ಬ್ರೇಕಿಂಗ್ ನ್ಯೂಸ್
25-09-22 04:58 pm Mangalore Correspondent ಕರಾವಳಿ
ಮಂಗಳೂರು, ಸೆ.25: ನವ ವಿವಾಹಿತ ಯುವಕ ರೈಲಿನಡಿಗೆ ತಲೆ ಇಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಎಕ್ಕೂರಿನಲ್ಲಿ ನಡೆದಿದೆ. ಜಪ್ಪಿನಮೊಗರು ತಂದೋಳಿಗೆ ನಿವಾಸಿ ಧೀರಜ್ ಕುಲಾಲ್(32) ಮೃತ ದುರ್ದೈವಿ.
ಖಾಸಗಿ ಕಂಪನಿಯಲ್ಲಿ ಮಾರ್ಕೆಂಟಿಗ್ ಮ್ಯಾನೇಜರ್ ಆಗಿದ್ದ ಧೀರಜ್ ಆರೇಳು ತಿಂಗಳ ಹಿಂದಷ್ಟೆ ವಿವಾಹವಾಗಿದ್ದರು. ಧೀರಜ್ ಭಾನುವಾರ ಮಧ್ಯಾಹ್ನ ಎಕ್ಕೂರು ರೈಲ್ವೇ ಮೇಲ್ಸೇತುವೆ ಕೆಳಗಡೆಯ ರೈಲ್ವೇ ಹಳಿಯಲ್ಲಿ ಸಾವಿಗೆ ಶರಣಾಗಿದ್ದಾರೆ. ಧೀರಜ್ ಅವರ ತಾಯಿ ಗಿರಿಜಾ ಅವರು 1995 ರಲ್ಲಿ ಅಪಘಾತದಲ್ಲಿ ಸಾವನ್ನಪ್ಪಿದ್ದರು. ತಂದೆ ತಾಯಿಗೆ ಪುಷ್ಪರಾಜ್ ಮತ್ತು ಧೀರಜ್ ಇಬ್ಬರೇ ಮಕ್ಕಳು. ಧೀರಜ್ ಅವರ ತಂದೆ, ಪತ್ನಿ ಸಾವಿನ ಬಳಿಕ ಮಕ್ಕಳನ್ನ ತೊರೆದು ಹೋಗಿದ್ದರು ಎನ್ನಲಾಗಿದೆ.

ಆನಂತರ, ಅನಾಥರಾಗಿದ್ದ ಧೀರಜ್ ಮತ್ತು ಪುಷ್ಪರಾಜ್ ದೊಡ್ಡಮ್ಮನ ಪಾಲನೆಯಲ್ಲಿ ಬೆಳೆದಿದ್ದರು. ಈ ನಡುವೆ, ಧೀರಜ್ ಅವರ ಸೋದರ ಪುಷ್ಪರಾಜ್ ಎರಡು ವರ್ಷಗಳ ಹಿಂದೆ ಪದವಿನಂಗಡಿಯಲ್ಲಿ ನಡೆದ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಹೀಗೆ ಅಪಘಾತಗಳಲ್ಲೆ ತನ್ನವರನ್ನ ಕಳಕೊಂಡಿದ್ದ ಧೀರಜ್ ಕೂಡ ಇದೀಗ ಆತ್ಮಹತ್ಯೆಗೆ ಶರಣಾಗಿದ್ದು ಅಕಾಲ ಮೃತ್ಯುವನ್ನು ತಂದುಕೊಂಡಿದ್ದಾರೆ. ಧೀರಜ್ ಸಾವು ಕುಟುಂಬ ಮತ್ತು ಸ್ನೇಹಿತರನ್ನ ಶೋಕ ಸಾಗರದಲ್ಲಿ ಮುಳುಗಿಸಿದೆ. ಹಣಕಾಸಿನ ಮುಗ್ಗಟ್ಟು ಆತ್ಮಹತ್ಯೆಗೆ ಕಾರಣವೆಂದು ತಿಳಿದುಬಂದಿದೆ. ರೈಲ್ವೇ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.
32 year old man commits suicide by giving his head to the train at Yekkur in Mangalore. The deceased has been identified as Deeraj Kulal. Financial crises is the reason for the extreme step it is said.
05-09-26 04:53 pm
HK News Staffer
400 ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ ; ಪ್ರತಿ ಹ...
02-09-26 05:06 pm
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
ADGP Chandrashekhar, Seemanth Kumar Singh: ಅಧ...
30-08-26 07:31 pm
05-09-26 11:55 am
HK News Staffer
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
06-09-26 01:14 pm
HK News Desk
ಸುಬ್ರಹ್ಮಣ್ಯ ಬಳಿ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್...
06-09-26 12:47 pm
ದಕ್ಷಿಣ ಕನ್ನಡ- ಚಿಕ್ಕಮಗಳೂರು ಸಂಪರ್ಕ ಕೊಂಡಿ ಚಾರ್ಮಾ...
05-09-26 04:58 pm
ಬೆಂಗಳೂರು-ಮಂಗಳೂರು ವಂದೇ ಭಾರತ್ಗೆ ಮತ್ತೊಂದು ಟೆಸ್ಟ...
05-09-26 11:59 am
ಕೆಆರ್ ಐಡಿಎಲ್ ಕಮಿಷನ್ ಆರೋಪದಿಂದ ಮಾನಸಿಕ ಕಿರುಕುಳ,...
04-09-26 04:44 pm
05-09-26 08:58 pm
HK News Staffer
ಶಿವಮೊಗ್ಗ ; ಕಾರಿನಲ್ಲಿ ಜಿಂಕೆ ಮಾಂಸ ಮಾರಾಟ ಯತ್ನ ;...
05-09-26 04:55 pm
ಬಡ್ಡಿ ಕಟ್ಟದಿದ್ದಕ್ಕೆ ಮಹಿಳೆಯನ್ನು ಅಪಹರಿಸಿ ಹಲ್ಲೆ...
05-09-26 03:08 pm
ಅಷ್ಟಮಿ ಭಜನಾ ಕಾರ್ಯಕ್ರಮದಲ್ಲಿ ಹೃದಯಾಘಾತ ; ತೊಕ್ಕೂರ...
05-09-26 02:04 pm
ತ್ರಿಶೂರ್ ನಲ್ಲಿ ಗುರುವಾಯೂರು ದರ್ಶನ ಮುಗಿಸಿ ಹೊರಟಿದ...
05-09-26 01:13 pm