ಪಿಎಫ್ಐ ರಸ್ತೆ ಬರಹ ಸರಕಾರಕ್ಕೆ, ಹಿಂದು ಸಮಾಜಕ್ಕೆ ಎಚ್ಚರಿಕೆ ; ಪ್ರಮೋದ್ ಮುತಾಲಿಕ್ 

05-10-22 06:04 pm       Udupi Correspondent   ಕರಾವಳಿ

ಬಂಟ್ವಾಳದಲ್ಲಿ ಕಾಣಿಸಿಕೊಂಡ ‘ಚಡ್ಡಿಗಳೇ ನಾವು ಮತ್ತೆ ಬರುತ್ತೇವೆ’ ಎಂಬ ಪಿಎಫ್ಐ ಪರವಾದ ರಸ್ತೆ ಬರಹ ಸರಕಾರ ಮತ್ತು ಹಿಂದು ಸಮಾಜಕ್ಕೆ ಎಚ್ಚರಿಕೆಯಾಗಿದೆ. ಇದನ್ನು ಹಗುರವಾಗಿ ಪರಿಗಣಿಸಬಾರದು ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಉಡುಪಿ, ಅ.5 : ಬಂಟ್ವಾಳದಲ್ಲಿ ಕಾಣಿಸಿಕೊಂಡ ‘ಚಡ್ಡಿಗಳೇ ನಾವು ಮತ್ತೆ ಬರುತ್ತೇವೆ’ ಎಂಬ ಪಿಎಫ್ಐ ಪರವಾದ ರಸ್ತೆ ಬರಹ ಸರಕಾರ ಮತ್ತು ಹಿಂದು ಸಮಾಜಕ್ಕೆ ಎಚ್ಚರಿಕೆಯಾಗಿದೆ. ಇದನ್ನು ಹಗುರವಾಗಿ ಪರಿಗಣಿಸಬಾರದು ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಉಡುಪಿಗೆ ಆಗಮಿಸಿದ್ದ ಅವರು ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಕೇಂದ್ರ ಸರಕಾರ ಪಿಎಫ್ಐ ಬ್ಯಾನ್ ಮಾಡಿ ನಾಯಕರನ್ನು ಅರೆಸ್ಟ್ ಮಾಡಿದರೂ ಇವರ ಆಟ ಮುಗಿಯೋದಿಲ್ಲ. ಪಿಎಫ್ಐ ಪರವಾಗಿ ಸಾವಿರಾರು ಕಮಿಟೆಡ್ ಕಾರ್ಯಕರ್ತರು ಇದ್ದಾರೆ. ಕುತಂತ್ರ, ಷಡ್ಯಂತ್ರ, ದೇಶದ್ರೋಹಿ ಪ್ರವೃತ್ತಿಯನ್ನು ಸಂಘಟನೆ ಬ್ಯಾನ್ ಮಾಡಿದ ಮಾತ್ರಕ್ಕೆ ತಡೆಯಲು ಸಾಧ್ಯವಿಲ್ಲ ಎಂದರು. 

ಪಿಎಫ್ಐ ಪುಂಡಾಟಿಕೆಯ ಕಡಿವಾಣ ಹಾಕಲು ಕೇಂದ್ರ, ರಾಜ್ಯ ಸರ್ಕಾರ ಯೋಜನೆ ರೂಪಿಸಬೇಕು. ಪೊಲೀಸ್ ಗುಪ್ತಚರ ಇಲಾಖೆ ಸರಕಾರ ಅಲರ್ಟ್ ಆಗಬೇಕು ಎಂದರು. ರಸ್ತೆ ಬರಹದ ಮೂಲಕ ಜಿಲ್ಲೆಯಲ್ಲಿ ಪಿಎಫ್ಐ ಇನ್ನೂ ಆಕ್ಟಿವ್ ಆಗಿದೆ ಅನ್ನೋದನ್ನು ಸೂಚಿಸಿದ್ದಾರೆ. ಪುಂಡರನ್ನು ಹದ್ದುಬಸ್ತಿನಲ್ಲಿಡಲು ಹಿಂದೂ ಸಮಾಜ ಪೊಲೀಸ್ ಇಲಾಖೆ ಜೊತೆ ಸಹಕರಿಸಬೇಕು ಎಂದರು.

Pro-PFI painting in the middle of the road in Mangalore is a sign of caution says Mutalik  in Udupi.