ಬ್ರೇಕಿಂಗ್ ನ್ಯೂಸ್
30-09-22 08:07 pm Mangalore Correspondent ಕರಾವಳಿ
ಮಂಗಳೂರು, ಸೆ.30 : ನಿಷೇಧಗೊಂಡಿರುವ ಪಿಎಫ್ಐ ಮತ್ತು ಸಹವರ್ತಿ ಸಂಘಟನೆಗಳಿಗೆ ಸೇರಿದ ಚರಾಸ್ತಿ ಸೇರಿದಂತೆ ಎಲ್ಲ ರೀತಿಯ ಚಟುವಟಿಕೆಗಳನ್ನು ಮುಟ್ಟುಗೋಲು ಹಾಕುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದ ವತಿಯಿಂದ ಒಂಬತ್ತು ಸ್ಥಳಗಳಲ್ಲಿ ತಹಸೀಲ್ದಾರ್ ಉಪಸ್ಥಿತಿಯಲ್ಲಿ ದಾಳಿ ನಡೆಸಲಾಗಿದೆ.
ಕಾನೂನು ಬಾಹಿರ ಚಟುವಟಿಕೆ ತಡೆಗಟ್ಟುವಿಕೆ ಕಾಯ್ದೆ 1967ರ ಸೆಕ್ಷನ್ 3(1)ರ ಅಡಿಯಲ್ಲಿ ನಿಷೇಧಿತ ಸಂಘಟನೆಗಳಲ್ಲಿ ತೊಡಗಿಸಿಕೊಂಡವರ ಚಟುವಟಿಕೆಗಳನ್ನು ಮತ್ತು ಅವು ಕಾರ್ಯ ನಿರ್ವಹಿಸುತ್ತಿರುವ ಸ್ಥಳಗಳನ್ನು, ಸಂಘಟನೆಗಳಿಗೆ ಸಂಬಂಧಿಸಿದ ಲೆಕ್ಕ ಪುಸ್ತಕಗಳನ್ನು, ಹಣ ಸಂಗ್ರಹಣೆ ಮಾಹಿತಿಗಳ ಕುರಿತು ಶೋಧಿಸುವ ಮತ್ತು ಮುಟ್ಟುಗೋಲು ಹಾಕುವ ಅಧಿಕಾರವನ್ನು ನೀಡಲಾಗಿದೆ. ಅದರಂತೆ ಜಿಲ್ಲಾ ಪೊಲೀಸ್ ಘಟಕ ವ್ಯಾಪ್ತಿಯ 9 ಸ್ಥಳಗಳನ್ನು ಗುರುತಿಸಿ ಅಧಿಕಾರಿಗಳನ್ನು ನಿಯೋಜಿಸಿ, ಕಾರ್ಯಾಚರಣೆ ನಡೆಸಲಾಗಿದೆ.
ಪುತ್ತೂರಿನ ಕುಂಬ್ರ ಜಂಕ್ಷನ್ನಲ್ಲಿ ಪಿಎಫ್ಐ ಕಚೇರಿ ಜಪ್ತಿ
ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಕುಂಬ್ರ ಜಂಕ್ಷನ್ ನಲ್ಲಿರುವ ಸುಲೈಮಾನ್ ಫ್ಯಾಮಿಲಿ ಕಾಂಪ್ಲೆಕ್ಸ್ 1ನೇ ಮಹಡಿಯಲ್ಲಿ ನಿಷೇಧಿತ ಸಂಘಟನೆ ಫಿ.ಎಫ್.ಐ ಕಚೇರಿಯ ಮೇಲೆ ಸೆ.28ರ ರಾತ್ರಿ 10.10ಕ್ಕೆ ತಹಶೀಲ್ದಾರ್ ಹಾಗೂ ಅಧಿಕಾರಿಗಳ ತಂಡ ದಾಳಿ ನಡೆಸಿದ್ದಾರೆ. ಆ ಸಂದರ್ಭದಲ್ಲಿ ಎಸ್.ಡಿ.ಪಿ.ಐ ಬರಹದ 7 ಬಾವುಟ, ಎಸ್.ಡಿ.ಪಿ.ಐ ಸಂಘಟನೆಗೆ ನೋಂದಣಿ ನಮೂನೆಗಳನ್ನು ಒಳಗೊಂಡ ಒಂದು ಪುಸ್ತಕ, 4 ಖಾಲಿ ನೋಟ್ ಬುಕ್, 2 ಮಲಗುವ ಹುಲ್ಲಿನ ಚಾಪೆ, 8 ಫೈಲ್ ರ್ಯಾಪರ್, 7 ಫೈಲ್ ಕವರ್ ಗಳು, 1 ಪ್ಲಾಸ್ಟಿಕ್ ಟರ್ಪಾಲ್, 1 ಗೋಡೆ ಗಡಿಯಾರ, 1 ಮೈಕ್, 1 ಎಸ್.