ಬ್ರೇಕಿಂಗ್ ನ್ಯೂಸ್
15-10-22 09:52 pm Mangalore Correspondent ಕರಾವಳಿ
ಉಳ್ಳಾಲ, ಅ.15 : ಮುನ್ನೂರು ಗ್ರಾಮ ಪಂಚಾಯತ್ ಆಡಳಿತದಲ್ಲಿ ಅವ್ಯವಹಾರಗಳೇ ತುಂಬಿದ್ದು, ಭಂಡಾರಬೈಲು ಸಮೀಪ ಅಕ್ರಮವಾಗಿ ಮರ ಕಡಿದು ಮಾರಾಟ ಮಾಡಿದ್ದಲ್ಲದೆ ರೈತರ ಕುಮ್ಕಿ ಜಾಗದ ಕುರಿತಾಗಿ ಸರಿಯಾದ ಕಾನೂನು ಜಾರಿ ಬರೋದಕ್ಕೂ ಮುನ್ನವೇ ರೈತರೊಬ್ಬರ ಕುಮ್ಕಿ ಜಾಗವನ್ನು ಸರಕಾರಿ ಜಾಗ ಎಂದು ಅತಿಕ್ರಮಣ ಮಾಡಿದ್ದು ಅಪರಾಧಿಗಳಿಗೆ ಕಾನೂನು ಪ್ರಕಾರ ತಕ್ಕ ಶಾಸ್ತಿ ಆಗುವ ತನಕ ಹೋರಾಟ ನಿಲ್ಲದು ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ನ್ಯಾಯವಾದಿ ಶಾಂತಿಪ್ರಸಾದ್ ಹೆಗ್ಡೆ ಹೇಳಿದರು.
ಉಳ್ಳಾಲ ತಾಲೂಕಿನ ಮುನ್ನೂರು ಗ್ರಾಮ ಪಂಚಾಯತ್ ಆಡಳಿತವು ರೈತ ವಿರೋಧಿ ಆಡಳಿತ ನಡೆಸುತ್ತಾ ಭ್ರಷ್ಟಾಚಾರದಲ್ಲಿ ಮುಳುಗಿದ್ದು ಭ್ರಷ್ಟರಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿ ಭಾರತೀಯ ಕಿಸಾನ್ ಸಂಘ ಉಳ್ಳಾಲ ಘಟಕದ ವತಿಯಿಂದ ಮುನ್ನೂರು ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಶನಿವಾರ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ರೈತರು ಒಗ್ಗಟ್ಟಾಗಿ ಜಾಗೃತರಾಬೇಕು. ಪರಿಸ್ಥಿತಿ ಹೇಗಿದೆ ಎಂದರೆ ಈ ಭ್ರಷ್ಟರಿಂದಾಗಿ ನಮ್ಮ ಭೂಮಿಯನ್ನು ಉಳಿಸಲು ನಾವು ಹೋರಾಟ ಮಾಡುವಂತಾಗಿದೆ ಎಂದರು. ಪಂಚಾಯತ್ ಅಧಿಕಾರಿಗಳಿಗೆ ಆರೋಗ್ಯ ಕೆಟ್ಟರೆ ಅವರ ಆಸ್ಪತ್ರೆ ಖರ್ಚನ್ನು ಸರಕಾರ ಭರಿಸುತ್ತದೆ, ಆದರೆ ದೇಶದ ಜನತೆಯ ಹೊಟ್ಟೆ ತುಂಬಿಸುವ ರೈತನ ಗೋಳನ್ನು ಯಾರಲ್ಲಿ ಹೇಳೋದು ಎಂದು ಪ್ರಶ್ನಿಸಿದರು.

ರೈತರ ಕುಮ್ಕಿ ಜಾಗದ ಕುರಿತಾದ ನೂತನ ಕಾನೂನು ಶೀಘ್ರದಲ್ಲೇ ಜಾರಿಗೆ ಬರಲಿದೆ. ಕುಮ್ಕಿ ಹಕ್ಕು ಇತ್ಯರ್ಥವಾಗುವುದಕ್ಕೆ ಮುನ್ನವೇ ಸರಕಾರಿ ಜಮೀನು ಎಂದು ಅತಿಕ್ರಮಣ ಮಾಡಿರುವ ಮುನ್ನೂರು ಗ್ರಾಮ ಪಂಚಾಯತ್ ಆಡಳಿತದಲ್ಲಿ ಭ್ರಷ್ಟಾಚಾರಗೈದವರೆಲ್ಲರಿಗೂ ಶಿಕ್ಷೆ ಆಗಲಿದೆ ಎಂದರು.
ಕಿಸಾನ್ ಸಂಘ ಮುನ್ನೂರು ಗ್ರಾಮ ಸಮಿತಿ ಅಧ್ಯಕ್ಷ ಉಮೇಶ್ ಶೆಟ್ಟಿ, ಮುಖಂಡರಾದ ಪ್ರೇಮಚಂದ್ರ ಶೆಟ್ಟಿ, ಶಿವರಾಜ್ ಕಾವ, ಬಾಬು ಶ್ರೀಶಾಸ್ತಾ ಕಿನ್ಯ ಮೊದಲಾದವರು ಪ್ರತಿಭಟನೆಯಲ್ಲಿದ್ದರು.
Mangalore Illegal sand mining in Ullal, farmers land being used for mining at Munnuru, farmers protest.
05-09-26 04:53 pm
HK News Staffer
400 ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ ; ಪ್ರತಿ ಹ...
02-09-26 05:06 pm
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
ADGP Chandrashekhar, Seemanth Kumar Singh: ಅಧ...
30-08-26 07:31 pm
05-09-26 11:55 am
HK News Staffer
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
06-09-26 01:14 pm
HK News Desk
ಸುಬ್ರಹ್ಮಣ್ಯ ಬಳಿ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್...
06-09-26 12:47 pm
ದಕ್ಷಿಣ ಕನ್ನಡ- ಚಿಕ್ಕಮಗಳೂರು ಸಂಪರ್ಕ ಕೊಂಡಿ ಚಾರ್ಮಾ...
05-09-26 04:58 pm
ಬೆಂಗಳೂರು-ಮಂಗಳೂರು ವಂದೇ ಭಾರತ್ಗೆ ಮತ್ತೊಂದು ಟೆಸ್ಟ...
05-09-26 11:59 am
ಕೆಆರ್ ಐಡಿಎಲ್ ಕಮಿಷನ್ ಆರೋಪದಿಂದ ಮಾನಸಿಕ ಕಿರುಕುಳ,...
04-09-26 04:44 pm
05-09-26 08:58 pm
HK News Staffer
ಶಿವಮೊಗ್ಗ ; ಕಾರಿನಲ್ಲಿ ಜಿಂಕೆ ಮಾಂಸ ಮಾರಾಟ ಯತ್ನ ;...
05-09-26 04:55 pm
ಬಡ್ಡಿ ಕಟ್ಟದಿದ್ದಕ್ಕೆ ಮಹಿಳೆಯನ್ನು ಅಪಹರಿಸಿ ಹಲ್ಲೆ...
05-09-26 03:08 pm
ಅಷ್ಟಮಿ ಭಜನಾ ಕಾರ್ಯಕ್ರಮದಲ್ಲಿ ಹೃದಯಾಘಾತ ; ತೊಕ್ಕೂರ...
05-09-26 02:04 pm
ತ್ರಿಶೂರ್ ನಲ್ಲಿ ಗುರುವಾಯೂರು ದರ್ಶನ ಮುಗಿಸಿ ಹೊರಟಿದ...
05-09-26 01:13 pm