ಬ್ರೇಕಿಂಗ್ ನ್ಯೂಸ್
03-10-22 05:27 pm Mangalore Correspondent ಕರಾವಳಿ
ಮಂಗಳೂರು, ಅ.3: ರಾಷ್ಟ್ರೀಯ ಹೆದ್ದಾರಿ -169ರ ಬಿಕರ್ನಕಟ್ಟೆಯಿಂದ ಕಾರ್ಕಳದ ಸಾಣೂರು ವರೆಗಿನ ರಸ್ತೆಯನ್ನು ಚತುಷ್ಪಥವಾಗಿಸಲು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ರಸ್ತೆಯುದ್ದಕ್ಕೂ ಇರುವ ಅರಣ್ಯ ಇಲಾಖೆಗೆ ಸೇರಿದ ಬೃಹತ್ ಮರಗಳನ್ನು ಕಡಿಯಲಾಗುತ್ತಿದ್ದು, ಅದರಲ್ಲಿ ಭಾರೀ ಭ್ರಷ್ಟಾಚಾರ ನಡೆದಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ವತಿಯಿಂದ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ.
ಈಗಾಗಲೇ ಗುರುಪುರ, ಕೈಕಂಬ, ಸೂರಲ್ಪಾಡಿ, ಮಿಜಾರು ಭಾಗದಲ್ಲಿ 50ರಷ್ಟು ಮರಗಳನ್ನು ಕಡಿಯಲಾಗಿದೆ. ಬೃಹತ್ ಹಲಸಿನ ಮರಗಳು, ಮಾವಿನ ಮರಗಳು, ಬೋವು ಜಾತಿಯ ಮರಗಳಿದ್ದು, ಅವುಗಳ ದರವನ್ನು ಅರಣ್ಯ ಇಲಾಖೆಯಿಂದ ಜುಜುಬಿಯಾಗಿ ತೋರಿಸಲಾಗಿದೆ. ಕುಲಶೇಖರದಿಂದ ಸಾಣೂರು ವರೆಗೆ ಸುಮಾರು 1227 ಮರಗಳನ್ನು ಕಡಿಯುವ ಬಗ್ಗೆ ಗುರುತು ಹಾಕಲಾಗಿದೆ. ಆದರೆ ಇಷ್ಟೊಂದು ಮರಗಳ ಮೌಲ್ಯವನ್ನು ಕೇವಲ 13.61 ಲಕ್ಷ ಎಂದು ತೋರಿಸಲಾಗಿದೆ. ಇದರ ಬದಲಿಗೆ ಒಂದು ಮರಕ್ಕೆ ಹತ್ತರಂತೆ ಗಿಡಗಳನ್ನು ನೆಡುವುದಕ್ಕೆ ಇಲಾಖೆಯಿಂದ ಯೋಜನೆ ಹಾಕಿದ್ದು, ಅದಕ್ಕಾಗಿ 12,230 ಗಿಡಗಳನ್ನು ನೆಡಲು 74.12 ಲಕ್ಷ ರೂಪಾಯಿ ಅಂದಾಜು ಖರ್ಚು ತೋರಿಸಲಾಗಿದೆ. ಅಲ್ಲದೆ, ಮರಗಳನ್ನು ಸರ್ವೆ ಮಾಡುವುದಕ್ಕಾಗಿ 15.24 ಲಕ್ಷ ಖರ್ಚು ತೋರಿಸಲಾಗಿದೆ. ಇದಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಒಟ್ಟು 91 ಲಕ್ಷ ರೂ. ಮೊತ್ತವನ್ನು ಈಗಾಗಲೇ ಅರಣ್ಯ ಇಲಾಖೆಗೆ ನೀಡಲಾಗಿದೆ. ಇದರಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂದು ಎನ್ಇಸಿಎಫ್ ಲೋಕಾಯುಕ್ತಕ್ಕೆ ದೂರು ನೀಡಿದೆ.
ಮರಗಳಿಗಿಂತ ಸರ್ವೆ ನಡೆಸುವುದಕ್ಕೇ ಹೆಚ್ಚು ಖರ್ಚು !
ಅರಣ್ಯ ಇಲಾಖೆಯ ಲೆಕ್ಕದ ಪ್ರಕಾರ, ಅಲ್ಲಿರುವ ಮರಗಳಿಗಿಂತ ಅವುಗಳ ಬಗ್ಗೆ ಸರ್ವೆ ನಡೆಸಿದ್ದಕ್ಕೆ ಹೆಚ್ಚು ಖರ್ಚಾಗಿದೆ. ಮರಗಳ ಮೌಲ್ಯಕ್ಕಿಂತ ಗಿಡ ನೆಡುವುದಕ್ಕೆ ನಾಲ್ಕು ಪಟ್ಟು ಹೆಚ್ಚು ಖರ್ಚು ತೋರಿಸಿದ್ದಾರೆ. ಅರಣ್ಯಾಧಿಕಾರಿಗಳ ಲೆಕ್ಕದಲ್ಲಿ ಮರಗಳಿಗಿಂತ ಗಿಡಗಳಿಗೇ ಹೆಚ್ಚು ಬೆಲೆ ಇರುವಂತೆ ತೋರುತ್ತಿದೆ. ಸೂರಲ್ಪಾಡಿಯಲ್ಲಿ ದೊಡ್ಡ ಹಲಸಿನ ಮರ ಇದ್ದುದನ್ನು ಕಡಿದು ಹಾಕಲಾಗಿದೆ. ಅರಣ್ಯ ಇಲಾಖೆಯ ಪ್ರಕಾರ, ಈ ಮರ ಕೇವಲ 2 ಮೀಟರ್ ಎತ್ತರ ಮತ್ತು ಬುಡದಲ್ಲಿ ಒಂದೂವರೆ ಮೀಟರ್ ವ್ಯಾಸ ಇದೆಯಂತೆ. ಕಡಿದು ಹಾಕಿರುವ ಮರವನ್ನು ನೋಡಿದರೆ ವಾಸ್ತವ ಚಿತ್ರಣವೇ ಬೇರೆ ಇದೆ. ಅರಣ್ಯಾಧಿಕಾರಿಗಳು ಸುಳ್ಳಿನ ಬಂಡಲನ್ನೇ ವರದಿಯಲ್ಲಿ ನೀಡಿದ್ದಾರೆ ಎಂದು ಎನ್ಇಸಿಎಫ್ ಕಾರ್ಯಕರ್ತ ಬೆನೆಡಿಕ್ಟ್ ಡಿಸೋಜ ಆಕ್ಷೇಪಿಸಿದ್ದಾರೆ.
ಹಲಸಿನ ಮರಕ್ಕೆ ಮಾರುಕಟ್ಟೆಯಲ್ಲಿ ಚದರಡಿಗೆ 5 ಸಾವಿರ ರೂ. ಬೆಲೆ ಇದೆ. ಆದರೆ, ಇಲ್ಲಿ ಅರಣ್ಯಾಧಿಕಾರಿಗಳು ಅತ್ಯಲ್ಪ ಮೊತ್ತ ನಿಗದಿಪಡಿಸಿದ್ದಾರೆ. ಇಲ್ಲಿ ಮರಕಳ್ಳರ ಜೊತೆಗೆ ಅರಣ್ಯಾಧಿಕಾರಿಗಳೇ ಕೈಜೋಡಿಸಿದ್ದಾರೆ. ಮರಗಳ ರಕ್ಷಣೆ ಮಾಡಬೇಕಾದವರೇ ಮರಗಳನ್ನು ಕಡಿದು ದೋಚಲು ನಿಂತಿದ್ದಾರೆ ಎಂದು ಎನ್ಇಸಿಎಫ್ ರಾಜ್ಯ ಕಾರ್ಯದರ್ಶಿ ಶಶಿಧರ್ ಶೆಟ್ಟಿ ಆರೋಪಿಸಿದ್ದಾರೆ. ಈ ಕುರಿತು ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಜಸ್ಟಿಸ್ ಎಸ್.ಎ.ಬೋಬ್ಡೆ ನೀಡಿದ್ದ ತೀರ್ಪಿನ ಪ್ರಕಾರ, ಮರಗಳ ಮೌಲ್ಯವನ್ನು ಅದರ ವಯಸ್ಸಿನ ಆಧಾರದಲ್ಲಿ ನಿಗದಿ ಮಾಡಬೇಕೆಂದಿದೆ. ಆದರೆ, ಇಲ್ಲಿ ಅದ್ಯಾವುದೇ ಮಾನದಂಡವನ್ನು ಇಲಾಖೆಯವರು ಪರಿಗಣಿಸಿಲ್ಲ ಎಂದು ಹೇಳಿದ್ದಾರೆ.
ಎನ್ಇಸಿಎಫ್ ವತಿಯಿಂದ ಮಂಗಳೂರು ಲೋಕಾಯುಕ್ತ ಎಸ್ಪಿ ಮತ್ತು ಅರಣ್ಯ ಇಲಾಖೆಯ ವಿಜಿಲೆನ್ಸ್ ವಿಭಾಗಕ್ಕೆ ದೂರು ನೀಡಿದ್ದು, ಮುಂದೆ ಮರ ಕಡಿಯುವಾಗ ಲೋಕಾಯುಕ್ತ ಅಧಿಕಾರಿಗಳ ಉಪಸ್ಥಿತಿಯಲ್ಲೇ ಮರಗಳನ್ನು ಕಡಿಯಬೇಕೆಂದು ಆಗ್ರಹ ಮಾಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅರಣ್ಯ ಇಲಾಖೆಯ ಜಿಲ್ಲಾ ಸಂರಕ್ಷಣಾಧಿಕಾರಿ ದಿನೇಶ್ ಕುಮಾರ್, ಅರಣ್ಯ ಇಲಾಖೆಯ ಕ್ರಮವನ್ನು ಸಮರ್ಥಿಸಿದ್ದಾರೆ. ಮರಗಳನ್ನು ಕಡಿಯುವ ಮೊದಲು ಕೇವಲ ಕಣ್ಣೋಟಕ್ಕೆ ಅಂದಾಜು ಮಾಡಲಾಗಿದೆ. ಅವುಗಳನ್ನು ಕಡಿದ ಬಳಿಕ ಖಚಿತ ಅಳತೆಯನ್ನು ಮಾಡಲಾಗುವುದು. ಮರಗಳ ದಿಮ್ಮಿಯನ್ನು ಸರಿಯಾದ ಅಳತೆ ಮಾಡಿ, ಬೆಲೆ ನಿಗದಿ ಮಾಡಲಾಗುವುದು ಎಂದು ಹೇಳಿದ್ದಾರೆ.
National Environment Conservation Federation (NECF) has accused forest department of huge scam in the recounting of trees to be cut in the four lane development work of NH 169 from Bikkarnakatte to Sanur.The NECF has filed complaint with the Lokayukta SP and deputy forest conservator of vigilance squad of forest department. So far, 50 trees are cut for the project. However, further cutting of trees is stalled on the instructions of Lokayukta police.
15-07-25 01:32 pm
Bangalore Correspondent
ನಟಿ ಸರೋಜಾ ದೇವಿ- ಎಸ್ಸೆಂ ಕೃಷ್ಣ ಪ್ರೇಮ ಪ್ರಸಂಗ ; ಮ...
15-07-25 12:27 pm
ಕೇವಲ 2 ಸಾವಿರ ಲಂಚ ಕೇಳಿ ಸಿಕ್ಕಿಬಿದ್ದ ಪಂಚಾಯತ್ ಪಿಡ...
15-07-25 10:35 am
ಧರ್ಮಸ್ಥಳದಲ್ಲಿ 20 ವರ್ಷಗಳಲ್ಲಾದ ಯುವತಿಯರ ನಾಪತ್ತೆ-...
14-07-25 10:44 pm
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
15-07-25 10:40 pm
Mangalore Correspondent
Udupi Rain, Fishermen Missing: ಉಡುಪಿ ; ಭಾರೀ ಗ...
15-07-25 10:13 pm
Kmc Manipal Hospital, Mangalore, Health Card:...
15-07-25 07:19 pm
Karkala Parashurama Theme Park: ಕಾರ್ಕಳ ಪರಶುರಾ...
15-07-25 02:28 pm
Mangalore Accident, Alto Car: ದೆಹಲಿಯಿಂದ ಬಂದ ಗ...
15-07-25 10:32 am
15-07-25 10:57 pm
HK News Desk
Lawrence Bishnoi, Bangalore, Crime: ಡಾನ್ ಲಾರೆ...
15-07-25 06:52 pm
Mangalore, Moodbidri college, Rape, Blackmail...
15-07-25 06:07 pm
ಹಿಂದು ಯುವತಿಯರನ್ನು ಮತಾಂತರ ಮಾಡುತ್ತಿದ್ದಾನೆಂದು ಸು...
15-07-25 05:21 pm
Mangalore Police, Arrest, NITTE College Stude...
15-07-25 01:13 pm