ಬ್ರೇಕಿಂಗ್ ನ್ಯೂಸ್
19-09-22 10:22 pm Mangalore Correspondent ಕರಾವಳಿ
ಮಂಗಳೂರು, ಸೆ.19: ಅದು ರೋಗಿಯ ಅದೃಷ್ಟವೋ, ಆಂಬುಲೆನ್ಸ್ ಚಾಲಕನ ಸಾಹಸವೋ ಗೊತ್ತಿಲ್ಲ. ಮೂಡುಬಿದಿರೆಯಿಂದ ಉತ್ತರ ಪ್ರದೇಶದ ಮೊರದಾಬಾದ್ ಗೆ ಸುದೀರ್ಘ 2700 ಕಿಮೀ ದೂರದ ಹಾದಿ. ಆದರೆ ಕೋಮಾಕ್ಕೆ ತಲುಪಿ ವೆಂಟಿಲೇಟರ್ ನಲ್ಲಿದ್ದ ರೋಗಿಯನ್ನು ಮೂಡುಬಿದ್ರೆಯ ಆಂಬುಲೆನ್ಸ್ ಚಾಲಕನೊಬ್ಬ ನಿರಂತರ 45 ಗಂಟೆಗಳ ವಾಹನ ಚಲಾಯಿಸಿ, ರೋಗಿಯನ್ನು ಜೀವಂತವಾಗಿಯೇ ಅಷ್ಟು ದೂರಕ್ಕೆ ತಲುಪಿಸಿದ ಸಾಹಸ ಮಾಡಿದ್ದಾನೆ.
ಮೂಡುಬಿದ್ರೆಯ ಅನಿಲ್ ರುಬೆನ್ ಮೆಂಡೋನ್ಸ ಈ ಸಾಹಸ ಮಾಡಿದವರು. ಉತ್ತರ ಪ್ರದೇಶದ ಮುರಾದಾಬಾದ್ ನಿವಾಸಿಯಾಗಿರುವ ಮೊಹಮ್ಮದ್ ಹಸನ್ ಎಂಬ ಯುವಕ ಮೂಡಬಿದಿರೆಯ ಅಡಿಕೆ ಗೋಡೌನ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಆಗಸ್ಟ್ ತಿಂಗಳ ಮಧ್ಯದಲ್ಲಿ ಗೋಡೌನಲ್ಲಿ ಕೆಲಸ ಮಾಡುತ್ತಿದ್ದಾಗಲೇ ಬಿದ್ದು ತಲೆಗೆ ಪೆಟ್ಟಾಗಿ ಕೋಮಾಕ್ಕೆ ಜಾರಿದ್ದರು. ಯುವಕನಿಗೆ ಆಗಸ್ಟ್ 25ರಿಂದ ಸೆ.9ರ ವರೆಗೆ ಮೂಡುಬಿದ್ರೆಯ ಆಳ್ವಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು ಕೋಮಾಕ್ಕೆ ಜಾರಿದ ವ್ಯಕ್ತಿಗೆ ಪ್ರಜ್ಞೆ ಬಂದಿರಲಿಲ್ಲ. ಆನಂತರ, ಊರಿಗೆ ತಲುಪಿಸುವಂತೆ ಕುಟುಂಬಸ್ಥರು ಕೇಳಿಕೊಂಡಿದ್ದರಿಂದ ಗೋಡೌನ್ ಮಾಲೀಕರು ವಿಮಾನದಲ್ಲಿ ಒಯ್ಯಲು ವ್ಯವಸ್ಥೆ ಮಾಡಿದ್ದರು.
ಆದರೆ ಕೋಮಾದಲ್ಲಿದ್ದ ವ್ಯಕ್ತಿಯನ್ನು ವಿಮಾನದಲ್ಲಿ ಒಯ್ಯಬೇಕಿದ್ದರೆ, ಜೊತೆಗೆ ವೈದ್ಯರೂ ಇರಬೇಕಿತ್ತು. ಇಲ್ಲದಿದ್ದರೆ ಅನುಮತಿ ನೀಡಲಾಗದು ಎಂದು ಪ್ರತಿಕ್ರಿಯೆ ಬಂದಿತ್ತು. ಹೀಗಾಗಿ ಹಸನ್ ಕುಟುಂಬಸ್ಥರು ಆಂಬುಲೆನ್ಸ್ ನಲ್ಲಿಯೇ ಕರೆದೊಯ್ಯಲು ಮುಂದಾಗಿದ್ದರು. ಆದರೆ ಕೋಮಾದಲ್ಲಿರುವ ರೋಗಿಯನ್ನು ವೈದ್ಯರಿಲ್ಲದೆ ಒಯ್ಯುವುದು ತುಂಬ ರಿಸ್ಕ್ ಆಗಿತ್ತು. ಕುಟುಂಬಸ್ಥರು ಅಪಾಯದ ನಡುವೆಯೂ ಆಂಬುಲೆನ್ಸ್ ಪ್ರಯಾಣಕ್ಕೆ ಮುಂದಾಗಿದ್ದರು. ಈ ನಡುವೆ, ಮೂಡುಬಿದ್ರೆಯ ಆಂಬುಲೆನ್ಸ್ ಚಾಲಕರಾದ ಅನಿಲ್ ರುಬೇನ್ ಮೆಂಡೊನ್ಸಾ ಭಗೀರಥ ಪ್ರಯತ್ನಕ್ಕೆ ಸಾಥ್ ನೀಡಿದ್ದರು. ಸ್ನೇಹಿತ ಅಶ್ವಥ್ ಜೊತೆಗೆ ಆಂಬುಲೆನ್ಸ್ ಸ್ಟಾರ್ಟ್ ಮಾಡಿದ್ದ ಅನಿಲ್ ಮೆಂಡೋನ್ಸ ಎಲ್ಲಿಯೂ ನಿಲ್ಲಿಸಲೇ ಇಲ್ಲ. ನಿರಂತರ ಚಾಲನೆ, ನಡು ನಡುವೆ ಆಯಾಸಗೊಂಡಾಗ ಅಶ್ವಥ್ ಡ್ರೈವಿಂಗ್ ಮಾಡುತ್ತಿದ್ದರು.
