ಬ್ರೇಕಿಂಗ್ ನ್ಯೂಸ್
22-10-22 02:55 pm Mangalore Correspondent ಕರಾವಳಿ
ಮಂಗಳೂರು, ಅ.22 : ಧರ್ಮದ ಮೂಲವನ್ನು ಹುಡುಕಿ ಹೋದರೆ ಎಲ್ಲಿಯೂ ಸಿಗುವುದಿಲ್ಲ. ನಮ್ಮ ನಂಬಿಕೆ ಆಚರಣೆ ನಡವಳಿಕೆಗಳು ಸ್ವಾಭಾವಿಕವಾಗಿ ನಮ್ಮಲ್ಲಿ ಬೆಳೆದುಬಂದಿವೆ. ಇಲ್ಲಿ ಜೀವಿಸುವ ನಾವು ಅದನ್ನು ಬಿಟ್ಟಿರಲು ಸಾಧ್ಯವಿಲ್ಲ. ಅವರು ಹಿಂದೂ ಧರ್ಮದ ಯಾವ ಸೂಕ್ಷ್ಮತೆ ತಿಳಿದಿದ್ದಾರೋ ಗೊತ್ತಿಲ್ಲ ಎಂದು ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ನಟ ಚೇತನ್ ಕಾಂತಾರ ಸಿನಿಮಾ ವಿಚಾರದಲ್ಲಿ ಅಪಸ್ವರ ಎತ್ತಿದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ನಮ್ಮ ಎರಡು ಜಿಲ್ಲೆಯಲ್ಲಿ ವ್ಯಾಪಕವಾಗಿ ಇರುವ ನಂಬಿಕೆ ದೈವಾರಾಧನೆ. ಇಂದಿಗೂ ನಾವು ದೈವಾರಾಧನೆ ಮಾಡುತ್ತೇವೆ. ದೈವದ ನುಡಿಗೆ ಗೌರವ ಕೊಡುತ್ತೇವೆ, ದೈವಗಳ ಮಾತಿಗೆ ಗೌರವ ಕೊಡುತ್ತೇವೆ. ಇದು ಧರ್ಮದ ಸೂಕ್ಷ್ಮತೆ, ವಿಮರ್ಶೆ ಮಾಡುವ ಅಗತ್ಯವಿಲ್ಲ ಎಂದು ವಿರೇಂದ್ರ ಹೆಗ್ಗಡೆ ಹೇಳಿದ್ದಾರೆ. ಮಂಗಳೂರಿನಲ್ಲಿ ಕಾಂತಾರ ಚಿತ್ರ ತಂಡದ ಜೊತೆಗೆ ಸಿನಿಮಾ ವೀಕ್ಷಣೆ ಮಾಡಿದ ಬಳಿಕ ಅವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು.
ನಟ ಚೇತನ್ ಭೂತಕೋಲ ಹಿಂದು ಧರ್ಮದ ಭಾಗ ಅಲ್ಲ ಎಂದು ಹೇಳಿದ್ದಕ್ಕೆ, ಧರ್ಮದ ಭಾಗ ಹೌದೋ, ಅಲ್ಲವೋ ಅದು ಗೊತ್ತಿಲ್ಲ. ತುಳುನಾಡಿನ ಜನರ ಮೂಲ ಸ್ವಭಾವ ಅರಿಯದೆ ಮಾತಾನಾಡಿದರೆ ಅದು ಬೇರೆಯದೇ ಆಗುತ್ತೆ. ನಮ್ಮ ಒಳಗೆ ಆಚರಣೆಗಳು ಬೆಳೆದು ಬಂದಿವೆ ಅಷ್ಟೇ ಎಂದು ಹೇಳಿದರು.
