ಬ್ರೇಕಿಂಗ್ ನ್ಯೂಸ್
19-10-22 06:40 pm Mangalore Correspondent ಕರಾವಳಿ
ಮಂಗಳೂರು, ಅ.19: ಆಕೆಯ ಹೆಸರು ಭಾರ್ಗವಿ. ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಿವಾಸಿ. ಎಂಟನೇ ಕ್ಲಾಸ್ ಓದ್ತಾ ಇದ್ದ ಭಾರ್ಗವಿ ಮೊನ್ನೆ ಅ.17ರಂದು ಸಂಜೆ ಮನೆಯಿಂದ ಟ್ಯೂಶನ್ ಕ್ಲಾಸಿಗೆಂದು ಹೋಗಿದ್ದವಳು ನಾಪತ್ತೆಯಾಗಿದ್ದಾಳೆ. ಈ ನಡುವೆ, ಆಕೆ ಮಂಗಳೂರಿನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಬಂದಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ.
ಶಾಲೆಯಲ್ಲಿ ಮಾರ್ಕು ಕಡಿಮೆ ಬಂದಿದೆಯೆಂದು ಮನೆ ಬಿಟ್ಟು ಹೋಗಿದ್ದಾಳೆ ಎನ್ನಲಾಗುತ್ತಿದೆ. ಹೆತ್ತವರು ಗಾಬರಿಗೊಂಡಿದ್ದು, ಮಗಳನ್ನು ಹುಡುಕಿ ಕೊಡುವಂತೆ ಜಾಲತಾಣದಲ್ಲಿ ಮನವಿ ಮಾಡಿದ್ದಾರೆ. ಅಲ್ಲದೆ, ನಂದಿನಿ ಲೇಔಟ್ ಠಾಣೆಯಲ್ಲಿ ಮಿಸ್ಸಿಂಗ್ ದೂರು ನೀಡಿದ್ದಾರೆ. ಸೋಮವಾರ ಸಂಜೆ 4.30ಕ್ಕೆ ತೆರಳಿದ್ದ ಆಕೆ, ಮನೆಯಿಂದ 5 ಸಾವಿರ ರೂಪಾಯಿ ಇಸ್ಕೊಂಡು ಹೋಗಿದ್ದಾಳೆ ಎನ್ನುವುದು ಪೊಲೀಸರಿಗೆ ಮಾಹಿತಿ ಲಭಿಸಿದೆ.
ಮರುದಿನ ಅ.18ರಂದು ನಸುಕಿನ ಮೂರು ಗಂಟೆ ವೇಳೆಗೆ ಭಾರ್ಗವಿ ಮಂಗಳೂರಿನ ಬಿಜೈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಪ್ರತ್ಯಕ್ಷ ಆಗಿದ್ದಳು. ಬೆಂಗಳೂರು ಬಸ್ಸಿನಲ್ಲಿ ಬಂದಿದ್ದ ಹುಡುಗಿ ಅಲ್ಲಿಂದ ಸರಿರಾತ್ರಿಯಲ್ಲೇ ಮುಕ್ಕ ಬೀಚ್ ನತ್ತ ಆಟೋದಲ್ಲಿ ತೆರಳಿದ್ದಾಳೆ. ಈಕೆ ಬಸ್ ನಿಲ್ದಾಣಕ್ಕೆ ಬಂದಿರುವುದು ಮತ್ತು ಆಟೋದಲ್ಲಿ ತೆರಳಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಆನಂತರ, ಆರು ಗಂಟೆ ವೇಳೆಗೆ ಬೀಚ್ ನಿಂದ ಮರಳಿ ಅದೇ ಬಸ್ ನಿಲ್ದಾಣಕ್ಕೆ ಬಂದಿದ್ದ ಹುಡುಗಿ ಆನಂತರ ಎಲ್ಲಿ ಹೋಗಿದ್ದಾಳೆ ಅನ್ನುವುದು ಗೊತ್ತಾಗಿಲ್ಲ. ಕೆಲವರು ಆಕೆ ಮೈಸೂರು ಬಸ್ ಹತ್ತಿದ್ದಾಳೆ, ಬೆಂಗಳೂರಿಗೆ ರಿಟರ್ನ್ ಹೋಗಿದ್ದಾಳೆ ಅಂತ ಹೇಳುತ್ತಿದ್ದಾರೆ. ಈ ಬಗ್ಗೆ ಮಂಗಳೂರಿನ ಪೊಲೀಸರು ಕೂಡ ಹುಡುಕಾಟ ನಡೆಸಿದ್ದಾರೆ.
ಹುಡುಗಿ ನಾಪತ್ತೆ ಬಗ್ಗೆ ನಂದಿನಿ ಲೇಔಟ್ ಠಾಣೆಯಲ್ಲಿ ಸಂಪರ್ಕಿಸಿದಾಗ, ಇನ್ನೂ ಹುಡುಗಿ ಸಿಕ್ಕಿಲ್ಲ. ಹುಡುಕುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಮಂಗಳೂರಿಗೆ ಬಂದಾಕೆ, ಬೆಂಗಳೂರಿಗೆ ಮರಳಿ ಬರ್ತಿದ್ದೀನಿ ಅಂತ ತನ್ನ ಸ್ನೇಹಿತೆಗೆ ಕರೆ ಮಾಡಿ ತಿಳಿಸಿದ್ದಾಳೆ ಎನ್ನಲಾಗುತ್ತಿದೆ. ಈ ಕರೆಯ ಜಾಡು ಹಿಡಿದು ಬೆಂಗಳೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 14 ವರ್ಷದ ಹುಡುಗಿ ಒಬ್ಬಂಟಿಯಾಗಿಯೇ ಮಂಗಳೂರು- ಬೆಂಗಳೂರು ಸುತ್ತಾಡಿದ್ದು ಹೆತ್ತವರನ್ನು ಗಾಬರಿಪಡಿಸಿದೆ.
Missing girl from bangalore found in mangalore, gets down at KSRTC bus stand and goes to Mukka beach by Auto. Bhargavi was missing from Bangalore after her toution.
15-05-25 11:59 am
HK News Desk
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
14-05-25 11:08 pm
HK News Desk
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
14-05-25 08:05 pm
Mangalore Correspondent
Lokayuta, Arrest, Bantwal, Mangalore: ಗಂಡನ ಪಿ...
14-05-25 06:33 pm
Harish Injadi, President of Kukke Subrahmanya...
14-05-25 01:42 pm
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
15-05-25 12:14 pm
HK Staff
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm