ಪಿಎಫ್ಐ ನಿಷೇಧ ಸಾಧ್ಯತೆ ; ಎರಡನೇ ಹಂತದ ನಾಯಕರನ್ನೂ ವಶಕ್ಕೆ ಪಡೆದ ಪೊಲೀಸರು, ಮಂಗಳೂರಿನಲ್ಲಿ ರಾತ್ರೋರಾತ್ರಿ ಕಾರ್ಯಾಚರಣೆ 

27-09-22 11:11 am       Mangalore Correspondent   ಕರಾವಳಿ

ರಾಜ್ಯದಲ್ಲಿ ಪಿಎಫ್ಐ ಕಾರ್ಯಕರ್ತರ ಮೇಲೆ ಕಾರ್ಯಾಚರಣೆ ಮುಂದುವರಿದಿದ್ದು ಮಂಗಳೂರು ಸೇರಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆ ಪೊಲೀಸರು ರಾತ್ರೋರಾತ್ರಿ ದಾಳಿ ನಡೆಸಿ ಹತ್ತಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ. ‌

ಮಂಗಳೂರು, ಸೆ.27 : ರಾಜ್ಯದಲ್ಲಿ ಪಿಎಫ್ಐ ಕಾರ್ಯಕರ್ತರ ಮೇಲೆ ಕಾರ್ಯಾಚರಣೆ ಮುಂದುವರಿದಿದ್ದು ಮಂಗಳೂರು ಸೇರಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆ ಪೊಲೀಸರು ರಾತ್ರೋರಾತ್ರಿ ದಾಳಿ ನಡೆಸಿ ಹತ್ತಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ. ‌

ಹತ್ತಕ್ಕೂ ಹೆಚ್ಚು ಪಿ ಎಫ್ ಐ ಮುಖಂಡರನ್ನು ವಶಕ್ಕೆ ಪಡೆದ ಬಗ್ಗೆ ಪೊಲೀಸ್ ಕಮಿಷನರ್ ಶಶಿಕುಮಾರ್ ದೃಢಪಡಿಸಿದ್ದಾರೆ. ಮಾಹಿತಿ ಪ್ರಕಾರ, ಇಸ್ಮಾಯಿಲ್ ಇಂಜಿನಿಯರ್, ನಜೀರ್, ಇಬ್ರಾಹಿಂ ಪುತ್ತಿಗೆ, ಮುಜಾವರ್, ಮಹಮ್ಮದ್ ನೌಫಾಲ್, ಫಿರೋಸ್ ಖಾನ್ , ಇಬ್ರಾಹಿಂ ಉಳಾಯಿಬೆಟ್ಟು ಸೇರಿ 10 ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.

ಸಿ ಆರ್ ಪಿ ಸಿ 107 ಮತ್ತು 151 ಸೆಕ್ಷನ್ ಅಡಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆಯಲಾಗಿದೆ ಎನ್ನುವ ಮಾಹಿತಿಗಳಿದ್ದು ಬಂಧಿತರನ್ನು ಮಂಗಳೂರಿನ ಜಿಲ್ಲಾ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ಏಳು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅವರನ್ನು ಬಳಿಕ ಮಂಗಳೂರಿನ ಜಿಲ್ಲಾ ಕಾರಾಗೃಹಕ್ಕೆ ರವಾನಿಸಲಾಗಿದೆ. 

ಇತ್ತೀಚೆಗೆ ದೇಶಾದ್ಯಂತ ಪಿಎಫ್ಐ ಗುರಿಯಾಗಿಸಿ ಪೊಲೀಸರು ಮತ್ತು ಎನ್ಐಎ ದಾಳಿ ನಡೆಸಿ ನೂರಕ್ಕೂ ಹೆಚ್ಚು ಪ್ರಮುಖ ನಾಯಕರನ್ನು ಬಂಧಿಸಿದ್ದರು. ಈಗ ಎರಡನೇ ಹಂತದ ನಾಯಕರನ್ನು ವಶಕ್ಕೆ ಪಡೆಯಲಾಗಿದ್ದು ಬಹುತೇಕ ಪಿಎಫ್ಐ ಸಂಘಟನೆಯನ್ನು ನಿಷೇಧಿಸಲು ಸರಕಾರ ಯೋಜನೆ ಹಾಕ್ಕೊಂಡಿದೆ ಎನ್ನಲಾಗುತ್ತಿದೆ. ಅದಕ್ಕಾಗಿ ಗಲಭೆ, ಗಲಾಟೆ ನಡೆಸಬಾರದು ಎನ್ನುವ ಉದ್ದೇಶದಿಂದ ಪಿಎಫ್ಐನಲ್ಲಿ ಗುರುತಿಸಿಕೊಂಡಿರುವ ನಾಯಕರನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗುತ್ತಿದೆ.

Police detained Popular Front of India (PFI) leaders in Mangaluru and Udupi on Tuesday September 27. Police detained PFI leaders from Ullal, Mangaluru, Talapady and district limits. Preventive Detention cases were filed under 107, 151 Crpc against the detained leaders. Ismail Engineer Bajpe, Sharif Pandeshwar, Iqbal Kettikal and Naushad Surathkal are among the detained.