ಡಿ.ಪಿ.ಐ ಪಕ್ಷದ ನಾಮಫಲಕ, 2 ಮೇಜು, 25 ಪ್ಲಾಸ್ಟಿಕ್ ಕುರ್ಚಿಗಳು, 1 ಬ್ಲಾಕ್ ಬೋರ್ಡ್, 1 ಚಾಕ್ ಪೀಸ್, 1 ಡಸ್ಟರ್ ಹಾಗೂ 1 ಗೋದ್ರೆಜ್ ಕಪಾಟುಗಳನ್ನು ವಶ ಪಡಿಸಿಕೊಂಡು ಅದೇ ಕೊಠಡಿಯಲ್ಲಿಟ್ಟು, ಬೀಗ ಹಾಕಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಸುಪರ್ದಿಗೆ ಒಪ್ಪಿಸಲಾಗಿದೆ.
ಬೆಳ್ಳಾರೆ ಮಸೀದಿ ಎದುರಿನ ಕಚೇರಿ ಸೀಜ್
ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದಲ್ಲಿ ಬೆಳ್ಳಾರೆ ಝಕಾರಿಯ ಮಸ್ಜಿದ್ ಎದುರುಗಡೆ ಇರುವ ಕಟ್ಟಡದ ಮೊದಲ ಮಹಡಿಯಲ್ಲಿ ನಿಷೇಧಿತ ಸಂಘಟನೆಯ ಮೇಲೆ ಸೆ.28ರ ರಾತ್ರಿ 10.49ಕ್ಕೆ ತಹಶೀಲ್ದಾರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಕೊಠಡಿಯಲ್ಲಿ 2 ಕಬ್ಬಿಣದ ಮೇಜು, 38 ಫೈಬರ್ ಚಯರ್, 5 ಮರದ ಚೆಯರ್, 3 ಬಹುಮಾನ ಟ್ರೋಫಿ, 1 ವಿದ್ಯುತ್ ಟೇಬಲ್ ಲ್ಯಾಂಪ್, 75 ಎಸ್.ಡಿ.ಪಿ.ಐ ಬಟ್ಟೆ ಶಾಲು, 1 ಪಿ.ಎಪ್.ಐ ದೊಡ್ಡ ಬ್ಯಾನರ್, 1 ಬಿ.ಜೆ.ಪಿ ವಿರುದ್ಧ ಬ್ಯಾನರ್, 1 ಪಿ.ಎಫ್.ಐ ಚಿಹ್ನೆ ಇರುವ ಗೋಡೆ ಗಡಿಯಾರ, 1 ಭಾರತೀಯ ರಾಷ್ಟ್ರ ಧ್ವಜ, 1 ಕೊಡೆ, 1 ಟ್ವಿಟ್ಟರ್ ಕಲಿಸುವ ಚಿಹ್ನೆ ಇರುವ ಬ್ಲಾಕ್ ಬೋರ್ಡ್, 1 ಕೆಂಪು ಹಸಿರು ಬಣ್ಣದಿಂದ ಸುತ್ತಿದ ಕಬ್ಬಿಣದ ಧ್ವಜ ಕಂಬ, 60 ಸರ್ಕಾರವನ್ನು ವಿರೋಧಿಸುವ ಭಿತ್ತಿಪತ್ರಗಳು, 1 ಫ್ಯಾನ್, 1 ಝಕಾರಿಯ ಮಸೀದಿಯ ಹೆಸರಿನಲ್ಲಿರುವ ವಿದ್ಯುತ್ ಬಿಲ್‍ಗಳನ್ನು ವಶಕ್ಕೆ ಪಡೆದುಕೊಂಡು ರಾತ್ರಿ 11.45ಕ್ಕೆ ಶೋಧನಾ ಕಾರ್ಯಾಚರಣೆ ಮುಗಿಸಿದ್ದು ಸೊತ್ತುಗಳನ್ನು ಅದೇ ಕೊಠಡಿಯಲ್ಲಿರಿಸಿ, ಬೀಗ ಜಡಿದು, ಸೀಲು ಮಾಡಿ ಬೆಳ್ಳಾರೆ ಪೊಲೀಸ್ ಠಾಣೆ ಉಪ ನಿರೀಕ್ಷಕರಿಗೆ ತಹಸೀಲ್ದಾರ್ ಹಸ್ತಾಂತರಿಸಿದ್ದಾರೆ.
