ಸ್ಮಾರ್ಟ್ ಸಿಟಿಯಲ್ಲೊಂದು ಅದ್ಭುತ ಕೆಲಸ ! ಇಂಜಿನಿಯರ್ ಗಳಿಗೆ ಜಾಲತಾಣದಲ್ಲಿ ಭಾರೀ ಪ್ರಶಂಸೆ ! 

28-09-22 01:41 pm       Mangalore Correspondent   ಕರಾವಳಿ

ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅದ್ಭುತ ಇಂಜಿನಿಯರ್ ಗಳಿದ್ದಾರೆ. ನಗರದ ರಸ್ತೆಯೊಂದರಲ್ಲಿ ನಡುವೆ ಇಂಜಿನಿಯರ್ ಗಳು ರಚಿಸಿರುವ ಅದ್ಭುತ ಕಲಾಕೃತಿ ಜನರ ಗಮನ ಸೆಳೆದಿದೆ.‌

ಮಂಗಳೂರು, ಸೆ.28: ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅದ್ಭುತ ಇಂಜಿನಿಯರ್ ಗಳಿದ್ದಾರೆ. ನಗರದ ರಸ್ತೆಯೊಂದರಲ್ಲಿ ನಡುವೆ ಇಂಜಿನಿಯರ್ ಗಳು ರಚಿಸಿರುವ ಅದ್ಭುತ ಕಲಾಕೃತಿ ಜನರ ಗಮನ ಸೆಳೆದಿದೆ.‌

ಹೌದು.. ಈ ಚಿತ್ರದಲ್ಲಿರುವ ರಸ್ತೆಯ ಚಿತ್ರಣ ನಿಮಗೆ ಕಾಣ ಸಿಗುವುದು ಮಂಗಳೂರು ನಗರದ ಅಲೋಶಿಯಸ್ ಕಾಲೇಜು ರಸ್ತೆಯಿಂದ ಜ್ಯೋತಿ ವೃತ್ತಕ್ಕೆ ಸೇರುವಲ್ಲಿ. ಸರಾಗವಾಗಿ ವಾಹನಗಳು ಸಾಗುವ ರಸ್ತೆಯಲ್ಲಿ ನಡುವೆ ಕರ್ವ್ ರೀತಿಯ ಚಿತ್ರಣ ಮಾಡಿದ್ದು ಇದನ್ನು ರೂಪಿಸಿದ ಇಂಜಿನಿಯರ್ ಗಳಿಗೆ ಜಾಲತಾಣದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ. 

ಟ್ವಿಟರ್ ಮತ್ತು ಫೇಸ್‌ಬುಕ್‌ ನಲ್ಲಿ ಈ ಚಿತ್ರವನ್ನು ಭಾರೀ ಸಂಖ್ಯೆಯಲ್ಲಿ ಜನರು ಷೇರ್ ಮಾಡಿದ್ದಾರೆ. ಸ್ಮಾರ್ಟ್ ಸಿಟಿಯ ಬ್ಲಂಡರನ್ನು ಎತ್ತಿ ತೋರಿಸಿದ್ದಾರೆ. ಇದನ್ನು ಆಕ್ಸಿಡೆಂಟ್ ಸ್ಪಾಟ್ ಮಾಡುತ್ತಿದ್ದೀರಾ, ಬೈಕ್ ಸವಾರರು ಸಾಯೋದಕ್ಕೆ ದಾರಿ ಮಾಡುತ್ತಿದ್ದಾರೆಯೇ ಎಂದು ಪ್ರಶ್ನೆ ಮಾಡಿದ್ದಾರೆ. ಮಂಗಳೂರಿನ ಸ್ಮಾರ್ಟ್ ಸಿಟಿಯ ಕಾಮಗಾರಿ ಹಲವು ಬಾರಿ ಟೀಕೆಗೆ ಒಳಗಾಗಿದೆ. ‌ಏನೇನೋ ಇಲ್ಲ ಸಲ್ಲದ ಯೋಜನೆ ತಯಾರಿಸಿ ದುಡ್ಡು ಹೊಡೆಯುವ ರೀತಿ ಪ್ಲಾನ್ ಮಾಡಿದ್ದು ಸಾರ್ವಜನಿಕರ ಟೀಕೆಗೆ ಗುರಿಯಾಗಿತ್ತು. ಈಗ ಮತ್ತೊಂದು ಎಡವಟ್ಟು ಮಾಡಿದ್ದು ಜಾಲತಾಣದಲ್ಲಿ ಭಾರೀ ಟೀಕೆಗೆ ಗುರಿಯಾಗಿದೆ.

Mangalore smart city project new footpath in the middle of the raid near jyothi goes viral, mcc slammed on social media.