಇಡೀ ದೇಶದಲ್ಲಿ ಜನರ ದುಡ್ಡು ಕೊಳ್ಳೆ ಹೊಡೆಯುವ ದೊಡ್ಡ ಮಾಫಿಯಾ. ಜನರು ವಾಹನ ಖರೀದಿಸುವಾಗಲೇ ರೋಡ್ ಟ್ಯಾಕ್ಸ್, ವಾಹನ ತೆರಿಗೆ ಕಟ್ಟುತ್ತಾರೆ. ಆನಂತರ ರಸ್ತೆ ನಿರ್ಮಾಣಕ್ಕೆಂದು ಜನರದ್ದೇ ದುಡ್ಡು ಕೀಳುತ್ತಾರೆ. ಆದರೆ ಒಮ್ಮೆ ಆರಂಭಗೊಂಡ ಟೋಲ್ ಗೇಟಿಗೆ ನಿರ್ದಿಷ್ಟ ಅವಧಿಯನ್ನು ನಿಗದಿಪಡಿಸುವುದಿಲ್ಲ. ಶಾಶ್ವತವೋ ಎನ್ನುವಂತೆ ನಿರಂತರ ಟೋಲ್ ಪಡೆಯುತ್ತಲೇ ಇರುತ್ತಾರೆ. ರಸ್ತೆ ನಿರ್ಮಾಣದ ದುಡ್ಡು ಬಂದ ಬಳಿಕವೂ ಹಣ ಕೀಳುವುದು ಯಾಕಾಗಿ. ರಸ್ತೆ ನಿರ್ವಹಣೆಗೆ ರಸ್ತೆ ತೆರಿಗೆ ಕಟ್ಟುತ್ತಿದ್ದರೆ, ಅದನ್ನು ಯಾವುದಕ್ಕೆ ಭರಿಸುತ್ತಾರೆ ಎಂದು ಪ್ರಶ್ನೆ ಮಾಡಿದರು.
ನಳಿನ್ ಮಾತ್ರ ಅಲ್ಲ, ಸಾಮೂಹಿಕ ಹೊಣೆ
ಕಳೆದ ಮಾರ್ಚ್ ತಿಂಗಳಲ್ಲಿ 90 ದಿನಗಳಲ್ಲಿ 60 ಕಿಮೀ ಒಳಗಿನ ಟೋಲ್ ಗೇಟನ್ನು ಬಂದ್ ಮಾಡುತ್ತೇವೆಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದರು. ಸಂಸತ್ತಿನಲ್ಲಿ ನೀಡಿರುವ ಹೇಳಿಕೆಯೇ ಹುಸಿಯಾಗಿದ್ದು, ಅದನ್ನು ಜಾರಿಗೊಳಿಸಬೇಕಿದ್ದ ಸಂಸದ, ಶಾಸಕರು ಮೌನವಾಗಿದ್ದಾರೆ. ಈಗ ಮೋದಿ ಆಗಮನದ ಸಂದರ್ಭದಲ್ಲಿ ಸಂಸದ ನಳಿನ್ ವೈಫಲ್ಯದ ಬಗ್ಗೆ ಬಿಜೆಪಿ ಕಾರ್ಯಕರ್ತರೇ ಹೇಳುತ್ತಿದ್ದಾರೆ. ದಕ್ಷಿಣ ಕನ್ನಡ ಸೇರಿದಂತೆ ಇಡೀ ಕರಾವಳಿಯಲ್ಲಿ ಅಭಿವೃದ್ಧಿ ಹೀನವಾಗಿರುವುದು, ಎನ್ಎಂಪಿಟಿ, ಏರ್ಪೋರ್ಟ್ ಅಭಿವೃದ್ಧಿಯಾಗದೇ ಇರುವುದಕ್ಕೆ ಎರಡು ದಶಕದಿಂದ ನಿರಂತರವಾಗಿ ಆಯ್ಕೆಯಾಗುತ್ತಿರುವ ಎರಡು ಜಿಲ್ಲೆಗಳ ಸಂಸದರು ಮತ್ತು ಶಾಸಕರೇ ಕಾರಣ. ಬಿಜೆಪಿ ಪ್ರತಿನಿಧಿಗಳೇ ಆಯ್ಕೆಯಾಗುತ್ತಿದ್ದರೂ, ಯಾವುದೇ ಅಭಿವೃದ್ಧಿ ಆಗಿಲ್ಲ ಎಂದರೆ ಇದಕ್ಕೆ ಸಾಮೂಹಿಕ ಹೊಣೆ ಹೊರಬೇಕು. ಒಬ್ಬನ ತಲೆಗೆ ಕಟ್ಟಿ ಅನಿಷ್ಟಗಳಿಗೆಲ್ಲ ಶನೀಶ್ವರನೇ ಕಾರಣ ಎಂದು ನಳಿನ್ ಮೇಲೆ ಮಾತ್ರ ಗೂಬೆ ಕೂರಿಸುವುದ ಸರಿಯಲ್ಲ ಎಂದು ಮುನೀರ್ ಕಾಟಿಪಳ್ಳ ಹೇಳಿದರು.
State president of the Democratic Youth Federation of India (DYFI) Muneer Katipalla and Toll Gate Virodhi Horata Samiti convener on Friday, August 26 demanded the government to announce the date for removing the Suratkal toll plaza. Addressing a press meet here, Muneer said, "The toll gate has been functioning illegally for the past six years in Surthkal. The National Highway Authority of India (NHAI) official said that the toll gate will be scrapped within a month in a meeting that was held in Zilla Panchayat.
16-05-25 10:04 am
Bangalore Correspondent
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
16-05-25 04:45 pm
HK News Desk
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
16-05-25 10:27 pm
Mangalore Correspondent
Siddaramaiah, Cm Mangalore, BJP black flag: ಸ...
16-05-25 06:05 pm
Mangalore, Dinesh Gundurao: ಇಡಿ ದೇಶದಲ್ಲಿ ಅತೀ...
16-05-25 02:47 pm
Mangalore Cargo Ship, Lakshadweep: ಲಕ್ಷದ್ವೀಪಕ...
16-05-25 10:06 am
Capt Brijesh Chowta, Mangalore Mp, CM Siddara...
15-05-25 08:04 pm
16-05-25 11:06 pm
Mangalore Correspondent
Belagavi Protest, Quran Burnt, Police, Crime:...
16-05-25 09:20 pm
Davanagere Crime, Gold Robbery: ಆನ್ಲೈನ್ ಗೇಮಿಂ...
15-05-25 11:06 pm
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm