ಬಿಜೆಪಿ ತನ್ನ ರಾಜಕೀಯ ಲಾಭಕ್ಕಾಗಿ ಎಸ್ಡಿಪಿಐ ಉಳಿಸಿಕೊಂಡಿದೆಯೇ ? ಮದರಸಾ ಶಿಕ್ಷಣದಿಂದಲೇ ವಿಧ್ವಂಸಕ ಕೃತ್ಯ ; ಹಿಂದು ಮಹಾಸಭಾ

29-09-22 10:18 pm       Mangalore Correspondent   ಕರಾವಳಿ

ಪಿಎಫ್ಐ ಮತ್ತು ಸಹವರ್ತಿ ಸಂಘಟನೆಗಳನ್ನು ನಿಷೇಧ ಮಾಡಿರುವುದು ಹಿಂದುತ್ವಕ್ಕೆ ಸಿಕ್ಕ ಗೆಲುವು. ಆದರೆ ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ಎಸ್ಡಿಪಿಐಯನ್ನು ನಿಷೇಧ ಮಾಡಿಲ್ಲ ಯಾಕೆ.

ಮಂಗಳೂರು, ಸೆ.29: ಪಿಎಫ್ಐ ಮತ್ತು ಸಹವರ್ತಿ ಸಂಘಟನೆಗಳನ್ನು ನಿಷೇಧ ಮಾಡಿರುವುದು ಹಿಂದುತ್ವಕ್ಕೆ ಸಿಕ್ಕ ಗೆಲುವು. ಆದರೆ ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ಎಸ್ಡಿಪಿಐಯನ್ನು ನಿಷೇಧ ಮಾಡಿಲ್ಲ ಯಾಕೆ. ಬಿಜೆಪಿ ತಮ್ಮ ರಾಜಕೀಯ ಲಾಭಕ್ಕಾಗಿ ಎಸ್ ಡಿಪಿಐ ಪಕ್ಷವನ್ನು ನಿಷೇಧ ಮಾಡದೆ ಉಳಿಸಿಕೊಂಡಿದೆಯೇ ಎಂದು ಹಿಂದು ಮಹಾಸಭಾ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಪ್ರಶ್ನಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಮುಸ್ಲಿಮರ ದೇಶ ವಿರೋಧಿ ಕೃತ್ಯಗಳಿಗೆ, ವಿಧ್ವಂಸಕ ಕೃತ್ಯಗಳಿಗೆ ಪ್ರೇರಣೆ ನೀಡುತ್ತಿರುವುದೇ ಅವರಿಗೆ ನೀಡಲಾಗುವ ಮದ್ರಸಾ ಶಿಕ್ಷಣ. ಮದ್ರಸಾದಲ್ಲಿ ಸಿಗುತ್ತಿರುವ ಶಿಕ್ಷಣದ ಕಾರಣ ಮುಸ್ಲಿಮರು ಮತಾಂಧತೆ ಬೆಳೆಸಿಕೊಳ್ಳುತ್ತಿದ್ದಾರೆ. ಹಾಗಾಗಿ ದೇಶದಲ್ಲಿ ಮದ್ರಸಾ ಶಿಕ್ಷಣಗಳನ್ನು ನಿಷೇಧಿಸಬೇಕು. ಜೊತೆಗೆ, ಎಸ್ಡಿಪಿಐ ಪಕ್ಷವನ್ನೂ ನಿಷೇಧ ಮಾಡಬೇಕು. ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ ಎಸ್ಡಿಪಿಐ ನಿಷೇಧ ಮಾಡುವುದು ಕಷ್ಟವಲ್ಲ. ತಕ್ಷಣವೇ ಮದರಸಾಗಳ ಹಣಕಾಸಿನ ಮೂಲಗಳ ಬಗ್ಗೆ ಎನ್ಐಎ ತನಿಖೆಯನ್ನೂ ನಡೆಸಬೇಕು ಎಂದು ಹೇಳಿದರು.

