ಬ್ರೇಕಿಂಗ್ ನ್ಯೂಸ್
24-09-22 09:00 pm Mangalore Correspondent ಕರಾವಳಿ
ಮಂಗಳೂರು, ಸೆ.24: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ 32ನೇ ವರ್ಷದ ಮಂಗಳೂರು ದಸರಾ ಉತ್ಸವ ಈ ಬಾರಿ ಸೆ.26ರಿಂದ ಮೊದಲ್ಗೊಂಡು ಅ.6ರ ವರೆಗೆ ನಡೆಯಲಿದ್ದು, 26ರಂದು ಕ್ಷೇತ್ರದ ಅಭಿವೃದ್ಧಿಯ ರೂವಾರಿ ಮಾಜಿ ಸಚಿವ ಜನಾರ್ದನ ಪೂಜಾರಿ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ಕುದ್ರೋಳಿ ಕ್ಷೇತ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕ್ಷೇತ್ರ ಸಮಿತಿ ಅಧ್ಯಕ್ಷ ಎಚ್.ಎಸ್. ಸಾಯಿರಾಂ, ಎಂದಿನಂತೆ ಈ ಬಾರಿಯೂ ಅದ್ದೂರಿಯಾಗಿ ಉತ್ಸವ ನಡೆಯಲಿದೆ. ಕಳೆದ ಎರಡು ವರ್ಷಗಳಲ್ಲಿ ಕೊರೊನಾ ಕಾರಣದಿಂದ ವೈಭವದ ದಸರಾಕ್ಕೆ ಕಡಿವಾಣ ಹಾಕಲಾಗಿತ್ತು. ಮೈಸೂರು ದಸರಾ ಯಾವ ರೀತಿ ವೈಭವದಿಂದ ನಡೆಯುವುದೋ ಅದೇ ಮಾದರಿಯಲ್ಲಿ ಕರಾವಳಿ ನಗರಿಯಲ್ಲಿ ಅದ್ದೂರಿ ಉತ್ಸವ ನಡೆಸಬೇಕೆನ್ನುವುದು ಜನಾರ್ದನ ಪೂಜಾರಿಯವರ ಆಶಯವಾಗಿತ್ತು. ಅದರಂತೆ, ನಾವು ಎರಡು ವರ್ಷಗಳಲ್ಲಿ ಸಾಂಪ್ರದಾಯಿಕವಾಗಿ ಉತ್ಸವ ನಡೆಸಿದ್ದೆವು. ಈ ಬಾರಿ ಜಿಲ್ಲಾಡಳಿತದಿಂದ ಅಂತಹ ಕಟ್ಟುಪಾಡುಗಳಿಲ್ಲ. ಹಿಂದಿನ ರೀತಿಯಲ್ಲೇ ವೈಭವದ ದಸರಾ ಉತ್ಸವ ದೇವರ ಕೃಪೆಯಿಂದ ನಡೆಯಲಿದೆ ಎಂದರು.
26ರಂದು ನವದುರ್ಗೆಯರ ಪ್ರತಿಷ್ಠೆ ಮತ್ತು ಶಾರದಾ ಮಾತೆಗೆ ದೀಪ ಬೆಳಗುವ ಮೂಲಕ ಜನಾರ್ದನ ಪೂಜಾರಿಯವರು ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಪದ್ಮಶ್ರೀ ಪುರಸ್ಕಾರ ಪಡೆದಿರುವ ಹರೇಕಳ ಹಾಜಬ್ಬ ಮತ್ತು ಅಮೈ ಮಹಾಲಿಂಗ ಅವರನ್ನೂ ಉದ್ಘಾಟನೆ ಕಾರ್ಯಕ್ರಮಕ್ಕೆ ಕರೆಸಿದ್ದೇವೆ. ಜಿಲ್ಲೆಯ ಶಾಸಕರು ಸೇರಿದಂತೆ ಜನಪ್ರತಿನಿಧಿಗಳು ಉಪಸ್ಥಿತಿ ಇರಲಿದ್ದಾರೆ ಎಂದು ಕ್ಷೇತ್ರದ ಕಾರ್ಯದರ್ಶಿ ಮಾಧವ ಸುವರ್ಣ ಹೇಳಿದರು. ಹಿಂದಿನ ವರ್ಷ ಭಕ್ತರಿಗೆ ಅನ್ನ ಸಂತರ್ಪಣೆ ಸಾಧ್ಯವಾಗಿರಲಿಲ್ಲ. ಈ ಬಾರಿ ಪ್ರತಿ ದಿನವೂ ಅನ್ನ ಸಂತರ್ಪಣೆ ಇರಲಿದೆ. ಎಲ್ಲ ಮಾದರಿಯ ಸೇವೆಗಳಿಗೂ ಅವಕಾಶ ಇರಲಿದೆ ಎಂದವರು ಹೇಳಿದರು.
