ತೊಕ್ಕೊಟ್ಟು ಮೊಸರು ಕುಡಿಕೆ ಉತ್ಸವಕ್ಕೆ ಹುಲಿವೇಷ ; ಗಳಿಕೆ ಹಣವನ್ನ ಕ್ಯಾನ್ಸರ್ ಪೀಡಿತರಿಗೆ ನೀಡಿದ ಯುವಕರು ! 

05-09-22 01:38 pm       Mangalore Correspondent   ಕರಾವಳಿ

ತೊಕ್ಕೊಟ್ಟು ಮೊಸರು ಕುಡಿಕೆ ಉತ್ಸವ ಸಂದರ್ಭ ಹುಲಿ ವೇಷ ಹಾಕಿ ಕುಣಿದ ಯುವಕರು ಅದರಿಂದ ಬಂದ ದೇಣಿಗೆ ಮೊತ್ತವನ್ನ ಕ್ಯಾನ್ಸರ್ ಪೀಡಿತರು ಮತ್ತು ಅಶಕ್ತರಿಗೆ ನೀಡಿ ಮಾದರಿಯಾಗಿದ್ದಾರೆ. 

ಉಳ್ಳಾಲ,ಸೆ.5 : ತೊಕ್ಕೊಟ್ಟು ಮೊಸರು ಕುಡಿಕೆ ಉತ್ಸವ ಸಂದರ್ಭ ಹುಲಿ ವೇಷ ಹಾಕಿ ಕುಣಿದ ಯುವಕರು ಅದರಿಂದ ಬಂದ ದೇಣಿಗೆ ಮೊತ್ತವನ್ನ ಕ್ಯಾನ್ಸರ್ ಪೀಡಿತರು ಮತ್ತು ಅಶಕ್ತರಿಗೆ ನೀಡಿ ಮಾದರಿಯಾಗಿದ್ದಾರೆ. 

ಮೊನ್ನೆ ತೊಕ್ಕೊಟ್ಟಲ್ಲಿ ನಡೆದ 2022ರ ಸಾಲಿನ ಮೊಸರು ಕುಡಿಕೆ ಉತ್ಸವದ ಶೋಭಾಯಾತ್ರೆಯಲ್ಲಿ ಉಳ್ಳಾಲಬೈಲಿನ ವೈದ್ಯನಾಥ ಫ್ರೆಂಡ್ಸ್ (ರಿ) ಹಾಗೂ ಟೀಮ್ ಛತ್ರಪತಿ ತಂಡವು ಹುಲಿ ವೇಷದ ಟ್ಯಾಬ್ಲೋ ಇಳಿಸಿ ಜನರನ್ನ ರಂಜಿಸಿತ್ತು. ಹುಲಿ ವೇಷಧಾರಿಗಳು ತೊಕ್ಕೊಟ್ಟು ಪರಿಸರದ ಮನೆ, ಮಳಿಗೆಗಳ ಅಂಗಳದಲ್ಲಿ ಕುಣಿದು ಅದರಿಂದ ಬಂದ ದೇಣಿಗೆಯಲ್ಲಿ ಉಳಿದ 60,000 ರೂ. ಹಣವನ್ನ ಸಮಾಜದ ದುರ್ಬಲರಿಗೆ ನೀಡಿದ್ದಾರೆ. 

ಹುಲಿ ವೇಷದಿಂದ ಬಂದ ದೇಣಿಗೆ ಹಣವನ್ನ ಸ್ವಂತಕ್ಕೆ ಬಳಸದೆ ಸಮಾಜದ ಅಶಕ್ತರಿಗೆ ನೀಡುವ ಮೂಲಕ ಮಾದರಿಯಾದ ವೈದ್ಯನಾಥ ಫ್ರೆಂಡ್ಸ್ , ಟೀಮ್ ಛತ್ರಪತಿ ತಂಡದ ಸೇವಾ ಕಾರ್ಯವು ಜನರ ಶ್ಲಾಘನೆಗೆ ಪಾತ್ರವಾಗಿದೆ.

Mangalore Thokottu Mosaru kudike collected money donated to cancer patients by Ullalbail Vidyanatha friends.