ಕಾಲೇಜಿನ ತರಗತಿಯಲ್ಲೇ ವಿದ್ಯಾರ್ಥಿಗಳ ಆಟಾಟೋಪ ; ನೋಡಬಾರದ್ದನ್ನು ನೋಡ್ತಾ ಇದ್ರೂ ಪ್ರಿನ್ಸಿಪಾಲ್ ಮೌನವಂತೆ !

24-09-22 10:19 pm       Mangalore Correspondent   ಕರಾವಳಿ

ಶಾಲೆ, ಕಾಲೇಜಿನಲ್ಲಿ ಮೊಬೈಲ್ ಹಿಡ್ಕೊಂಡು ಕ್ಲಾಸಿಗೆ ತೆರಳಲು ಅವಕಾಶ ಇಲ್ಲ. ಆದರೂ ಕಾಲೇಜು ವಿದ್ಯಾರ್ಥಿಗಳು ಈಗೆಲ್ಲ ಮೊಬೈಲ್ ತಗೊಂಡೇ ತರಗತಿಗೆ ಹೋಗುತ್ತಾರೆ.

ಮಂಗಳೂರು, ಸೆ.24: ಶಾಲೆ, ಕಾಲೇಜಿನಲ್ಲಿ ಮೊಬೈಲ್ ಹಿಡ್ಕೊಂಡು ಕ್ಲಾಸಿಗೆ ತೆರಳಲು ಅವಕಾಶ ಇಲ್ಲ. ಆದರೂ ಕಾಲೇಜು ವಿದ್ಯಾರ್ಥಿಗಳು ಈಗೆಲ್ಲ ಮೊಬೈಲ್ ತಗೊಂಡೇ ತರಗತಿಗೆ ಹೋಗುತ್ತಾರೆ. ಆದರೆ, ಮೊಬೈಲಿನಲ್ಲಿ ತರಗತಿಯೊಳಗೆ ಏನ್ ನೋಡ್ತಾರೆ ಅನ್ನೋದ್ರ ಬಗ್ಗೆ ಅಧ್ಯಾಪಕರು ಗಮನ ಇಟ್ಟಿದ್ದಾರೆಯೇ? ಸುರತ್ಕಲ್ ಸಮೀಪದ ಕಾಟಿಪಳ್ಳದ ಕಾಲೇಜು ಒಂದರಲ್ಲಿ ವಿದ್ಯಾರ್ಥಿಗಳು ತರಗತಿ ಒಳಗಡೆಯೇ ಬ್ಲೂ ಫಿಲಂ ನೋಡುತ್ತಿದ್ದರು ಅನ್ನುವ ಬಗ್ಗೆ ಅಲ್ಲಿನ ಕೆಲವು ವಿದ್ಯಾರ್ಥಿಗಳು ದೂರಿಕೊಂಡಿದ್ದಾರೆ.

ಅಲ್ಲಿನ ಪಿಯು ತರಗತಿಯಲ್ಲಿ ಹುಡುಗರು ಜೊತೆಯಾಗಿ ಕುಳಿತು ಮೊಬೈಲಿನಲ್ಲಿ ವಿಡಿಯೋ ನೋಡುತ್ತಾರಂತೆ. ಇದನ್ನು ಒಬ್ಬಾತ ವಿಡಿಯೋ ಮಾಡಿ ಪ್ರಿನ್ಸಿಪಾಲ್ ಗೆ ದೂರು ನೀಡಿದರೂ, ಕ್ಯಾರ್ ಮಾಡಿಲ್ಲವಂತೆ. ಇತರೇ ಹುಡುಗಿಯರು ಕ್ಲಾಸಿನಲ್ಲಿ ಟ್ಯಾಲೆಂಟ್ಸ್ ಡೇ ಕಾರ್ಯಕ್ರಮಕ್ಕೆ ಪ್ರಾಕ್ಟೀಸ್ ಮಾಡುತ್ತಿದ್ದರೆ, ಕೆಲವರು ವಿಡಿಯೋ ನೋಡುತ್ತಿದ್ದರು. ಇದನ್ನು ಪ್ರಿನ್ಸಿಪಾಲರಲ್ಲಿ ಪ್ರಶ್ನೆ ಮಾಡಿದರೆ, ನಮ್ಮನ್ನೇ ಆರೋಪಿಯಾಗಿ ನೋಡುತ್ತಾರೆ ಎಂದು ತಿಳಿಸಿದ್ದಾರೆ. ಇನ್ನು ನಾವು ಮಾತನಾಡಿದರೂ, ವಿಡಿಯೋ ಮಾಡಿ ಹಾಕ್ತೀಯಾ ಎಂದು ಪ್ರಶ್ನಿಸಿ ತಮಾಷೆ ಮಾಡುತ್ತಾರಂತೆ.

ಇತ್ತೀಚೆಗೆ ಮಂಗಳೂರಿನ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳು, ಸಹಪಾಠಿ ವಿದ್ಯಾರ್ಥಿನಿಯನ್ನೇ ಅತ್ಯಾಚಾರಗೈದಿದ್ದು ಅದರ ವಿಡಿಯೋ ಹೊರಬಂದಿದ್ದು ದೊಡ್ಡ ಸುದ್ದಿಯಾಗಿತ್ತು. ಕಾಲೇಜು ವಿದ್ಯಾರ್ಥಿಗಳ ಅತಿರೇಕದ ವರ್ತನೆಯಿಂದಾಗಿ ಮಂಗಳೂರಿನ ಜನರು ತಲೆತಗ್ಗಿಸುವಂತಾಗಿತ್ತು. ಇದಕ್ಕೆಲ್ಲ ಮೊಬೈಲ್ ಕಾರಣ ಎಂದರೂ ಅತಿಶಯವಲ್ಲ. ಮೊಬೈಲಿನ ಕಾರಣ ಎಲ್ಲವೂ ಬೆರಳ ತುದಿಯಲ್ಲಿ ಸಿಗುವುದರಿಂದ ಕೆಲವರ ಅತಿರೇಕದ ವರ್ತನೆಗೆ ಕಾರಣವಾಗುತ್ತಿದೆ. ಇದಕ್ಕೆ ಹುಡುಗ- ಹುಡುಗಿಯ ಭೇದ ಇಲ್ಲದಂತಾಗಿದೆ. ತರಗತಿಯಲ್ಲಿ ಮೊಬೈಲ್ ಬಳಕೆಗೆ ನಿಷೇಧ ಇದ್ದರೂ, ಕಾಲೇಜಿನ ಆಡಳಿತವಾಗಲೀ, ಉಪನ್ಯಾಸಕರಾಗಲೀ ಮುತುವರ್ಜಿ ವಹಿಸಿಲ್ಲ. ಕಾಟಿಪಳ್ಳದ ಕಾಲೇಜಿನಲ್ಲಿ ಮೊಬೈಲ್ ಆಟಾಟೋಪದ ಬಗ್ಗೆ ದೂರು ನೀಡಿದರೂ ಆಡಳಿತ ಮತ್ತು ಅಧ್ಯಾಪಕ ವರ್ಗ ನಿರ್ಲಕ್ಷಿಸಿದ್ದಾರಂದ್ರೆ, ಏನು ಹೇಳಬೇಕು ಹೇಳಿ.

Mangalore Students of a private college watch obscene video in classroom,  Some of the alumni students of the college speaking to Headline karnataka said that principal has taken no action against such students. Also the video has gone viral in the college