ಮಧ್ಯದಲ್ಲಿ ಹತ್ತು ನಿಮಿಷ ಡೀಸೆಲ್ ತುಂಬಿಸಲು ನಿಲ್ಲಿಸಿದ್ದು ಬಿಟ್ಟರೆ 45 ಗಂಟೆಗಳ ಪ್ರಯಾಣದಲ್ಲಿ ನಿಲ್ಲಿಸಿದ್ದೇ ಇಲ್ಲವಂತೆ. ಸೆ.10ರಂದು ಮೂಡುಬಿದಿರೆಯಿಂದ ಹೊರಟಿದ್ದ ಆಂಬುಲೆನ್ಸ್ ಸೆ.12ರಂದು ಬೆಳಗ್ಗೆ 10 ಗಂಟೆಗೆ ಮೊರದಾಬಾದ್ ತಲುಪಿತ್ತು. ಬರೋಬ್ಬರಿ 2700 ಕಿಲೋ ಮೀಟರ್ ದೂರವನ್ನು ಎರಡು ದಿನದಲ್ಲಿ ಕ್ರಮಿಸಿದ್ದರು. ಮೊರಾದಬಾದ್ ತಲುಪಿಸಿದ್ದಲ್ಲದೆ, ರೋಗಿಯನ್ನು ಇದ್ದ ರೀತಿಯಲ್ಲೇ ಅಲ್ಲಿನ ಆಸ್ಪತ್ರೆಗೆ ದಾಖಲಿಸಲು ನೆರವಾಗಿದ್ದಾರೆ. ಆಂಬುಲೆನ್ಸ್ ಚಾಲಕರ ಅಪರಿಮಿತ ಸಾಹಸಕ್ಕೆ ಹಸನ್ ಕುಟುಂಬಸ್ಥರು ಕೈಜೋಡಿಸಿ ಧನ್ಯವಾದ ಹೇಳಿದ್ದರೆ, ಚಾಲಕರ ಸಾಧನೆ ಸಮಾಜದಲ್ಲಿ ಶ್ಲಾಘನೆಗೂ ಕಾರಣವಾಗಿದೆ.
Public is widely appreciating the dare devil act of ambulance owner cum driver Anil Rueben Mendonca of Moodbidri, who took a labourer of Uttar Pradesh in coma after he fell from the roof top of a arecanut godown, to Moradabad which is at a distance of 2700 km from the city within 45 hours.Mehendi Hassan is a labourer from Uttar Pradesh, who used to work at the arecanut godown centre at Moodbidri. During work, he fell down accidentally from the roof and went into coma.
17-05-25 01:44 pm
Bangalore Correspondent
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
18-05-25 08:23 pm
HK News Desk
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
ಡೊನಾಲ್ಡ್ ಟ್ರಂಪ್ ಟೀಕಿಸಿದ್ದ ಪೋಸ್ಟ್ ಡಿಲೀಟ್ ಮಾಡಿದ...
16-05-25 04:45 pm
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
18-05-25 12:42 pm
Mangalore Correspondent
Ullal, U T Khader, Mangalore: ಎರಡು ವರ್ಷವಾದರೂ...
17-05-25 10:09 pm
Mangalore Balmatta Accident, Bus, Video: ನಿಂತ...
17-05-25 08:52 pm
Sakleshpur Subrahmanya Railway Electrificatio...
17-05-25 01:01 pm
CM Siddaramaiah, New Dc Office Mangalore Inau...
16-05-25 10:27 pm
18-05-25 07:45 pm
Mangaluru HK Staff
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm
Mangalore Stabbing, Panemangalore, Crime, Att...
16-05-25 11:06 pm
Belagavi Protest, Quran Burnt, Police, Crime:...
16-05-25 09:20 pm