ಪುತ್ತೂರಿನಲ್ಲಿ ಪಿಎಫ್ಐಗೆ ಸೇರಿದ ಇಲೆಕ್ಟ್ರಾನಿಕ್ ಉಪಕರಣ ವಶಕ್ಕೆ
ಪುತ್ತೂರು ನಗರ ವ್ಯಾಪ್ತಿಯ ಪುತ್ತೂರು ಸ್ವಭಾನ್ ಸೊಸೈಟಿ ಹತ್ತಿರದ ಕೆ.ಪಿ. ಕಾಂಪ್ಲೆಕ್ಸ್ ಎರಡನೇ ಮಹಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನಿಷೇಧಿತ ಸಂಘಟನೆ ಕಚೇರಿಯನ್ನು ಸೆ.29ರ ಮಧ್ಯಾಹ್ನ 1 ಗಂಟೆಗೆ ಅಧಿಕಾರಿಗಳು ದಾಳಿ ನಡೆಸಿ 1 ಡೆಲ್ ಕಂಪನಿಯ ಮಾನಿಟರ್, 1 ಪ್ರಂಟ್ ಎಕ್ಸ್ ಪೆಸ್ ಕಂಪನಿಯ ಸಿಪಿಯು, 1 ಎಸ್ಕಾನ್ ಕಂಪನಿಯ ಸ್ಕ್ಯಾನರ್, 1 ಕೆನಾನ್ ಕಂಪನಿಯ ಸ್ಕ್ಯಾನರ್, 1 ಹೆರ್ರಿ ಸ್ಪೀಕರ್ ಮತ್ತು ಮೈಕ್, 1 ಪ್ರಾಮಿಸ್ಸ್ ಕಂಪನಿಯ ಗೋಡೆ ಗಡಿಯಾರ, 3 ಪ್ರಸ್ತುತ ಪುಸ್ತಕ, 8 ನ್ಯಾಯ ಪಥ ಪತ್ರಿಕೆ, 2 ಲೆನವೋ ಕಂಪನಿಯ ಸ್ಪೀಕರ್, 1 ಪಿ.ಎಫ್.ಐ ಎಂದು ಬರೆದ ಕೆ.ಪಿ ಕಾಂಪ್ಲೆಕ್ಸ್ ರವರು ನೀಡಿದ ವಿದ್ಯುತ್ ಬಿಲ್, 1 ಬ್ಲಾಕ್ ಬೋರ್ಡ್, 2 ಪ್ಲಾಸ್ಟಿಕ್ ವಿಸಿಲ್, 1 ಗೋದ್ರೇಜ್ ಕಪಾಟು, 1 ಕಬ್ಬಿಟದ ಗೋದ್ರೇಜ್, 2 ಕಂಪ್ಯೂಟರ್ ಟೇಬಲ್, 1 ಫಿ.ಎಫ್.ಐ ಎಂದು ನಮೂದು ಮಾಡಿದ ಡಸ್ಟರ್, 1 ಹೋಮ್ ಯು.ಪಿ.ಎಸ್ ಕಂಪನಿಯ ಇನ್ವರ್ಟರ್ ಹಾಗೂ 1 ಮೆಗ್ಗಿಮೊ ಕಂಪನಿಯ ಬ್ಯಾಟರಿಯನ್ನು ವಶಕ್ಕೆ ಪಡೆದು, ಅವುಗಳನ್ನು ಅದೇ ಕಚೇರಿಯ ಕೊಠಡಿಯಲ್ಲಿಟ್ಟು ಬೀಗ ಹಾಕಿ ಕೀಯನ್ನು ನಗರ ಸಭೆಯ ಪೌರಾಯುಕ್ತರ ಸುಪರ್ದಿಗೆ ಒಪ್ಪಿಸಲಾಗಿದೆ.