SDPI terms ban on PFI 'direct blow to democracy' – Mysuru Today

ರಾಜ್ಯ ಮತ್ತು ದೇಶದಲ್ಲಿ ಎಸ್ಡಿಪಿಐ ಮತ್ತು ಮದರಸಾ ಶಿಕ್ಷಣವನ್ನು ನಿಷೇಧಿಸಿದರೆ, ಹಿಂದು ಮಹಾಸಭಾ ಬಿಜೆಪಿಗೆ ಬೇಷರತ್ ಬೆಂಬಲ ನೀಡುತ್ತದೆ. ಅಲ್ಲದೆ, ಬಿಜೆಪಿಯನ್ನು ಇನ್ನೂ ನಾಲ್ಕು ದಶಕಗಳ ಕಾಲ ಆಳ್ವಿಕೆ ನಡೆಸುವಂತೆ ಗೆಲ್ಲಿಸಲು ಸಹಕಾರ ಕೊಡುತ್ತದೆ ಎಂದು ಹೇಳಿದ ರಾಜೇಶ್ ಪವಿತ್ರನ್, ಸಿದ್ದರಾಮಯ್ಯ ಆರೆಸ್ಸೆಸ್ ನಿಷೇಧಿಸಬೇಕೆಂದು ಹೇಳಿದ್ದಾರೆ. ಆರೆಸ್ಸೆಸ್ ನಿಷೇಧಿಸಲು ದೇಶ ವಿರೋಧಿ ಕೃತ್ಯದಲ್ಲಿ ತೊಡಗಿಸಿಕೊಂಡಿದೆಯೇ. ಪದೇ ಪದೇ ಈ ರೀತಿಯ ಹೇಳಿಕೆ ನೀಡಿ ಸಿದ್ದರಾಮಯ್ಯ ತುಷ್ಟೀಕರಣ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

Protest - Siddaramaiah terms protests with eggs, black flags against him as  'state sponsored' - Telegraph India

ಇದೇ ವೇಳೆ ಮಾತನಾಡಿದ ಹಿಂದು ಮಹಾಸಭಾ ರಾಜ್ಯ ಕಾರ್ಯದರ್ಶಿ ಧರ್ಮೇಂದ್ರ ಅಮೀನ್, ವಕ್ಫ್ ಬೋರ್ಡ್ ಮೂಲಕ ವಿಧ್ವಂಸಕ ಕೃತ್ಯಗಳಿಗೆ ದೇಣಿಗೆ ಸಂದಾಯವಾಗುತ್ತದೆ ಎಂಬ ವರದಿಗಳಿವೆ. ಹಾಗಾದರೆ, ಅಂಥ ವಕ್ಫ್ ಬೋರ್ಡನ್ನು ಯಾಕೆ ಉಳಿಸಿಕೊಳ್ಳಬೇಕು. ಅದು ಸರಕಾರದ ಅಧೀನದಲ್ಲಿ ಇಲ್ಲವೇ.. ಕೂಡಲೇ ವಕ್ಫ್ ಬೋರ್ಡನ್ನು ನಿಷೇಧ ಮಾಡಿ ಎಂದು ಒತ್ತಾಯಿಸಿದರು. ಇದಲ್ಲದೆ, ಪಿಎಫ್ಐ ಸಂಘಟನೆಗಳಿಗೆ ಯಾರೆಲ್ಲ ಹಣದ ನೆರವು ನೀಡಿದ್ದಾರೆಂದು ಬಹಿರಂಗ ಪಡಿಸಬೇಕು. ಕೆಲವರು ತಮ್ಮ ರಾಜಕೀಯ ಲಾಭಕ್ಕಾಗಿ ಪಿಎಫ್ಐಗಳಿಗೆ ಹಣದ ನೆರವು ನೀಡಿರುವುದೂ ಸಮಾಜಕ್ಕೆ ತಿಳಿಯಬೇಕು ಎಂದು ಹೇಳಿದರು.

ಆರೆಸ್ಸೆಸ್ ನಿಷೇಧ ಮಾಡಲು ಹೇಳಿರುವ ಸಿದ್ದರಾಮಯ್ಯ ಯಾರು ಎಂದು ಪ್ರಶ್ನಿಸಿದ ಧರ್ಮೇಂದ್ರ, ಸಿದ್ದರಾಮಯ್ಯ ಕಾನೂನು ಕಲಿತಿದ್ದಾರೆಂದು ಬಾಯಿಗೆ ಬಂದಿದ್ದನ್ನು ಮಾತನಾಡುವುದೇ.. ಸಿದ್ದರಾಮಯ್ಯ ಎಲ್ಲಿದ್ದವರು, ಏನು ಅರ್ಹತೆಯಿದೆ ಇವರಿಗೆ. ಇವರು ಆರೆಸ್ಸೆಸ್ ಕಾರ್ಯಕರ್ತರ ಚಪ್ಪಲಿಗೆ ಸಮ. ಆರೆಸ್ಸೆಸ್ ಬಗ್ಗೆ ಏನೇ ವ್ಯತಿರಿಕ್ತ ಹೇಳಿಕೆ ನೀಡಿದರೂ ಪರಿಣಾಮ ನೆಟ್ಟಗಿರುವುದಿಲ್ಲ. ದೇಶಭಕ್ತ ಸಂಘಟನೆಯ ಬಗ್ಗೆ ಮಾತನಾಡುವಾಗ ನಾಲಗೆ ಹಿಡಿತದಲ್ಲಿರಲಿ ಎಂದು ಹೇಳಿದ್ದಾರೆ.

PFI ban in India, Bjp has saved SDPI for it's political gain slams Hindu Mahasabha in Mangalore.