ಬೊಮ್ಮಾಯಿ, ಸುನಿಲ್ ಬಿಲ್ಲವ ಸಮುದಾಯಕ್ಕೆ ಅನ್ಯಾಯ, ವಂಚನೆ ಮಾಡಿದ್ದಾರೆ, ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ ; ಪ್ರಣವಾನಂದ ಸ್ವಾಮೀಜಿ ಗುಡುಗು 

20-09-22 01:51 pm       Mangalore Correspondent   ಕರಾವಳಿ

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ಇಂಧನ ಸಚಿವ ಸುನಿಲ್ ಕುಮಾರ್ ಈಡಿಗ- ಬಿಲ್ಲವ ಸಮುದಾಯದ ದಾರಿ ತಪ್ಪಿಸುತ್ತಿದ್ದಾರೆ. ಸಮುದಾಯಕ್ಕೆ ಅನ್ಯಾಯ, ವಂಚನೆ ಮಾಡಿದ್ದಾರೆ.

ಮಂಗಳೂರು, ಸೆ.20: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ಇಂಧನ ಸಚಿವ ಸುನಿಲ್ ಕುಮಾರ್ ಈಡಿಗ- ಬಿಲ್ಲವ ಸಮುದಾಯದ ದಾರಿ ತಪ್ಪಿಸುತ್ತಿದ್ದಾರೆ. ಸಮುದಾಯಕ್ಕೆ ಅನ್ಯಾಯ, ವಂಚನೆ ಮಾಡಿದ್ದಾರೆ. ಮುಖ್ಯಮಂತ್ರಿಗೆ ತಾಕತ್ತು ದಮ್ಮು ಇದ್ದರೆ ನಿಗಮ ಮಂಡಳಿ ಯಾಕೆ ಮಾಡಿಲ್ಲ ಎಂದು ಸ್ಪಷ್ಟನೆ ಕೊಡಲಿ ಎಂದು ಕಲಬುರ್ಗಿಯ ನಾರಾಯಣ ಗುರು ಶಕ್ತಿಪೀಠದ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಸವಾಲು ಹಾಕಿದ್ದಾರೆ. 

ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಸ್ವಾಮೀಜಿ, ನಿಗಮ‌ ಮಂಡಳಿ ಘೋಷಣೆ ಮಾಡಿ ಎಂದು ನಾವು ಬೇಡಿಕೆ ಇಟ್ಟಿದ್ದೆವು. ಬೆಂಗಳೂರಿನಲ್ಲಿ ಈಡಿಗ ಸಮುದಾಯದ ಕಾರ್ಯಕ್ರಮದಲ್ಲಿ 5 ಕೋಟಿ ರೂ. ಸಮುದಾಯ ಭವನ ನಿರ್ಮಾಣಕ್ಕೆ‌ ಕೊಡುತ್ತೇವೆ ಎಂದು ಹೇಳಿದ್ದಾರೆ. ಮುಖ್ಯಮಂತ್ರಿ ಹಾಗೂ ಸುನಿಲ್ ಕುಮಾರ್ ಷಡ್ಯಂತ್ರ ಮಾಡಿದ್ದಾರೆ. ಪುನೀತ್ ರಾಜ್ ಕುಮಾರ್ ಜನ್ಮದಿನವನ್ನು ಸ್ಪೂರ್ತಿ ದಿನ‌ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಆದರೆ ಈಡಿಗ- ಬಿಲ್ಲವರ ಪರವಾಗಿ ನಿಗಮ ಘೋಷಣೆ ಮಾಡಲು ಸಾಧ್ಯವಿಲ್ಲ ಎಂದು ಸಿಎಂ ಹೇಳಿದ್ದಾರೆ. ಈ ಮೂಲಕ ಬಿಲ್ಲವ ಈಡಿಗ ಸಮುದಾಯಕ್ಕೆ ಅನ್ಯಾಯ, ವಂಚನೆ ಮಾಡಿದ್ದಾರೆ ಎಂದರು. 

Karkala MLA Sunil Kumar clarifies on kickback allegations in cement deal -  Daijiworld.com

14 ಜಾತಿಗಳಿಗೆ ಈಗಾಗಲೇ ನಿಗಮ‌ ಮಂಡಳಿ ಘೋಷಣೆ ಮಾಡಿದ್ದಾರೆ.‌ ಯಾಕೆ ಇವರಿಗೆ ಇಡೀ ರಾಜ್ಯದಲ್ಲಿ ಇರುವ ಈಡಿಗ- ಬಿಲ್ಲವ ಸಮುದಾಯಕ್ಕೆ ನಿಗಮ ಮಾಡಕ್ಕಾಗಿಲ್ಲ. ಮುಖ್ಯಮಂತ್ರಿಗಳಿಗೆ ತಾಕತ್ತು ದಮ್ಮು ಇದ್ದರೆ ನಿಗಮ ಮಂಡಳಿ ಬಗ್ಗೆ ಸ್ಪಷ್ಟನೆ ಕೊಡಿ. ಸಚಿವ ಸುನಿಲ್ ಕುಮಾರ್ ತಮ್ಮ ಸ್ವಾರ್ಥ, ರಾಜಕೀಯ ಲಾಭಕ್ಕಾಗಿ ಬಿಲ್ಲವ ಸಮುದಾಯವನ್ನು ಬಲಿ ಕೊಡುತ್ತಿದ್ದಾರೆ. ಮುಂದಿನ‌ ವಿಧಾನಸಭೆ ಚುನಾವಣೆಯಲ್ಲಿ ಈ ರಾಜಕೀಯ ಪಕ್ಷಕ್ಕೆ ತಕ್ಕ ಪಾಠ ಕಲಿಸುತ್ತೇವೆ ಎಂದು ಹೇಳಿದರು.‌

