ಸುರತ್ಕಲ್ ಟೋಲ್ ಗೇಟ್ ಮೊದಲು ವಿರೋಧಿಸಿದ್ದೇ ಬಿಜೆಪಿ ; ತೆರವಿಗೆ ನಮ್ಮ ತಕರಾರು ಇಲ್ಲ !  

18-10-22 07:57 pm       Mangalore Correspondent   ಕರಾವಳಿ

ಸುರತ್ಕಲ್‌ ಟೋಲ್‌ಗೇಟ್ ವಿರೋಧಿ ಹೋರಾಟದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಸದ ನಳಿನ್ ಕುಮಾರ್, ಟೋಲ್ ತೆರವು ಮಾಡಬೇಕು ಎನ್ನುವುದಕ್ಕೆ ನಮ್ಮ ತಕರಾರು ಇಲ್ಲ. ಟೋಲ್‌ಗೇಟ್ ಸ್ಥಾಪನೆ ವೇಳೆ ಮೊದಲು ವಿರೋಧಿಸಿದ್ದೇ ಬಿಜೆಪಿ ಎಂದು ಹೇಳಿದ್ದಾರೆ.‌

ಮಂಗಳೂರು, ಅ.18 : ಸುರತ್ಕಲ್‌ ಟೋಲ್‌ಗೇಟ್ ವಿರೋಧಿ ಹೋರಾಟದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಸದ ನಳಿನ್ ಕುಮಾರ್, ಟೋಲ್ ತೆರವು ಮಾಡಬೇಕು ಎನ್ನುವುದಕ್ಕೆ ನಮ್ಮ ತಕರಾರು ಇಲ್ಲ. ಟೋಲ್‌ಗೇಟ್ ಸ್ಥಾಪನೆ ವೇಳೆ ಮೊದಲು ವಿರೋಧಿಸಿದ್ದೇ ಬಿಜೆಪಿ ಎಂದು ಹೇಳಿದ್ದಾರೆ.‌

ಈ ಕುರಿತ ಪ್ರಶ್ನೆಗೆ ಉತ್ತರಿಸಿದ ನಳಿನ್, ತಾಂತ್ರಿಕ ಅಡಚಣೆಯ ಕಾರಣ ತೆರವು ಕಾರ್ಯ ವಿಳಂಬವಾಗಿದ್ದು, 20 ದಿನಗಳ ಕಾಲಾವಕಾಶ ಕೇಳಿದ್ದಾರೆ. ಹಾಗಿದ್ದರೂ ಕಾನೂನು ಕೈಗೆತ್ತಿಕೊಂಡು ಹೋರಾಟ ನಡೆಸುವುದರಲ್ಲಿ ಅರ್ಥವಿಲ್ಲ ಎಂದಿದ್ದಾರೆ. ಸುರತ್ಕಲ್ ಟೋಲ್‌ಗೇಟ್ ತೆರವಿಗೆ ಕೇಂದ್ರ ಸರ್ಕಾರ ಬದ್ಧವಾಗಿದೆ. 2013ರಲ್ಲಿ ಟೋಲ್‌ಗೇಟ್ ಆರಂಭವಾದಾಗ ನಾಗರಿಕ ಹಿತರಕ್ಷಣಾ ವೇದಿಕೆಯಡಿ ಮೊದಲು ವಿರೋಧ ವ್ಯಕ್ತಪಡಿಸಲಾಗಿತ್ತು. 2019ರಲ್ಲಿ ತಲಪಾಡಿ ಹಾಗೂ ಹೆಜಮಾಡಿಯಲ್ಲಿ ಟೋಲ್‍ಗೇಟ್ ಸ್ಥಾಪನೆಯಾಗಿತ್ತು. ಬಿಓಟಿ ಒಪ್ಪಂದ ಪ್ರಕಾರ ಹೆದ್ದಾರಿ ನಿರ್ಮಾಣ ಕೈಗೊಳ್ಳಲಾಗಿದೆ. 

Nitin Gadkari: A Great Reformer and a Task Master - Trunicle

ಸುರತ್ಕಲ್ ಟೋಲ್‌ಗೇಟ್ ತೆರವು ವಿಚಾರದಲ್ಲಿ ಹಲವಾರು ಬಾರಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಲೋಕಸಭೆಯಲ್ಲೂ ಟೋಲ್‍ಗೇಟ್ ತೆರವುಗೊಳಿಸುವ ಭರವಸೆ ನೀಡಿದ್ದಾರೆ. ಇದರ ನಡುವೆಯೂ ಹೋರಾಟಗಾರರು ಕಾರ್ಯಾಚರಣೆ ಇಳಿದಿರುವುದು ಸರಿಯಲ್ಲ. ಪ್ರಜಾಪ್ರಭುತ್ವ ರೀತಿಯಲ್ಲಿ ಹೋರಾಟ ನಡೆಸಲು ಯಾವುದೇ ತೊಂದರೆ ಇಲ್ಲ. ಅದು ಬಿಟ್ಟು ಕಾನೂನು ಕೈಗೆತ್ತಿಕೊಳ್ಳಲು ಮುಂದಾದರೆ ಕ್ರಮ ಅನಿವಾರ್ಯವಾಗುತ್ತದೆ ಎಂದು ಹೇಳಿದರು. 

Legal complications affecting abolition of Surathkal toll plaza, MP - The  Hindu

ಸುರತ್ಕಲ್ ಟೋಲ್ ಗೇಟ್ ವಿರುದ್ಧ ಮಂಗಳವಾರ ಭಾರೀ ಸಂಖ್ಯೆಯಲ್ಲಿ ಸೇರಿದ ಜನರು ಪ್ರತಿಭಟನೆ ನಡೆಸಿದ್ದು ಜಿಲ್ಲಾಡಳಿತ ಮತ್ತು ಶಾಸಕ, ಸಂಸದರಿಗೆ ಧಿಕ್ಕಾರ ಕೂಗಿದ್ದರು. ಭಾರೀ ಹೈಡ್ರಾಮಾದ ಬಳಿಕ ನೂರಾರು ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

BJP was the one that stated Surathkal toll was illegal, we don't have any issue says Nalin Kumar Kateel speaking to media persons here in Mangalore.