ಬ್ರೇಕಿಂಗ್ ನ್ಯೂಸ್
16-10-22 09:16 pm Mangalore Correspondent ಕರಾವಳಿ
ಮಂಗಳೂರು, ಅ.16: ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ನಿರ್ಣಾಯಕ ಹಂತಕ್ಕೆ ತಲುಪಿದೆ. ಅ.18ರ ಹೋರಾಟವನ್ನು ಕೈಬಿಡಬೇಕು ಎನ್ನುವ ರೀತಿ ಬೆದರಿಕೆ ರೂಪದಲ್ಲಿ ಪೊಲೀಸರು ಹೋರಾಟಗಾರರ ಮನೆಗೆ ನುಗ್ಗಿ ನೋಟೀಸ್ ನೀಡಿರುವುದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಯಾವುದೇ ಕಾರಣಕ್ಕೂ ಹೋರಾಟ ಹಿಂಪಡೆಯುವ ಪ್ರಶ್ನೆಯೇ ಇಲ್ಲ, ಇವರು ಜೈಲಿಗೆ ಬೇಕಾದ್ರೂ ಹಾಕಲಿ. ಪೊಲೀಸ್ ಕೇಸನ್ನು ಬೇಕಾದ್ರೂ ಹಾಕಲಿ ಎಂದು ಹೋರಾಟಗಾರರು ಗುಡುಗಿದ್ದಾರೆ.
ಸುರತ್ಕಲ್ ಟೋಲ್ ಗೇಟ್ ವಿರುದ್ಧ ಕಳೆದ ಸೆ.13ರಂದು ಒಂದು ದಿನದ ಪ್ರತಿಭಟನೆ ನಡೆಸಿ, ಟೋಲ್ ಗೇಟ್ ತೆರವಿಗೆ ದಿನಾಂಕ ಘೋಷಣೆ ಮಾಡದೇ ಇದ್ದರೆ ಅ.18ರಂದು ಮುತ್ತಿಗೆ ಹಾಕುತ್ತೇವೆ. ಸಾವಿರಾರು ಜನರು ಮುತ್ತಿಗೆ ಹಾಕಿ, ಟೋಲ್ ಗೇಟ್ ತೆರವಾಗುವಂತೆ ಮಾಡಲಿದ್ದಾರೆ ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಹೇಳಿದ್ದರು. ಅದಲ್ಲದೆ, ಹೆದ್ದಾರಿ ಅಧಿಕಾರಿಗಳು ಕೂಡ ಶೀಘ್ರದಲ್ಲೇ ಟೋಲ್ ಗೇಟ್ ತೆರವು ಮಾಡುತ್ತೇವೆ ಎಂದೂ ಹೇಳಿದ್ದರು. ಆದರೆ, ಅಧಿಕಾರಿಗಳು ಮಾತ್ರ ಒಂದು ತಿಂಗಳು ಕಳೆದರೂ ಅದೇ ರಾಗ, ಅದೇ ಹಾಡು ಎನ್ನುವಂತೆ ಮತ್ತೆ ಹಳೆಯ ಹೇಳಿಕೆಯನ್ನೇ ನೀಡುತ್ತಿದ್ದಾರೆ. ಇದರ ಸೂಚನೆ ಲಭಿಸುತ್ತಿದ್ದಂತೆ ಹೋರಾಟ ವೇದಿಕೆಯ ಮುಖಂಡರು ಮಂಗಳೂರು, ಮೂಡುಬಿದ್ರೆ, ಮೂಲ್ಕಿ, ಉಡುಪಿ ಭಾಗದಲ್ಲಿ ಪ್ರಚಾರ ಅಭಿಯಾನ ನಡೆಸಿ ಅ.18ರ ನಿರ್ಣಾಯಕ ಹೋರಾಟಕ್ಕೆ ಕೈಜೋಡಿಸುವಂತೆ ಮನವಿ ಮಾಡಿದ್ದರು. ಭಾರೀ ಜನಬೆಂಬಲವೂ ದೊರಕಿದ್ದಲ್ಲದೆ, ಸ್ಥಳೀಯ ಶಾಸಕರು, ಸಂಸದರ ವಿರುದ್ಧ ಜನಾಭಿಪ್ರಾಯವೂ ಕೇಳಿಬರುತ್ತಿದೆ.
