ಬ್ರೇಕಿಂಗ್ ನ್ಯೂಸ್
01-10-22 09:17 pm Giridhar Shetty, Mangalore ಕರಾವಳಿ
ಮಂಗಳೂರು, ಅ.1: ಕರಾವಳಿಯಲ್ಲಿ ದಸರಾ ಅಂದ್ರೆ ಹುಲಿವೇಷ. ಹುಲಿಯ ಕುಣಿತ ಅದೆಷ್ಟು ಅಪ್ಯಾಯಮಾನ ಅಂದರೆ, ಹುಲಿವೇಷದ ಬಗ್ಗೆ ತಿಳಿಯದವರನ್ನೂ ಒಮ್ಮೆಗೆ ಮೈಮನ ಪುಳಕಿತಗೊಳಿಸುತ್ತೆ. ತಾಸೆಯ ಪೆಟ್ಟು ದೂರದಿಂದ ಕೇಳಿದರೆ ಸಾಕು ಕೆಲವು ಯುವಕರು ತಮಗರಿವಿಲ್ಲದೇ ಹೆಜ್ಜೆ ಹಾಕುತ್ತಾರೆ. ಹಾಗಾಗಿ ದಸರಾ ಹಬ್ಬದ ಹುಲಿವೇಷಕ್ಕೂ ಕರಾವಳಿಗೂ ಏನೋ ಅವಿನಾಭಾವ ನಂಟು. ಆದರೆ ಈಗೀಗ ಈ ಹುಲಿವೇಷವೂ ಹೈಟೆಕ್ ಆಗಿದೆ. ದಸರಾ ಅಲ್ಲದ ಸಂದರ್ಭದಲ್ಲೂ ಯಾರದ್ದೋ ಪ್ರಚಾರಕ್ಕಾಗಿ ಹುಲಿ ವೇಷ ಹಾಕಿ ಕುಣಿಯುವುದು ಕಂಡುಬರುತ್ತದೆ. ಈ ಬಾರಿಯಂತೂ ಅಪಾರ ಜನಾಕರ್ಷಣೆಗೆ ಕಾರಣವಾಗುವ ಹುಲಿಗಳ ಕುಣಿತದ ಸ್ಪರ್ಧೆಯನ್ನೇ ಮುಂದಿಟ್ಟು ಚುನಾವಣೆ ಕಾಲದಲ್ಲಿ ರಾಜಕೀಯ ನಾಯಕರು ಪ್ರಚಾರದ ವೇದಿಕೆ ಮಾಡಿಕೊಂಡಿದ್ದಾರೋ ಅನ್ನುವ ಮಾತು ಕೇಳಿಬಂದಿದೆ.
ಯಾಕಂದ್ರೆ, ಇದೇ ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜಕೀಯ ನಾಯಕರು ಪ್ರಚಾರದ ಹುಚ್ಚಿಗೆ ಬಿದ್ದು ಹುಲಿ ಕುಣಿತದ ಸ್ಪರ್ಧೆ ಏರ್ಪಡಿಸಿದ್ದಾರೆ. ಮಂಗಳೂರಿನಲ್ಲಿ ಕಾಂಗ್ರೆಸ್ ಮುಖಂಡ ಮಿಥುನ್ ರೈ ಕಳೆದ ಆರು ವರ್ಷಗಳಿಂದ ಹುಲಿ ವೇಷದ ಸ್ಪರ್ಧೆಯನ್ನು ಪಿಲಿ ನಲಿಕೆ ಹೆಸರಲ್ಲಿ ಮಾಡಿಕೊಂಡು ಬಂದಿದ್ದಾರೆ. ಅದನ್ನು ಪ್ರಚಾರಕ್ಕೆ ಬಳಸಿಕೊಂಡಿಲ್ಲ ಎಂದು ಹೇಳಿದರೂ, ಮಿಥುನ್ ರೈಗೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಸ್ವಲ್ಪ ಹೆಸರು ತಂದುಕೊಟ್ಟಿದ್ದು ಇದೇ ಹುಲಿ ಕುಣಿತ. ಮಂಗಳೂರಿನ ಮಂಗಳಾ ಕ್ರೀಡಾಂಗಣದ ಬಳಿ ಪ್ರತಿ ವರ್ಷ ಹುಲಿ ಕುಣಿತದ ಸ್ಪರ್ಧೆ ಏರ್ಪಡಿಸುತ್ತಿದ್ದು, ಈ ಬಾರಿ ಏಳನೇ ವರ್ಷದ ‘ಪಿಲಿ ನಲಿಕೆ’ ಕರಾವಳಿ ಉತ್ಸವ ಮೈದಾನದಲ್ಲಿ ಅ.4ರಂದು ನಡೆಯಲಿದೆ.
ನೆಹರು ಮೈದಾನದಲ್ಲಿ ಹುಲಿವೇಷ ಸ್ಪರ್ಧೆ
ಆದರೆ ಮಿಥುನ್ ರೈ ನಡೆಸುವ ಹುಲಿ ಕುಣಿತಕ್ಕೆ ಕೌಂಟರ್ ಅನ್ನುವಂತೆ ಬಿಜೆಪಿ ನಾಯಕರು ಕೂಡ ಈ ಬಾರಿ ಹುಲಿ ಕುಣಿತದ ಸ್ಪರ್ಧೆ ಏರ್ಪಡಿಸಿದ್ದಾರೆ. ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಮತ್ತು ನಳಿನ್ ಕುಮಾರ್ ನೇತೃತ್ವದಲ್ಲಿ ಬಿಜೆಪಿ ನಾಯಕರು ನೆಹರು ಮೈದಾನದಲ್ಲಿ ಅ.2ರಂದು ಅದ್ದೂರಿಯಾಗಿ ಹುಲಿ ಕುಣಿತದ ಸ್ಪರ್ಧೆ ಏರ್ಪಡಿಸಿದ್ದು, ‘’ಪಿಲಿ ಪರ್ಬ’’ ಎನ್ನುವ ಹೆಸರನ್ನೂ ಇಟ್ಟಿದ್ದಾರೆ. ಸ್ಪರ್ಧೆ ಗೆದ್ದವರಿಗೆ ದೊಡ್ಡ ಮೊತ್ತದ ಬಹುಮಾನವನ್ನೂ ಇಟ್ಟಿದ್ದು, ಜನಾಕರ್ಷಣೆ ಗಿಟ್ಟಿಸುವುದಕ್ಕಾಗಿಯೇ ನಾನಾ ರೀತಿಯ ವಿನೋದಾವಳಿ, ಬಂದವರಿಗೆಲ್ಲ ಊಟದ ವ್ಯವಸ್ಥೆ, ಮಕ್ಕಳು, ಯುವಕರು ಹುಲಿಯ ಬಣ್ಣ ಹಚ್ಚುವುದಿದ್ದರೆ ಅದಕ್ಕೂ ವ್ಯವಸ್ಥೆಯನ್ನು ಮಾಡಿದ್ದಾರೆ. ಜೊತೆಗೆ, ಹುಲಿ ವೇಷಧಾರಿಗಳ ಮುಖವರ್ಣಿಕೆಯನ್ನು ಮಾರಾಟಕ್ಕಿಡುವುದು, ಪ್ರದರ್ಶನ ಮಾಡಿಸುವ ವ್ಯವಸ್ಥೆಯನ್ನೂ ಮಾಡಿದ್ದಾರೆ. ಸಹಜವಾಗಿಯೇ ರಾಜ್ಯದ ಆಡಳಿತಾರೂಢ ಬಿಜೆಪಿ ನಾಯಕರು ಹುಲಿ ಕುಣಿತದ ಸ್ಪರ್ಧೆ ಏರ್ಪಡಿಸಿರುವುದರಿಂದ ಜನರಿಗೂ ನಿರೀಕ್ಷೆಗಳಿವೆ.
