ಬ್ರೇಕಿಂಗ್ ನ್ಯೂಸ್
21-09-22 10:47 pm Mangalore Correspondent ಕರಾವಳಿ
ಮಂಗಳೂರು, ಸೆ.21: ಶಿವಮೊಗ್ಗದಲ್ಲಿ ಬಂಧಿತನಾದ ಶಂಕಿತ ಉಗ್ರ ಮಾಝ್ ಮುನೀರ್ ಅಹ್ಮದ್ ನನ್ನು ಡಿವೈಎಸ್ಪಿ ನೇತೃತ್ವದ ತಂಡ ಮಂಗಳೂರಿಗೆ ಕರೆತಂದಿದ್ದು, ಬಂಟ್ವಾಳ ತಾಲೂಕಿನ ವಿವಿಧ ಪ್ರದೇಶಗಳಿಗೆ ಕರೆದೊಯ್ದು ಸ್ಥಳ ಮಹಜರು ನಡೆಸಿದೆ. ತೀರ್ಥಹಳ್ಳಿ ಡಿವೈಎಸ್ಪಿ ಶಾಂತವೀರಯ್ಯ ಹಾಗೂ ಆಗುಂಬೆ ಪಿಎಸ್ಐ ಶಿವಕುಮಾರ್ ನೇತೃತ್ವದ ತಂಡ ಮಾಝ್ ಮುನೀರನ್ನು ಕರೆತಂದು ವಿವಿಧ ಕಡೆಗಳಿಗೆ ಕರೆದೊಯ್ದು ಶೋಧ ಕಾರ್ಯ ನಡೆಸಿದೆ.
ಬುಧವಾರ ಮಧ್ಯಾಹ್ನ ಬಂಟ್ವಾಳ ತಾಲೂಕಿನ ನಾವುರ ಗ್ರಾಮದ ಸುಲ್ತಾನ್ ಕಟ್ಟೆ ಎಂಬಲ್ಲಿಗೆ ಕರೆದೊಯ್ದು ಅಲ್ಲಿ ಸ್ಥಳ ಪರಿಶೀಲನೆ ನಡೆಸಲಾಗಿದೆ. ಮಹಜರು ವೇಳೆ ಡಾಗ್ ಸ್ಕ್ವಾಡ್ ಕೂಡ ಜೊತೆಗಿದ್ದು ಅಲ್ಲಿ ಹುದುಗಿಸಿಟ್ಟಿದ್ದಾರೆ ಎನ್ನಲಾದ ಸ್ಫೋಟಕ ವಸ್ತುಗಳ ಬಗ್ಗೆ ಹುಡುಕಾಟ ನಡೆಸಲಾಗಿದೆ. ನಾವುರ ಸಮೀಪದ ಅಗ್ರಹಾರ ಎಂಬಲ್ಲಿಯೂ ಪೊಲೀಸರು ಆರೋಪಿಯನ್ನು ಕರೆದೊಯ್ದು ಶೋಧ ನಡೆಸಿದ್ದಾರೆ. ಬಂಟ್ವಾಳ, ಮಂಗಳೂರು ತಾಲೂಕಿನ ವಿವಿಧ ಕಡೆಗಳಿಗೆ ಪೊಲೀಸರು ಆರೋಪಿ ಮಾಝ್ ನನ್ನು ಕರೆದೊಯ್ದಿದ್ದು, ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಬಂಟ್ವಾಳದ ಹಲವೆಡೆ ನಿರ್ಜನ ಪ್ರದೇಶದಲ್ಲಿ ಬಾಂಬ್ ಸ್ಫೋಟದ ಪ್ರಯೋಗ, ತರಬೇತಿ ನಡೆಸಿರುವ ಬಗ್ಗೆ ಮಾಝ್ ಮುನೀರ್ ಅಹ್ಮದ್ ತನಿಖೆಯ ವೇಳೆ ಬಾಯ್ಬಿಟ್ಟಿದ್ದಾನೆ. ಹೀಗಾಗಿ ಬಾಂಬ್ ಸ್ಕ್ವಾಡ್ ಹಾಗೂ ಡಾಗ್ ಸ್ಕ್ವಾಡನ್ನು ಜೊತೆಗೆ ಕರೆದುಕೊಂಡೇ ಬಂದಿರುವ ಪೊಲೀಸರು ವಿವಿಧ ಕಡೆಗಳಿಗೆ ಕರೆದೊಯ್ದು ಸ್ಫೋಟಕ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ. ಕಾರ್ಯಾಚರಣೆಯಲ್ಲಿ ಹಲವು ಮಹತ್ವದ ಪುರಾವೆಗಳು ಲಭಿಸಿವೆ ಎನ್ನಲಾಗುತ್ತಿದೆ.

