ಬ್ರೇಕಿಂಗ್ ನ್ಯೂಸ್
17-10-22 03:33 pm Mangalore Correspondent ಕರಾವಳಿ
ಮಂಗಳೂರು, ಅ.17 : ಖಾಸಗಿ ಬಸ್ ಚಾಲಕನ ಅತಿ ವೇಗ ಮತ್ತು ಧಾವಂತದ ಚಾಲನೆಗೆ ಎಂಟನೇ ತರಗತಿಯ ವಿದ್ಯಾರ್ಥಿ ನಡು ರಸ್ತೆಯಲ್ಲಿ ದುರಂತವಾಗಿ ಮೃತಪಟ್ಟ ಘಟನೆ ನಗರದ ಲಾಲ್ ಭಾಗ್ ವೃತ್ತದ ಬಳಿ ನಡೆದಿದೆ.
ಮೃತ ಬಾಲಕನನ್ನು ಪಡೀಲ್ ಕಣ್ಣೂರಿನ ನಿವಾಸಿ ಕರುಣಾಕರ ಬೆಳ್ಚಡ ಅವರ ಪುತ್ರ ರಕ್ಷಣ್(13) ಎಂದು ಗುರುತಿಸಲಾಗಿದೆ. ಪಡೀಲಿನ ಕಪಿತಾನಿಯೋ ಸ್ಕೂಲಿನಲ್ಲಿ ಎಂಟನೇ ತರಗತಿ ಓದುತ್ತಿದ್ದ ರಕ್ಷಣ್ ಇವತ್ತು ಮನೆಯಲ್ಲಿ ಪೂಜೆ ಇದೆಯೆಂದು ಶಾಲೆಗೆ ರಜೆ ಹಾಕಿದ್ದ. ಬೆಳಗ್ಗೆ ಚಿಕ್ಕಪ್ಪ ಪಡು ಬೊಂಡಂತಿಲ ನಿವಾಸಿ ನಾರಾಯಣ ಎಂಬವರ ಜೊತೆಗೆ ಪೂಜೆಯ ಸಾಮಾನು ತರಲೆಂದು ಬೈಕಿನಲ್ಲಿ ಮಂಗಳೂರಿಗೆ ಬಂದಿದ್ದ.

ಇವರು ಸಾಮಾನು ಖರೀದಿಸಿ ಉರ್ವಾ- ಲೇಡಿಹಿಲ್ ಕಡೆಯಿಂದ ಲಾಲ್ ಬಾಗಿನತ್ತ ಬರುತ್ತಿದ್ದಾಗ, ಹಿಂದಿನಿಂದ ಯಮದೂತನಂತೆ ಧಾವಿಸಿ ಬಂದ ಖಾಸಗಿ ಬಸ್ ಪಬ್ಬಾಸ್ ಎದುರಿನ ಅಶ್ವತ್ಧ ಕಟ್ಟೆಯ ಬಳಿ ಬೈಕಿಗೆ ಡಿಕ್ಕಿಯಾಗಿದೆ. ಬೈಕಿಗೆ ಡಿಕ್ಕಿಯಾದ ರಭಸಕ್ಕೆ ಹಿಂದೆ ಕುಳಿತಿದ್ದ ರಕ್ಷಣ್ ರಸ್ತೆಗೆ ಎಸೆಯಲ್ಪಟ್ಟಿದ್ದು ಆತನ ಮೇಲಿಂದಲೇ ಬಸ್ ಹರಿದಿದೆ. ಬೈಕ್ ಸವಾರ ನಾರಾಯಣ ಎಡದ ಭಾಗಕ್ಕೆ ವಾಲಿ ಬಿದ್ದಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ. ರಕ್ಷಣ್ ಸ್ಥಳದಲ್ಲೇ ದುರಂತ ಸಾವು ಕಂಡಿದ್ದಾನೆ.
ಮಂಗಳೂರು – ಕಿನ್ನಿಗೋಳಿ – ಕಟೀಲು ನಡುವೆ ಸಂಚರಿಸುವ ಖಾಸಗಿ ಬಸ್, ಇನ್ನೊಂದು ಬಸ್ಸನ್ನು ಓವರ್ ಟೇಕ್ ಮಾಡುವ ಭರದಲ್ಲಿ ಎಡ ಭಾಗದಿಂದ ಸಂಚರಿಸಿದ್ದರಿಂದ ಅಪಘಾತ ಆಗಿದೆ ಎನ್ನಲಾಗಿದೆ. ಸಂಚಾರಿ ವಿಭಾಗದ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
An accident between a bus and a two-wheeler claimed the life of a 12-year-old boy on Monday October 17 at Lalbagh in Mangalore. The deceased is identified as Dhanu from Neermarga.
05-09-26 04:53 pm
HK News Staffer
400 ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ ; ಪ್ರತಿ ಹ...
02-09-26 05:06 pm
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
ADGP Chandrashekhar, Seemanth Kumar Singh: ಅಧ...
30-08-26 07:31 pm
05-09-26 11:55 am
HK News Staffer
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
06-09-26 01:14 pm
HK News Desk
ಸುಬ್ರಹ್ಮಣ್ಯ ಬಳಿ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್...
06-09-26 12:47 pm
ದಕ್ಷಿಣ ಕನ್ನಡ- ಚಿಕ್ಕಮಗಳೂರು ಸಂಪರ್ಕ ಕೊಂಡಿ ಚಾರ್ಮಾ...
05-09-26 04:58 pm
ಬೆಂಗಳೂರು-ಮಂಗಳೂರು ವಂದೇ ಭಾರತ್ಗೆ ಮತ್ತೊಂದು ಟೆಸ್ಟ...
05-09-26 11:59 am
ಕೆಆರ್ ಐಡಿಎಲ್ ಕಮಿಷನ್ ಆರೋಪದಿಂದ ಮಾನಸಿಕ ಕಿರುಕುಳ,...
04-09-26 04:44 pm
05-09-26 08:58 pm
HK News Staffer
ಶಿವಮೊಗ್ಗ ; ಕಾರಿನಲ್ಲಿ ಜಿಂಕೆ ಮಾಂಸ ಮಾರಾಟ ಯತ್ನ ;...
05-09-26 04:55 pm
ಬಡ್ಡಿ ಕಟ್ಟದಿದ್ದಕ್ಕೆ ಮಹಿಳೆಯನ್ನು ಅಪಹರಿಸಿ ಹಲ್ಲೆ...
05-09-26 03:08 pm
ಅಷ್ಟಮಿ ಭಜನಾ ಕಾರ್ಯಕ್ರಮದಲ್ಲಿ ಹೃದಯಾಘಾತ ; ತೊಕ್ಕೂರ...
05-09-26 02:04 pm
ತ್ರಿಶೂರ್ ನಲ್ಲಿ ಗುರುವಾಯೂರು ದರ್ಶನ ಮುಗಿಸಿ ಹೊರಟಿದ...
05-09-26 01:13 pm