ಪುತ್ತೂರು, ಕಾಪುನಲ್ಲೂ ಹುಲಿ ಕುಣಿತದ ಸ್ಪರ್ಧೆ
ಇಷ್ಟಕ್ಕೇ ಆದರೆ ಈ ಹುಲಿ ಕುಣಿತದ ಸ್ಪರ್ಧೆ ಮಂಗಳೂರಿಗೆ ಸೀಮಿತ ಆಗುತ್ತಿತ್ತು. ಆದರೆ, ಅ.1ರಂದು ಪುತ್ತೂರು ಮತ್ತು ಕಾಪುವಿನಲ್ಲೂ ಇದೇ ಮೊದಲ ಬಾರಿಗೆ ಹುಲಿ ಕುಣಿತದ ಸ್ಪರ್ಧೆ ನಡೆದಿದೆ. ಪುತ್ತೂರಿನಲ್ಲಿ ಶಾಸಕ ಸ್ಥಾನದ ಟಿಕೆಟ್ ಆಕಾಂಕ್ಷಿಯಾಗಿರುವ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ನೇತೃತ್ವದಲ್ಲಿ ಪುತ್ತೂರ್ದ ಪಿಲಿ ನಲಿಕೆ ಸೀಸನ್-1 ಹೆಸರಲ್ಲಿ ಹುಲಿವೇಷದ ಸ್ಪರ್ಧೆ ನಡೆಸಿದ್ದಾರೆ. ತಾಲೂಕು ವ್ಯಾಪ್ತಿಯ ಗಣ್ಯರನ್ನು ಕಾರ್ಯಕ್ರಮಕ್ಕೆ ಕರೆಸಿ ಪ್ರಚಾರದ ತಾಲೀಮು ಆರಂಭಿಸಿದ್ದಾರೆ. ಕಾಪು ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಯಾಗಿರುವ ಮಾಜಿ ಶಾಸಕ ವಿನಯಕುಮಾರ್ ಸೊರಕೆ ನೇತೃತ್ವದಲ್ಲಿ ಹುಲಿ ವೇಷದ ಕುಣಿತದ ಸ್ಪರ್ಧೆಯನ್ನು ಅ.4ರಂದು ಏರ್ಪಡಿಸಿದ್ದು ಅಲ್ಲಿಯೂ ಜನಾಕರ್ಷಣೆ, ಪ್ರಚಾರ ಗಿಟ್ಟಿಸುವ ಪ್ರಯತ್ನ ನಡೆದಿದೆ.
ರಾಜಕೀಯಕ್ಕೆ ಬಳಸಿಲ್ಲ – ಮಿಥುನ್ ರೈ
ಕಾಂಗ್ರೆಸ್ ಮುಖಂಡ ಮಿಥುನ್ ರೈ ಮೂಡುಬಿದ್ರೆಯಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದು, ಅಲ್ಲಿ ಎರಡು-ಮೂರು ವರ್ಷಗಳಿಂದ ತಳಮಟ್ಟದಲ್ಲಿ ತೊಡಗಿಸಿಕೊಂಡಿದ್ದಾರೆ. ಮಂಗಳೂರಿನಲ್ಲಿ ಹುಲಿವೇಷ ಕುಣಿತದ ಸ್ಪರ್ಧೆಯನ್ನು ನಡೆಸಿಕೊಂಡು ಬಂದಿರುವ ಮಿಥುನ್ ರೈ, ಇದನ್ನು ರಾಜಕೀಯ ಪ್ರಚಾರಕ್ಕೆ ಅಂತ ಬಳಸಿಕೊಂಡಿಲ್ಲ. ಸಣ್ಣಂದಿನಿಂದಲೂ ಹುಲಿ ವೇಷ ಅಂದ್ರೆ ಇಷ್ಟಪಡುತ್ತಿದ್ದೆ. ಕರಾವಳಿಯ ಮಣ್ಣಿನ ಕಲೆ, ಸಂಪ್ರದಾಯ ಅನ್ನುವ ನೆಲೆಯಲ್ಲಿ ಪ್ರೋತ್ಸಾಹ ನೀಡುವ ಕಾರಣಕ್ಕೆ ಹುಲಿವೇಷದ ಸ್ಪರ್ಧೆ ಏರ್ಪಡಿಸಿದ್ದೆ. ಅದರಲ್ಲಿ ರಾಜಕೀಯ ನೋಡಿಲ್ಲ. ಈ ಬಾರಿ ನನ್ನ ಹುಟ್ಟಿದ ದಿನವೇ ಅ.4ರಂದು ಹುಲಿವೇಷದ ಸ್ಪರ್ಧೆ ನಡೆಯುತ್ತಿದೆ. ಬಿಜೆಪಿಯವರು ರಾಜಕೀಯ ಪ್ರತಿಷ್ಠೆಯಾಗಿ ಮಾಡಿದ್ದಾರೋ ಗೊತ್ತಿಲ್ಲ. ಅವರಿಗೆ ಹುಲಿ ವೇಷದ ಬಗ್ಗೆ ನೈಜ ಆಸಕ್ತಿ ಇರುತ್ತಿದ್ದರೆ ಈ ಮೊದಲೇ ಮಾಡಬಹುದಿತ್ತು ಎಂದಿದ್ದಾರೆ ಮಿಥುನ್ ರೈ.
Tiger politics in Mangalore Karavali, both leaders from Congress and BJP in the race, for the first time Pili Parba by MLA Vedavyas Kamath is been organised to counter the Pili Nalike which is always organsied by Congress leader Mithun Rai since six years.
16-11-24 04:25 pm
HK News Desk
ಮುನಿರತ್ನ ಹನಿಟ್ರ್ಯಾಪ್, ಏಡ್ಸ್ ಚುಚ್ಚುಮದ್ದು ಪ್ರಕರ...
15-11-24 03:45 pm
ಕೋವಿಡ್ ಅಕ್ರಮ ತನಿಖೆಗೆ ಎಸ್ಐಟಿ ; ಯಡಿಯೂರಪ್ಪ, ಶ್ರೀ...
15-11-24 03:12 pm
ಅಬಕಾರಿ ಸಚಿವನಿಗೆ ಮಂಗಳಾರತಿ ; ಲಂಚ ಹಿಂದೆಯೂ ಇತ್ತು,...
14-11-24 10:08 pm
Cm Siddaramaiah, Mysuru, BJP; ಬಿಜೆಪಿಗೆ ಆಪರೇಶನ...
14-11-24 02:09 pm
14-11-24 11:11 pm
HK News Desk
ಅಮೆರಿಕದ ಗುಪ್ತಚರ ಸಂಸ್ಥೆ ಮುಖ್ಯಸ್ಥರಾಗಿ ಹಿಂದು ಮಹಿ...
14-11-24 05:58 pm
ಸುದೀರ್ಘ 18 ವರ್ಷಗಳ ಹಿಂದೆ ಕೊಲೆಯಾದ ಕೊಡಗಿನ ಸಫಿಯಾಗ...
12-11-24 09:00 pm
ಬಾಂಗ್ಲಾ ಅಲ್ ಖೈದಾ ಟೆರರ್ ಫಂಡಿಂಗ್ ; ಕರ್ನಾಟಕ, ಬಿ...
12-11-24 12:35 pm
ಬಾಬಾ ಸಿದ್ದಿಕಿಯನ್ನು ಕೊಲೆಗೈದು ತಲೆಮರೆಸಿದ್ದ ಬಿಷ್ಣ...
11-11-24 05:19 pm
16-11-24 08:41 pm
Mangalore Correspondent
Mangalore excise raid, Liquor, Crime: ಮನೆಯಲ್ಲ...
16-11-24 06:55 pm
Mangalore Dinesh Gundu Rao,: ಆರಗ ಜ್ಞಾನೇಂದ್ರಗೆ...
16-11-24 03:54 pm
Zameer Ahmed, Mangalore, CP Yogeshwar: ಚನ್ನಪಟ...
16-11-24 02:23 pm
Malali mosque row, VHP, Waqf: ಮಳಲಿ ಮಸೀದಿ ವಕ್ಫ...
16-11-24 12:03 pm
16-11-24 08:05 pm
Bangalore Correspondent
Mangalore cyber crime, Fraud: ಸಿಬಿಐ ಅಧಿಕಾರಿ ಸ...
16-11-24 12:58 pm
Bangalore Police, Blackmail, Crime, Basavanag...
14-11-24 04:32 pm
Mangalore crime, Mulki case: ಪಕ್ಷಿಕೆರೆ ದುರಂತ...
12-11-24 07:02 pm
Mangalore crime, Bajarang Dal, Ullal News: ಉಳ...
12-11-24 11:41 am