ಇದರಿಂದ ಎಚ್ಚೆತ್ತ ಜಿಲ್ಲಾಡಳಿತದ ಅಧಿಕಾರಿಗಳು ಹೆದ್ದಾರಿ ಅಧಿಕಾರಿಗಳನ್ನು ಮತ್ತು ಹೋರಾಟ ವೇದಿಕೆಯ ಪ್ರಮುಖರನ್ನು ಕರೆದು ಮಾತುಕತೆಯನ್ನೂ ನಡೆಸಿದ್ದರು. ಆದರೆ, ಟೋಲ್ ಗೇಟ್ ತೆರವು ಮಾಡುವ ನಿಶ್ಚಿತ ದಿನಾಂಕ ಹೇಳದಿದ್ದರೆ, ಹೋರಾಟ ನಿಲ್ಲಿಸುವುದಿಲ್ಲ ಎಂದು ವೇದಿಕೆಯ ಮುಖಂಡರು ತಿರುಗೇಟು ನೀಡಿದ್ದಾರೆ. ಇದರ ಬೆನ್ನಲ್ಲೇ ಶಾಂತಿ ಕದಡುತ್ತಾರೆಂಬ ನೆಪದಲ್ಲಿ ಪೊಲೀಸರ ಮೂಲಕ ನೋಟೀಸ್ ನೀಡಲು ಜಿಲ್ಲಾಡಳಿತ ಮುಂದಾಗಿದೆ. ಹೋರಾಟಕ್ಕೆ ಕೈಜೋಡಿಸಿರುವ ಮಂದಿಗೆ ನೋಟೀಸ್ ನೀಡಿದ್ದು ಎರಡು ಲಕ್ಷದ ಬಾಂಡ್ ನೀಡುವಂತೆ ಸೂಚಿಸಿರುವುದಕ್ಕೆ ವೇದಿಕೆಯ ಮುಖಂಡರು ಕ್ಯಾರೆಂದಿಲ್ಲ. ಬಿಜೆಪಿ ಹೊರತುಪಡಿಸಿ ಉಳಿದೆಲ್ಲ ಪಕ್ಷಗಳು ಹೋರಾಟಕ್ಕೆ ಕೈಜೋಡಿಸಿರುವುದರಿಂದ ಪೊಲೀಸರ ಬಲಪ್ರಯೋಗದ ಕ್ರಮಕ್ಕೆ ತಿರುಗೇಟು ನೀಡಿದ್ದಾರೆ. ನಾಯಕರ ಆಕ್ರೋಶ ಬಿಜೆಪಿ ಶಾಸಕ, ಸಂಸದರ ವಿರುದ್ಧ ತಿರುಗಿದ್ದು, ಪೊಲೀಸ್ ಬಲ ಪ್ರಯೋಗಕ್ಕೆ ಹೆದರುವುದಿಲ್ಲ. ರಾಜ್ಯ ಮತ್ತು ಕೇಂದ್ರ ಸರಕಾರ ಟೋಲ್ ಗೇಟ್ ತೆರವಿನ ಬಗ್ಗೆ ಹೇಳಿದರೂ ಅದನ್ನು ಜಾರಿಗೊಳಿಸಲು ಆಗದವರು ನೀವು ಜನಪ್ರತಿನಿಧಿಗಳಲ್ಲ. ನಿಮ್ಮ ಜೇಬು ತುಂಬಿಸಲು ಟೋಲ್ ಗೇಟ್ ಮುಂದುವರಿಸುತ್ತೀರಿ. ರಾಜ್ಯ ವಿಧಾನಸಭೆಯಲ್ಲಿಯೇ ಅಕ್ರಮ ಎಂದು ಒಪ್ಪಿಕೊಂಡ ಬಳಿಕ ಅದನ್ನು ಮುಂದುವರಿಸುವುದರಲ್ಲಿ ಅರ್ಥವಿಲ್ಲ. ಯಾವುದೇ ಕಾರಣಕ್ಕೂ ಹೋರಾಟ ಕೈಬಿಡಲ್ಲ. ಅಕ್ರಮ ಟೋಲ್ ಗೇಟನ್ನು ಬಂದ್ ಮಾಡಲೇಬೇಕು. ನಮ್ಮನ್ನು ಬಂಧಿಸಿದರೂ ಪರವಾಗಿಲ್ಲ. ಇದರಿಂದ ಮುತ್ತಿಗೆ ಕಾರ್ಯಕ್ರಮ ನಿಲ್ಲುವುದಿಲ್ಲ. ತುಳುನಾಡಿನ ಜನರು ತಿರುಗೇಟು ನೀಡುತ್ತಾರೆ ಎಂದು ಮುನೀರ್ ಕಾಟಿಪಳ್ಳ, ಪ್ರತಿಭಾ ಕುಳಾಯಿ, ಪುರುಷೋತ್ತಮ ಚಿತ್ರಾಪುರ ಹೇಳಿದ್ದಾರೆ.