ಸಾಮಾನ್ಯವಾಗಿ ಬರುವ ಚಿತ್ರಗಳಿಗಿಂತ ವಿಭಿನ್ನವಾಗಿ ಕಾಂತಾರ ಚಿತ್ರ ಮೂಡಿಬಂದಿದೆ. ಕರಾವಳಿ ಭಾಗದ ನಂಬಿಕೆ, ನಡವಳಿಕೆಗಳು ದೈವಾರಾಧನೆಯ ಸೂಕ್ಷ್ಮತೆಗಳು ಈ ಚಿತ್ರದಲ್ಲಿವೆ. ಇಂತಹ ಚಿತ್ರದಿಂದ ಯುವಜನಾಂಗಕ್ಕೆ ಹೊಸ ಕತೆಯ ಮತ್ತು ಹಳೆಯ ಸ್ಮರಣೆ ಆಗುತ್ತೆ. ಸ್ಥಳೀಯ ಸ್ಮರಣೆಯೊಂದಿಗೆ ಹೊಸ ದೃಷ್ಟಿಕೋನ ಕೂಡ ಬೇಕು. ಜೀವನದಲ್ಲಿ ಅಸತ್ಯದ ವಿರುದ್ಧ ಹೋರಾಡುವ ಕತೆಗಳೇ ಜಾಸ್ತಿ. ಇಂದು ಕೂಡ ನಮಗೆ ಬೇಕಾಗಿರುವುದು ಸತ್ಯದ ರಕ್ಷಣೆ, ಅನ್ಯಾಯದ ವಿರುದ್ದ ಹೋರಾಟ, ನೆಮ್ಮದಿಯ ಜೀವನ. ಕಾಂತಾರ ಚಿತ್ರ ಕೂಡ ಒಬ್ಬ ನೆಮ್ಮದಿ ಇಲ್ಲದ ವ್ಯಕ್ತಿಯಿಂದಲೇ ಆರಂಭವಾಗುತ್ತೆ. ಇಂದು ನಮಗೆ ಬೇಕಾಗಿರುವುದು ನೆಮ್ಮದಿ, ಶಾಂತಿ ಮತ್ತು ಸಹಬಾಳ್ವೆ.
ಜಾತಿ ಮತ ಪಂಥಗಳ ಭೇದ ಮರೆತು ಸಹಬಾಳ್ವೆ ಬಾಳಬೇಕೆಂಬ ಸಂದೇಶ ಈ ಚಿತ್ರದಲ್ಲಿದೆ. ಚಿತ್ರ ನೋಡಿ ಸಂತೋಷ ಪಟ್ಟಿದ್ದೇನೆ, ಆ ಮೂಡಿನಿಂದ ಇನ್ನೂ ಹೊರಗೆ ಬಂದಿಲ್ಲ. ಚಿತ್ರದ ತಂಡದವರಿಗೆ ಅಭಿನಂದನೆಗಳು. ನಮ್ಮಲ್ಲಿರುವ ನಂಬಿಕೆ ಕೂಡ ಅದೇ. ಈ ನೆಲದ ದೈವಗಳು, ಭೂತಗಳು ಯಾವತ್ತೂ ಕೂಡ ಅಧರ್ಮಕ್ಕೆ ಬೆಂಬಲ ಕೊಡುವುದಿಲ್ಲ ಎಂಬುದೇ ಈ ಚಿತ್ರದಲ್ಲಿ ಇರುವ ಸಂದೇಶ. ದೈವಗಳು ಸತ್ಯ ಧರ್ಮಕ್ಕೆ ಹೊರತು ಪಡಿಸಿ ಯಾವುದಕ್ಕೂ ಬೆಂಬಲ ಕೊಡುವುದಿಲ್ಲ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ ಎಂದರು ಹೆಗ್ಗಡೆ.
There Is No Need To Criticize Religion Says Dr Veerendra Heggade after watching Kanatara. He made this statement reacting about Chethan Ahimsas Statement.
15-07-25 01:32 pm
Bangalore Correspondent
ನಟಿ ಸರೋಜಾ ದೇವಿ- ಎಸ್ಸೆಂ ಕೃಷ್ಣ ಪ್ರೇಮ ಪ್ರಸಂಗ ; ಮ...
15-07-25 12:27 pm
ಕೇವಲ 2 ಸಾವಿರ ಲಂಚ ಕೇಳಿ ಸಿಕ್ಕಿಬಿದ್ದ ಪಂಚಾಯತ್ ಪಿಡ...
15-07-25 10:35 am
ಧರ್ಮಸ್ಥಳದಲ್ಲಿ 20 ವರ್ಷಗಳಲ್ಲಾದ ಯುವತಿಯರ ನಾಪತ್ತೆ-...
14-07-25 10:44 pm
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
15-07-25 02:28 pm
HK News Desk
Mangalore Accident, Alto Car: ದೆಹಲಿಯಿಂದ ಬಂದ ಗ...
15-07-25 10:32 am
ಕಲ್ಲು ಮರಳಿನ ಸಮಸ್ಯೆಯಿಂದ ಜನರ ತಲೆಗೆ ಚಪ್ಪಡಿ ಕಲ್ಲು...
14-07-25 09:55 pm
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
15-07-25 01:13 pm
HK News Desk
Mangalore Crime, Police: ದುಬೈನಲ್ಲಿ ವಹಿವಾಟು ;...
15-07-25 11:38 am
ಮ್ಯಾಟ್ರಿಮನಿ ಸೈಟಲ್ಲಿ ಸಿಕ್ಕ ಗೆಳತಿಯಿಂದಲೇ ಮೋಸ ; ಆ...
13-07-25 05:23 pm
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm