ಮಂಗಳೂರು ಮಿನಿ ವಿಧಾನಸೌಧಕ್ಕೆ ಲೋಕಾಯುಕ್ತ ದಾಳಿ ; ರೆಡ್ ಹ್ಯಾಂಡ್ ಬಲೆಗೆ ಬಿದ್ದ ಅಧಿಕಾರಿ ! 

30-09-22 02:18 pm       Mangalore Correspondent   ಕರಾವಳಿ

ಲೋಕಾಯುಕ್ತಕ್ಕೆ ಇತ್ತೀಚೆಗೆ ಫುಲ್ ಪವರ್ ಸಿಕ್ಕ ಬಳಿಕ ಅಧಿಕಾರಿಗಳ ತಂಡ ಮಂಗಳೂರಿನಲ್ಲಿ ಮೊದಲ ಬಾರಿಗೆ ಭ್ರಷ್ಟರ ಮೇಲೆ ದಾಳಿ ನಡೆಸಿದೆ. ನಗರದ ಮಿನಿ ವಿಧಾನಸೌಧದಲ್ಲಿರುವ ಮಂಗಳೂರು ತಾಲೂಕು ಕಚೇರಿಗೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ತಹಶೀಲ್ದಾರ್ ಸಹಾಯಕನನ್ನು ರೆಡ್ ಹ್ಯಾಂಡಾಗಿ ಬಲೆಗೆ ಕೆಡವಿದ್ದಾರೆ. 

ಮಂಗಳೂರು, ಸೆ.30 : ಲೋಕಾಯುಕ್ತಕ್ಕೆ ಇತ್ತೀಚೆಗೆ ಫುಲ್ ಪವರ್ ಸಿಕ್ಕ ಬಳಿಕ ಅಧಿಕಾರಿಗಳ ತಂಡ ಮಂಗಳೂರಿನಲ್ಲಿ ಮೊದಲ ಬಾರಿಗೆ ಭ್ರಷ್ಟರ ಮೇಲೆ ದಾಳಿ ನಡೆಸಿದೆ. ನಗರದ ಮಿನಿ ವಿಧಾನಸೌಧದಲ್ಲಿರುವ ಮಂಗಳೂರು ತಾಲೂಕು ಕಚೇರಿಗೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ತಹಶೀಲ್ದಾರ್ ಸಹಾಯಕನನ್ನು ರೆಡ್ ಹ್ಯಾಂಡಾಗಿ ಬಲೆಗೆ ಕೆಡವಿದ್ದಾರೆ. 

ಶಿವಾನಂದ ನಾಟೇಕರ್ ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ. ಜಾಗದ ಮಾರಾಟ ಸಲುವಾಗಿ ಎನ್ಓಸಿ ಪಡೆಯಲು ಬಂದಿದ್ದ ಅರ್ಜಿದಾರ ವ್ಯಕ್ತಿಯ ಬಳಿ ಹತ್ತು ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದ.‌ ಈ ಬಗ್ಗೆ ಅರ್ಜಿದಾರರು ಮಂಗಳೂರಿನ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಕೊನೆಗೆ, ಐದು ಸಾವಿರ ನೀಡುವುದಾಗಿ ಹೇಳಿ ಒಪ್ಪಂದ ಆಗಿತ್ತು. ಅಧಿಕಾರಿಗಳ ಸೂಚನೆಯಂತೆ, ಶುಕ್ರವಾರ ಮಧ್ಯಾಹ್ನ 4700 ರೂಪಾಯಿ ಲಂಚ ನೀಡುತ್ತಿದ್ದಾಗಲೇ  ಲೋಕಾಯುಕ್ತ ದಾಳಿ ನಡೆಸಿದ್ದರು. 

ಲೋಕಾಯುಕ್ತ ಎಸ್ಪಿ ಲಕ್ಷ್ಮಿಗಣೇಶ್ ಹಾಗು ಡಿವೈಎಸ್ಪಿ ಚಲುವರಾಜ್ ನೇತೃತ್ವದಲ್ಲಿ ದಾಳಿ ನಡೆಸಿದ್ದು ಆರೋಪಿ ಅಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ. ಶಿವಾನಂದ ನಾಟೇಕರ್ ಈ ಹಿಂದೆ ಕಾವೂರಿನಲ್ಲಿ ವಿಎ ಆಗಿದ್ದು ಅಲ್ಲಿಯೂ ಲಂಚಕ್ಕೆ ಕೈಯೊಡ್ಡಿ ಸಿಕ್ಕಿಬಿದ್ದು ಅಮಾನತಾಗಿದ್ದ. ಇತ್ತೀಚೆಗಷ್ಟೇ ಮಂಗಳೂರು ತಾಲೂಕು ಕಚೇರಿಗೆ ನಿಯೋಜನೆಗೊಂಡಿದ್ದ ಎನ್ನಲಾಗಿದೆ.

Lokyuktha raids on Mini Vidhana Soudha in Mangalore, assistant Tahsildar caught red hand