In I-Day speech, Karnataka CM Bommai unveils job scheme for kin of martyred  soldiers - The Indian Express - KERDL Info

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ಪಕ್ಷಗಳು ಬಿಲ್ಲವ ಸಮುದಾಯಕ್ಕೆ ತಲಾ ಮೂರು ಸೀಟು ಕೊಡಬೇಕು.‌ 5 ಲಕ್ಷದ 35 ಸಾವಿರ ಬಿಲ್ಲವ ಮತಗಳು ಸಂಸತ್ ಕ್ಷೇತ್ರದಲ್ಲಿ ಇದೆ.‌ ಕೊಲೆಯಾದ ಪ್ರವೀಣ್ ಧರ್ಮಪತ್ನಿಗೆ ಮುಖ್ಯಮಂತ್ರಿ ಕಚೇರಿಯಲ್ಲಿ ಕೆಲಸ ಕೊಡುವುದಾಗಿ ಹೇಳಿದ್ದಾರೆ. ಆದರೆ ಇದು ತಾತ್ಕಾಲಿಕ ಕೆಲಸ. ಮುಖ್ಯಮಂತ್ರಿ ನಾಳೆ ಮನೆಗೆ ಹೋದ್ರೆ, ಆನಂತರ ಕೆಲಸ ಇರೋದಿಲ್ಲ. ಮುಖ್ಯಮಂತ್ರಿ ಗೆ ತಾಕತ್ತು ಶಕ್ತಿ ಇದ್ದರೆ ಖಾಯಂ ಕೆಲಸ ನೀಡಲಿ ಎಂದು ಪ್ರಣವಾನಂದ ಹೇಳಿದರು. 

Social organisation demands corporation for Billavas | Bengaluru -  Hindustan Times

2023ರಲ್ಲಿ ಬಿಲ್ಲವ ಮುಖ್ಯಮಂತ್ರಿ ಆಗಲಿದ್ದಾರೆ ! 

ಬಸ್ ನಿಲ್ದಾಣ, ಮೆಟ್ರೋ, ಬಿಲ್ಡಿಂಗ್ ಗೆ ನಾರಾಯಣ ಗುರುಗಳ ಹೆಸರನ್ನು ಇಡುವುದು ಬೇಡ. ರಾಜ್ಯ ಆಳುವವರಿಗೆ ನಿಜವಾಗಿ ಗುರುಗಳ ಮೇಲೆ ಭಕ್ತಿ ಇದ್ದರೆ ವಿಧಾನಸಭೆಯ ಹೊರಗಡೆ ಗುರುಗಳ ಮೂರ್ತಿ ಪ್ರತಿಷ್ಠಾಪಿಸಿ. ಬಿಜೆಪಿ ಸರ್ಕಾರದಲ್ಲಿರುವ ಬ್ರಾಹ್ಮಣ ಶಾಹಿ ನೇತಾರರ ದಾಸರಾಗಿ ನಮ್ಮ‌ ಮಂತ್ರಿಗಳು ಕೆಲಸ ಮಾಡುತ್ತಿದ್ದಾರೆ. ಇವರಿಗೆ ಬಿಲ್ಲವ ಸಮುದಾಯದ ವೋಟು ಬೇಕು, ಬಿಲ್ಲವರು ಬೇಡ. ಇದಕ್ಕೆ ಅಂತ್ಯ ಹಾಡದಿದ್ದರೆ ವಿಧಾನಸಭೆಗೆ ಪಾದಯಾತ್ರೆ ನಡೆಸುತ್ತೇವೆ. 2023 ರ ಚುನಾವಣೆಯಲ್ಲಿ ಬಿಲ್ಲವ, ಈಡಿಗ ಸಮುದಾಯದ ಮುಖ್ಯಮಂತ್ರಿ ಆಡಳಿತಕ್ಕೆ ಬರುತ್ತಾರೆ ಎಂದು ಪ್ರಣವಾನಂದ ಸ್ವಾಮೀಜಿ ಹೇಳಿದರು.

Chief Minister Basavaraj Bommai and Power Minister Sunil Kumar have cheated the Billava community. They have done injustice to us slams Pranavananda Swamiji in Mangalore.