ಸೆ.26ರಿಂದ ಅ.6 - ಮಂಗಳೂರು ದಸರಾ ಉತ್ಸವ ; ಉದ್ಘಾಟನೆಗೆ ಸಿಎಂ ಬೊಮ್ಮಾಯಿಗೆ ಆಹ್ವಾನ  

19-09-22 02:01 pm       Mangalore Correspondent   ಕರಾವಳಿ

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಈ ಬಾರಿ ಮಂಗಳೂರು ದಸರಾ ಮಹೋತ್ಸವ ಸೆ.26ರಿಂದ ಅ.6ರ ವರೆಗೆ ಅತ್ಯಂತ ವೈಭವದಿಂದ ನಡೆಯಲಿದೆ ಎಂದು ಕ್ಷೇತ್ರದ ಅಭಿವೃದ್ಧಿ ರೂವಾರಿ ಬಿ. ಜನಾರ್ದನ ಪೂಜಾರಿ ತಿಳಿಸಿದ್ದಾರೆ.

ಮಂಗಳೂರು, ಸೆ.19: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಈ ಬಾರಿ ಮಂಗಳೂರು ದಸರಾ ಮಹೋತ್ಸವ ಸೆ.26ರಿಂದ ಅ.6ರ ವರೆಗೆ ಅತ್ಯಂತ ವೈಭವದಿಂದ ನಡೆಯಲಿದೆ ಎಂದು ಕ್ಷೇತ್ರದ ಅಭಿವೃದ್ಧಿ ರೂವಾರಿ ಬಿ. ಜನಾರ್ದನ ಪೂಜಾರಿ ತಿಳಿಸಿದ್ದಾರೆ.

ದಸರಾ ಮಹೋತ್ಸವ ಕುರಿತು ಭಾನುವಾರ ವಿವಿಧ ಸಮಿತಿಗಳ ಪೂರ್ವಭಾವಿ ಸಭೆ ನಡೆಸಲಾಗಿದ್ದು ಬಳಿಕ ಮಾಧ್ಯಮಕ್ಕೆ ಮಾಹಿತಿ ನೀಡಿದರು. ದಸರಾ ಉದ್ಘಾಟನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆಹ್ವಾನಿಸಲಾಗುವುದು. ಆಮಂತ್ರಣ ಪತ್ರಿಕೆಯನ್ನು ಅವರಿಗೆ ಕಳುಹಿಸಿ ಕೊಟ್ಟು ಸ್ವತಃ ನಾನೇ ಆಹ್ವಾನಿಸುತ್ತೇನೆ. ಅವರ ಸಮಯ ಗೊತ್ತುಪಡಿಸಿ ಉದ್ಘಾಟನೆ ನಿಗದಿ ಪಡಿಸಲಾಗುವುದು ಎಂದು ಪೂಜಾರಿ ತಿಳಿಸಿದ್ದಾರೆ. 

Karnataka CM Bommai opens up, says leadership change talks 'baseless' |  Deccan Herald

ಮಂಗಳೂರು ದಸರಾಕ್ಕೆ ದೂರದ ಊರುಗಳಿಂದ 10 ಲಕ್ಷಕ್ಕೂ ಅಧಿಕ ಮಂದಿ ಬರಲಿದ್ದಾರೆ. ಅದಕ್ಕೆ ತಕ್ಕಂತೆ ಭಾರೀ ಸಿದ್ಧತೆಯನ್ನೂ ಮಾಡಲಾಗುತ್ತಿದೆ. ಪ್ರತೀ ದಿನ ಧಾರ್ಮಿಕ ಸೇವೆಗಳ ಜತೆಗೆ ಅನ್ನದಾನ ಇರಲಿದೆ. ಭಕ್ತರ ಅನುಕೂಲಕ್ಕಾಗಿ ಈ ಬಾರಿ ಚಂಡಿಕಾ ಯಾಗವನ್ನು ದೇವಸ್ಥಾನದ ಹಿಂಬದಿಯ ಗಾಜಿನ ಮನೆಯಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದರು.

The One City, That Hold The Dignity Of Cultures In Its Names – Mangalore –  Mangalore Meri Jaan

10 Wow Things To Know About Mangalore Dasara and its Key Attractions -  MetroSaga

ಶಾರದೆಗೆ 12 ಕೆಜಿ ತೂಕದ ರಜತಪೀಠ 

ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್‌ ಆರ್‌. ಮಾತನಾಡಿ, ಮಂಗಳೂರು ದಸರಾದ ಶಾರದೆಗೆ ಈ ಬಾರಿ 12 ಲಕ್ಷ ರೂ. ವೆಚ್ಚದಲ್ಲಿ 12 ಕೆ.ಜಿ. ತೂಕದ ರಜತ ಪೀಠವನ್ನು ಕುದ್ರೋಳಿ ಶ್ರೀ ಗೋಕರ್ಣನಾಥ ಸೇವಾದಳ ಮತ್ತು ಭಕ್ತರ ಸೇವೆಯಾಗಿ ಪುತ್ತೂರಿನಲ್ಲಿ ನಿರ್ಮಿಸಲಾಗುತ್ತಿದೆ. ಸೆ. 24ರಂದು ಇದನ್ನು ಕ್ಷೇತ್ರದಲ್ಲಿ ಸಮರ್ಪಣೆ ಮಾಡಲಾಗುವುದು. ಭಕ್ತರೊಬ್ಬರು ಬೆಳ್ಳಿ ವೀಣೆಯನ್ನು ಕಾಣಿಕೆಯಾಗಿ ನೀಡಲಿದ್ದಾರೆ ಎಂದರು. 

ಮೇಯರ್‌ ಜಯಾನಂದ ಅಂಚನ್‌, ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ಎಚ್‌.ಎಸ್‌. ಸಾಯಿರಾಮ್‌, ಉಪಾಧ್ಯಕ್ಷೆ ಊರ್ಮಿಳಾ ರಮೇಶ್‌, ಕಾರ್ಯದರ್ಶಿ ಮಾಧವ ಸುವರ್ಣ, ಟ್ರಸ್ಟಿಗಳಾದ ರವಿಶಂಕರ ಮಿಜಾರು, ಕೆ. ಮಹೇಶ್ಚಂದ್ರ, ಎಂ. ಶೇಖರ್‌ ಪೂಜಾರಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಉಪಾಧ್ಯಕ್ಷ ಬಿ.ಜಿ. ಸುವರ್ಣ, ಸದಸ್ಯರಾದ ಹರಿಕೃಷ್ಣ ಬಂಟ್ವಾಳ, ರಮಾನಾಥ್‌ ಕಾರಂದೂರು, ಶೈಲೇಂದ್ರ ವೈ. ಸುವರ್ಣ, ಎಚ್‌.ಎಸ್‌. ಜಯರಾಜ್‌, ಕೃತಿನ್‌ ಡಿ. ಅಮೀನ್‌, ಚಂದನ್‌ದಾಸ್‌ ಮೊದಲಾದವರು ಸಭೆಯಲ್ಲಿದ್ದರು.

Mangalore Kudroli dasara to be held from September 6th to October 6th, CM Bommai invited for inauguration said B. Janardhana Poojary.