ಫರಂಗಿಪೇಟೆ ಎಸ್.ಡಿ.ಪಿ.ಐ ಕಚೇರಿ ಜಪ್ತಿ
ಬಂಟ್ವಾಳ ತಾಲೂಕಿನ ಪುದು ಗ್ರಾಮದ ಪರಂಗಿಪೇಟೆಯಲ್ಲಿ ಎಸ್.ಡಿ.ಪಿ.ಐ ಕಚೇರಿ ಮೇಲೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ನಿರೀಕ್ಷಕರು ಅಧಿಕಾರಿಗಳು ಸೆ.28 ರಂದು ದಾಳಿ ನಡೆಸಿ 60 ಚೇರು, 2 ಮರದ ಟೇಬಲ್, 1 ಫೈಬರ್ ಟೇಬಲ್, 2 ವೈಟ್ ಬೋರ್ಡ್, 1 ಗೋಡೆ ಗಡಿಯಾರ, 4 ಫ್ಯಾನ್, 6 ಚಿಕ್ಕ ಟ್ರೋಫಿ, ದೊಡ್ಡ ಶೀಲ್ಡ್, 1 ಪ್ರಸ್ತುತ ಪಾಕ್ಷಿಕ ಪತ್ರಿಕೆ, 1 ಎಸ್.ಡಿ.ಪಿ.ಐ ಬಾವುಟ, 5 ಎಸ್.ಡಿ.ಪಿ.ಐ ಬ್ರಾಂಚ್ ರಿಜಿಸ್ಟರ್, 1 ಎಸ್.ಡಿ.ಪಿ.ಐ ಲೆಟರ್ ಪ್ಯಾಡ್, 2 ಕ್ಯಾಡರ್ ರಿನೀವಲ್ ಡಿಟೈಲ್ ಪುಸ್ತಕ, 1 ಎಸ್.ಡಿ.ಪಿ.ಐ ಸೆಕ್ರೆಟರಿ ಸೀಲ್, 1 ಕೊಡೆ, 1 ನ್ಯಾಷನಲ್ ವುಮೆನ್ಸ್ ಫ್ರಂಟ್‍ಗೆ ಸಂಬಂಧಿಸಿದ ಬ್ಯಾನರ್ ಹಾಗೂ 4 ಲೈಟ್ ಬಲ್ಬ್ ಗಳನ್ನು ವಶಪಡಿಸಿ ಅದೇ ಕೊಠಡಿಯಲ್ಲಿರಿಸಿ ಬೀಗ ಹಾಕಿ ಪೊಲೀಸ್ ಉಪ ನಿರೀಕ್ಷಕರ ಸುಪರ್ದಿಗೆ ನೀಡಲಾಗಿದೆ.
ಕುಕ್ಕಾಜೆಯಲ್ಲಿ ಎಸ್ಡಿಪಿಐ ಕಚೇರಿ ಜಪ್ತಿ
ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಕುಕ್ಕಾಜೆ ಜಂಕ್ಷನ್‍ನ ಬದ್ರಿಯ ಕಾಂಪ್ಲೆಕ್ಸ್ ನಲ್ಲಿರುವ ಎಸ್.ಡಿ.ಪಿ.ಐ ಕಚೇರಿ ಮೇಲೆ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳ ನೇತೃತ್ವದಲ್ಲಿ ಸೆ.28ರಂದು ದಾಳಿ ನಡೆಸಿ 30 ಪ್ಲಾಸ್ಟಿಕ್ ಕುರ್ಚಿ, 2 ಮೀಟಿಂಗ್ ಟೇಬಲ್, 2 ಮರದ ಟೇಬಲ್, 2 ಎಸ್.ಡಿ.ಪಿ.ಐ ಬ್ಯಾನರ್ ಹಾಗೂ 2 ಫ್ಯಾನ್‍ಗಳನ್ನು ವಶಪಡಿಸಿಕೊಂಡು ಅದೇ ಕೊಠಡಿಯಲ್ಲಿ ಇರಿಸಲಾಗಿದೆ ಎಂದು ಜಿಲ್ಲಾಧಿಕಾರಿಯವರ ಕಚೇರಿ ಪ್ರಕಟಣೆ ತಿಳಿಸಿದೆ.
PFI offices properties in Nine places including Puttur, Sullia seized in the presence of Thasildar.
15-05-25 10:16 pm
HK News Desk
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
15-05-25 08:04 pm
Mangalore Correspondent
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm