ಬ್ರೇಕಿಂಗ್ ನ್ಯೂಸ್

AVBP protest, Mangalore University: ಏಕಾಏಕಿ ಶುಲ್ಕ ಏರಿಕೆ ; ಮಂಗಳೂರು ವಿವಿ ಆಡಳಿತ ಸೌಧಕ್ಕೆ ಮುತ್ತಿಗೆ- ಗಾಜಿನ ಬಾಗಿಲು ಪುಡಿ, ಸರ್ಕಾರದ ಹಣ ಬರ್ತಾ ಇಲ್ಲ, ಏನ್ಮಾಡ್ಲಿ ಎಂದ ಕುಲಪತಿಗೆ ವಿದ್ಯಾರ್ಥಿಗಳ ತರಾಟೆ, ನಿಮ್ಮ ಹೊರೆಯನ್ನು ವಿದ್ಯಾರ್ಥಿಗಳಿಗೆ ಹಾಕ್ತೀರಾ ಎಂದು ಆಕ್ರೋಶ    |    ಭಾರತೀಯ ರೈಲ್ವೇ ಹೊಸ ಇತಿಹಾಸದತ್ತ ಹೆಜ್ಜೆ ; ವಿದ್ಯುತ್, ಡೀಸೆಲ್ ಬಿಡಿ, ಇಂಧನವೇ ಇಲ್ಲದೆ ಓಡಲಿದೆ ರೈಲು ! ಬರೀ ನೀರು ಬಳಸ್ಕೊಂಡೇ ಹೈಡ್ರೋಜನ್ ರೈಲು, ಅತಿ ಕಡಿಮೆ ವೆಚ್ಚ, ಪರಿಸರ ಸ್ನೇಹಿ !    |    Waqf row, Mangalore, CM Siddaramaiah; ವಕ್ಫ್ ಆಸ್ತಿ ಹೆಸರಲ್ಲಿ ಭೂ ಕಬಳಿಕೆಗೆ ಮುಖ್ಯ ಕಾರ್ಯದರ್ಶಿಯಿಂದ್ಲೇ ಆದೇಶ ; ಖಬರಸ್ತಾನಕ್ಕೂ ಸಾವಿರಾರು ಎಕ್ರೆ ಸರ್ಕಾರಿ ಭೂಮಿ ಅತಿಕ್ರಮಣಕ್ಕೆ ಗ್ರೀನ್ ಸಿಗ್ನಲ್, ‘ಗೊತ್ತಿಲ್ಲ, ನೋಟೀಸ್ ನೀಡಿಲ್ಲ’ ಎನ್ನುತ್ತಿದ್ದವರಿಗಿಲ್ಲಿದೆ ಸಾಕ್ಷ್ಯ!!    |   

ನಾರಾಯಣ ಗುರುಗಳ ಜಯಂತಿ ಹೆಸರಲ್ಲಿ ರಾಜಕೀಯ ಸ್ವಾರ್ಥ ಬೇಡ ; ಪದ್ಮರಾಜ್ ಹೇಳಿಕೆ 

07-09-22 02:59 pm       Mangalore Correspondent   ಕರಾವಳಿ

ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯ ರಾಜ್ಯ ಮಟ್ಟದ ಆಚರಣೆ ಬಗ್ಗೆ ಅಪಸ್ವರ ಕೇಳಿ ಬಂದಿದೆ. ಗುರು ಜಯಂತಿಗೆ ಕೆಲವೇ ದಿನಗಳು ಇರುವಾಗ ಏಕಾಏಕಿ ಮಂಗಳೂರಿನಲ್ಲಿ ರಾಜ್ಯ ಮಟ್ಟದ ಕಾರ್ಯಕ್ರಮ ಆಯೋಜನೆ ಮಾಡಿರುವುದು ಗುರುಗಳ ಬಗೆಗಿನ ಗೌರವ ಭಾವವೋ ಅಥವಾ ರಾಜಕೀಯ ಸ್ವಾರ್ಥವೋ ಎಂದು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಪ್ರಶ್ನಿಸಿದ್ದಾರೆ.