ತನ್ನ ಮನೆಗೆ ನಡುರಾತ್ರಿಯಲ್ಲಿ ಬಂದು ಪೊಲೀಸರು ಮನೆಯ ಕದ ತಟ್ಟಿದ್ದಾರೆ. ನಾನೇನು ಉಗ್ರಗಾಮಿಯೇ ಅಥವಾ ಯಾವುದಾದ್ರೂ ಪ್ರಕರಣದಲ್ಲಿ ಆರೋಪಿಯಾಗಿದ್ದೇನೆಯೇ.. ನಾನು ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ರಾತ್ರಿ 11.45ರ ವೇಳೆಗೆ 10ಕ್ಕೂ ಹೆಚ್ಚು ಮಂದಿ ಪೊಲೀಸರು ಬಂದಿದ್ದಾರೆ. ಮನೆಯಲ್ಲಿದ್ದ ಅತ್ತೆಯನ್ನು ಕರೆದು ಜಬರ್ದಸ್ತ್ ಮಾಡಿದ್ದಾರೆ. ನಾವೇನು ತಾಲಿಬಾನ್ ಆಡಳಿತದಲ್ಲಿದ್ದೇವಾ ಎಂದು ಪ್ರತಿಭಾ ಕುಳಾಯಿ ಪ್ರಶ್ನೆ ಮಾಡಿದ್ದಾರೆ. 50ಕ್ಕೂ ಹೆಚ್ಚು ಮಂದಿಗೆ ಪೊಲೀಸರು ನೋಟೀಸ್ ನೀಡಿದ್ದಾರೆ ಎನ್ನಲಾಗುತ್ತಿದೆ.
ಶಾಂತಿ ಭಂಗಕ್ಕೆ ನೋಟೀಸ್ –ಕಮಿಷನರ್
ಈ ಬಗ್ಗೆ ಪೊಲೀಸ್ ಕಮಿಷನರ್ ಶಶಿಕುಮಾರ್ ಸ್ಪಷ್ಟನೆ ನೀಡಿದ್ದು, ಸೆಕ್ಷನ್ 107 ಅಡಿ ಮುಂಜಾಗ್ರತಾ ಕ್ರಮವಾಗಿ ನೋಟೀಸ್ ನೀಡಿದ್ದೇವೆ. ಟೋಲ್ ಗೇಟ್ ಮುರಿದು ಹಾಕುತ್ತೇವೆ ಎಂದು ಬಹಿರಂಗವಾಗಿ ಪ್ರಚಾರ ಮಾಡುತ್ತಿದ್ದಾರೆ. ಜನರನ್ನು ಎತ್ತಿ ಕಟ್ಟುತ್ತಿದ್ದಾರೆ. ಆಮೂಲಕ ಶಾಂತಿ ಭಂಗಕ್ಕೆ ಮುಂದಾಗಿರುವುದಕ್ಕೆ ಎಚ್ಚರಿಕೆ ನೋಟೀಸ್ ಕೊಟ್ಟಿದ್ದೇವೆ. ನಡುರಾತ್ರಿಯಲ್ಲಿ ಮನೆಗೆ ತೆರಳಿದ್ದು ಗೊತ್ತಿಲ್ಲ. ಎಲ್ಲರ ಖಾಸಗಿತನ, ಹಕ್ಕುಗಳನ್ನು ಕಾಪಾಡುವುದು ನಮ್ಮ ಕರ್ತವ್ಯ. ನಡುರಾತ್ರಿಯಲ್ಲಿ ನೋಟೀಸ್ ನೀಡಲು ತೆರಳಿದ್ದರೆ, ಆ ಬಗ್ಗೆ ತನಿಖೆ ನಡೆಸಲು ಉತ್ತರ ವಿಭಾಗದ ಎಸಿಪಿಗೆ ಸೂಚಿಸುತ್ತೇನೆ ಎಂದಿದ್ದಾರೆ.
Protest over illegal toll at Surathkal, we won't fear at any police notice says Activitist of organisation.
12-09-25 08:26 pm
HK News Desk
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
12-09-25 11:07 pm
Mangalore Correspondent
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm
Mangalore Fake Documents, Crime, Arrest: ಸರ್ಕ...
11-09-25 08:52 pm