ಮಾಝ್ ಮುನೀರ್ ಅಹ್ಮದ್ ಮಂಗಳೂರಿನಲ್ಲಿದ್ದರೆ, ಸಯ್ಯದ್ ಯಾಸೀನ್ ಶಿವಮೊಗ್ಗದಲ್ಲಿಯೇ ಇದ್ದ. ಇವರಿಬ್ಬರು ಕೂಡ ಒಂದೇ ರೀತಿಯಲ್ಲಿ ಕೆಲಸ ಮಾಡುತ್ತಿದ್ದರು. ಯಾಸೀನ್ ತುಂಗಭದ್ರಾ ನದಿಯ ಆಸುಪಾಸಿನಲ್ಲಿ ನಿರ್ಜನ ಪ್ರದೇಶಗಳಲ್ಲಿ ಬಾಂಬ್ ಹುದುಗಿಸಿಟ್ಟು ಸ್ಫೋಟದ ರಿಹರ್ಸಲ್ ನಡೆಸಿದ್ದಾನೆ ಎನ್ನುವ ಮಾಹಿತಿಗಳಿವೆ. ಅಲ್ಲದೆ, ಆಧುನಿಕ ಮಾದರಿಯಲ್ಲಿ ಬಾಂಬ್ ತಯಾರಿಸಲು ನಿರ್ಜನ ಕಾಡು ಪ್ರದೇಶದಲ್ಲಿದ್ದುಕೊಂಡು ಇವರು ಪ್ರಯೋಗ ನಡೆಸುತ್ತಿದ್ದರು ಎನ್ನುವ ಬಗ್ಗೆ ಮಾಹಿತಿ ಇರುವುದರಿಂದ ಪೊಲೀಸರು ಇಬ್ಬರು ಆರೋಪಿಗಳನ್ನು ವಿವಿಧ ಕಡೆಗಳಿಗೆ ಕರೆದೊಯ್ದು ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ, ಇವರು ನೀಡಿರುವ ಮಾಹಿತಿ ಆಧರಿಸಿ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
Shivamogga Terror suspect, accused brought to Bantwal in Mangalore got spot Mahajar.
05-09-26 04:53 pm
HK News Staffer
400 ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ ; ಪ್ರತಿ ಹ...
02-09-26 05:06 pm
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
ADGP Chandrashekhar, Seemanth Kumar Singh: ಅಧ...
30-08-26 07:31 pm
05-09-26 11:55 am
HK News Staffer
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
06-09-26 01:14 pm
HK News Desk
ಸುಬ್ರಹ್ಮಣ್ಯ ಬಳಿ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್...
06-09-26 12:47 pm
ದಕ್ಷಿಣ ಕನ್ನಡ- ಚಿಕ್ಕಮಗಳೂರು ಸಂಪರ್ಕ ಕೊಂಡಿ ಚಾರ್ಮಾ...
05-09-26 04:58 pm
ಬೆಂಗಳೂರು-ಮಂಗಳೂರು ವಂದೇ ಭಾರತ್ಗೆ ಮತ್ತೊಂದು ಟೆಸ್ಟ...
05-09-26 11:59 am
ಕೆಆರ್ ಐಡಿಎಲ್ ಕಮಿಷನ್ ಆರೋಪದಿಂದ ಮಾನಸಿಕ ಕಿರುಕುಳ,...
04-09-26 04:44 pm
05-09-26 08:58 pm
HK News Staffer
ಶಿವಮೊಗ್ಗ ; ಕಾರಿನಲ್ಲಿ ಜಿಂಕೆ ಮಾಂಸ ಮಾರಾಟ ಯತ್ನ ;...
05-09-26 04:55 pm
ಬಡ್ಡಿ ಕಟ್ಟದಿದ್ದಕ್ಕೆ ಮಹಿಳೆಯನ್ನು ಅಪಹರಿಸಿ ಹಲ್ಲೆ...
05-09-26 03:08 pm
ಅಷ್ಟಮಿ ಭಜನಾ ಕಾರ್ಯಕ್ರಮದಲ್ಲಿ ಹೃದಯಾಘಾತ ; ತೊಕ್ಕೂರ...
05-09-26 02:04 pm
ತ್ರಿಶೂರ್ ನಲ್ಲಿ ಗುರುವಾಯೂರು ದರ್ಶನ ಮುಗಿಸಿ ಹೊರಟಿದ...
05-09-26 01:13 pm