ತೊಕ್ಕೊಟ್ಟು ; ಕಣಜದ ಹುಳು ದಾಳಿಗೊಳಗಾಗಿದ್ದ ವ್ಯಕ್ತಿ ಸಾವು, ಮಗಳನ್ನ ಶಾಲೆಗೆ ಬಿಡುತ್ತಿದ್ದ ವ್ಯಕ್ತಿಯ ಸ್ಥಿತಿಯೂ ಗಂಭೀರ 

07-09-22 10:40 am       Mangalore Correspondent   ಕರಾವಳಿ

ತೆಂಗಿನ ಕಾಯಿ ಕೀಳಲು ಮರವೇರಿದ್ದ ವೇಳೆ ಕಣಜದ ಹುಳು ದಾಳಿ ನಡೆಸಿದ ಪರಿಣಾಮ ಗಂಭೀರ ಗಾಯಗೊಂಡಿದ್ದ ಉಳ್ಳಾಲ ಬೈಲಿನ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ಮಗಳನ್ನ ಶಾಲೆಗೆ ಬಿಡುತ್ತಿದ್ದ ವ್ಯಕ್ತಿಯೂ ನೊಣಗಳ ದಾಳಿಯಿಂದ ಗಂಭೀರ ಸ್ಥಿತಿಯಲ್ಲಿದ್ದಾರೆ. 

ಉಳ್ಳಾಲ, ಆ.6 : ತೆಂಗಿನ ಕಾಯಿ ಕೀಳಲು ಮರವೇರಿದ್ದ ವೇಳೆ ಕಣಜದ ಹುಳು ದಾಳಿ ನಡೆಸಿದ ಪರಿಣಾಮ ಗಂಭೀರ ಗಾಯಗೊಂಡಿದ್ದ ಉಳ್ಳಾಲ ಬೈಲಿನ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ಮಗಳನ್ನ ಶಾಲೆಗೆ ಬಿಡುತ್ತಿದ್ದ ವ್ಯಕ್ತಿಯೂ ನೊಣಗಳ ದಾಳಿಯಿಂದ ಗಂಭೀರ ಸ್ಥಿತಿಯಲ್ಲಿದ್ದಾರೆ. 

ಉಳ್ಳಾಲ ಬೈಲು ನಿವಾಸಿ ಜಿತನ್ ರೆಸ್ಕಿನ(38) ಮೃತ ದುರ್ದೈವಿ. ಜಿತನ್ ಅವರು ಮಂಗಳವಾರ ಬೆಳಗ್ಗೆ ಉಳ್ಳಾಲ ಬೈಲಿನ ಭವಾನಿ ಎಂಬವರ ಮನೆಯಲ್ಲಿ ಮರವೇರುವ ಯಂತ್ರದ ಮೂಲಕ ಕಾಯಿ ಕೀಳುತ್ತಿದ್ದ ವೇಳೆ ಮರದಲ್ಲಿ ಗೂಡು ಕಟ್ಟಿದ್ದ ನೂರಕ್ಕೂ ಅಧಿಕ ಕಣಜದ ಹುಳುಗಳು ಏಕಾಏಕಿ ದಾಳಿ ನಡೆಸಿ ಕಚ್ಚಿ ಗಾಯಗೊಳಿಸಿದ್ದವು. ಇಷ್ಟಲ್ಲದೆ ರಸ್ತೆಯಲ್ಲಿ ಶಾಲಾ ವಾಹನದ ಕಡೆ ತೆರಳುತ್ತಿದ್ದ ಪ್ರವೀಣ್ ಪೂಜಾರಿ ಮತ್ತು ಅವರ ಮಗಳು ಧೃತಿ(7)ಗೂ ನೊಣಗಳು ಕಚ್ಚಿ ಗಾಯಗೊಳಿಸಿದ್ದವು. 

ಗಂಭೀರ ಗಾಯಗೊಂಡಿದ್ದ ಜಿತನ್ ಅವರನ್ನ ಮಂಗಳೂರಿನ ಫಾಧರ್ ಮುಲ್ಲರ್ಸ್ ಆಸ್ಪತ್ರೆಗೆ‌ ದಾಖಲಿಸಲಾಗಿತ್ತಾದರೂ ಅವರು ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ರಾತ್ರಿ ಸಾವನ್ನಪ್ಪಿದ್ದಾರೆ. ಪ್ರವೀಣ್ ಮತ್ತು ಅವರ ಮಗಳು ಧೃತಿಗೂ ನೊಣಗಳು ಗಾಯಗೊಳಿಸಿದ್ದು ಇಬ್ಬರೂ ತೊಕ್ಕೊಟ್ಟಿನ ಸಹರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಹಿಂತಿರುಗಿದ್ದರು. ಸಂಜೆ ಆಗುತ್ತಿದ್ದಂತೆ ತಲೆಗೆ ನೊಣಗಳಿಂದ ಕಡಿಸಿಕೊಂಡಿದ್ದ ಪ್ರವೀಣ್ ಅವರೂ ವಾಂತಿ ಮಾಡಲು ಆರಂಭಿಸಿದ್ದು ಗಂಭೀರಗೊಂಡ ಅವರನ್ನೂ ಫಾದರ್ ಮುಲ್ಲರ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮೃತ ಜಿತನ್ ಅವರು ಮೂಲತಃ ಮಂಗಳೂರಿನ ನೀರುಮಾರ್ಗದವರು. ಉಳ್ಳಾಲ ಬೈಲಿನ ನಿವಾಸಿ ರೋಹಿತ ಬ್ರಾಕ್ಸ್ ಅವರು ವಿಚ್ಚೇದಿತೆಯಾಗಿದ್ದು ಆಕೆಯನ್ನು ಜಿತನ್ ಅವರು ಮದುವೆಯಾಗಿ ಎರಡನೇ ಜೀವನ ನೀಡಿದ್ದರು. ದಂಪತಿಗೆ ಎರಡು ಗಂಡು ಮಕ್ಕಳಿದ್ದು ಪತ್ನಿ ರೋಹಿತ ಸದ್ಯ 6 ತಿಂಗಳ ಗರ್ಭಿಣಿಯಾಗಿದ್ದಾರೆ. ಗಂಡನ ಸಾವಿನ ಸುದ್ದಿ ಕೇಳಿ ರೋಹಿತ ಆಘಾತಕ್ಕೊಳಗಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕ ಚೇತರಿಸಿದ್ದಾರೆ. ಉಳ್ಳಾಲ ಬೈಲಿನ ಸಣ್ಣ ಬಾಡಿಗೆ ಮನೆಯಲ್ಲಿ ವಾಸವಿದ್ದ ಬಡ ಕುಟುಂಬಕ್ಕೆ ಜಿತನ್ ಅವರೇ ಆಧಾರ ಸ್ತಂಭವಾಗಿದ್ದರು.

ತೊಕ್ಕೊಟ್ಟು ; ಕಣಜದ ಹುಳಗಳ ದಾಳಿ, ತೆಂಗಿನ ಕಾಯಿ ಕೀಳುತ್ತಿದ್ದ ವ್ಯಕ್ತಿ ಗಂಭೀರ, ತಂದೆ, ಮಗಳು ಅಪಾಯದಿಂದ ಪಾರು 

Mangalore Bettle insect attack one in critical condition dies, two in serious condition in Ullal.