ದಸರಾ ಉದ್ಘಾಟನೆಗೆ ಮುಖ್ಯಮಂತ್ರಿ ಬರುವುದಿಲ್ಲವೇ ಎಂಬ ಪ್ರಶ್ನೆಗೆ, ಮುಖ್ಯಮಂತ್ರಿಯನ್ನು ಮಂಗಳೂರು ದಸರಾ ಉತ್ಸವಕ್ಕೆ ಆಹ್ವಾನಿಸಿದ್ದೇವೆ. ಕೊನೆಯ ವೇಳೆಗೆ ಆಗಮಿಸುವ ನಿರೀಕ್ಷೆಯಿದೆ ಎಂದು ಕ್ಷೇತ್ರ ಸಮಿತಿಯ ಟ್ರಸ್ಟಿ ಮತ್ತು ಮಾಜಿ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಹೇಳಿದರು. ಅ.5ರಂದು ವಿಜಯದಶಮಿ ದಿನ ಮಂಗಳೂರು ದಸರಾ ಉತ್ಸವದ ಭವ್ಯ ಶೋಭಾಯಾತ್ರೆ ನಡೆಯಲಿದೆ. ಮೆರವಣಿಗೆಯಲ್ಲಿ ರಾಜ್ಯದ ನಾನಾ ಕಡೆಗಳಿಂದ ಆಗಮಿಸುವ ಕಲಾ ತಂಡಗಳು, ಸಂಸ್ಕೃತಿ ಪರಂಪರೆ ಬಿಂಬಿಸುವ ಸ್ತಬ್ಧ ಚಿತ್ರಗಳು, ಹುಲಿವೇಷಗಳು, ಚೆಂಡೆ, ಭಜನಾ ತಂಡಗಳು ಭಾಗವಹಿಸಲಿದ್ದು ಮೆರುಗು ನೀಡಲಿವೆ ಎಂದು ಕ್ಷೇತ್ರದ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಹೇಳಿದರು. ಅಲ್ಲದೆ, 500ಕ್ಕೂ ಅಧಿಕ ವಾಹನಗಳು ನಿಲ್ಲುವುದಕ್ಕಾಗಿ ಏಳು ಕಡೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕುದ್ರೋಳಿ ಕ್ಷೇತ್ರದ ಉಪಾಧ್ಯಕ್ಷೆ ಊರ್ಮಿಳಾ ರಮೇಶ್, ಟ್ರಸ್ಟಿಗಳಾದ ರವಿಶಂಕರ ಮಿಜಾರ್, ಮಹೇಶ್ಚಂದ್ರ, ಶೇಖರ ಪೂಜಾರಿ, ದೇವೇಂದ್ರ ಪೂಜಾರಿ, ಬಿಟಿ ಸಾಲ್ಯಾನ್, ಬಿಜಿ ಸುವರ್ಣ, ಚಿತ್ತರಂಜನ್ ಗರೋಡಿ ಮತ್ತಿತರರಿದ್ದರು.
The century-old Sri Gokarnanatha Kshetra, Kudroli temple's Dasara Mahostava will be held from September 26 to October 6 with various cultural, and spiritual programmes," said H S Sairam, president of the temple managing committee. He was addressing a press meet at the temple convention hall here on Saturday September 24.
13-07-25 08:37 pm
HK News Desk
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
ಬೀದಿನಾಯಿಗಳಿಗೆ ಬಿರಿಯಾನಿ ಭಾಗ್ಯ ; ಶಾಲೆಗಳಲ್ಲಿ ಮಕ...
12-07-25 07:07 pm
ಧರ್ಮಸ್ಥಳ ಘಟನೆ ; ಒಬ್ಬ ವ್ಯಕ್ತಿಯ ಪರವಾಗಿ ವಕೀಲರು ದ...
11-07-25 06:36 pm
12-07-25 09:25 pm
HK News Desk
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm