ಬ್ರೇಕಿಂಗ್ ನ್ಯೂಸ್
04-10-22 03:04 pm Mangalore Correspondent ಕರಾವಳಿ
ಮಂಗಳೂರು, ಅ.4: ಪರೇಶ್ ಮೆಸ್ತಾ ಪ್ರಕರಣದಲ್ಲಿ ಸಿಬಿಐ ಅಧಿಕಾರಿಗಳು ಬಿ ರಿಪೋರ್ಟ್ ಹಾಕಿದ್ದಾರೆ. ಇದರೊಂದಿಗೆ ಸಾವಿನ ಮನೆಯಲ್ಲಿ ಬಿಜೆಪಿ ರಾಜಕೀಯ ಮಾಡುತ್ತದೆ ಎಂಬುದು ಸಾಬೀತಾಗಿದೆ. ಸಾವಿನ ಮನೆಯನ್ನು ಚುನಾವಣಾ ಲಾಭಕ್ಕೆ ಬಳಸಿಕೊಳ್ಳುವುದು ಬಿಜೆಪಿ ಚಾಳಿಯಾಗಿದೆ ಎಂದು ವಿಧಾನಸಭೆ ವಿಪಕ್ಷ ಉಪ ನಾಯಕ, ಕಾಂಗ್ರೆಸ್ ಮುಖಂಡ ಯುಟಿ ಖಾದರ್ ಹರಿಹಾಯ್ದಿದ್ದಾರೆ.
ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಖಾದರ್, ಬಡ ಕುಟುಂಬದ ಮನೆಯ ಸಂಕಷ್ಟವನ್ನು ಬೀದಿಗೆ ತಂದು ರಾಜಕೀಯ ಮಾಡುವುದು ಬಿಜೆಪಿ ಚಾಳಿ. ಸಿಬಿಐ ಈಗ ರಿಪೋರ್ಟ್ ಕೊಟ್ಟಿದ್ದು ಈಗ ಸಂಸದ ಅನಂತ್ ಕುಮಾರ್ ಹೆಗ್ಡೆ ಎಲ್ಲಿ ಹೋಗಿದ್ದಾರೆ. ರಾಜಕೀಯ ಹೇಳಿಕೆ ನೀಡಿದ್ದ ಶೋಭಾ ಕರಂದ್ಲಾಜೆ ಎಲ್ಲಿದ್ದಾರೆ ಎಂದು ಪ್ರಶ್ನಿಸಿದರು.
ಸಾವನ್ನು ರಾಜಕೀಯವಾಗಿ ಬಳಸುವುದು ಬಿಜೆಪಿಯ ಚುನಾವಣಾ ತಂತ್ರಗಾರಿಕೆ. ಪರೇಶ್ ಮೇಸ್ತಾ ಪ್ರಕರಣವನ್ನು ಸಿಬಿಐಗೆ ವಹಿಸಿದ್ದು ಹಿಂದಿನ ಕಾಂಗ್ರೆಸ್ ಸರಕಾರ. ಬಾವಿಯಲ್ಲಿ ಶವ ಪತ್ತೆಯಾಗಿದ್ದ ಘಟನೆಯ ಬಗ್ಗೆ ಬಿಜೆಪಿ ಮುಖಂಡರು ಇಲ್ಲ ಸಲ್ಲದ ಆರೋಪ ಮಾಡಿದ್ದರು. ಜನರನ್ನು ರೊಚ್ಚಿಗೆಬ್ಬಿಸಿ ಪೊಲೀಸ್ ವಾಹನಗಳಿಗೆ ಬೆಂಕಿ ಇಡುವಂತೆ ಪ್ರೇರೇಪಿಸಿದ್ದರು. ಪರೇಶ್ ಮೇಸ್ತಾ ಸಾವಿನ ಬಳಿಕ ಬಿಜೆಪಿ ಮುಖಂಡರು ಆತನ ಮನೆಗೆ ಸರಣಿಯಂತೆ ಭೇಟಿ ಕೊಟ್ಟು ಪ್ರವಾಸಿ ತಾಣ ಆಗಿಸಿದ್ದರು. ಇಲ್ಲ ಸಲ್ಲದ ಆರೋಪ, ಹೇಳಿಕೆ ನೀಡಿ ಅಧಿಕಾರಕ್ಕೆ ಬಂದ ಬಳಿಕ ಪರೇಶ್ ಮೇಸ್ತಾನ ಬಡ ಕುಟುಂಬವನ್ನು ಬಿಜೆಪಿ ನಾಯಕರು ಮರೆತಿದ್ದರು. ತಮ್ಮ ರಾಜಕೀಯ ಲಾಭಕ್ಕೆ ಬಳಸಿ ನಂತರ ಮರೆಯುವುದು ಬಿಜೆಪಿ ಮುಖಂಡರದ್ದು ಹಳೆ ಚಾಳಿ.
ಅಧಿಕಾರಕ್ಕೆ ಬಂದ ಬಳಿಕ ಒಬ್ಬ ಶಾಸಕನಾಗಲಿ, ಸಚಿವನಾಗಲಿ, ಸಂಸದರಾಗಲಿ ಮೇಸ್ತಾ ಮನೆಗೆ ಭೇಟಿ ನೀಡಿಲ್ಲ. ಸಂಕಷ್ಟದಲ್ಲಿದ್ದ ಮೇಸ್ತಾ ಕುಟುಂಬಕ್ಕೆ ಆರ್ಥಿಕ ಸಹಾಯವನ್ನೂ ಮಾಡಿಲ್ಲ. ಪ್ರತಿ ಸಾವಿನಲ್ಲಿ ರಾಜಕೀಯ ಮಾಡುವುದು ಬಿಜೆಪಿ ಬೆಳೆಸಿಕೊಂಡು ಬಂದ ಚಾಳಿ. ಇನ್ನು ಐದಾರು ತಿಂಗಳಲ್ಲಿ ಚುನಾವಣೆ ಬರಲಿದೆ. ಈ ರೀತಿಯ ಸಾವಿನ ರಾಜಕೀಯ ನಡೆಸುವ ಪ್ರಯತ್ನ ಬಿಜೆಪಿಗರಿಂದ ಮುಂದುವರಿಯಲಿದೆ. ಜನರು ಬಿಜೆಪಿ ನಾಯಕರ ರಾಜಕೀಯದ ಬಗ್ಗೆ ಗಂಭೀರ ಯೋಚಿಸ ಬೇಕಾಗಿದೆ. ಚುನಾವಣಾ ಸಂದರ್ಭದಲ್ಲಿ ಇವರ ರಾಜಕೀಯ ತೆವಲುಗಳ ಬಗ್ಗೆ ಜನರು ಜಾಗೃತರಾಗ ಬೇಕಾಗಿದೆ ಎಂದು ಯು.ಟಿ ಖಾದರ್ ಹೇಳಿದ್ದಾರೆ.
Bjp has played dirty game even in the death of Paresh Mesta slams UT Khader in Mangalore. Despite preliminary reports suggesting that Paresh Mesta, 18, died of accidental drowning, the death was projected by the BJP as the communal murder of a Sangh Parivar worker by a Muslim gang.
15-05-25 10:16 pm
HK News Desk
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
15-05-25 08:04 pm
Mangalore Correspondent
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm