ಬ್ರೇಕಿಂಗ್ ನ್ಯೂಸ್
07-09-22 01:40 pm Mangalore Correspondent ಕರಾವಳಿ
ಉಳ್ಳಾಲ, ಆ.7 : ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ನ ಪರಿಶ್ರಮವೇ ಇಂದು ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸಲು ಕಾರಣವೇ ಹೊರತು ಇದ್ದಕ್ಕಿದ್ದಂತೆ ಹರ್ ಘರ್ ತಿರಂಗಾ ನೆನಪು ಮಾಡಿದವರಾಗಲಿ ಅಥವಾ ಜೈಲಿನಿಂದ ಬಿಡುಗಡೆಗೊಳಿಸಿ ಎಂದು ಬ್ರಿಟಿಷರಲ್ಲಿ ಕ್ಷಮೆ ಕೋರಿದ್ದ ಸಾವರ್ಕರ್ ರಂತವರಿಂದಲ್ಲ ಎಂದು ಎಐಸಿಸಿ ಕಾರ್ಯದರ್ಶಿ ರೋಜಿ ಜಾನ್ ಹೇಳಿದ್ದಾರೆ.
ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಪ್ರಯುಕ್ತ ಐಕ್ಯತೆಯ ತಿರಂಗಾ ಯಾತ್ರೆಯ ಅಂಗವಾಗಿ ಉಳ್ಳಾಲ ಹಾಗೂ ಮುಡಿಪು ಬ್ಲಾಕ್ ಕಾಂಗ್ರೆಸ್ ವತಿಯಿಂದ
ತೊಕ್ಕೊಟ್ಟು ಯುನಿಟಿ ಹಾಲ್ ನಿಂದ ಮುಡಿಪು ಜಂಕ್ಷನ್ ತನಕ ನಡೆದ ಕಾಲ್ನಡಿಗೆ ಜಾಥಾದ ಸಮಾರೋಪದಲ್ಲಿ ಅವರು ಮಾತನಾಡಿದರು. ಹರ್ ಘರ್ ಮೇ ತಿರಂಗಾ ಹಾರಿಸಲು ಹೊರಟವರಿಂದ ಈ ದೇಶದ ಸ್ವಾತಂತ್ರ್ಯಕ್ಕೆ ಕೊಟ್ಟ ಕೊಡುಗೆ ಏನು? ಅದ್ಯಾಕೋ ಗೊತ್ತಿಲ್ಲ, ಭಾರತದ ಧ್ವಜ ಹಾರಿಸೋದನ್ನು ವಿರೋಧಿಸುತ್ತಿದ್ದ ಆರ್ ಎಸ್ಎಸ್ ಗೆ ಮನೆ ಮನೆಗಳಲ್ಲಿ ರಾಷ್ಟ್ರ ಧ್ವಜ ಹಾರಿಸಲು ಇದ್ದಕ್ಕಿದ್ದಂತೆ ಜ್ಞಾನೋದಯವಾಗಿದೆ. ಅವರದೇನಿದ್ದರೂ ದೇಶದಾದ್ಯಂತ ಜನರನ್ನು ಧರ್ಮ, ಜಾತಿ, ಮತದ ಆಧಾರದಲ್ಲಿ ವಿಂಗಡಿಸುವ ಕೆಲಸ. ಹಾಗೆಯೇ ಕರ್ನಾಟಕದ ಬಿಜೆಪಿ ಸರಕಾರ 40 ಶೇ. ಕಮಿಷನ್ ಬಗ್ಗೆಯೇ ಚಿಂತಿಸುತ್ತಿದೆ ಎಂದು ಲೇವಡಿ ಮಾಡಿದರು.





ಮೂಗನ್ನೇ ಸೀಳಿದ ಡ್ರೋನ್ ಕ್ಯಾಮರಾ !
ತಿರಂಗಾ ಯಾತ್ರೆ ಪ್ರಯುಕ್ತ ಸಾವಿರಾರು ಸಂಖ್ಯೆಯಲ್ಲಿ ಕೈ ಕಾರ್ಯಕರ್ತರು ತೊಕ್ಕೊಟ್ಟಿನಿಂದ ಮುಡಿಪು ತನಕ ಪಾದಯಾತ್ರೆ ನಡೆಸಿದ್ದಾರೆ. ಪಾದಯಾತ್ರೆಯ ಚಿತ್ರೀಕರಣಕ್ಕೆಂದು ಹಾರಾಡುತ್ತಿದ್ದ ಡ್ರೋನ್ ಗೆ ಕೈ ಕಾರ್ಯಕರ್ತರೋರ್ವರು ಹಿಡಿದಿದ್ದ ಎತ್ತರದ ರಾಷ್ಟ್ರ ಧ್ವಜವು ಡಿಕ್ಕಿ ಹೊಡೆದಿದ್ದು ಕೆಳಕ್ಕೆ ಬಿದ್ದ ಡ್ರೋನ್ ಅಲ್ಲೇ ಇದ್ದ ಕಾಂಗ್ರೆಸ್ ಕಾರ್ಯಕರ್ತ ಮಹಿಳೆಯ ಮೂಗನ್ನೇ ಸೀಳಿದೆ. ಗಾಯಗೊಂಡ ಕಾರ್ಯಕರ್ತೆಗೆ ಚಿಕಿತ್ಸೆ ನೀಡಲಾಗಿದೆ.






ಶಾಸಕ ಯು.ಟಿ ಖಾದರ್, ಕೆಪಿಸಿಸಿ ಉಪಾಧ್ಯಕ್ಷ ಮಧು ಬಂಗಾರಪ್ಪ, ವಿಧಾನ ಪರಿಷತ್ ಸದಸ್ಯ ಡಾ.ಮಂಜುನಾಥ ಭಂಢಾರಿ, ಪ್ರಮುಖರಾದ ಸದಾಶಿವ ಉಳ್ಳಾಲ್, ಪ್ರಶಾಂತ್ ಕಾಜವ, ಅಬ್ದುಲ್ ಜಲೀಲ್ ಮೋಂಟುಗೋಳಿ ಮೊದಲಾದವರು ಉಪಸ್ಥಿತರಿದ್ದರು.
Thokottu Congress MLA UT Khader holds Congress tiranga rally in Mangalore.
01-11-25 09:33 pm
HK News Desk
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
ನಟ ಪ್ರಕಾಶ್ ರಾಜ್, ರಾಜೇಂದ್ರ ಚೆನ್ನಿ, ಜಕರಿಯಾ ಜೋಕಟ...
30-10-25 07:25 pm
01-11-25 07:27 pm
HK News Desk
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
01-11-25 11:05 pm
Mangalore Correspondent
ಉಡುಪಿ - ಕಾಸರಗೋಡು 440 ಕೆವಿ ವಿದ್ಯುತ್ ಲೈನ್ ; ಕೃಷ...
01-11-25 11:02 pm
ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ; ಫೈನಲ್ಸ್ ಮಾತ್ರ ಬ...
01-11-25 10:31 pm
ನೃತ್ಯ ಸಾಧಕಿ ರೆಮೋನಾ, ಶ್ವಾನ ಪ್ರೇಮಿ ರಜನಿ ಶೆಟ್ಟಿ,...
31-10-25 10:47 pm
MP Brijesh Chowta, Mangalore: ದೇಶವ್ಯಾಪಿ ಸರ್ದಾ...
31-10-25 09:23 pm
01-11-25 07:25 pm
HK News Desk
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm
ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿಸಿದ್ದ ವ್ಯಕ...
31-10-25 12:55 pm