ಮಂಗಳೂರು, ಸೆ.7 : ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯ ರಾಜ್ಯ ಮಟ್ಟದ ಆಚರಣೆ ಬಗ್ಗೆ ಅಪಸ್ವರ ಕೇಳಿ ಬಂದಿದೆ. ಗುರು ಜಯಂತಿಗೆ ಕೆಲವೇ ದಿನಗಳು ಇರುವಾಗ ಏಕಾಏಕಿ ಮಂಗಳೂರಿನಲ್ಲಿ ರಾಜ್ಯ ಮಟ್ಟದ ಕಾರ್ಯಕ್ರಮ ಆಯೋಜನೆ ಮಾಡಿರುವುದು ಗುರುಗಳ ಬಗೆಗಿನ ಗೌರವ ಭಾವವೋ ಅಥವಾ ರಾಜಕೀಯ ಸ್ವಾರ್ಥವೋ ಎಂದು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಪ್ರಶ್ನಿಸಿದ್ದಾರೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾರಾಯಣ ಗುರುಗಳ ಅನುಯಾಯಿಗಳು ಬಹುಸಂಖ್ಯೆಯಲ್ಲಿದ್ದು, ಕರಾವಳಿಯೆಲ್ಲೆಡೆ ಬ್ರಹ್ಮಶ್ರೀ ನಾರಾಯಣಗುರು ಮಂದಿರ, ಸಂಘಗಳು ನಿರ್ಮಾಣಗೊಂಡು ಗುರುಗಳನ್ನು ದೇವರಂತೆ ಪೂಜೆ ಮಾಡಿಕೊಂಡು ಬರಲಾಗಿದೆ. ಸೆ.10ರಂದು ಎಲ್ಲ ಮಂದಿರಗಳಲ್ಲಿ ಗುರು ಜಯಂತಿಯನ್ನು ಆಚರಿಸಲು ಎಲ್ಲ ಕಡೆಯೂ ಆಮಂತ್ರಣ ಪತ್ರಿಕೆಗಳ ಹಂಚಿಕೆಯೂ ಆಗಿದೆ. ಈ ಮಧ್ಯೆ ಸರ್ಕಾರದ ವತಿಯಿಂದ ರಾಜ್ಯ ಮಟ್ಟದ ಗುರು ಜಯಂತಿ ಆಚರಣೆಯನ್ನು ಮಂಗಳೂರಿನ ಟಿ.ಎಂ.ಎ ಪೈ ಹಾಲ್‌ನಲ್ಲಿ ನಡೆಸಲು ಏಕಾಏಕಿ ತೀರ್ಮಾನಿಸಿರುವುದು ಎಷ್ಟು ಸರಿ. ಈ ಮೂಲಕ ಮತ್ತೊಮ್ಮೆ ನಾರಾಯಣ ಗುರುಗಳ ಹೆಸರಲ್ಲಿ ಗೊಂದಲ ಸೃಷ್ಟಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ. 

ಅಷ್ಟಕ್ಕೂ ಮಂಗಳೂರಿನಲ್ಲಿ ಆಚರಣೆ ಮಾಡಬೇಕಂತಿದ್ದರೆ‌ ಮೊದಲೇ ನಿರ್ಧಾರ ಮಾಡಬೇಕಿತ್ತು. ತಿಂಗಳ ಮೊದಲೇ ನಿರ್ಧಾರ ತೆಗೆದುಕೊಳ್ಳುತ್ತಿದ್ದರೆ ಜಿಲ್ಲೆಯ ವಿವಿಧ ಮಂದಿರಗಳಲ್ಲಿ ಪೂರಕವಾಗಿ ವ್ಯವಸ್ಥೆಗಳನ್ನು ಮಾಡಬಹುದಿತ್ತು. ಈ ಬಾರಿ ಗೌರವಪೂರ್ವಕವಾಗಿ ವಿಧಾನಸೌಧದಲ್ಲಿ ಆಚರಣೆ ಮಾಡಿ, ಮುಂದಿನ ವರ್ಷ ಮಂಗಳೂರಿನಲ್ಲಿ ನಡೆಸಲು ತೀರ್ಮಾನ ಕೈಗೊಳ್ಳಲಿ. ಅದನ್ನು ಬಿಟ್ಟು ಗುರುಗಳ ಹೆಸರಿನಲ್ಲಿ ರಾಜಕೀಯ ಮಾಡುವುದನ್ನು ಗುರುಗಳ ಅನುಯಾಯಿಗಳು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.

Mangalore Don't make political competition, using Narayan Gurus name slams Padmaraj.