ಬ್ರೇಕಿಂಗ್ ನ್ಯೂಸ್
10-10-20 05:51 pm Mangaluru Correspondent ಕರಾವಳಿ
ಮಂಗಳೂರು, ಅ.10: ನವರಾತ್ರಿ ವೇಳೆ ಹುಲಿವೇಷಗಳ ಅಬ್ಬರ ಕಾಮನ್. ಆದರೆ ಈ ಬಾರಿ ಕೊರೊನಾ ಕಾರಣದಿಂದ ಹುಲಿವೇಷ ಕುಣಿತಕ್ಕೆ ಜಿಲ್ಲಾಧಿಕಾರಿ ಬ್ರೇಕ್ ಹಾಕಿದ್ದು ಕರಾವಳಿಯಲ್ಲಿ ಹುಲಿವೇಷ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಹುಲಿವೇಷ ಆಡಂಬರಕ್ಕಲ್ಲ. ಅದು ತುಳುನಾಡಿನ ಸಂಸ್ಕೃತಿ. ಹಾಗಾಗಿ ಕೊರೊನಾ ಕಾರಣಕ್ಕೆ ಹುಲಿವೇಷ ನಿಲ್ಲಿಸಬಾರದು. ಸರಳ ರೀತಿಯಲ್ಲಿ ದೇವರ ಸೇವೆಗೆ ಹುಲಿವೇಷ ತಂಡಗಳಿಗೆ ಅವಕಾಶ ನೀಡಬೇಕು ಎಂದು ಮಂಗಳಾದೇವಿ ದಸರಾ ಶೋಭಾಯಾತ್ರೆ ಸಮಿತಿ ಒತ್ತಾಯಿಸಿದೆ.

ಸಮಿತಿಯ ಅಧ್ಯಕ್ಷ ದಿಲ್‌ರಾಜ್ ಆಳ್ವ ಸುದ್ದಿಗೋಷ್ಟಿಯಲ್ಲಿ ಈ ಒತ್ತಾಯ ಮಾಡಿದ್ದು, ಜಿಲ್ಲಾಡಳಿತ ಕೋವಿಡ್ ಹಿನ್ನೆಲೆಯಲ್ಲಿ ಹುಲಿವೇಷ ಕುಣಿತಕ್ಕೆ ನಿಷೇಧ ಹೇರಿದ್ದು ಸರಿಯಲ್ಲ. ಮಂಗಳಾದೇವಿ ಉತ್ಸವದ ಸಮಯದಲ್ಲಿ ಹಿಂದಿನಿಂದಲೂ ರಥೋತ್ಸವಕ್ಕೆ ಹುಲಿವೇಷ ಹಾಕುವ ಸಂಪ್ರದಾಯ ಇದೆ. ಈ ಸಂಪ್ರದಾಯವನ್ನು ನಿಲ್ಲಿಸುವಂತೆ ಆಗಬಾರದು. ಸಾಂಕೇತಿಕವಾಗಿ ದೇವರ ಸೇವೆ ನಡೆಸಲು ಅವಕಾಶ ನೀಡಬೇಕು. ಹುಲಿವೇಷವನ್ನು ವ್ರತ ಹಿಡಿದು ನಡೆಸುವ ಮಂದಿ ಇದ್ದಾರೆ. ಪ್ರತಿ ವರ್ಷವೂ ವೇಷ ಹಾಕುವವರೂ ಇದ್ದಾರೆ. ನವರಾತ್ರಿಗೂ ಹುಲಿವೇಷಕ್ಕೂ ಹತ್ತಿರದ ನಂಟು ಇದ್ದು ಭಾವನಾತ್ಮಕ ವಿಚಾರವಾಗಿದೆ ಎಂದು ಹೇಳಿದರು.
ಸಮಿತಿಯ ಉಪಾಧ್ಯಕ್ಷ ದಿನೇಶ್ ಕುಂಪಲ ಮಾತನಾಡಿ, ಈ ಬಾರಿ ಹುಲಿವೇಷ ಕೇವಲ ಹರಕೆ ಮಾತ್ರಕ್ಕೆ ನಡೆಸಲಾಗುವುದು. ಯಾವುದೇ ಆದಾಯ ಗಳಿಸುವ, ಮನರಂಜನೆ ಉದ್ದೇಶಕ್ಕಾಗಿ ಹುಲಿವೇಷ ಇರುವುದಿಲ್ಲ. ನವರಾತ್ರಿಯ ಮೆರವಣಿಗೆಯಲ್ಲಿ ಹುಲಿ ವೇಷಧಾರಿಗಳು ನರ್ತನ ಮಾಡುವುದು ಇಲ್ಲಿನ ಸಂಪ್ರದಾಯ. ಹುಲಿವೇಷ ಇಲ್ಲದ ದಸರಾ, ಜಂಬೂ ಸವಾರಿ ಇಲ್ಲದ ಮೈಸೂರು ದಸರಾದಂತೆ ಎಂದು ಬೇಸರ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಗಿರೀಶ್ ಶೆಟ್ಟಿ, ಉಪಾಧ್ಯಕ್ಷರಾದ ಹನೀಷ್ ಎನ್. ಬೋಳಾರ್ ಮೊದಲಾದವರು ಉಪಸ್ಥಿತರಿದ್ದರು.
Mangaladevi Dasara Shobayatrey urges for pilivesha this Navaratri in Mangalore after the government restricted for pilivesha, the tiger dance, during this Navaratri festival.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
25-08-26 02:55 pm
HK News Staffer
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
ಅಡಿಕೆ ಎಲೆ ಚುಕ್ಕಿ ರೋಗ ನಿಯಂತ್ರಣಕ್ಕೆ ಸಿಪಿಸಿಆರ್ ಐ...
24-08-26 04:11 pm
ಎಂಆರ್ ಪಿಎಲ್ ನಲ್ಲಿ 26 ಇಂಜಿನಿಯರಿಂಗ್ ಹುದ್ದೆಗಳ ಭರ...
24-08-26 01:13 pm
25-08-26 07:27 pm
HK News Staffer
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm
ಮಲ್ಪೆ ಬಂದರಿನಲ್ಲಿ ಮೀನುಗಾರರಿಬ್ಬರ ಗಲಾಟೆ ಕೊಲೆಯಲ್ಲ...
25-08-26 12:45 pm
ಡೇವಿಡ್ ಡಿಸೋಜ ಹತ್ಯೆ ಪ್ರಕರಣದಲ್ಲಿ ಮಹತ್ತರ ತಿರುವು...
25-08-26 11:38 am
ಪಡಿತರ ಅಕ್ಕಿ ಸಾಗಾಟದ ಲಾರಿಗೆ ಸ್ಕೂಟರ್ ಢಿಕ್ಕಿ! ಸಚಿ...
24-08-26 09:06 pm